Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು!
ಫೆ.12ಕ್ಕೆ ಮಕರದಲ್ಲಿ 6 ಗ್ರಹಗಳ ಸಂಯೋಗ: ಈ ದುರ್ಘಟನೆಗಳು ಸಂಭವಿಸಲಿದೆಯೇ?
ವೈದಿಕ ಶಾಸ್ತ್ರ ಎನ್ನುವುದು ಭಾರತದ ಪುರಾತನವಾದ ವಿದ್ಯೆಯಾಗಿದೆ. ಗ್ರಹಗಳ ಚಲನೆಯನ್ನು ಆಧರಿಸಿ ಭವಿಷ್ಯ ಹೇಳಲಾಗುವುದು. ವೈದಿಕ ಶಾಸ್ತ್ರವು ಪ್ರತಿಯೊಂದು ಘಟನೆಯ ಹಿಂದೆ ಗ್ರಹಗಳ ಪ್ರಭಾವ ಇರುತ್ತದೆ ಎಂದು ಬಲವಾಗಿ ನಂಬುತ್ತದೆ.

ಕೆಲವೊಂದು ಗ್ರಹಗಳ ಚಲನೆ ವಿಶ್ವದಲ್ಲಿ ಅನೇಕ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಇದು ಹೇಳುತ್ತದೆ. ಗ್ರಹಗಳು ಬರೀ ವ್ಯಕ್ತಿಯ ಮೇಲೆ ಮಾತ್ರವಲ್ಲ, ದೇಶದ ಮೇಲೂ, ಅಂತರಾಷ್ಟ್ರೀಯ ಘಟನೆಗಳ ಮೇಲೂ ಪರಿಣಾಮ ಬೀರುತ್ತವೆ.
ಫೆಬ್ರವರಿ 12, 2021ರಂದು ಆರು ಗ್ರಹಗಳು ಮಕರ ರಾಶಿಯಲ್ಲಿ ಇರಲಿವೆ. ಇದರ ಪ್ರಭಾವ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗಲಿದೆ ಎಂದು ವೈದಿಕ ಶಾಸ್ತ್ರ ಹೇಳುತ್ತದೆ, ಅದರಲ್ಲೂ ಪ್ರಮುಖವಾಗಿ ಭಾರತ,ಚೀನಾ, ಪಾಕಿಸ್ತಾನದ ಮೇಲಿರಲಿದೆ ಎಂದು ಜ್ಯೋತಿಷ್ಯ ಹೇಳುತ್ತದೆ.

ಮಕರ ರಾಶಿಯಲ್ಲಿ ಆರು ಗ್ರಹಗಳ ಸಂಯೋಗ
ಫೆಬ್ರವರಿ 12ಕ್ಕೆ ಮಕರ ರಾಶಿಯಲ್ಲಿ ಗುರು, ಶನಿ, ರವಿ, ಬುಧ, ಚಂದ್ರ ಹಾಗೂ ಶುಕ್ರ ಗ್ರಹಗಳ ಸಂಯೋಗ ಆಗಲಿವೆ. ಅಂದರೆ ಆ ದಿನ ಈ ಆರು ಗ್ರಹಗಳು ಮಕರ ರಾಶಿಯಲ್ಲೇ ಇರಲಿವೆ. ಈ ಆರು ಗ್ರಹಗಳು ಕಾಲ ಪುರುಷನ ಕರ್ಮ ಸ್ಥಾನವಾದ ಮಕರ ರಾಶಿಯಲ್ಲಿ ಇರುವುದರಿಂದ ಈ ದಿನ ತುಂಬಾ ಕುತೂಹಲಕಾರಿಯಾದ ದಿನವಾಗಿದೆ. ಈ ದಿನ ಅನೇಕ ಘಟನೆಗಳು ಸಂಭವಿಸುವ ಸಾಧ್ಯತೆ ಇವೆ. 59 ವರ್ಷಗಳ ಬಳಿಕ ಫೆಬ್ರವರಿಯಲ್ಲಿ ಇಂಥದ್ದೊಂದು ಘಟನೆ ಸಂಭವಿಸಲಿದೆ.

ಒಂದೇ ರಾಶಿಯಲ್ಲಿ 6 ಗ್ರಹಗಳು ಇರುವುದು ಇದೇ ಮೊದಲಲ್ಲ
1962ರಲ್ಲಿ ಮಕರ ರಾಶಿಯಲ್ಲಿ, 1979ರಲ್ಲಿ ಸಿಂಹ ರಾಶಿಯಲ್ಲಿ, 1982ರಲ್ಲಿ ತುಲಾ ರಾಶಿಯಲ್ಲಿ, 1993ರಲ್ಲಿ ವೃಶ್ಚಿಕ ರಾಶಿಯಲ್ಲಿ, 2019ರಲ್ಲಿ ಧನು ರಾಶಿಯಲ್ಲಿ ಈ ಗ್ರಹಗಳು ಸಂಯೋಗಗೊಂಡಿದ್ದೆವು.

