Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಕುಂಭ ರಾಶಿಗೆ ಶನಿ ಸಂಚಾರ: ಶನಿಕೃಪೆಯಿಂದ ಈ ರಾಶಿಯವರ ಸಂಪತ್ತು ಹೆಚ್ಚಿಸಲಿದೆ
30 ವರ್ಷಗಳ ಬಳಿಕ ಶನಿಯು ಕುಂಭ ರಾಶಿಗೆ ಸಂಚರಿಸಲಿದೆ. ಜನವರಿ 17ಕ್ಕೆ ಶನಿಯು ಕುಂಭ ರಾಶಿಗೆ ಹೋಗಲಿದೆ. ಜ್ಯೋತಿಷ್ಯದ ದೃಷ್ಟಿಯಲ್ಲಿ ಶನಿ ಗೋಚಾರ ತುಂಬಾನೇ ಮುಖ್ಯ, ಏಕೆಂದರೆ ಶನಿಯ ಪ್ರಭಾವ ಒಂದೆರಡು ತಿಂಗಳು ಅಲ್ಲ, ವರ್ಷಗಟ್ಟಲೆ ಇರುತ್ತದೆ.
ಏಕೆಂದರೆ ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ತುಂಬಾ ನಿಧಾನವಾಗಿ ಚಲಿಸುವ ಗ್ರಹ ಇದಾಗಿರುವುದರಿಂದ ಇದರ ಕೆಟ್ಟ ದೃಷ್ಟಿ ಇದ್ದರೆ ಸಾಕೋ ಸಾಕು ಅನಿವಷ್ಟು ತೊಂದರೆ ಕೊಡುತ್ತದೆ.
ಅದೇ ಶನಿಯ ಒಳ್ಳೆಯ ದೃಷ್ಟಿ ಬಿದ್ದರೆ ಶನಿ ಕೃಪೆಯಿಂದ ಏನೂ ಚಿಂತೆ ಮಾಡಬೇಕಾಗಿಲ್ಲ, ಸಂಪತ್ತು ವೃದ್ಧಿಸುತ್ತದೆ, ಸಮಸ್ಯೆಗಳು ದೂರಾಗುವುದು. ಮಾಡುತ್ತಿರುವ ಕೆಲಸದಲ್ಲಿ ಪ್ರಗತಿ ಕಾಣುವಿರಿ. ಒಟ್ಟಿನಲ್ಲಿ ಹೇಳುವುದಾದರೆ ಶನಿಯ ಕೃಪೆ ಇದ್ದರೆ ಅದೃಷ್ಟದ ಬಾಗಿಲು ತೆರೆದಂತೆ.
ಶನಿಯು ಕುಂಭ ರಾಶಿಗೆ ಸಂಚರಿಸಿರುವುದರಿಂದ ಈ ರಾಶಿಯವರಿಗೆ ತುಂಬಾನೇ ಒಳ್ಳೆಯದು ನೋಡಿ:

ಮೇಷ ರಾಶಿ
ಶನಿಯು ಕುಂಭ ರಾಶಿಗೆ ಸಂಚರಿಸಿದಾಗ ಮೇಷ ರಾಶಿಯವರ 11ನೇ ಮನೆಯಲ್ಲಿ ಇರಲಿದೆ. ಈ ಮನೆಯಲ್ಲಿ ಇರುವ ಶನಿ ಶುಭ ಫಲಿತಾಂಶ ನೀಡಲಿದೆ. ನೀವೇನಾದರೂ ಸ್ವಂತ ಕೆಲಸ ಪ್ರಾರಂಭಿಸಲು ಬಯಸುವುದಾದರೆ ಈ ಅವಧಿ ಅನುಕೂಲಕರವಾಗಿದೆ. ಕೆಲಸದಲ್ಲಿ ಪ್ರಗತಿ ಕಾಣುವಿರಿ. ನಿಮ್ಮ ಯಾವುದಾದರೂ ಪ್ರಮುಖ ಕೆಲಸ ಬಾಕಿಯುಳಿದಿದ್ದರೆ ಈ ಅವಧಿಯಲ್ಲಿ ಅದು ಪೂರ್ಣವಾಗಲಿದೆ. ಶನಿಯು ಕುಂಭ ರಾಶಿಯಲ್ಲಿರುವುದರಿಂದ ವ್ಯಾಪಾರಸ್ಥರಿಗೆ ಒಳ್ಳೆಯದು. ಒಂದಕ್ಕಿಂತ ಹೆಚ್ಚು ಆದಾಯ ಮೂಲಗಳು ತೆರೆದುಕೊಳ್ಳಬಹುದು. ಮಕ್ಕಳ ಕಡೆಯಿಂದ ಖುಷಿ ಸಿಗಲಿದೆ.

