Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಮಕರ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿರುವ ಶನಿ: 103 ದಿನ ಈ 6 ರಾಶಿಯವರು ಹುಷಾರಾಗಿರಬೇಕು
ಮಕರ ಮತ್ತು ಕುಂಭ ರಾಶಿಗಳ ಅಧಿಪತಿಯಾಗಿರುವ ಶನಿಯು ಜುಲೈ 12 ರಿಂದ ಮಕರ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದೆ. ಶನಿಯು ಅಕ್ಟೋಬರ್ 23ರವರೆಗೆ ಹಿಮ್ಮುಖ ಚಲನೆಯಲ್ಲಿ ಇರಲಿದೆ. ಮಕರ ರಾಶಿಯಲ್ಲಿ ಶನಿಯು ಹಿಮ್ಮುಖ ಚಲಿಸುತ್ತಿರುವ ಈ 103 ದಿನ 6 ರಾಶಿಯವರು ಸ್ವಲ್ಪ ಹುಷಾರಾಗಿರಬೇಕು. ಏಕೆಂದರೆ ಈ ರಾಶಿಯಲ್ಲಿ ಶನಿಯ ಸ್ಥಾನ ಅನುಕೂಲಕರವಾದ ಸ್ಥಿತಿಯಲ್ಲಿ ಇಲ್ಲ.

ಈ ಹಿಮ್ಮುಖ ಚಲನೆ ಯಾವ 6 ರಾಶಿಗಳಿಗೆ ಅನುಕೂಲಕರವಲ್ಲ, ಶನಿ ದೋಷ ಕಡಿಮೆ ಮಾಡಲು ಪರಿಹಾರವೇನು ಎಂದು ನೋಡೋಣ ಬನ್ನಿ:

ಮಿಥುನ ರಾಶಿ:
ಮಿಥುನ ರಾಶಿಯವರಲ್ಲಿಎಂಟನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದೆ, ಇದು ಅನಿಶ್ಚಿತತೆ ಮತ್ತು ರಹಸ್ಯಗಳ ಮನೆಯಾಗಿದೆ. ಶನಿಯು ಹಿಮ್ಮುಖ ಚಲನೆಯಲ್ಲಿ ಇರುವಾಗ ಮುಂಬರುವ ಘಟನೆಗಳ ಸೂಚನೆಗಳು ನಿಮಗೆ ಮುಂಚಿತವಾಗಿಯೇ ಸಿಲಿದೆ. ಈ ಅವಧಿಯಲ್ಲಿ ಆಧ್ಯಾತ್ಮಿಕತೆ ಕಡೆ ನಿಮ್ಮ ಒಲವು ಹೆಚ್ಚುವುದು. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ಅವಧಿಯು ಅನಿಶ್ಚಿತತೆಗಳಿಂದ ಕೂಡಿರುತ್ತದೆ ಆದ್ದರಿಂದ ಯಾವುದೇ ಹೊಸ ವ್ಯವಹಾರ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡದಿರಿ. ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಕೂಡ ಜಾಗ್ರತೆವಹಿಸಬೇಕು. ಉದ್ಯೋಗಿಗಳು ಈ ಅವಧಿಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು, ವೃತ್ತಿ ಜೀವನದಲ್ಲಿ ಏರಳಿತಗಳ ಸಾಧ್ಯತೆಗಳಿವೆ.
ಪರಿಹಾರ: ಶನಿವಾರದಂದು ಮದ್ಯಪಾನ ಮತ್ತು ಮಾಂಸಾಹಾರ ಸೇವನೆಯನ್ನು ತಪ್ಪಿಸಿ.
* ಶನಿ ದೇವನಿಗೆ ಸಾಸಿವೆಯೆಣ್ಣೆಯ ದೀಪ ಹಚ್ಚಿ.
* ಶನಿವಾರ ಶನಿ ಮಂತ್ರ ಪಠಿಸಿ.

ಕರ್ಕ ರಾಶಿ :
ಶನಿಯ ಹಿಮ್ಮುಖ ಚಲನೆಯಿಂದಾಗಿ ಕರ್ಕಾಟಕ ರಾಶಿಯ ಜನರು ವಾಹನ ಚಾಲನೆಯಲ್ಲಿ ಬಹಳ ಜಾಗರೂಕರಾಗಿರಬೇಕು. ಈ 103 ದಿನಗಳಲ್ಲಿ ನಿಮಗೆ ಹಣಕಾಸಿನ ತೊಂದರೆಗಳು ಎದುರಾಗಬಹುದು. ಈ ಕಾರಣದಿಂದಾಗಿ, ನೀವು ದುಂದುಗಾರಿಕೆಯನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಹಣಕಾಸಿನ ಪರಿಸ್ಥಿತಿಯು ಹದಗೆಡಬಹುದು. ಇನ್ನು ಯಾವುದೇ ಹೊಸ ಹೂಡಿಕೆ ಅಥವಾ ವ್ಯಾಪಾರಕ್ಕೆ ಈ ಸಮಯ ಸೂಕ್ತವಲ್ಲ. ಶನಿಯು ಹಿಮ್ಮುಖವಾಗಿರುವುದರಿಂದ ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರಬಹುದು. ನಿಮ್ಮ ಕೆಲಸವು ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಪರಿಹಾರ: ಶನಿದೋಷ ಕಡಿಮೆ ಮಾಡಲು ಬಡವರಿಗೆ ದಾನ ಮಾಡಿ.
* ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ.

