Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕರದಲ್ಲಿ ಶನಿ ಶುಕ್ರ ಯುತಿ: ಈ ಮೈತ್ರಿ ಈ ರಾಶಿಯವರಿಗೆ ತಂದಿದೆ ಅದೃಷ್ಟದ ಯೋಗ
ಮಕರದಲ್ಲಿ ಈಗಾಗಲೇ ಶನಿ ಹಾಗೂ ಶುಕ್ರ ಗ್ರಹದ ಸಂಯೋಗವಾಗಿದೆ. ಜ್ಯೋತಿಷ್ಯದ ಪ್ರಕಾರ ಶನಿ ಮತ್ತು ಶುಕ್ರ ನಡುವೆ ಒಳ್ಳೆಯ ಮೈತ್ರಿ ಇದೆ. ಇದರಿಂದ ಈ ಎರಡು ಗ್ರಹಗಳ ಸಂಯೋಜನೆ ಕೆಲವೊಂದು ಗ್ರಹಗಳಿಗೆ ಅದೃಷ್ಟದ ಬಾಗಿಲು ತೆರೆದಿದೆ.

ಶುಕ್ರ-ಶನಿ ಯುತಿ ಯಾವ ರಾಶಿಯವರಿಗೆ ತುಂಬಾ ಲಾಭದಾಯಕವಾಗಿದೆ ಎಂದು ತಿಳಿಯುವ ಮೊದಲು ಶುಕ್ರ-ಶನಿ ಸಂಯೋಗದ ಪರಿಣಾಮ ಹೇಗಿರುತ್ತದೆ ಎಂದು ತಿಳಿಯೋಣ:

ಶುಕ್ರ-ಶನಿ ಸಂಯೋಗದ ಪರಿಣಾಮ
* ಮಕರ ರಾಶಿಯ ಅಧಿಪತಿ ಶನಿ, ಅದೇ ರಾಶಿಗೆ ಶುಕ್ರನ ಪ್ರವೇಶವಾಗಿರುವುದರಿಂದ ಶುಕ್ರ-ಶನಿ ಯುತಿ ಉಂಟಾಗಿದೆ. ಇದರ ಪ್ರಭಾವದ ಬಗ್ಗೆ ನೋಡುವುದಾದರೆ ದೇಶದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳಲ್ಲಿ ದಿಢೀರ್ ಉತ್ಕರ್ಷ ಉಂಟಾಗುತ್ತದೆ.
* ವ್ಯಾರಾಸ್ಥರು ಲಾಭಗಳಿಸಲಿದ್ದಾರೆ, ಏಕೆಂದರೆ ಮಾರುಕಟ್ಟೆಯಲ್ಲಿ ಶಾಪಿಂಗ್ ಹೆಚ್ಚಾಗುತ್ತದೆ. ಈ ಸಮಯವು ಹೂಡಿಕೆಗೆ ಸಹ ಅನುಕೂಲಕರವಾಗಿರುತ್ತದೆ.
* ಆರ್ಥಿಕ ಬಲಕ್ಕಾಗಿಯೂ ಅವಕಾಶಗಳು ದೊರೆಯುತ್ತಿವೆ. ಪೀಠೋಪಕರಣಗಳು, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು, ಅಲಂಕಾರಿಕ ವಸ್ತುಗಳು, ಆಭರಣಗಳು ಇತ್ಯಾದಿಗಳ ವ್ಯಾಪಾರವೂ ಸಾಕಷ್ಟು ವೇಗವನ್ನು ಪಡೆಯುತ್ತದೆ.
ಶನಿಗ್ರಹದ ಪ್ರಭಾವದಿಂದ ಭೂಮಿ, ಮನೆ, ವಾಹನ ಇತ್ಯಾದಿ ವ್ಯಾಪಾರ ಮಾಡುವವರಿಗೆ ಲಾಭವಾಗಲಿದೆ.
* ಕೌಟುಂಬಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ಹೊಸ ಕೆಲಸಗಳ ಯೋಜನೆಗಳು ವೇಗವನ್ನು ಪಡೆಯುತ್ತವೆ.
* ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಸಹ ದೊಡ್ಡ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ.
ಇನ್ನು ಈ ಅವಧಿಯಲ್ಲಿ ಈ ಮೂರು ರಾಶಿಯವರಿಗೆ ತುಂಬಾನೇ ಒಳ್ಳೆಯದು:

