Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಜೂ. 15ಕ್ಕೆ ಸೂರ್ಯ ಸಂಚಾರ: 7 ರಾಶಿಯವರು ಈ ಅವಧಿಯಲ್ಲಿ ಹುಷಾರಾಗಿರಬೇಕು!
ಜೂನ್ 15 ರ ಬುಧವಾರದಂದು ಸೂರ್ಯ ಸಂಚಾರ. ಸೂರ್ಯನು ವೃಷಭ ರಾಶಿಯಿಂದ ಮಿಥುನ ರಾಶಿಗೆ ಸಂಚರಿಸಲಿದೆ. ಸೂರ್ಯನ ಸಂಚಾರ ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ.
ಈ ಸಂಚಾರ ಕೆಲವು ರಾಶಿಯವರಿಗೆ ಒಳ್ಳೆಯದಿದೆ, ಇನ್ನು ಕೆಲವು ರಾಶಿಯರು ಜಾಗ್ರತೆಯಿಂದ ಇರಬೇಕು. ಆ ರಾಶಿಯವರು ಆರೋಗ್ಯ, ಕೆಲಸ, ಹೂಡಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೂರ್ಯನು ಮಿಥುನ ರಾಶಿಗೆ ಪ್ರವೇಶಿಸಿದಾಗ ಈ 7 ರಾಶಿಯವರು ವಿಶೇಷ ಕಾಳಜಿ ವಹಿಸಬೇಕಾಗಿದೆ, ಬನ್ನಿ ಯಾವ ರಾಶಿಯವರು ಹುಷಾರಾಗಿರಬೇಕು ಎಂದು ನೋಡೋಣ ಬನ್ನಿ:

ಮೇಷ ರಾಶಿ:
ನಿಮ್ಮ ರಾಶಿಯ ಜನರು ಸೂರ್ಯನ ರಾಶಿ ಬದಲಾವಣೆಯಿಂದ ತಮ್ಮ ಮತ್ತು ತಮ್ಮ ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಮಾತಿನ ಮೇಲೆ ಸಂಯಮವನ್ನು ಇಟ್ಟುಕೊಳ್ಳಿ, ಇಲ್ಲದಿದ್ದರೆ ಕೆಲಸವು ಹಾಳಾಗಬಹುದು, ಸಂಬಂಧಗಳ ಮೇಲೆ ಸಹ ಪರಿಣಾಮ ಬೀರುತ್ತವೆ.

ವೃಷಭ ರಾಶಿ:
ಈ ರಾಶಿಯ ಮಾತಿನ ಬಗ್ಗೆ ಜಾಗೃತಿವಹಿಸಬೇಕು, ಅತಿಯಾಗಿ ಮಾತನಾಡುವುದರಿಂದ ನಿಮಗೆ ತೊಮದರೆಯಾಗಬಹುದು. ನಿಮ್ಮ ಆರೋಗ್ಯವನ್ನು ಸರಿಯಾಗಿ ಇರಿಸಿಕೊಳ್ಳಲು ವ್ಯಾಯಾಮ, ಯೋಗ ಇತ್ಯಾದಿಗಳನ್ನು ಮಾಡಿ. ಕುಟುಂಬದಲ್ಲಿ ಉದ್ವಿಗ್ನತೆ ಉಂಟಾಗಬಹುದು.

ಕರ್ಕ ರಾಶಿ :
ಕರ್ಕರಾಶಿಯವರು ಹೆತ್ತವರು ಮತ್ತು ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ನಿಮಗೂ ಆರೋಗ್ಯ ಸಮಸ್ಯೆಗಳೂ ಇರಬಹುದು. ಈ ಸಮಯದಲ್ಲಿ, ನಿಮ್ಮ ಆಹಾರಕ್ರಮದ ಕಡೆ ವಿಶೇಷ ಗಮನ ನೀಡಬೇಕು.

ವೃಶ್ಚಿಕ ರಾಶಿ :
ಈ ರಾಶಿಯವರಿಗೆ ದಿಢೀರ್ ಧನಲಾಭವಾಗಲಿದೆ ಆದರೆ ಹಣದ ವ್ಯವಹಾರದಲ್ಲಿ ಜಾಗ್ರತೆ ವಹಿಸಬೇಕು ಇಲ್ಲದಿದ್ದರೆ ಮೋಸ ಹೋಗಬಹುದು. ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಿ, ಇಲ್ಲದಿದ್ದರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಕೆಲಸವನ್ನು ನೀವು ಕೆಲಸದ ಸ್ಥಳದಲ್ಲಿ ಇರಿಸಿದರೆ, ಅದು ಉತ್ತಮವಾಗಿರುತ್ತದೆ.

ಧನು ರಾಶಿ :
ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರದಿಂದಾಗಿ ಧನು ರಾಶಿಯವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ಈ ಸಮಯದಲ್ಲಿ ಅನಗ್ಯತ ಚರ್ಚೆಯನ್ನು ತಪ್ಪಿಸಿ, ಅದು ಒಳ್ಳೆಯದು. ವ್ಯಾಪಾರ ಮಾಡುವವರು, ತಪ್ಪು ತಿಳುವಳಿಕೆಯನ್ನು ತಪ್ಪಿಸಿ, ಆಗ ಪರಿಸ್ಥಿತಿ ಚೆನ್ನಾಗಿರುತ್ತದೆ.

ಮಕರ ರಾಶಿ:
ಮಕರ ರಾಶಿಯವರು ಕೆಲಸದ ಸ್ಥಳದಲ್ಲಿ ತಮ್ಮ ವಿರೋಧಿಗಳು ಮತ್ತು ಪ್ರತಿಸ್ಪರ್ಧಿಗಳ ಬಗ್ಗೆ ಎಚ್ಚರದಿಂದಿರಬೇಕು. ನಿಮ್ಮ ಕೆಲಸವನ್ನು ಗೌಪ್ಯವಾಗಿಡಿ, ಆಗ ಅದು ಪ್ರಯೋಜನಕಾರಿಯಾಗುತ್ತದೆ. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನಹರಿಸಬೇಕು, ಈ ಅವಧಿಯಲ್ಲಿ ಹೆಚ್ಚು ಶ್ರಮಪಟ್ಟರೆ ಮಾತ್ರ ಫಲ ಕಾಣುವುದು.

ಮೀನ ರಾಶಿ:
ಸೂರ್ಯನ ರಾಶಿ ಬದಲಾವಣೆಯಿಂದ ಕುಟುಂಬದಲ್ಲಿ ವಿವಾದದ ಪರಿಸ್ಥಿತಿ ಬರಬಹುದು. ಇದಕ್ಕೆ ಮುಖ್ಯ ಕಾರಣ ಆಸ್ತಿಯ ಸಮಸ್ಯೆಯಾಗಿರಬಹುದು. ಉದ್ಯೋಗಿಗಳು ಸಹೋದ್ಯೋಗಿಗಳೊಂದಿಗೆ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.



Click it and Unblock the Notifications