Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಆ. 17ಕ್ಕೆ ಸಿಂಹ ರಾಶಿಯಲ್ಲಿ ಸೂರ್ಯ ಸಂಚಾರ: 4 ರಾಶಿಗಳಿಗೆ ಅದೃಷ್ಟ, 3 ರಾಶಿಯವರು ಹುಷಾರು
ಸೂರ್ಯನು ತಾನು ಅಧಿಪತಿಯಾಗಿರುವ ಸಿಂಹ ರಾಶಿಗೆ ಆಗಸ್ಟ್ 17 ಬೆಳಗ್ಗೆ 7:14ಕ್ಕೆ ಸಂರಿಸಲಿದೆ. ಸೂರ್ಯನು ಸೆಪ್ಟೆಂಬರ್ 17ರವರೆಗೆ ಇದೇ ರಾಶಿಯಲ್ಲಿ ಇರಲಿದೆ. ಈ ಸಂಚಾರ ದ್ವಾದಶ ರಾಶಿಗಳ ಮೇಲೆ ಪ್ರಬಾವ ಬೀರಲಿದೆ.

ಈ ಸಂಚಾರದ ಸಮಯದಲ್ಲಿ ಕೆಲ ರಾಶಿಯವರಿಗೆ ತುಂಬಾ ಒಳ್ಳೆಯದಿದೆ, ಇನ್ನು ಕೆಲವರು ಹುಷಾರಾಗಿರಬೇಕು. ಈ ಲೇಖನದಲ್ಲಿ ಈ ಸೂರ್ಯ ಸಂಚಾರ ಯಾರಿಗೆ ಒಳ್ಳೆಯದು, ಯಾರು ಸ್ವಲ್ಪ ಹುಷಾರಾಗಿರಬೇಕು ಎಂದು ಹೇಳಲಾಗಿದೆ ನೋಡಿ:

ಮಾಘ ನಕ್ಷತ್ರಕ್ಕೆ ಸೂರ್ಯನ ಪ್ರವೇಶ
ಈ ಸಂಚಾರ ಸಮಯದಲ್ಲಿ ತನ್ನದೇ ನಕ್ಷತ್ರವಾಗಿರುವ ಮಾಘ ನಕ್ಷತ್ರಕ್ಕೆ ಸೂರ್ಯ ಪ್ರವೇಶ ಮಾಡಲಿದೆ. ಇದರಿಂದ ರೈತರು ತಾವು ಬೆಳೆದ ಬೆಳೆಗೆ ತಕ್ಕದಾದ ನೀರು ಸಿಗುವುದು ಎಂದು ನಿರೀಕ್ಷಿಸಬಹುದು. ದೇಶದ ಕೆಲವು ಭಾಗಗಳಲ್ಲಿ ತುಂಬಾ ಮಳೆ ಕಂಡು ಬರಬಹುದು. ಆರ್ಥಿಕವಾಗಿ ಹಾಗೂ ಆಡಳಿತ್ಮಾಕವಾಗಿ ಬದಲಾವಣೆಯಾಗಲಿದೆ.

ಬುಧಾದಿತ್ಯ ಯೋಗ
ಯಾವಾಗ ಸೂರ್ಯ ಸಿಂಹ ರಾಶಿಯನ್ನು ಪ್ರವೇಶಿಸುತ್ತದೆಯೋ ಆಗ ಬುಧ-ಆದಿತ್ಯ ಯೋಗ ಏರ್ಪಡಿಲಿದೆ. ಯಾರು ವಿದೇಶದಲ್ಲಿ ಕಲಿಯಲು ಪ್ರಯತ್ನಿಸುತ್ತಿದ್ದಾರೋ ಅವರಿಗೆ ಈ ಅವಧಿ ಒಳ್ಳೆಯದಿದೆ. ಈ ಬುಧ-ಆದಿತ್ಯ ಯೋಗ ಆಗಸ್ಟ್ 21ಕ್ಕೆ ಕೊನೆಯಾಗಲಿದೆ.

ಯಾವ ರಾಶಿಗಳಿಗೆ ಒಳ್ಳೆಯದು
ಮೇಷ ರಾಶಿ: ಈ ರಾಶಿಯ ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದು. ಈ ಅವಧಿ ಪ್ರೇಮಿಗಳಿಗೆ ಹಾಗೂ ವಿವಾಹಿತರಿಗೆ ರೊಮ್ಯಾಂಟಿಕ್ ಸಮಯವಾಗಿದೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ, ಕೆಲಸದಲ್ಲೂ ಅಭಿವೃದ್ಧಿ ಕಾಣುವಿರಿ.

