Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕುಂಭ ರಾಶಿಯಲ್ಲಿ ಸೂರ್ಯ ಸಂಕ್ರಮಣ: ಈ 4 ರಾಶಿಗಳಿಗೆ ಆರ್ಥಿಕವಾಗಿ ತುಂಬಾ ಒಳ್ಳೆಯದು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಸಂಕ್ರಮಣ ತುಂಬಾನೇ ಪ್ರಮುಖವಾಗಿದೆ. ಪ್ರತೀ ತಿಂಗಳು ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತಾನೆ. ಈ ರೀತಿಯ ಸಂಚಾರ ಪ್ರತಿಯೊಂದು ರಾಶಿಗಳ ಮೇಲೆ ಪರಿಣಾಮ ಬೀರುವುದು. ಈ ತಿಂಗಳಿನಲ್ಲಿ ಫೆಬ್ರವರಿ 13ರಂದು ಸೂರ್ಯ ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಈ ಸಂಚಾರ ನಾಲ್ಕು ರಾಶಿಗಳಿಗೆ ತುಂಬಾನೇ ಒಳ್ಳೆಯದು. ಯಾವಾಗ ಸೂರ್ಯ ಕುಂಭ ರಾಶಿಗೆ ಸಂಚರಿಸುತ್ತಾನೋ ಆವಾಗ ಈ ನಾಲ್ಕು ರಾಶಿಗಳಿಗೆ ಆರ್ಥಿಕವಾಗಿ ಒಳ್ಳೆಯದಾಗಲಿದೆ. ಈ ನಾಲ್ಕು ರಾಶಿಗೆ ಈ ಸೂರ್ಯ ಸಂಕ್ರಮಣ ತುಂಬಾನೇ ಸ್ಪೆಷಲ್ ಆಗಿರಲಿದೆ.

ಮೇಷ ರಾಶಿ
ಮೇಷ ರಾಶಿಯವರಿಗೆ ಈ ಸಂಚಾರ ಶುಭವಾಗಲಿದೆ. ನಿಮಗೆ ಕೆಲಸದಲ್ಲಿ ಪ್ರಮೋಷನ್ ಸಿಗುವುದು. ಸ್ಯಾಲರಿ ಹೆಚ್ಚಾಗಬಹುದು, ಅದೃಷ್ಟ ನಿಮ್ಮ ಪರವಾಗಿ ಇರಲಿದೆ. ನೀವು ಹೂಡಿಕೆಯಲ್ಲಿ ಯಶಸ್ವಿಯಾಗುವಿರಿ. ಹಳೆಯ ಸಾಲವಿದ್ದರೆ ಅದನ್ನು ತೀರಿಸಲು ಸಾಧ್ಯವಾಗುವುದು. ಇನ್ನು ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದವರಿಗೆ ಕೆಲಸ ಸಿಗುವ ಸಾಧ್ಯತೆ ಇದೆ.

ವೃಷಭ ರಾಶಿ
ಈ ಸೂರ್ಯ ಸಂಕ್ರಮಣ ವೃಷಭ ರಾಶಿಯವರಿಗೂ ತುಂಬಾನೇ ಒಳ್ಳೆಯದು. ನೀವು ವೃತ್ತಿಯಲ್ಲಿ ಅಭಿವೃದ್ಧಿ ಕಾಣುವಿರಿ, ನಿಮ್ಮ ಕೌಶಲ್ಯದಿಂದ ಗುರುತಿಸಿಕೊಳ್ಳುವಿರಿ, ಹಲವು ಕಡೆಯಿಂದ ಹಣವೂ ದೊರೆಯಲಿದೆ. ವ್ಯಾಪಾರಿಗಳಿಗಂತೂ ಈ ಸಮಯ ತುಂಬಾನೇ ಒಳ್ಳೆಯದು, ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವುದು.

ಧನು ರಾಶಿ
ಆರ್ಥಿಕ ಸ್ಥಿತಿ ಸುಧಾರಿಸುವುದು, ಆದಾಯ ಹೆಚ್ಚುವುದು, ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ನಾನಾ ಅವಕಾಶ ಸಿಗುವುದು. ಟ್ರಿಪ್ ಹೋಗುವ ಸಾಧ್ಯತೆ ಇದೆ. ತುಂಬಾ ಸಮಯದ ನಿಮ್ಮ ಕನಸು ನೆರವೇರಲಿದೆ. ಹೂಡಿಕೆ ಅಥವಾ ಹೊಸ ಕೆಲಸ ಪ್ರಾರಂಭಿಸಲು ಸೂಕ್ತ ಸಮಯವಾಗಿದೆ.

ಮಕರ ರಾಶಿ
ಮಕರ ರಾಶಿಯವರಿಗೆ ಈ ಸಮಯ ತುಂಬಾ ಶುಭವಾಗಿದೆ, ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ, ಹೊಸ ಉದ್ಯೋಗ ಹುಡುಕುವವರಿಗೆ ಅವಕಾಶ ದೊರೆಯವುದು, ನಿಮ್ಮ ಎಲ್ಲಾ ಕೆಲಸಕ್ಕೆ ಸಂಗಾತಿಯ ಬೆಂಬಲ ದೊರೆಯಯುವುದು. ಕೆಲಸದ ಜಾಗದಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ಸಿಗುವುದು.



Click it and Unblock the Notifications
