Latest Updates
-
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು?
ಕರ್ಕ ಸಂಕ್ರಮಣ ಈ 6 ರಾಶಿಗಳಲ್ಲಿ ಧನ ಯೋಗ ಸೃಷ್ಟಿಸಿದೆ
ಜುಲೈ 16ಕ್ಕೆ ಕರ್ಕ ಸಂಕ್ರಮಣವಾಗಿದೆ, ಅಂದ್ರೆ ಸೂರ್ಯ ಕರ್ಕ ರಾಶಿಗೆ ಪ್ರವೇಶಿಸಿದೆ, ಜ್ಯೊತಿಷ್ಯದಲ್ಲಿ ಸೂರ್ಯನ ಈ ಸಂಚಾರ ತುಂಬಾನೇ ಮುಖ್ಯವಾಗಿದೆ, ಏಕೆಂದರೆ ದಕ್ಷಿಣಾಯಾನ ಪ್ರಾರಂಭವಾಗುವುದೇ ಈ ದಿನದಿಂದ.

ಕರ್ಕ ಸಂಕ್ರಮಣ ಪೂಜೆ, ಸೇವೆ ಇಂಥ ಕಾರ್ಯಗಳಿಗೆ ತುಂಬಾನೇ ಮಹತ್ವವಾಗಿದೆ. ಸೂರ್ಯನು ಕರ್ಕ ರಾಶಿಯಲ್ಲಿ ಆಗಸ್ಟ್ 16ರವರೆಗೆ ಇದ್ದು 17ಕ್ಕೆ ಸಿಂಹ ರಾಶಿಗೆ ಪ್ರವೇಶಿಸಲಿದೆ.
ಈ ಕರ್ಕ ಸಂಕ್ರಮಣ ಪ್ರತಿಯೊಂದು ರಾಶಿಗಳ ಮೇಲೆ ಪರಿಣಾಮ ಬೀರಲಿದೆ, ಅದರಲ್ಲಿ ಈ ಅವಧಿಯು 6 ರಾಶಿಯವರಿಗೆ ಆರ್ಥಿಕವಾಗಿ ತುಂಬಾನೇ ಒಳ್ಳೆಯದಿದೆ. ಯಾವುದೆಲ್ಲಾ ರಾಶಿಗಳಿಗೆ ಲಕ್ಷ್ಮಿ ಕೃಪೆಯಿದೆ ಎಂದು ನೋಡೋಣ:

ಮೇಷ ರಾಶಿ
ಈ ಕರ್ಕ ಸಂಕ್ರಮಣದ ಅವಧಿಯಲ್ಲಿ ಮೇಷ ರಾಶಿಯವರು ಆರ್ಥಿಕ ವಿಷಯದಲ್ಲಿ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ . ಈ ಅವಧಿಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನೀವು ಬೇರೆ ಕಡೆ ಕೆಲಸ ಹುಡುಕುತ್ತಿದ್ದರೆ ಶುಭ ಫಲಿತಾಂಶ ದೊರೆಯಲಿದೆ. ಈ ಅವಧಿಯಲ್ಲಿ ವ್ಯಾಪಾರಸ್ಥರಿಗೂ ಒಳ್ಳೆಯ ಲಾಭವಾಗಲಿದೆ. ಇನ್ನು ನೀವು ಹೂಡಿಕೆ ಮಾಡಲು ಹಾಗೂ ಆಸ್ತಿ ಖರೀದಿಸಲು ಸಮಯವು ಅನುಕೂಲಕರವಾಗಿದೆ.

ವೃಷಭ ರಾಶಿ
ಉದ್ಯೋಗಿಗಳ ಆರ್ಥಿಕ ಸ್ಥಿತಿ ಮತ್ತಷ್ಟು ಬಲವಾಗಲಿದೆ. ವ್ಯಾಪಾರಸ್ಥರು ಲಾಭ ಹೆಚ್ಚಿಸಲು ತಮ್ಮ ವ್ಯಾಪಾರ ತಂತ್ರದಲ್ಲಿ ಬದಲಾವಣೆ ಮಾಡಬೇಕಾಗಿದೆ. ಕ್ರೀಡೆಯ ವ್ಯವಹಾರದೊಂದಿಗೆ ಸಂಬಂಧ ಹೊಂದಿರುವವರು ಈ ಅವಧಿಯಲ್ಲಿ ಸಾಕಷ್ಟು ಲಾಭವನ್ನು ಗಳಿಸಬಹುದು.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಸೂರ್ಯನು ಎರಡನೇ ಮನೆಯಲ್ಲಿ ಅಂದರೆ ಹಣ, ಕುಟುಂಬ ಮತ್ತು ಮಾತಿನ ಮನೆಯಲ್ಲಿ ಸಾಗುತ್ತಾನೆ. ಈ ಅವಧಿಯು ನಿಮಗೆ ಆರ್ಥಿಕವಾಗಿ ಲಾಭದಾಯಕವಾಗಿರಲಿದೆ.

ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ಕರ್ಕ ಸಂಕ್ರಮಣ ವೃತ್ತಿಪರವಾಗಿ ತುಂಬಾನೇ ಅನುಕೂಲಕರವಾಗಿದೆ. ಈ ಸಮಯದಲ್ಲಿ ಸಂಬಳ ಹೆಚ್ಚಳ ಮತ್ತು ಪ್ರೊಫೈಲ್‌ನಲ್ಲಿ ಉನ್ನತಿಯನ್ನು ನಿರೀಕ್ಷಿಸಬಹುದು. ಈ ಅವಧಿಯಲ್ಲಿ ವ್ಯಾಪಾರಸ್ಥರು ಹೆಚ್ಚು ಲಾಭಗಳಿಸಲಿದ್ದಾರೆ.

ತುಲಾ ರಾಶಿ
ಕರ್ಕ ಸಂಕ್ರಮಣದಲ್ಲಿ ತುಲಾ ರಾಶಿಯವರಿಗೆ ಸೂರ್ಯನು ಅಸಾಧಾರಣ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿಪರವಾಗಿ ನೋಡುವುದಾದರೆ ತಮ್ಮ ವೃತ್ತಿಜೀವನವನ್ನು ಹೊಸದಾಗಿ ಪ್ರಾರಂಭಿಸುವವರು ಈ ಅವಧಿಯಲ್ಲಿ ಶೀಘ್ರದಲ್ಲೇ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಈ ಸಮಯದಲ್ಲಿ ವ್ಯಾಪಾರಸ್ಥರು ಲಾಭ ಪಡೆಯಲಿದ್ದಾರೆ.

ವೃಶ್ಚಿಕ ರಾಶಿ
ಕರ್ಕ ಸಂಕ್ರಮಣವು ವೃಶ್ಚಿಕ ರಾಶಿಯವರಿಗೆ ಮಂಗಳಕರವಾಗಿದೆ. ಏಕೆಂದರೆ ಇದು ನಿಮ್ಮ ಜೀವನದಲ್ಲಿ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ. ಈ ಅವಧಿಯಲ್ಲಿ ಆರ್ಥಿಕ ಸ್ಥಿರತೆ ಕಾಣುವಿರಿ. ರಿಯಲ್ ಎಸ್ಟೇಟ್ ಮತ್ತು ಟೂರಿಸಂ ಉದ್ಯಮದಲ್ಲಿರುವವರು ಒಳ್ಳೆಯ ಲಾಭಗಳಿಸಲಿದ್ದೀರಿ.



Click it and Unblock the Notifications
