Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಶನಿ ಉದಯ 2023: ಈ 3 ರಾಶಿಗಳ ಸಂಪತ್ತು ವೃದ್ಧಿಸುವುದು, ಉದ್ಯೋಗದಲ್ಲಿ ಬಡ್ತಿ ಸಿಗಲಿದೆಮ ವ್ಯವಹಾರದಲ್ಲಿ ಲಾಭ ಗಳಿಸುವಿರಿ
ನವಗ್ರಹಗಳಲ್ಲಿ ಅತೀ ನಿಧಾನವಾದ ಗ್ರಹವೆಂದರೆ ಅದು ಶನಿ. ಶನಿ ಒಂದು ಗ್ರಹದಿಂದ ಮತ್ತೊಂದು ಗ್ರಹ ಸಂಚರಿಸಲು ಎರಡೂವರೆ ವರ್ಷ ತೆಗೆದುಕೊಳ್ಳುವುದು. ಆದ್ದರಿಂದ ಶನಿ ನೀಡುವ ಒಳ್ಳೆಯ ಅಥವಾ ಕೆಟ್ಟ ಫಲ ಕೂಡ ದೀರ್ಘವಾಗಿರುತ್ತದೆ. ಶನಿದೇವನ ಕೆಟ್ಟ ದೃಷ್ಟಿ ಬಿದ್ದರೆ ಮುಗಿಯಿತು, ತುಂಬಾನೇ ಕಷ್ಟ ಪಡಬೇಕಾಗುತ್ತದೆ. ಆದ್ದರಿಂದಲೇ ಶನಿದೋಷವಿದೆ ಎಂದರೆ ಸಾಕು ಜನರು ಬೆಚ್ಚಿ ಬೀಳುತ್ತಾರೆ.

ಈ ವರ್ಷ ಜನವರಿ 17ಕ್ಕೆ ಶನಿಯು ಕುಂಭ ರಾಶಿಗೆ ಪ್ರವೇಶಿಸಿದೆ. ಪ್ರವೇಶವಾದ ಸ್ವಲ್ಪ ದಿನಗಳಲ್ಲಿ ಅಸ್ತಮಿಸಿದ ಶನಿ ಮಾರ್ಚ್ 6ಕ್ಕೆ ಉದಯವಾಗಲಿದೆ. ಶನಿ ಉದಯ ತುಂಬಾ ರಾಶಿಗಳಿಗೆ ಒಳಿತನ್ನು ಉಂಟು ಮಾಡಲಿದೆ. ಶನಿ ಅಸ್ತಂಗತವಾದಾಗ ತುಂಬಾ ಕಷ್ಟ ಅನುಭವಿಸಿದವರು ಶನಿ ಉದಯವಾದ ಒಳಿತನ್ನು ಅನುಭವಿಸುವಿರಿ. ನಿಮ್ಮ ಕಷ್ಟಗಳಿಂದ ಮುಕ್ತಿ ಪಡೆಯುವಿರಿ, ಆರ್ಥಿಕವಾಗಿ ಸದೃಢವಾಗುತ್ತೀರಿ. ಅದೃಷ್ಟ ನಿಮ್ಮ ಜೊತೆಗೆ ಇರಲಿದೆ.
ಶನಿಯು ಮಾರ್ಚ್ 06, 2023 ರಂದು ರಾತ್ರಿ 11.36 ಕ್ಕೆ ಕುಂಭ ರಾಶಿ ಉದಯವಾಗಲಿದೆ. ಯಾವುದೇ ಗ್ರಹ ಸೂರ್ಯನ ಸಮೀಪ ಬಂದಾಗ ಸೂರ್ಯ ಅಸ್ತಂಗತ ಎಂದು ಕರೆಯಲಾಗುವುದು, ಈ ಸಮಯದಲ್ಲಿ ಆ ಗ್ರಹದ ಶಕ್ತಿ ಕಡಿಮೆಯಾಗುತ್ತದೆ ಎಂದು ವೈದಿಕ ಶಾಸ್ತ್ರ ಹೇಳುತ್ತದೆ, ಈ ಕಾರಣಕ್ಕೆ ತುಂಬಾ ರಾಶಿಗಳು ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
ಇದೀಗ ಶನಿ ಉದಯವಾಗುವುದರಿಂದ ಹಲವು ರಾಶಿಗಳಿಗೆ ಒಳ್ಳೆಯದಾಗಲಿದೆ. ಅದರಲ್ಲೂ ಈ ಮೂರು ರಾಶಿಗಳಿಗೆ ತುಂಬಾ ಒಳ್ಳೆಯದು:

