Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಡಿಸೆಂಬರ್ 16ಕ್ಕೆ ಧನು ಸಂಕ್ರಮಣ: ದೇಶ, ವಿದೇಶ, ವ್ಯಕ್ತಿಗಳ ಮೇಲೆ ಬೀರಲಿದೆ ಈ ಪ್ರಭಾವ
ಪ್ರತಿ ತಿಂಗಳು ಸೂರ್ಯ ತನ್ನ ರಾಶಿ ಬದಲಾಯಿಸುತ್ತಾನೆ, ಇದೀಗ ಸೂರ್ಯ ಧನು ರಾಶಿಗೆ ಸಂಚರಿಸಿದೆ. ವೈದಿಕ ಜ್ಯೋತಿಷ್ಯದ ದೃಷ್ಟಿಯಿಂದ ಈ ಸಂಚಾರ ತುಂಬಾನೇ ಮಹತ್ವದ್ದಾಗಿ. ಸೂರ್ಯನ ಈ ಸಂಚಾರ ದೇಶದ ಮೇಲೆ, ಜನರ ಮೇಲೆ ಹೇಗೆ ಪ್ರಭಾವ ಬೀರಿದೆ ನೋಡಿ:
ರಾಶಿಗಳ ಮೇಲೆ ಸೂರ್ಯನ ಪ್ರಭಾವ
ಸೂರ್ಯ ಎಲ್ಲಾ ರಾಶಿಗಳ ಅಧಿಪತಿ, ಜ್ಯೋತಿಷ್ಯದಲ್ಲಿ ಸೂರ್ಯನನ್ನು ಆತ್ಮಕಾರಕ ಎಂದು ಪರಿಗಣಿಸಲಾಗಿದೆ.
ಸೂರ್ಯ ನಿಮ್ಮ ಸ್ಥಾನಮಾನ, ಗೌರವ, ನಾಯಕತ್ವದ ಸ್ಥಾನದ ಮೇಲೆ ತುಂಬಾನೇ ಪ್ರಭಾವ ಬೀರುತ್ತದೆ. ಸೂರ್ಯ ಸ್ಥಾನ ಪ್ರಬಲ ಸ್ಥಾನದಲ್ಲಿ ಆ ರಾಶಿಯವರಿಗೆ ಒಳ್ಳೆಯದು, ಸೂರ್ಯನ ಸ್ಥಾನ ದುರ್ಬಲ ಸ್ಥಾನದಲ್ಲಿದ್ದರೆ ಆ ರಾಶಿಯವರು ಜಾಗ್ರತೆಯಿಂದಿರಬೇಕು.

ಸೂರ್ಯ ಯಾವ ಮನೆಯಲ್ಲಿದ್ದರೆ ಏನರ್ಥ
ಸೂರ್ಯ ಮೊದಲನೇ ಮನೆಯಲ್ಲಿದ್ದರೆ: ರಕ್ತದೊತ್ತಡ, ಹೊಟ್ಟೆನೋವು, ಹೃದಯ ಸಂಬಂಧಿ ಸಮಸ್ಯೆ, ಕಣ್ಣಿನ ಸಮಸ್ಯೆ ಕಂಡು ಬರುವುದು.
ಸೂರ್ಯ 2ನೇ ಮನೆಯಲ್ಲಿದ್ದಾಗ: ಸ್ನೇಹಿತರು ಹಾಗೂ ಸಂಬಂಧಿಕರ ಜೊತೆ ಜಗಳವಾಡಬಹುದು, ಕೆಲಸ ಕಾರ್ಯಗಳಲ್ಲಿ ಭಂಗ ಉಂಟಾಗುವುದು.
ಸೂರ್ಯ 3ನೇ ಮನೆಯಲ್ಲಿದ್ದಾಗ: ಈ ಮನೆ ನಿಮಗೆ ಎಲ್ಲಾ ರೀತಿಯಲ್ಲೂ ಅನುಕೂಲಕರ.
ಸೂರ್ಯ 4ನೇ ಮನೆಯಲ್ಲಿದ್ದಾಗ: ಕೌಟಂಬಿಕ ಹಾಗೂ ಆರೋಗ್ಯ ಸಮಸ್ಯೆ ಇರುತ್ತದೆ.
