Latest Updates
-
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!!
ನವರಾತ್ರಿ ಭವಿಷ್ಯ 2022: ಯಾವೆಲ್ಲಾ ರಾಶಿಗಳಿಗೆ ದುರ್ಗಾ ದೇವಿಯ ಕೃಪೆಯಿಂದ ಅದೃಷ್ಟ ಹೆಚ್ಚಲಿದೆ?
ಸೆಪ್ಟೆಂಬರ್ 26 ಸೋಮವಾರದಂದು ಶರನ್ನವ ನವರಾತ್ರಿ ಆರಂಭವಾಗುತ್ತಿದೆ. ಭಗವತ್ ದೇವಿ ಪುರಾಣದ ಪ್ರಕಾರ, ಈ ಬಾರಿ ತಾಯಿ ಆನೆಯ ಮೇಲೆ ಬರಲಿದ್ದಾಳೆ. ಆದ್ದರಿಂದ ಈ ವರ್ಷವನ್ನು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತಿದೆ. ದೇವಿ ಆನೆ ಮೇಲೆ ಬಂದರೆ ಬಳೆ-ಬೆಳೆ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆ.

ಅಲ್ಲದೆ ತಾಯಿ ದುರ್ಗೆ ಆನೆಯ ಮೇಲೆ ಬರುವುದರಿಂದ ಈ ವರ್ಷ ಅನೇಕ ರಾಶಿಯವರಿಗೆ ಶುಭ ಲಾಭಗಳ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಆನೆಯ ಮೇಲೆ ತಾಯಿಯ ಆಗಮನದಿಂದ ಕೆಲ ರಾಶಿಯವರಿಗೆ ಬಹಳಷ್ಟು ಲಾಭಗಳು ಸಿಗಲಿವೆ, ಕೆಲವರಿಗೆ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ, ಇನ್ನು ಕೆಲವರು ಸ್ವಲ್ಪ ಜಾಗ್ರತೆಯಿಂದಿರಬೇಕು. ದ್ವಾದಶ ರಾಶಿಗಳ ಮೇಲೆ 2022ರ ನವರಾತ್ರಿ ಭವಿಷ್ಯಹೇಗಿದೆ ಎಂದು ನೋಡೋಣ ಬನ್ನಿ:
ಸೆಪ್ಟೆಂಬರ್ 26 ಸೋಮವಾರದಂದು ಶರನ್ನವ ನವರಾತ್ರಿ ಆರಂಭವಾಗುತ್ತಿದೆ. ಭಗವತ್ ದೇವಿ ಪುರಾಣದ ಪ್ರಕಾರ, ಈ ಬಾರಿ ತಾಯಿ ಆನೆಯ ಮೇಲೆ ಬರಲಿದ್ದಾಳೆ. ಆದ್ದರಿಂದ ಈ ವರ್ಷವನ್ನು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತಿದೆ. ದೇವಿ ಆನೆ ಮೇಲೆ ಬಂದರೆ ಬಳೆ-ಬೆಳೆ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆ.
ಅಲ್ಲದೆ ತಾಯಿ ದುರ್ಗೆ ಆನೆಯ ಮೇಲೆ ಬರುವುದರಿಂದ ಈ ವರ್ಷ ಅನೇಕ ರಾಶಿಯವರಿಗೆ ಶುಭ ಲಾಭಗಳ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಆನೆಯ ಮೇಲೆ ತಾಯಿಯ ಆಗಮನದಿಂದ ಕೆಲ ರಾಶಿಯವರಿಗೆ ಬಹಳಷ್ಟು ಲಾಭಗಳು ಸಿಗಲಿವೆ, ಕೆಲವರಿಗೆ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ, ಇನ್ನು ಕೆಲವರು ಸ್ವಲ್ಪ ಜಾಗ್ರತೆಯಿಂದಿರಬೇಕು. ದ್ವಾದಶ ರಾಶಿಗಳ ಮೇಲೆ 2022ರ ನವರಾತ್ರಿ ಭವಿಷ್ಯಹೇಗಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರಿಗೆ ಈ ಅವಧಿ ಮಿಶ್ರ ಫಲದಿಂದ ಕೂಡಿರುತ್ತದೆ. ನೀವು ಕೆಲವು ಕೆಲಸವನ್ನು ಎಚ್ಚರಿಕೆಯಿಂದ ಮತ್ತು ಗಮನದಿಂದ ಮಾಡಬೇಕಾಗುತ್ತದೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮವಾಗಿರುತ್ತದೆ . ಮೇಷ ರಾಶಿಯವರು ಖರ್ಚುಗಳ ಕಡೆ ತುಂಬಾ ಗಮನ ಕೊಡಬೇಕು, ಇಲ್ಲದಿದ್ದರೆ ಹಣಕಾಸಿನ ಪರಿಸ್ಥಿತಿಯು ಹದಗೆಡಬಹುದು. ನೀವು ಸಾಮಾಜಿಕವಾಗಿ ಹೆಚ್ಚು ಸಕ್ರೀಯರಾಗುತ್ತೀರಿ.