ಮೇಷ ರಾಶಿ
ಮೇಷ ರಾಶಿಯವರ ಅಧಿಪತಿ ಮಂಗಳ. ಕುಂಭ ರಾಶಿಯಲ್ಲಿ ಶನಿಯ ಉದಯ ತುಂಬಾ ಮಂಗಳಕರವಾಗಿರುತ್ತದೆ. ಕಳೆದ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ನಿಮ್ಮ ಕೆಲಸಗಳಲ್ಲಿ ಪ್ರಗತಿ ಕಂಡುಬರುವುದು. ಶನಿಯ ಉದಯವು ವೃತ್ತಿಜೀವನದ ದೃಷ್ಟಿಯಿಂದ ಪ್ರಯೋಜನಕಾರಿಯಾಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ನಿಮ್ಮ ಸಮಸ್ಯೆಗಳಿಗೆ ಈ ಅವಧಿಯಲ್ಲಿ ಪರಿಹಾರ ಸಿಗಲಿದೆ. ಮಕ್ಕಳ ಕಡೆಯಿಂದ ಸಂತೋಷ ದೊರೆಯಲಿದೆ, ಕುಟುಂಬದಲ್ಲಿ ಶಾಂತಿ ದೊರೆಯಲಿದೆ.

ವೃಷಭ ರಾಶಿ
ಶನಿ ಉದಯ ಈ ರಾಶಿಯವರಿಗೆ ತುಂಬಾ ಒಳ್ಳೆಯದಿದೆ. ಈ ಸಮಯದಲ್ಲಿ ನೀವು ಮಾಡುವ ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ. ಮಾರ್ಚ್ 06 ರಿಂದ, ನಿಮ್ಮ ಪ್ರತಿಯೊಂದು ಕೆಲಸದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ನೋಡುತ್ತೀರಿ. ಈ ಅವಧಿಯಲ್ಲಿ ವಿತ್ತೀಯ ಲಾಭ ದೊರೆಯಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣುವಿರಿ. ನೀವು ಏನಾದರೂ ಉದ್ಯೋಗ ಬದಲಾಯಿಸಲು ಇಚ್ಚಿಸುವುದಾದರೆ ಈ ಅವಧಿಯಲ್ಲಿ ಒಳ್ಳೆಯ ಅವಕಾಶಗಳು ದೊರೆಯಲಿದೆ . ನಿಮ್ಮ ಸಂಬಳ ಹೆಚ್ಚಾಗಲಿದೆ. ಕುಟುಂಬದಲ್ಲಿ ನೆಮ್ಮದಿ ಇರುತ್ತದೆ.

ಮಕರ ರಾಶಿ
ಕುಂಭ ರಾಶಿಯಲ್ಲಿ ಶನಿಯ ಉದಯವು ಮಕರ ರಾಶಿಯವರಿಗೆ ಶುಭವಾಗಿದೆ. ವೃತ್ತಿಜೀವನದ ದೃಷ್ಟಿಯಿಂದ ಈ ಅವಧಿ ಒಳ್ಳೆಯದಿದೆ. ನಿಮ್ಮ ಒಳ್ಳೆಯ ಉದ್ಯೋಗ ಅವಕಾಶಗಳು ದೊರೆಯಲಿದೆ. ಇದ್ದಕ್ಕಿದ್ದಂತೆ ಧನಲಾಭಕ್ಕೆ ಅವಕಾಶವಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಇರಲಿದೆ. ವ್ಯವಹಾರದಲ್ಲಿ ಈ ಅವಧಿಯಲ್ಲಿ ಲಾಭಗಳಿಸುವಿರಿ. ವ್ಯಾಪಾರದ ವಿಸ್ತರಣೆಯಾಗಲಿದೆ. ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ.



Click it and Unblock the Notifications