ಸೂರ್ಯ 5ನೇ ಮನೆಯಲ್ಲಿದ್ದಾಗ:ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುವುದು, ಕೆಲಸದ ಜಾಗದಲ್ಲಿ ಕೆಲವು ತೊಂದರೆಗಳು ಎದುರಾಗುವುದು.
ಸೂರ್ಯ 6ನೇ ಮನೆಯಲ್ಲಿದ್ದಾಗ: ಈ ಮನೆ ನಿಮಗೆ ಯಶಸ್ಸು ತರಲಿದೆ.
ಸೂರ್ಯ 7ನೇ ಮನೆಯಲ್ಲಿದ್ದಾಗ: ಉದ್ಯೋಗ, ಉದ್ಯಮದಲ್ಲಿ ಸಮಸ್ಯೆಗಳು ಎದುರಾಗುವುದು.
ಸೂರ್ಯ 8ನೇ ಮನೆಯಲ್ಲಿದ್ದಾಗ: ಈ ಅವಧಿಯಲ್ಲಿ ಕಾನೂನು ವಿಷಯದಲ್ಲಿ ಎಚ್ಚರವಾಗಿರಬೇಕು.
ಸೂರ್ಯ 9ನೇ ಮನೆಯಲ್ಲಿದ್ದಾಗ: ಸೂರ್ಯ ಈ ಮನೆಯಲ್ಲಿರುವುದು ಅನುಕೂಲಕರವಲ್ಲ.
ಸೂರ್ಯ 10ನೇ ಮನೆಯಲ್ಲಿದ್ದಾಗ: ಈ ಮನೆ ನಿಮಗೆ ಲಾಭವನ್ನು ತರಲಿದೆ.
ಸೂರ್ಯ 11ನೇ ಮನೆಯಲ್ಲಿದ್ದಾಗ: ನಿಮ್ಮ ಗೌರವ, ಸಂತೋಷ ಹೆಚ್ಚಿಸುವುದು. ಆದಾಯ ಚೆನ್ನಾಗಿರುತ್ತದೆ.
ಸೂರ್ಯ 12ನೇ ಮನೆಯಲ್ಲಿದ್ದಾಗ: ರಾಶಿಯಲ್ಲಿ ಸೂರ್ಯನ ಈ ಸ್ಥಾನ ಶುಭಕರವಲ್ಲ.
ಧನು ಸಂಚಾರದ ಸಮಯ:
2022ರಲ್ಲಿ ಸೂರ್ಯನು ಧನು ರಾಶಿಗೆ ಡಿಸೆಂಬರ್ 16, ಬೆಳಗ್ಗೆ 9:38ಕ್ಕೆ ಸಂಚರಿಸಲಿದೆ. ಧಾರ್ಮಿಕ ದೃಷ್ಟಿಯಿಂದ ಈ ಧನು ಸಂಚಾರ ತುಂಬಾನೇ ಮಹತ್ವ ಹೊಂದಿದೆ. ಸೂರ್ಯ ಧನು ರಾಶಿಗೆ ಸಂಚರಿಸಿದಾಗ ಎಲ್ಲರಲ್ಲಿ ಜ್ಞಾನ ಹೆಚ್ಚಸಲಿದೆ.
ಈ ಸಂಚಾರ ಶಿಕ್ಷಕರಿಗೆ, ಮಾರ್ಗದರ್ಶಕರಿಗೆ ಒಳ್ಳೆಯದು
ಸೂರ್ಯನ ಧನು ಸಂಚಾರ ಭಾಷಣಕಾರರಿಗೆ, ಶಿಕ್ಷರಿಕರಿಗೆ, ಮಾರ್ಗದರ್ಶಕರಿಗೆ ಒಳ್ಳೆಯ ಹೆಸರು, ಕೀರ್ತಿ ತಂದು ಕೊಡಲಿದೆ.
