Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
2021ರ ಮೊದಲ ಸೂರ್ಯಗ್ರಹಣ: ಯಾವಾಗ, ಎಲ್ಲೆಲ್ಲಿ ಗೋಚರಿಸುವುದು, ನೋಡುವುದು ಹೇಗೆ?
ಗ್ರಹಣ ಎನ್ನುವುದು ನಭೋಮಂಡಲದಲ್ಲಿ ನಡೆಯುವ ಅನೇಕ ಕೌತುಕ ಘಟನೆಗಳಲ್ಲಿ ಒಂದಾಗಿದೆ. ವಿಜ್ಞಾನಿಗಳು ಆ ಘಟನೆಯನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಜ್ಯೋತಿಷ್ಯವು ಅದನ್ನು ವೈದಿಕ ಶಾಸ್ತ್ರದ ಮೂಲಕ ನೋಡುತ್ತದೆ. ಗ್ರಹಣದಂದು ಏನು ಮಾಡಬಾರದು, ಏನು ಮಾಡಬೇಕು ಎಂದು ಹೇಳಲಾಗಿದೆ. ಅಲ್ಲದೆ ಗ್ರಹಣದ ಪ್ರಭಾವ ಪ್ರತಿಯೊಬ್ಬ ವ್ಯಕ್ತಿ ಹಾಗೂ ದೇಶದ ಮೇಲೆ ಇರುತ್ತದೆ ಎಂದು ಜ್ಯೋತಿಷ್ಯ ಬಲವಾಗಿ ನಂಬುವುದು.

ಗ್ರಹಣವನ್ನು ವೈಜ್ಞಾನಿಕವಾಗಿ ನೋಡುವುದು ಅಥವಾ ಜ್ಯೋತಿಷ್ಯವನ್ನು ನಂಬುವುದು ಅವರವರ ನಂಬಿಕೆಯಾಗಿದೆ. ಈ ವರ್ಷ ನಾಲ್ಕು ಗ್ರಹಣಗಳಿವೆ, ಅದರಲ್ಲಿ ರಕ್ತ ಚಂದ್ರಗ್ರಹಣ ಮೇ. 26ಕ್ಕೆ ಸಂಭವಿಸಿತ್ತು. ಇದೀಗ ಜೂನ್ 10ಕ್ಕೆ ವಾರ್ಷಿಕ ಸೂರ್ಯ ಸಂಭವಿಸಲಿದೆ. ರಕ್ತ ಚಂದ್ರಗ್ರಹಣ ಸಂಭವಿಸಿದ 15 ದಿನದ ಒಳಗಾಗಿ ಸೂರ್ಯಗ್ರಹಣ ಸಂಭವಿಸಲಿದೆ.
ಈ ಸೂರ್ಯಗ್ರಹಣ ಎಷ್ಟು ಹೊತ್ತಿಗೆ ಸಂಭವಿಸಲಿದೆ, ಎಲ್ಲೆಲ್ಲಿ ಇದು ಗೋಚರಿಸಲಿದೆ ಎಂದು ನೋಡೋಣ:

ಗೋಚರಿಸುವ ಸಮಯ
ಜೂನ್ 10 ವಾರ್ಷಿಕ ಸೂರ್ಯ ಗ್ರಹಣವು ಮಧ್ಯಾಹ್ನ 1:42ಕ್ಕೆ ಪ್ರಾರಂಭವಾಗಿ 6:41ಕ್ಕೆ ಮುಕ್ತಾಯವಾಗುತ್ತದೆ.

ಎಲ್ಲೆಲ್ಲಿ ಗೋಚರಿಸುವುದು?
ಯುರೋಪ್, ಏಷ್ಯಾದ ಅನೇಕ ಭಾಗಗಳಲ್ಲಿ, ಉತ್ತರ ಆಫ್ರಿಕಾ, ಪಶ್ಚಿಮ ಆಫ್ರಿಕಾ, ಉತ್ತರ ಅಮೆರಿಕ, ಅಂಟ್ಲಾಟಿಕ, ಆರ್ಕ್ಟಿಕ್ ಈ ಭಾಗಗಳಲ್ಲಿ ಗೋಚರಿಸಲಿದೆ. ಕೆನಡಾ, ಗ್ರೀನ್‌ಲ್ಯಾಂಡ್ ಮತ್ತು ರಷ್ಯಾದಲ್ಲಿ ಪೂರ್ಣ ಸೂರ್ಯಗ್ರಹಣ ಕಂಡು ಬರುವುದು.

ಜ್ಯೋತಿಷ್ಯ ದೃಷ್ಟಿಯಿಂದ ಈ ಗ್ರಹಣ ನೋಡುವುದಾದರೆ
ಸೂರ್ಯಗ್ರಹಣವು ವೃಷಭ ರಾಶಿ, ಮೃಗಶಿರಾ ನಕ್ಷತ್ರದಲ್ಲಿ ಸಂಭವಿಸಲಿದೆ. ಇದರ ಪ್ರಭಾವ ಪ್ರತಿಯೊಂದು ರಾಶಿಗಳ ಮೇಲೆ ಇರಲಿದೆ.

ಸೂರ್ಯಗ್ರಹಣ ದಿನದಂದು ಇರುವ ಮತ್ತೆರಡು ವಿಶೇಷ
ಹಿಂದೂ ಧರ್ಮದಲ್ಲಿ ಶನಿ ಜಯಂತಿ ಹಾಗೂ ವಟ ಸಾವಿತ್ರಿ ವ್ರತಕ್ಕೆ ತುಂಬಾನೇ ಮಹತ್ವವಿದೆ. ಮಹತ್ವವದ ಈ ಎರಡು ಆಚರಣೆಗಳು ಕೂಡ ಇದೇ ದಿನವಿದೆ.

ಹೇಗೆ ನೋಡುವುದು?
ಸೂರ್ಯಗ್ರಹಣವನ್ನು ಬರೀಗಣ್ಣಿನಲ್ಲಿ ನೋಡಬೇಡಿ, ಇದನ್ನು ಸೌರ ಕನ್ನಡಕ ಬಳಸಿ ನೋಡಬಹುದು, ತಜ್ಞರ ಮಾರ್ಗದರ್ಶನದಲ್ಲಿ ಸೋಲಾರ್ ಫಿಲ್ಟರ್ ಬಳಸಿ ನೋಡಲಾಗುವುದು. ಆದರೆ ಹಾಳಾದ ಸೋಲಾರ್ ಫಿಲ್ಟರ್ ಬಳಸಬಾರದು.
ಲಾಕ್‌ಡೌನ್ ಇರುವ ಕಾರಣ ಹೊರಗಡೆ ಹೋಗಲು ಸಾಧ್ಯವಿಲ್ಲ, ಹಳ್ಳಿ ಕಡೆ ಸೆಗಣಿ ನೀರು ಕಲೆಸಿ, ಅದರಲ್ಲಿ ನೋಡುತ್ತಾರೆ.



Click it and Unblock the Notifications