ಕರ್ಕ ರಾಶಿ
ನಿಮ್ಮ ರಾಶಿಯಿಂದ ಸಿಂಹರಾಶಿಗೆ ಸೂರ್ಯ ಸಂಚರಿಸಲಿದೆ. ಈ ಸಂಚಾರ ನಿಮ್ಮ ರಾಶಿಯ ಮೇಲೆ ತುಂಬಾ ಒಳ್ಳೆಯ ಪ್ರಭಾವ ಬೀರಿದೆ. ನಿಮ್ಮ ಏನಾದರೂ ಯೋಜನೆ ಅಥವಾ ಕಾರ್ಯಕ್ಕೆ ಇಡೀ ಕುಟುಂಬದವರ ಬೆಂಬಲ ಇರುತ್ತದೆ. ಆರ್ಥಿಕವಾಗಿಯೂ ಚೆನ್ನಾಗಿದೆ, ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ.

ಸಿಂಹ ರಾಶಿ:
ಸೂರ್ಯ ತನ್ನ ರಾಶಿಗೆ ಸಂಚರಿಸಲಿದೆ, ನಿಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ, ನಿಮ್ಮ ಆರೋಗ್ಯದಲ್ಲೂ ಒಳ್ಳೆಯ ಲಕ್ಷಣಗಳು ಕಂಡು ಬರುವುದು.

ಮೀನ ರಾಶಿ
ಈ ಸಮಯದಲ್ಲಿ ನಿಮ್ಮ ಆರೋಗ್ಯ ತುಂಬಾನೇ ಒಳ್ಳೆಯದಿದೆ. ಈ ಸಮಯದಲ್ಲಿ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ಚೆನ್ನಾಗಿರುತ್ತದೆ.

ಈ ರಾಶಿಯವರು ಹುಷಾರಾಗಿರಬೇಕು
ಕನ್ಯಾ ರಾಶಿ
ಈ ಅವಧಿಯಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು ಈ ಸಮಯದಲ್ಲಿ ಯೋಗ, ಧ್ಯಾನ ಸಹಾಯ ಮಾಡುತ್ತೆ, ಖರ್ಚುಗಳು ಹೆಚ್ಚಲಿದೆ, ಈ ಸಮಯದಲ್ಲಿ ಯಾವುದೇ ದೊಡ್ಡ ಹಣದ ವ್ಯವಹಾರ ಮಾಡದಿರಿ.

ವೃಶ್ಚಿಕ ರಾಶಿ
ಈ ಸೂರ್ಯ ಸಂಚಾರ ನಿಮಗೆ ಅಷ್ಟು ಒಳ್ಳೆಯದಲ್ಲ. ಈ ಸಮಯದಲ್ಲಿ ವೈಯಕ್ತಿಕ ಜೀವನದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು, ಇದರಿಂದ ಮಾನಸಿಕ ಒತ್ತಡ ಹೆಚ್ಚುವುದು. ಈ ಅವಧಿಯಲ್ಲಿ ಆಹಾರಕ್ರಮದ ಕಡೆ ಗಮನ ಕೊಡುವುದು ಒಳ್ಳೆಯದು.

ಕುಂಭ ರಾಶಿ
ಕುಂಭ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು. ಈ ಅವಧಿಯಲ್ಲಿ ನೀವು ತಾಳ್ಮೆಯಿಂದ ವರ್ತಿಸಿದಷ್ಟೂ ಒಳ್ಳೆಯದು.ಈ ಅವಧಿಯಲ್ಲಿ ಆರೋಗ್ಯದ ಕಡೆಯೂ ತುಂಬಾ ಗಮನ ನೀಡಬೇಕು.

ಪರಿಹಾರ:
ಸೂರ್ಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ಮನೆಯಲ್ಲಿ ಸೂರ್ಯ ಯಂತ್ರ ಇಡುವುದು ಒಳ್ಳೆಯದು.
* ಪ್ರತಿದಿನ ಸೂರ್ಯ ಮಂತ್ರ ಪಠಿಸುವುದು ಒಳ್ಳೆಯದು
* ಯಾವುದೇ ಕೆಲಸ ಪ್ರಾರಂಭ ಮಾಡುವ ಮುನ್ನ ಬೆಲ್ಲ ಹಾಗೂ ಮನೆಯಲ್ಲಿ ಬೆಳೆದ ತುಳಸಿ ಅಥವಾ ಮತ್ತಿತರ ಗಿಡದ ಎಲೆ ತಿನ್ನಿ.
* ಪ್ರತಿ ಭಾನುವಾರ ವಿಷ್ಣುವಿನ ಅವತಾರದ ಸ್ಟೋರಿಗಳನ್ನು ಓದಿ.



Click it and Unblock the Notifications
