Latest Updates
-
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ
ಕನ್ಯಾ ರಾಶಿಯಲ್ಲಿ ಸೂರ್ಯ-ಶುಕ್ರ ಯುತಿ: ಅ.16ರವರೆಗೆ ದ್ವಾದಶ ರಾಶಿಗಳ ಮೇಲೆ ಬೀರಿರುವ ಪ್ರಭಾವವೇನು?
ಸೆಪ್ಟೆಂಬರ್ ತಿಂಗಳಿನಲ್ಲಿ ಕನ್ಯಾರಾಶಿಯಲ್ಲಿ ಸೂರ್ಯ ಮತ್ತು ಶುಕ್ರ ಸಂಯೋಗ ರೂಪುಗೊಂಡಿದೆ . ಸೆಪ್ಟೆಂಬರ್ 17ಕ್ಕೆ ಸೂರ್ಯ ಕನ್ಯಾ ರಾಶಿಗೆ ಪ್ರವೇಶಿಸಿದೆ. ಶುಕ್ರ ಕೂಡ ಸೆಪ್ಟೆಂಬರ್ 24ಕ್ಕೆ ಕನ್ಯಾರಾಶಿಗೆ ಪ್ರವೇಶಿಸಿದೆ. ಇದರಿಂದ ಸೂರ್ಯ-ಶುಕ್ರ ಸಂಯೋಗ ಕನ್ಯಾ ರಾಶಿಯಲ್ಲಿ ಏರ್ಪಟ್ಟಿದೆ.

ಕನ್ಯಾರಾಶಿಯಲ್ಲಿ ಸೂರ್ಯ-ಶುಕ್ರ ಸಂಯೋಗ
ಜ್ಯೋತಿಷ್ಯದ ಪ್ರಕಾರ ಸೂರ್ಯ ಮತ್ತು ಶುಕ್ರ ಇಬ್ಬರನ್ನೂ ಶುಭ ಗ್ರಹಗಳೆಂದು ಪರಿಗಣಿಸಲಾಗುತ್ತದೆ, ಆದರೆ ಈ ಎರಡು ಗ್ರಹಗಳು ಯಾವುದೇ ರಾಶಿಚಕ್ರದಲ್ಲಿ ಸಂಯೋಗಗೊಂಡರೆ, ಅವು ಅಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುವುದು. ಇದರ ಪ್ರಭಾವ ನಿಮ್ಮ ವೈವಾಹಿಕ ಜೀವನದ ಮೇಲೆ ಬೀರುತ್ತದೆ.

ಕನ್ಯಾ ರಾಶಿಯಲ್ಲಿ ಸೂರ್ಯ-ಶುಕ್ರ ಯುತಿ
ವೈದಿಕ ಶಾಸ್ತ್ರದ ಪ್ರಕಾರ ಒಂದು ಗ್ರಹವು ಸೂರ್ಯನ ಬಳಿ ಬಂದಾಗ, ಆ ಗ್ರಹದ ಪ್ರಭಾವವು ದುರ್ಬಲಗೊಳ್ಳುತ್ತದೆ, ಇದರಿಂದಾಗಿ ಅದು ಸ್ವಲ್ಪ ಸಮಯದವರೆಗೆ ನಿಷ್ಪರಿಣಾಮಕಾರಿಯಾಗುತ್ತದೆ. ಈ ಕಾರಣದಿಂದ ಸೂರ್ಯನೊಂದಿಗೆ ಶುಕ್ರನ ಸಂಯೋಗದಿಂದ ಶುಕ್ರನ ಶುಭ ಫಲಗಳು ಕಡಿಮೆಯಾಗುತ್ತವೆ. ಶುಕ್ರ-ಸೂರ್ಯನ ಸಂಯೋಗವನ್ನು ಯುತಿ ಯೋಗ ಎನ್ನುತ್ತಾರೆ.
ಈ ಯುತಿ ಯೋಗ ದ್ವಾದಶ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ನೋಡೋಣ ಬನ್ನಿ:

ಮೇಷ-ಕರ್ಕ
ಮೇಷ ರಾಶಿ: ಸೂರ್ಯ-ಶುಕ್ರ ಗ್ರಹಗಳ ಸಂಯೋಜನೆಯು ಮೇಷ ರಾಶಿಯವರಿಗೆ ಶುಭವಾಗಲಿದೆ. ನಿಮ್ಮ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ, ಈ ಅವಧಿಯಲ್ಲಿ ಲಾಭ ಗಳಿಸಲು ಸಾಧ್ಯವಾಗುವುದು.
ವೃಷಭ ರಾಶಿ: ಈ ರಾಶಿಯ ಜನರು ಎಚ್ಚರಿಕೆ ಅಗತ್ಯ. ಸೂರ್ಯ-ಶುಕ್ರ ಗ್ರಹಗಳ ಸಂಯೋಗವು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಮಿಥುನ ರಾಶಿ: ಸೂರ್ಯ-ಶುಕ್ರ ಸಂಯೋಗವು ಮಿಥುನ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಅವಧಿ ಅದೃಷ್ಟಕರವಾಗಿದೆ, ನಿಮಗೆ ಹಣದ ಲಾಭ ಉಂಟಾಗುವುದು.
ಕರ್ಕಾಟಕ ರಾಶಿ: ಈ ಅವಧಿಯಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನೀವು ವಿಶಿಷ್ಟ ವ್ಯಕ್ತಿಯನ್ನು ಭೇಟಿಯಗುತ್ತೀರಿ, ಅದರಿಂದ ಮುಂಬರುವ ದಿನಗಳಲ್ಲಿ ಪ್ರಯೋಜನ ಸಿಗಲಿದೆ.

ಸಿಂಹ-ವೃಶ್ಚಿಕ ರಾಶಿ
ಸಿಂಹ ರಾಶಿ: ಸೂರ್ಯ-ಶುಕ್ರ ಸಂಯೋಗವು ಸಿಂಹ ರಾಶಿಯವರಿಗೆ ಅದೃಷ್ಟವನ್ನು ಹೆಚ್ಚಿಸುತ್ತದೆ. ವಿತ್ತೀಯ ಲಾಭಕ್ಕಾಗಿ ಅನೇಕ ಅವಕಾಶಗಳು ಇರುತ್ತವೆ. ವ್ಯಾಪಾರಸ್ಥರಿಗೂ ಈ ಸಮಯ ಅನುಕೂಲಕರವಾಗಿದೆ.
ಕನ್ಯಾ ರಾಶಿ: ನಿಮಗೆ ಈ ಅವಧಿಯಲ್ಲಿ ಲಾಭ ಸಿಗಲಿದೆ, ಆದರೆ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು.
ತುಲಾ ರಾಶಿ: ನಿಮಗೆ ಈ ಅವಧಿ ಮಿಶ್ರಫಲದಿಂದ ಕೂಡಿದೆ. ಉದ್ಯೋಗ ಜೀವನದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರುತ್ತವೆ.
ವೃಶ್ಚಿಕ ರಾಶಿ: ಈ ಅವಧಿಯಲ್ಲಿ ಶತ್ರುಗಳ ಬಗ್ಗೆ ಜಾಗ್ರತೆಯಿಂದರಬೇಕು. ಹಣ ನಷ್ಟವಾಗುವ ಸಾಧ್ಯತೆ ಇದೆ.

ಧನು-ಮೀನ
ಧನು ರಾಶಿ: ಈ ಅವಧಿಯಲ್ಲಿ ನಿಮ್ಮ ಕಷ್ಟಗಳು ದೂರಾಗಿ ಸಂತಸ ಮರಳಿದೆ. ಉದ್ಯೋಗದಲ್ಲಿ ನೀವು ಬಯಸಿದ ಲಾಭವನ್ನು ಪಡೆಯುತ್ತೀರಿ. ನಿಮ್ಮ ಯೋಜನೆಯಂತೆ ಕೆಲಸ ಮುಂದುವರಿಯಬಹುದು.
ಮಕರ: ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿರುತ್ತವೆ. ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ. ಹಣ ನಷ್ಟವಾಗುವ ಸಾಧ್ಯತೆಗಳಿವೆ.
ಕುಂಭ: ನಿಮ್ಮ ಕೆಲಸದಲ್ಲಿ ಪ್ರಗತಿ ಕಾಣುವಿರಿ, ಏನಾದರೂ ಕೋರ್ಟ್ ತೀರ್ಪು ಇದ್ದರೆ ನಿಮ್ಮ ಪರವಾಗಿ ಬರಲಿದೆ.
ಮೀನ: ಸೂರ್ಯ-ಶುಕ್ರ ಸಂಯೋಗವು ನಿಮಗೆ ಅಪೇಕ್ಷಿತ ಲಾಭವನ್ನು ನೀಡುತ್ತದೆ. ಈ ಅವಧಿ ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ.



Click it and Unblock the Notifications