ವೃಷಭ ರಾಶಿ
ವೃಷಭ ರಾಶಿಯವರ 10ನೇ ಮನೆಯಲ್ಲಿ ಶನಿ ಇರುವುದು ನಿಮಗೆ ಅನುಕೂಲಕರವಾಗಿದೆ. ಈ ಸಂಚಾರದಿಂದ ವೃಷಭ ರಾಶಿಯವರ ಭವಿಷ್ಯ ಬದಲಾಗಲಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುತ್ತೀರಿ. ಮನೆಕಟ್ಟುವ ಕನಸು ಕಾಣುತ್ತರುವವರಿಗೆ ಈ ಅವಧಿಯಲ್ಲಿ ನೆರವೇರಲಿದೆ. ತೈಲ, ಗಣಿಗಾರಿಕೆ, ರಾಜಕೀಯ, ತತ್ವಶಾಸ್ತ್ರ, ಧರ್ಮ, ಜ್ಯೋತಿಷ್ಯಕ್ಕೆ ಸಂಬಂಧಿಸಿದವರಿಗೆ ಈ ಅವಧಿ ಒಳ್ಳೆಯದಿದೆ. ಸ್ವಂತ ಅಥವಾ ಪಾಲುದಾರಿಕೆಯ ಕೆಲಸಗಳಲ್ಲಿ ಲಾಭ ಸಿಗಲಿದೆ.

ಕನ್ಯಾ ರಾಶಿ:
ಶನಿ ಕುಂಭ ರಾಶಿಗೆ ಸಂಚರಿಸಿದಾಗ ಶನಿ ರಾಶಿಯವರ 6ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ಈಗ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಈ ಅವಧಿಯಲ್ಲಿ ಸಾಕಷ್ಟು ಸುಧಾರಣೆ ಕಾಣುವುದು. ವಿದೇಶಕ್ಕೆ ಹೋಗ ಬಯಸುವವರಿಗೆ ಈ ಅವಧಿಯಲ್ಲಿ ಆಸೆ ನೆರವೇರಲಿದೆ. ಈ ಅವಧಿ ರಾಜಕಾರಣಿಗಳಿಗೆ ಒಳ್ಳೆಯದಿದೆ, ನೀವು ಸಾಕಷ್ಟು ಪ್ರಸಿದ್ಧಿ ಪಡೆಯುವಿರಿ.

ತುಲಾ ರಾಶಿ:
ಶನಿಯು ಕುಂಭ ರಾಶಿಯಲ್ಲಿ ಇರುವಾಗ ನಿಮ್ಮ ರಾಶಿಯ 5ನೇ ಮನೆಯಲ್ಲಿ ಇರಲಿದೆ. ತುಲಾ ರಾಶಿಯವರು ಈ ಅವಧಿಯಲ್ಲಿ ಶನಿಯ ಕೆಟ್ಟ ದೃಷ್ಟಿಯಿಂದ ಮುಕ್ತರಾಗುತ್ತೀರಿ, ಆದ್ದರಿಂದ ಈ ಅವಧಿಯಲ್ಲಿ ಇಷ್ಟು ದಿನ ಇದ್ದಂಥ ಕಷ್ಟಗಳು ದೂರಾಗುವುದು. ಏನಾದರೂ ಕೌಟುಂಬಿಕ ಸಮಸ್ಯೆಯಿದ್ದರೆ ಈ ಅವಧಿಯಲ್ಲಿ ಕೊನೆಯಾಗಲಿದೆ. ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಉದ್ಯಮಿಗಳು ಈ ಅವಧಿಯಲ್ಲಿ ಪ್ರಗತಿ ಕಾಣುವಿರಿ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರು ಈ ಅವಧಿಯಲ್ಲಿ ಲಾಭ ಪಡೆಯಲಿದ್ದಾರೆ.

ಧನು ರಾಶಿ:
ಶನಿಯು ಕುಂಭ ರಾಶಿಗೆ ಪ್ರವೇಶಿಸಿದಾಗ ಶನಿ ರಾಶಿಯವರು ನಿಟ್ಟುಸಿರು ಬಿಡಬಹುದು, ಏಕೆಂದರೆ ಶನಿ ಸಾಡೇಸಾತಿ ಮುಕ್ತಾಯವಾಗಲಿದೆ. ಇಷ್ಟು ವರ್ಷ ಅನುಭವಿಸಿದ ಕಷ್ಟಗಳು ದೂರಾಗಲಿದೆ. ಧನು ರಾಶಿಯವರು ಸಾಡೇ ಸತಿಯಲ್ಲಿದ್ದರು, ಈಗ ನೀವು ಶನಿ ದೇವರ ಆಶೀರ್ವಾದವನ್ನು ಪಡೆಯಲಿದ್ದೀರಿ. ಈ ಅವಧಿಯಲ್ಲಿ ಹಣ ಗಳಿಸಲು ಸಾಧ್ಯವಾಗುವುದು. ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಹೊಸ ಉದ್ಯೋಗ ಅಥವಾ ವ್ಯವಹಾರಕ್ಕೆ ಈ ಸಮಯ ಅನುಕೂಲಕರ. ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯತ್ನಿಸುವ ವಿದ್ಯಾರ್ಥಿಗಳ ಕನಸು ನನಸಾಗಲಿದೆ.



Click it and Unblock the Notifications