ವೃಷಭ ರಾಶಿ
ದುರ್ಗೆ ದೇವಿಯ ಆಶೀರ್ವಾದದೊಂದಿಗೆ, ನಿಮ್ಮ ವೃತ್ತಿಜೀವನದಲ್ಲಿ ನೀವು ಪ್ರಮುಖ ಪಾತ್ರವನ್ನು ವಹಿಸುತ್ತೀರಿ. ಅಲ್ಲದೆ, ನಿಮ್ಮ ಎಲ್ಲಾ ಕೆಲಸಗಳನ್ನು ನೀವು ಸಕಾರಾತ್ಮಕ ಮನೋಭಾವ ಮತ್ತು ತಾಳ್ಮೆಯಿಂದ ಪೂರ್ಣಗೊಳಿಸುತ್ತೀರಿ. ಉದ್ಯೋಗ ಮತ್ತು ವ್ಯಾಪಾರ ಮಾಡುವವರೂ ತಾಯಿಯ ಆಶೀರ್ವಾದ ಹೊಂದಿರುತ್ತಾರೆ ಮತ್ತು ಆದಾಯದಲ್ಲಿ ಉತ್ತಮ ಹೆಚ್ಚಳ ಕಂಡುಬರುವುದು. ಮತ್ತೊಂದೆಡೆ, ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಈ ರಾಶಿಚಕ್ರದ ಯುವಕ/ಯುವತಿಯರು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಮಿಥುನ ರಾಶಿ
ಮಾತೆ ದುರ್ಗೆಯ ಆಶೀರ್ವಾದವು ಮಿಥುನ ರಾಶಿಯವರ ಮೇಲಿದೆ. ತಾಯಿಯ ಆಶೀರ್ವಾದದಿಂದ ನಿಮ್ಮಬಯಕೆಗಳು ಈಡೇರುತ್ತವೆ. ಉದ್ಯೋಗ ಮತ್ತು ವ್ಯಾಪಾರ ಮಾಡುವ ಜನರು ತಮ್ಮ ಗುರಿಗಳನ್ನುಮುಟ್ಟಬಹುದು, ಕುಟುಂಬ ಜೀವನ ಚೆನ್ನಾಗಿರುತ್ತದೆ. ಆದರೆ ನಿಮ್ಮ ಖರ್ಚುಗಳನ್ನು ಮಿತಿಗೊಳಿಸುವುದರ ಬಗ್ಗೆ ತುಂಬಾನೇ ಗಮನ ನೀಡಬೇಕು.

ಕರ್ಕ ರಾಶಿ
ಕರ್ಕಾಟಕ ರಾಶಿಯವರೇ ತಾಯಿಯ ಆಶೀರ್ವಾದದಿಂದ ಬಾಕಿಯುಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ನೀವು ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ತಾಯಿಯ ಕೃಪೆಯಿಂದ ಒಳ್ಳೆಯ ಕಡೆ ಕೆಲಸ ಸಿಗಲಿದೆ. ಆದರೆ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಕಾಳಜಿ ವಹಿಸಬೇಕು. ಸುತ್ತಮುತ್ತಲಿನ ಒತ್ತಡ ಮತ್ತು ನಕಾರಾತ್ಮಕ ಪ್ರಭಾವವು ನಿಮ್ಮ ಕೆಲಸದ ಗುಣಮಟ್ಟ ಮತ್ತು ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು, ಆದ್ದರಿಂದ ನಿಮ್ಮ ಕೆಲಸದ ಮೇಲೆ ಸಂಪೂರ್ಣ ಗಮನವಿಟ್ಟು ಮಾಡಬೇಕಾಗುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಅವಧಿ ಮಧ್ಯಮ ಫಲದಾಯಕವಾಗಿರುತ್ತದೆ. ನೀವು ಕೆಲಸದ ಜೊತೆಗೆ ನಿಮ್ಮ ಹಾಗೂ ಕುಟುಂಬದ ಆರೋಗ್ಯದ ಸಂಪೂರ್ಣ ಕಾಳಜಿಯನ್ನು ತೆಗೆದುಕೊಳ್ಳಬೇಕು. ದುರ್ಗಾ ಮಾತೆಯ ಅನುಗ್ರಹದಿಂದಾಗಿ ನ, ನೀವು ಮಾಡುವ ಯೋಜನೆಯು ಪೂರ್ಣಗೊಳ್ಳುತ್ತದೆ, ಇದರಿಂದಾಗಿ ನಿಮ್ಮ ಖ್ಯಾತಿ ಹೆಚ್ಚಲಿದೆ. ಮಾತೆ ದುರ್ಗೆಯ ಅನುಗ್ರಹವು ನಿಮ್ಮ ಸಂಗಾತಿಯ ಮೇಲೆ ಇರುತ್ತದೆ. ನಿಮ್ಮಿಬ್ಬರ ಸಂಬಂಧ ಚೆನ್ನಾಗಿ ಇರುತ್ತದೆ. ಒಡಹುಟ್ಟಿದವರ ಜೊತೆಗಿನ ಭಿನ್ನಾಭಿಪ್ರಾಯ ಬಗೆಹರಿಸಲು ಸಾಧ್ಯವಾಗುವುದು.

