Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
ಸಿಂಹ ರಾಶಿಯಲ್ಲಿ ಶುಕ್ರ ಅಸ್ತ: ಡಿಸೆಂಬರ್ 2ರವರೆಗೆ ಈ 6 ರಾಶಿಯವರು ಜಾಗ್ರತೆಯಿಂದಿರಬೇಕು!
ಶುಕ್ರ ಸೆಪ್ಟೆಂಬರ್ 15ರಂದು ಅಸ್ತಂಗತವಾಗಿದೆ. ಡಿಸೆಂಬರ್ 2ರಂದು ಸಹಜ ಸ್ಥಿತಿಗೆ ಮರಳಲಿದೆ. ಶುಕ್ರ ಅಸ್ತಂಗತವಾಗಿರುವುದರಿಂದ ವೈಯಕ್ತಿಕ ಜೀವನದಲ್ಲಿನ ಭಿನ್ನಾಭಿಪ್ರಾಯಗಳು, ಹಣದ ಕೊರತೆಯ ಜೊತೆಗೆ ಅನೇಕ ಸಮಸ್ಯೆಗಳು ಎದುರಾಗುವ ಸಂಭವವಿದೆ.

ಸಿಂಹ ರಾಶಿಯಲ್ಲಿ ಶುಕ್ತ ಅಸ್ತವಾಗಿರುವಾಗ ಶುಕ್ರದ ಸ್ಥಾನದ ಅನುಸಾರ ಈ ಅವಧಿ ಈ ಕೆಳಗಿನ ರಾಶಿಗಳಿಗೆ ಅಷ್ಟು ಅನುಕೂಲಕರವಲ್ಲ ಎಂದು ವೈದಿಕ ಶಾಸ್ತ್ರ ಹೇಳುತ್ತದೆ ನೋಡಿ:

ವೃಷಭ ರಾಶಿ
ಶುಕ್ರ ಸಿಂಹ ರಾಶಿಯಲ್ಲಿ ಅಸ್ತಂಗತವಾಗಿರುವ ಈ ಅವಧಿಯಲ್ಲಿ(ಸೆ.15-ಡಿ.2) ನಿಮ್ಮ ವೆಚ್ಚಗಳು ಹೆಚ್ಚಾಗಲಿದೆ.ಇದರಿಂದ ಆರ್ಥಿಕ ಹೊರೆ ಹೆಚ್ಚಾಗುವುದು. ವೃತ್ತಿ ಜೀವನದಲ್ಲೂ ತೃಪ್ತಿ ಇರುವುದಿಲ್ಲ. ವೈಯಕ್ತಿಕ ಜೀವನದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು. ಪರಿಸ್ಥಿತಿಯನ್ನು ಹೆಚ್ಚು ದೃಢತೆ ಮತ್ತು ಪ್ರಬುದ್ಧತೆಯಿಂದ ನಿಭಾಯಿಸುವ ಮೂಲಕ ಪರಿಹರಿಸಲು ಸಾಧ್ಯವಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ನಿಮ್ಮ ತಾಯಿಯ ಆರೋಗ್ಯದ ಕಡೆಗೆ ತುಂಬಾ ಗಮನ ನೀಡಬೇಕಾಗುತ್ತದೆ.