ರಾಜಕಾರಣಿ ಹಾಗೂ ಸರ್ಕಾರಕ್ಕೆ ಒಳ್ಳೆಯ ಸಮಯ
ಈ ಅವಧಿಯಲ್ಲಿ ಹೊಸದಾಗಿ ರಾಜಕೀಯ ಕ್ಷೇತ್ರಕ್ಕೆ ಬಂದಿರುವ ರಾಜಕಾರಣಿಗಳು ತುಂಬಾನೇ ಜನಪ್ರಿಯತೆಗಳಿಸುತ್ತಾರೆ. ಸರ್ಕಾರಿ ಕೆಲಸಗಳಿಗೂ ಈ ಅವಧಿ ಅನುಕೂಲಕರ.
ಧಾರ್ಮಿಕ ವಿಷಯಗಳತ್ತ ಆಸಕ್ತಿ ಹೆಚ್ಚುವುದು
ಸಾಮಾನ್ಯವಾಗಿ ಧನುರ್ಮಾಸದಲ್ಲಿ ತುಂಬಾ ಧಾರ್ಮಿಕ ಚಟುವಟಿಕೆಗಳು ನಡೆಯುವುದರಿಂದ ಜನರು ಧಾರ್ಮಿಕ ವಿಷಯಗಳತ್ತ ಆಸಕ್ತಿ ತೋರಿಸುತ್ತಾರೆ.
ರಷ್ಯಾ-ಉಕ್ರೇನ್ ಸಂಘರ್ಷದ ಮೇಲೆ ಧನಾತ್ಮಕ ಪ್ರಭಾವ
ಈ ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿರುವ ದೀರ್ಘ ಕಾಲದ ಸಂಘರ್ಷ ಕೊನೆಗಾಣಿಸಲು ಪ್ರಮುಖ ನಾಯಕರು ಪ್ರಯತ್ನಿಸಬಹುದು.
ಸೂರ್ಯ ಧನು ರಾಶಿಗೆ ಸಂಚಾರ ಮಾಡಿದಾಗ ಈ ಪರಿಹಾರ ಮಾಡಿದರೆ ಒಳ್ಳೆಯದು:
* ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸಿ
* ಆದಿತ್ಯ ಹೃದಯ ಸ್ತೋತ್ರ ಪಠಿಸಿ
* ಸೂರ್ಯ ನಮಸ್ಕಾರ ಪ್ರತಿದಿನ ಮಾಡಿ.
* ಏನಾದರೂ ಪ್ರಮುಖ ಕೆಲಸಕ್ಕೆ ಹೋಗುವ ಮುನ್ನ ತಂದೆಯ ಆಶೀರ್ವಾದ ಪಡೆಯಿರಿ.
ಸೂರ್ಯ ಮಂತ್ರಗಳು
। ನಮಃ ಸೂರ್ಯಾಯ ಶಾನ್ತಾಯ ಸರ್ವರೋಗ ನಿವಾರಿಣೇ
ಆಯುರರೋಗ್ಯ ಮೈಸ್ವೈರ್ಯಂ ದೇಹಿ ದೇವಃ ಜಗತ್ಪತೇ ।।
ಸೂರ್ಯ ನಮಸ್ಕಾರ ಮಂತ್ರ
ಓಂ ಮಿತ್ರಾಯ ನಮಃ ।
ಓಂ ರವಯೇ ನಮಃ।
ಓಂ ಸೂರ್ಯಾಯ್ ನಮಃ ।
ಓಂ ಭಾನವೇ ನಮಃ।
ಓಂ ಖಗಾಯ ನಮಃ।
ಓಂ ಪುಷಣೇ ನಮಃ।
ಓಂ ಹಿರಣ್ಯಗರ್ಭಾಯ ನಮಃ।
ಓಂ ಮರೀಚಯೇ ನಮಃ।
ಓಂ ಆದಿತ್ಯಾಯ ನಮಃ।
ಓಂ ಸವಿತ್ರೇ ನಮಃ।
ಓಂ ಅರ್ಕಾಯ ನಮಃ।
ಓಂ ಭಾಸ್ಕರಾಯ ನಮಃ।



Click it and Unblock the Notifications