ಕನ್ಯಾ ರಾಶಿ
ಶನಿ ಮತ್ತು ಶುಕ್ರ ಸಂಯೋಜನೆಯು ನಿಮಗೆ ಮಂಗಳಕರ ಮತ್ತು ಫಲಪ್ರದವಾಗಿದೆ . ಏಕೆಂದರೆ ಈ ಮೈತ್ರಿಯು ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ರಚನೆಯಾಗುತ್ತಿದೆ. ಈ ಮನೆಯನ್ನು ವೈವಾಹಿಕ ಜೀವನ ಮತ್ತು ಪಾಲುದಾರಿಕೆಯ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ಅಲ್ಲದೆ, ಅವಿವಾಹಿತರು ಮದುವೆ ಪ್ರಸ್ತಾಪಗಳನ್ನು ಪಡೆಯಬಹುದು. ಅದೇ ಸಮಯದಲ್ಲಿ, ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ. ಅಲ್ಲದೆ, ಈ ಅವಧಿಯಲ್ಲಿ, ಪಾಲುದಾರಿಕೆ ಕೆಲಸದಲ್ಲಿ ನೀವು ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯಿದೆ.

ತುಲಾ ರಾಶಿ
ಶನಿ ಮತ್ತು ಶುಕ್ರನ ಸಂಯೋಜನೆಯು ತುಲಾ ರಾಶಿಯವರಿಗೆ ಅನುಕೂಲಕರವಾಗಿದೆ. ಏಕೆಂದರೆ ಈ ಮೈತ್ರಿಯು ನಿಮ್ಮ ರಾಶಿಯ ನಾಲ್ಕನೇ ಮನೆಯಲ್ಲಿ ರಚನೆಯಾಗಿದೆ. ಅದಕ್ಕಾಗಿಯೇ ನೀವು ಈ ಸಮಯದಲ್ಲಿ ಎಲ್ಲಾ ದೈಹಿಕ ಸಂತೋಷಗಳನ್ನು ಪಡೆಯಬಹುದು. ಅಲ್ಲದೆ, ಆದಾಯದಲ್ಲಿ ಹೆಚ್ಚಳವಾಗಬಹುದು. ಅದೇ ಸಮಯದಲ್ಲಿ ಆದಾಯದ ಮೂಲಗಳು ಸಹ ಹೆಚ್ಚಾಗಬಹುದು ಹಾಗೂ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮಲ್ಲಿ ಕೆಲವರು ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಅಲ್ಲದೆ, ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು.

ಮೇಷ ರಾಶಿ
ಶನಿ ಮತ್ತು ಶುಕ್ರನ ಸಂಯೋಜನೆಯು ವ್ಯಾಪಾರ ಮತ್ತು ವೃತ್ತಿಜೀವನದ ವಿಷಯದಲ್ಲಿ ನಿಮಗೆ ಲಾಭದಾಯಕ. ನಿರುದ್ಯೋಗಿಗಳು ಈ ಸಮಯದಲ್ಲಿ ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಅಲ್ಲದೆ, ಈ ಅವಧಿಯು ವಿದ್ಯಾರ್ಥಿಗಳಿಗೆ ಮಂಗಳಕರವಾಗಿದೆ. ಅವರು ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವವರಿಗೆ ಅವಕಾಶಗಳು ದೊರೆಯಲಿದೆ. ಅಲ್ಲದೆ, ಉದ್ಯಮಿಗಳಾಗಿರುವವರು ಈ ಸಮಯದಲ್ಲಿ ಉತ್ತಮ ಲಾಭವನ್ನು ಗಳಿಸಬಹುದು.