ಶನಿಯ ಅಧಿಪತಿ ಇರುವ ಮಕರದಲ್ಲಿ 6 ಗ್ರಹಗಳ ಸಂಯೋಗ
6 ಗ್ರಹಗಳು ಜೊತೆಗೆ ಬಂದಾಗ ಏನಾದರೂ ತುರ್ತು ಪರಿಸ್ಥಿತಿ ಅಂದ್ರೆ ಯುದ್ಧ ಘೋಷಣೆ ಅಥವಾ ದೊಡ್ಡ ಹೋರಾಟ ಈ ರೀತಿಯ ಘಟನೆಗಳು ಸಂಭವಿಸುತ್ತದೆ ಎಂದು ಶತಕಗಳ ಹಿಂದೆಯೇ 'ಮಯೂರ್ ಚಿತ್ರಂ' ಎಂದು ಪುಸ್ತಕದಲ್ಲಿ ಹೇಳಲಾಗಿದೆ. ಈ ಪುಸ್ತಕವನ್ನು ನಾರದ ಮುನಿಗಳು ಬರೆದರು ಎಂದು ಹೇಳಲಾಗುತ್ತದೆ.

ಹಿಂದೆ ಈ ರೀತಿ ಗ್ರಹಗಳ ಸಂಯೋಗ ಆದಾಗ ಏನಾಗಿತ್ತು?
1962ರಲ್ಲಿ ಮಕರದಲ್ಲಿ 7 ಗ್ರಹಗಳು ಸಂಯೋಗವಾದಾಗ ಸೂಪರ್ ಪವರ್ ರಾಷ್ಟ್ರಗಳಾದ ರಷ್ಯಾ ಹಾಗೂ ಅಮೆರಿಕ ನಡುವೆ ಕ್ಯೂಬಾನ್ ಕ್ಷಿಪಣಿ ಬಿಕ್ಕಟ್ಟು ಉಂಟಾಯಿತು. ಇದು ಶೀತಲ ಸಮರಕ್ಕೆ ಕಾರಣವಾಯಿತು.
1979ರಲ್ಲಿ ಸಿಂಹ ರಾಶಿಯಲ್ಲಿ 5 ಗ್ರಹಗಳ ಸಂಯೋಗವಾದಾಗ ಇರಾನ್ ಕ್ರಾಂತಿಯ ಪ್ರಭಾವ ಮುಸ್ಲಿಂ ರಾಷ್ಟ್ರಗಳಲ್ಲಿ
ಪ್ರಕ್ಷುಬ್ಧತೆ ಉಂಟಾಗಿತ್ತು.
2019, ಡಿಸೆಂಬರ್ 26ರಲ್ಲಿ ಧನು ರಾಶಿಯಲ್ಲಿ ರಾಹು-ಕೇತು ಹೊರತು ಪಡಿಸಿ 5 ಗ್ರಹಗಳು ಸಂಯೋಗವಾದಾಗ ಜಗತ್ತಿಗೆ ಕೊರೊನಾವೈರಸ್ ಕಂಟಕ ಎದುರಾಯಿತು.
ಈ ಎಲ್ಲಾ ದೃಷ್ಟಿಯಿಂದ ಗ್ರಹಗಳ ಸಂಯೋಗವಾದಾಗ ಅಪಾಯ ತಪ್ಪಿದ್ದಲ್ಲ ಎನ್ನುತ್ತದೆ ವೈದಿಕ ಶಾಸ್ತ್ರ

ಮಕರ ರಾಶಿಯಲ್ಲಿ ಆರು ಗ್ರಹಗಳ ಸಂಯೋಗ, ಏನು ಸಂಭವಿಸಬಹುದು?
ಈ ಬಾರಿ ಫೆಬ್ರವರಿ 12ರಂದು ನಡೆಯಲಿರುವ ಗ್ರಹಗಳ ಸಂಯೋಗ ಬೀರುವ ಪ್ರಭಾವಗಳ ಬಗ್ಗೆ ವೈದಿಕ ಶಾಸ್ತ್ರ ಏನು ಹೇಳಿದೆ ಎಂದು ನೋಡೋಣ ಬನ್ನಿ:
* ಮಾಧ್ಯಮ ವಲಯದಲ್ಲಿ ದೊಡ್ಡ ಮಟ್ಟದ ಬದಲಾವಣೆ/ಅಪಘಾತ ಸಾಧ್ಯತೆ ಇದೆ.
* ಚೀನಾ, ಪಾಕಿಸ್ತಾನ ಸೇರಿದಂತೆ ನೆರೆಯ ರಾಷ್ಟ್ರಗಳ ಜಿತೆ ಸಂಬಂಧ ಹಾಳಾಗಿ ಯುದ್ಧದ ಸನ್ನಿವೇಶ ಬರಬಹುದು.
* ಮನರಂಜನೆ ಕ್ಷೇತ್ರದಲ್ಲಿ ದಿಗ್ಗಜರೊಬ್ಬರು ಮರಣವೊಂದಬಹುದು.
* ರಾಜಕೀಯ ವಲಯದಲ್ಲೂ ಮುಖಂಡರಿಗೆ ವಿಪತ್ತು ಸಂಭವಿಸಲಿದೆ.
* ಧರ್ಮದ ವಿಷಯದಲ್ಲಿ ಆತಂತರಿಕ ದಂಗೆ ಏಳಬಹುದು.
* ಷೇರು ಮಾರುಕಟ್ಟೆಯ ವ್ಯವಹಾರ ಮಾಡುವವರು ತುಂಬಾ ಜಾಗ್ರತೆ ಇರಬೇಕು.



Click it and Unblock the Notifications