ಕನ್ಯಾ ರಾಶಿ
ಮಾತೆ ದುರ್ಗೆಯ ಆಶೀರ್ವಾದ ನಿಮ್ಮ ಮೇಲಿದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಕಾರಾತ್ಮಕ ಮನೋಭಾವದ ಅಗ್ಯತವಿದೆ. ಮಕ್ಕಳನ್ನು ಅಪೇಕ್ಷಿಸುವ ದಂಪತಿಗಳು ಸಿಹಿ ಸುದ್ದಿ ಪಡೆಯುವಿರಿ. ನೀವು ಅಪರಿಚಿತ ಅಥವಾ ಹೊಸಬ್ಬರ ಜೊತೆ ಹಣಕಾಸಿನ ವ್ಯವಹಾರ ಮಾಡುವಾಗ ಎಚ್ಚರವಹಿಸಬೇಕಾಗಿದೆ.

ತುಲಾ ರಾಶಿ
ತುಲಾ ರಾಶಿಯ ಜನರು ಮಾತೆ ದುರ್ಗೆಯ ಆಶೀರ್ವಾದದಿಂದ ಬಯಸಿದ ಫಲಿತಾಂಶಗಳನ್ನು ಪಡೆಯಬಹುದು. ಮಾತೆ ದುರ್ಗೆಯ ಅನುಗ್ರಹದಿಂದ, ನಿಮ್ಮ ಪ್ರೇಮ ಜೀವನವು ಧನಾತ್ಮಕ ಮತ್ತು ಸಂತೋಷದಿಂದ ಕೂಡಿರುತ್ತದೆ. ಇನ್ನು ವೃತ್ತಿ ಜೀವನದಲ್ಲಿ ಎದುರಾಳಿಗಳನ್ನು ಕಡೆಗಣಿಸಬೇಡಿ. ಮನೆಯ ಸದಸ್ಯರೊಂದಿಗಿನ ಸಂಬಂಧಗಳ ಬಗ್ಗೆ ಸ್ವಲ್ಪ ಎಚ್ಚರಿಕೆವಹಿಸುವುದು ಒಳ್ಳೆಯದು.

ವೃಶ್ಷಿಕ ರಾಶಿ
ದುರ್ಗೆಯ ಆಶೀರ್ವಾದದಿಂದ ವೃಶ್ಚಿಕ ರಾಶಿಯವರ ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮ ಆಯೋಜಿಸಬಹುದು. ತಾಯಿಯ ಆಶೀರ್ವಾದದಿಂದಾಗಿ ನಿಮ್ಮ ಹಳೆಯ ಹೂಡಿಕೆಗಳಿಂದ ನೀವು ಕೆಲವು ಉತ್ತಮ ಪ್ರತಿಫಲಗಳನ್ನು ನಿರೀಕ್ಷಿಸಬಹುದು. ಆದರೆ , ಕೆಲಸದ ಸ್ಥಳದಲ್ಲಿ ಕೆಲವು ತೊಡಕುಗಳಿರಬಹುದು.ನೀವು ಯಾವುದೇ ರೀತಿಯ ಆಸ್ತಿಯಿಂದ ಲಾಭವನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಆದಾಯದಲ್ಲಿ ಹೆಚ್ಚಳದ ಸಾಧ್ಯತೆಯಿದೆ. ಮನೆಯವರ ಬಯಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಾರೆ.