ಉಳಿದ ರಾಶಿಗಳಿಗೆ ಹೇಗಿದೆ?
ವೃಷಭ ರಾಶಿ- ವೃಷಭ ರಾಶಿಯವರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕಚೇರಿ ರಾಜಕೀಯದಿಂದ ದೂರವಿರಿ.
ಮಿಥುನ- ಕಛೇರಿಯಲ್ಲಿನ ಪ್ರತಿಸ್ಪರ್ಧಿಗಳು ನಿಮಗೆ ತೊಂದರೆ ಕೊಡಲು ಪ್ರಯತ್ನಿಸಬಹುದು. ಸಹೋದ್ಯೋಗಿಗಳಿಂದ ಕೆಲಸ ಪಡೆಯಲು ತೊಂದರೆ ಉಂಟಾಗಲಿದೆ. ಮಾನಸಿಕ ಒತ್ತಡ ಹೆಚ್ಚಾಗಬಹುದು. ನಿಮ್ಮಿಂದ ಸಾಲ ಪಡೆದವರು, ಅವರೊಂದಿಗಿನ ಸಂಬಂಧಗಳು ಹಾಳಾಗಬಹುದು.
ಕರ್ಕ ರಾಶಿ- ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ವ್ಯವಹಾರದ ಖಾತೆಯನ್ನು ಸರಿಯಾಗಿ ಇರಿಸಿ. ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಸಂಗಾತಿಗೆ ಮೋಸ ಮಾಡುವುದನ್ನು ತಪ್ಪಿಸಿ.
ಸಿಂಹ ರಾಶಿ - ಶುಕ್ರ ಮತ್ತು ಶನಿಯ ಸಂಯೋಜನೆಯಿಂದ, ನೀವು ಅನೇಕ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ಆರ್ಥಿಕ ಲಾಭವನ್ನೂ ಪಡೆಯುತ್ತೀರಿ. ಆದರೆ ನಿಮ್ಮ ವ್ಯಕ್ತಿತ್ವ ಹಾಳಾಗದಂತೆ ಜಾಗರೂಕರಾಗಿರಿ.
ವೃಶ್ಚಿಕ ರಾಶಿ - ಶುಕ್ರನ ಸಂಕ್ರಮಣವು ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಸಂಬಂಧ ಹೊಂದಿರುವ ಜನರಿಗೆ ಲಾಭದ ಅವಕಾಶಗಳನ್ನು ತರಬಹುದು. ವೈದ್ಯಕೀಯ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಬಹುದು.
ಧನು ರಾಶಿ-ಧನು ರಾಶಿಯವರು ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು, ಇಲ್ಲದಿದ್ದರೆ ನಿಮಗೇ ನಷ್ಟವಾಗುವುದು.
ಮಕರ ರಾಶಿ
ನಿಮ್ಮ ರಾಶಿಯಲ್ಲಿ ಶುಕ್ರ-ಶನಿ ಯುತಿ ಉಂಟಾಗಿದೆ. ಇದರ ಗರಿಷ್ಠ ಪರಿಣಾಮವನ್ನುಪಡೆಯಬಹುದು. ಈ ಸಮಯದಲ್ಲಿ ನೀವು ದುಬಾರಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.
ಕುಂಭ ರಾಶಿ
ಕುಂಭ - ನೀವು ಹಣದಲ್ಲಿ ಲಾಭ ಪಡೆಯಬಹುದು. ಈ ಸಮಯದಲ್ಲಿ ವ್ಯವಹಾರ ಮಾಡವಾಗ ಸ್ವಲ್ಪ ಜಾಗ್ರತೆವಹಿಸಿದರೆ ಲಾಭ ಗಳಿಸಬಹುದು
ಮೀನ ರಾಶಿ
ಮೀನ - ವಿದ್ಯಾರ್ಥಿಗಳಿಗೆ ಲಾಭ, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಮದುವೆಯ ವಿಷಯವನ್ನು ಮುಂದಕ್ಕೆ ಕೊಂಡೊಯ್ಯಬಹುದು. ಭೂಮಿ ಇತ್ಯಾದಿಗಳನ್ನು ಖರೀದಿಸಲು ಯೋಜನೆ ಮಾಡಬಹುದು.



Click it and Unblock the Notifications