ಮಿಥುನ ರಾಶಿ
ಶುಕ್ರ ಸಿಂಹ ರಾಶಿಯಲ್ಲಿ ಅಸ್ತಂಗತವಾಗಿರುವ ಈ ಅವಧಿಯಲ್ಲಿ(ಸೆ.15-ಡಿ.2) ಉದ್ಯೋಗದಲ್ಲಿ ಸವಾಲುಗಳು ಎದುರಾಗಿ ಉದ್ಯೋಗವನ್ನೂ ಬದಲಾಯಿಸಬಹುದು. ಈ ಅವಧಿಯಲ್ಲಿ ಲಾಭ ನೋಡುತ್ತೀರಿ, ಆದರೆ ಅಷ್ಟೂ ಖರ್ಚು ಹೆಚ್ಚಾಗಲಿದೆ. ವಿವಾಹಿತರಿಗೆ ಮಕ್ಕಳ ವಿಷಯದಲ್ಲಿ ಚಿಂತೆ ಕಾಣಬಹುದು.ಈ ಅವಧಿಯಲ್ಲಿ ನೀವು ಪ್ರಯಾಣಿಸುವುದನ್ನು ತಪ್ಪಿಸಬೇಕಾಗುತ್ತದೆ. ಸಾಧ್ಯವಾದಷ್ಟು ಯೋಗ ಮತ್ತು ಧ್ಯಾನದ ಕಡೆ ಗಮನ ನೀಡಿ.

ಕರ್ಕ ರಾಶಿ
ಶುಕ್ರ ಸಿಂಹ ರಾಶಿಯಲ್ಲಿ ಅಸ್ತಂಗತವಾಗಿರುವ ಈ ಅವಧಿಯಲ್ಲಿ(ಸೆ.15-ಡಿ.2) ಹಣ-ಉದ್ಯೋಗ ವಿಷಯದಲ್ಲಿ ತೊಂದರೆಯಿಲ್ಲದಿದ್ದರೂ ಕುಟುಂಬ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುವುದು. ಕುಟುಂಬದಲ್ಲಿ ಖರ್ಚು ಹೆಚ್ಚಲಿದೆ. ಸಂಗಾತಿ ಜೊತೆ ಭಿನ್ನಾಭಿಪ್ರಾಯ ಮೂಡಬಹುದು. ಈ ಅವಧಿಯಲ್ಲಿ ಸಂಗಾತಿ ಜೊತೆ ಮನಸ್ಸು ಬಿಚ್ಚಿ ಮಾತನಾಡಿ ನಿಮ್ಮ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿ. ಆರೋಗ್ಯದ ಕಡೆಗೂ ತುಂಬಾ ಗಮನ ನೀಡಬೇಕಾಗುತ್ತದೆ.

ಕನ್ಯಾ ರಾಶಿ
ಶುಕ್ರ ಸಿಂಹ ರಾಶಿಯಲ್ಲಿ ಅಸ್ತಂಗತವಾಗಿರುವ ಈ ಅವಧಿಯಲ್ಲಿ(ಸೆ.15-ಡಿ.2) ತುಂಬಾ ಸವಾಲುಗಳು ಎದುರಾಗಲಿವೆ. ವೃತ್ತಿ ಜೀವನದಲ್ಲಿ ನಿಮ್ಮ ವಿರುದ್ಧ ಪಿತೂರಿ ನಡೆಸುವ ಸಾಧ್ಯತೆ ಇದೆ. ಹಣದ ದೃಷ್ಟಿಯಿಂದ ನೋಡುವುದಾದರೆ ನಿಮ್ಮ ಖರ್ಚುಗಳು ನಿಮ್ಮ ಆದಾಯಕ್ಕಿಂತ ಹೆಚ್ಚಾಗಿರುತ್ತದೆ. ಈ ಪರಿಸ್ಥಿತಿಯಲ್ಲಿ, ನಿಮ್ಮ ಸಾಲವೂ ಹೆಚ್ಚಾಗಬಹುದು. ವೈಯಕ್ತಿಕ ಜೀವನದಲ್ಲಿ ನೋಡುವುದಾದರೆ ಸಂಬಂಧದಲ್ಲಿ ಕೆಲವು ಸಾಮರಸ್ಯದ ಕೊರತೆ ಕೂಡ ಕಾಣಬಹುದು.