ಧನು ರಾಶಿ
ಧನು ರಾಶಿಯವರಿಗಿದ್ದ ಚಿಂತೆಗಳು, ತಾಯಿಯ ಆಶೀರ್ವಾದದಿಂದ ದೂರಾಗಿ ನಿಮ್ಮ ಕೆಲಸಗಳು ಸುಗಮವಾಗಿ ನಡೆಯುತ್ತದೆ. ಅವಿವಾಹಿತರಾಗಿರುವ ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಕೂಡಿ ಬರಲಿದೆ. ಮಾತೆ ದುರ್ಗೆಯ ಅನುಗ್ರಹದಿಂದ, ನೀವು ಮನೆಯಲ್ಲಿ ನಡೆಯುತ್ತಿರುವ ಒತ್ತಡದ ಸಂದರ್ಭಗಳನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ವ್ಯವಹಾರದಲ್ಲಿ, ನೀವು ಲಾಭವನ್ನು ನಿರೀಕ್ಷಿಸಬಹುದು.

ಮಕರ ರಾಶಿ
ಮಕರ ರಾಶಿಯವರ ಜೀವನದಲ್ಲಿ ತಾಯಿಯ ಅನುಗ್ರಹದಿಂದ ಅನೇಕ ಸುಧಾರಣೆಗಳು ಕಂಡುಬರುತ್ತವೆ. ನಿಮ್ಮ ಸಕಾರಾತ್ಮಕ ಆಲೋಚನೆಗಳಿಂದ ನೀವು ಪ್ರತಿಯೊಂದು ಸಮಸ್ಯೆಯನ್ನು ಜಯಿಸುತ್ತೀರಿ. ಸೃಜನಾತ್ಮಕ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವ ಈ ರಾಶಿಯವರು ಶೀಘ್ರದಲ್ಲೇ ಮಾ ದುರ್ಗೆಯ ಆಶೀರ್ವಾದದಿಂದಾಗಿ ಒಳ್ಳೆಯ ಲಾಭ ಪಡೆಯುತ್ತಾರೆ.

ಕುಂಭ ರಾಶಿ
ಮಾತೆ ದುರ್ಗೆಯ ಆಶೀರ್ವಾದದೊಂದಿಗೆ, ಕುಂಭ ರಾಶಿಯವರು ತಮ್ಮ ವೃತ್ತಿಜೀವನವನ್ನು ಉನ್ನತ ಪ್ರಗತಿ ಕಾಣುವಿರಿ. ಕುಟುಂಬದ ಸದಸ್ಯರೊಂದಿಗೆ ಸಂಬಂಧವು ಉತ್ತಮವಾಗಿರುತ್ತದೆ. ವೈವಾಹಿಕ ಜೀವನದಲ್ಲಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ಮನೆಯಲ್ಲಿ ಕೆಲವು ಶುಭ ಕಾರ್ಯಕ್ರಮಗಳನ್ನು ಸಹ ಆಯೋಜಿಸಬಹುದು. ದೇವಿಯ ಕೃಪೆಯಿಂದ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುತ್ತೀರಿ . ಹೂಡಿಕೆಯು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ನೀವು ವಾಹನವನ್ನು ಕೂಡ ಖರೀದಿಸಬಹುದು.

ಮೀನ ರಾಶಿ
ಮೀನ ರಾಶಿಯಯವರಿಗೆ ದುರ್ಗೆಯ ಕೃಪೆಯಿಂದಾಗಿ ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಹೆಚ್ಚಲಿದೆ. ನೀವು ಯಾವುದಾದರೂ ಹೊಸ ಕೆಲಸ ಪ್ರಾರಂಭಿಸಿದರೆ ಯಶಸ್ವಿಯಾಗುತ್ತೀರಿ. ತಂದೆಯೊಂದಿಗಿನ ಕೆಲವು ತಪ್ಪು ತಿಳುವಳಿಕೆಯಿಂದಾಗಿ, ವಿವಾದದ ಸಾಧ್ಯತೆಯಿದೆ, ಆದರೆ ಮಾತುಕತೆಯ ಮೂಲಕ ತಪ್ಪು ತಿಳುವಳಿಕೆಯನ್ನು ನಿವಾರಿಸಲು ಪ್ರಯತ್ನಿಸಿ.



Click it and Unblock the Notifications