ವೃಶ್ಚಿಕ ರಾಶಿ
ಶುಕ್ರ ಸಿಂಹ ರಾಶಿಯಲ್ಲಿ ಅಸ್ತಂಗತವಾಗಿರುವ ಈ ಅವಧಿಯಲ್ಲಿ(ಸೆ.15-ಡಿ.2) ಕೆಲಸದಲ್ಲಿ ಸಹೋದ್ಯೋಗಿಗಳಿಂದಾಗಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರಸ್ಥರು ನಿರೀಕ್ಷೆಗಿಂತ ಕಡಿಮೆ ಲಾಭವನ್ನು ಪಡೆಯುವ ಸಾಧ್ಯತೆ ಇರುತ್ತದೆ. ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.

ಮಕರ ರಾಶಿ
ಶುಕ್ರ ಸಿಂಹ ರಾಶಿಯಲ್ಲಿ ಅಸ್ತಂಗತವಾಗಿರುವ ಈ ಅವಧಿಯಲ್ಲಿ(ಸೆ.15-ಡಿ.2) ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುವಲ್ಲಿ ನೀವು ಕೆಲವು ಅಡೆತಡೆಗಳನ್ನು ಎದುರಿಸುವಿರಿ. ಉದ್ಯೋಗಿಗಳಿಗೆ, ಈ ಅವಧಿಯು ಅನೇಕ ಸವಾಲುಗಳನ್ನು ತರುತ್ತಿದೆ. ವ್ಯವಹಾರದಲ್ಲಿ ನಷ್ಟ ಮತ್ತು ಲಾಭದ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ನೀವು ಈ ಅವಧಿಯಲ್ಲಿ ಹೆಚ್ಚು ಅಪಾಯಕಾರಿ ಹೂಡಿಕೆಗಳನ್ನು ಮಾಡುವುದನ್ನು ತಪ್ಪಿಸಿ,ಇಲ್ಲದಿದ್ದರೆ ನಷ್ಟಗಳು ಹೆಚ್ಚಾಗಬಹುದು. ಕುಟುಂಬ ಜೀವನದಲ್ಲಿ ಎಲವೊಂದು ಸಮಸ್ಯೆಗಳು ಎದುರಾಗುವುದು, ಎಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡು ಹೋಗುವುದು ಒಳ್ಳೆಯದು.

ಮೀನ ರಾಶಿ
ಶುಕ್ರ ಸಿಂಹ ರಾಶಿಯಲ್ಲಿ ಅಸ್ತಂಗತವಾಗಿರುವ ಈ ಅವಧಿಯಲ್ಲಿ(ಸೆ.15-ಡಿ.2) ಕೆಲಸದ ಸ್ಥಳದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಅಲ್ಲೊಂದು ಇಲ್ಲೊಂದು ವಿಷಯಗಳತ್ತ ಗಮನ ಹರಿಸದೆ ನಿಮ್ಮ ಕೆಲಸದ ಕಡೆಗೆ ಮಾತ್ರ ಗಮನವಿರಲಿ. ಅದೇ ಸಮಯದಲ್ಲಿ ವ್ಯಾಪಾರಸ್ಥರು ಮಧ್ಯಮ ಪ್ರಯೋಜನಗಳನ್ನು ಮಾತ್ರ ನೀಡುತ್ತದೆ. ಈ ಸಮಯವು ನಿಮ್ಮ ಸಂಬಂಧಗಳಲ್ಲಿ ಅನೇಕ ಸಮಸ್ಯೆಗಳನ್ನು ತರಲಿದೆ. ಏಕೆಂದರೆ ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಏರಿಳಿತಗಳಿಂದಾಗಿ ಸಂಸಾರದಲ್ಲಿ ಬಿರುಕು ಹೆಚ್ಚಾಗುವುದು. ಇದರ ಹೊರತಾಗಿ, ಆರೋಗ್ಯದ ವಿಷಯದಲ್ಲಿ, ನಿಮ್ಮ ಆಹಾರಕ್ರಮದ ಬಗ್ಗೆ ನೀವು ಮೊದಲಿನಿಂದಲೂ ಜಾಗರೂಕರಾಗಿರಬೇಕು.



Click it and Unblock the Notifications