ಸಿಂಹ ರಾಶಿ :
ಸಿಂಹ ರಾಶಿಯವರಿಗೆ ಈ ಅವಧಿ ಮಿಶ್ರಫಲ , ಅದು ನಿಮ್ಮ 6 ನೇ ಮನೆಯಲ್ಲಿ ಅಂದರೆ ರೋಗ, ಸ್ಪರ್ಧೆ, ಸಾಲ ಮತ್ತು ಸೇವೆಯ ಮನೆಯಲ್ಲಿ ಹಿಮ್ಮುಖವಾಗಿ ಸಾಗುತ್ತಿದೆ. ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧವು ಸ್ವಲ್ಪ ಹದಗೆಡಬಹುದು. ವೈವಾಹಿಕ ಜೀವನದಲ್ಲೂ ನಿಮ್ಮ ಸಂಗಾತಿಯೊಂದಿಗೆ ಕೂಡ ಮನಸ್ತಾಪ ಬರಬಹುದು.
ವೃತ್ತಿಪರ ಜೀವನದ ಬಗ್ಗೆ ಹೇಳುವುದಾದರೆ ನಿಮ್ಮ ಪ್ರೊಫೈಲ್‌ನಲ್ಲಿ ಪ್ರಗತಿಯನ್ನು ಕಾಣಬಹುದು. ಈ ಅವಧಿಯಲ್ಲಿ ಕೆಲವು ಉತ್ತಮ ಉದ್ಯೋಗಾವಕಾಶಗಳು/ಆಫರ್‌ಗಳು ದೊರೆಯುತ್ತವೆ. ವ್ಯಾಪಾರಸ್ಥರಿಗೆ ಈ ಸಮಯವು ಸ್ವಲ್ಪ ಕಷ್ಟಕರವಾಗಿರುತ್ತದೆ. ನಿಮ್ಮ ವ್ಯವಹಾರವನ್ನು ಸುಗಮವಾಗಿ ನಡೆಸಲು ನೀವು ಸ್ವಲ್ಪ ಸಾಲವನ್ನು ತೆಗೆದುಕೊಳ್ಳಬೇಕಾಗಬಹುದು. ವೃತ್ತಿಜೀವನದಲ್ಲಿ ಗಮನಾರ್ಹ ಪರಗತಿಯನ್ನು ಕಾಣುವಿರಿ.
ಪರಿಹಾರ: ಶನಿವಾರದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ.
* ಶನಿವಾರ ಬಡವರಿಗೆ ಕಪ್ಪು ರಗ್ ದಾನ ಮಾಡಿ.

ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಐದನೇ ಮನೆಯಲ್ಲಿ ಅಂದರೆ ಶಿಕ್ಷಣ, ಮಕ್ಕಳು ಮತ್ತು ಪ್ರಣಯದ ಮನೆಯಲ್ಲಿ ಶನಿಯು ಹಿಮ್ಮುಖವಾಗಿ ಚಲಿಸುತ್ತಿದೆ. ಈ ಸಮಯವು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ , ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಅತ್ಯಂತ ಫಲಪ್ರದ ಫಲಿತಾಂಶಗಳನ್ನು ಪಡೆಯುತ್ತಾರೆ. ಪ್ರೇಮಿಗಳು ಈ ಅವಧಿಯಲ್ಲಿ ಕೆಲವು ಏರಿಳಿತಗಳನ್ನು ಎದುರಿಸಬಹುದು. ಈ ಅವಧಿಯಲ್ಲಿ ಮಕ್ಕಳು ಜ್ವರ ಮತ್ತು ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು. ವೃತ್ತಿಪರವಾಗಿ ನೋಡಿದರೆ, ವ್ಯಾಪಾರಸ್ಥರು ತಮ್ಮ ಹಳೆಯ ಯೋಜನೆಗಳು ಮತ್ತು ತಂತ್ರಗಳ ಮೂಲಕ ಈ ಅವಧಿಯಲ್ಲಿ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ, ಮತ್ತೊಂದೆಡೆ, ಉದ್ಯೋಗಿಗಳು ತಮ್ಮ ಕೆಲಸ ಹಾಗೂ ಸ್ಥಾನದಲ್ಲಿ ಬದಲಾವಣೆಯನ್ನು ಕಾಣುವ ಸಾಧ್ಯತೆಯಿದೆ.
ಪರಿಹಾರ: ಯಾವುದೇ ಕೆಲಸವನ್ನು ದೀರ್ಘಕಾಲ ಬಾಕಿ ಇಡಬೇಡಿ.
* ಶನಿ ದೇವನ ಆರಾಧನೆ ಮಾಡಿ

ಧನು ರಾಶಿ:
ಧನು ರಾಶಿಯವರಲ್ಲಿ ಎರಡನೇ ಮನೆಯಲ್ಲಿ ಅಂದರೆ ಕುಟುಂಬ, ಸಂವಹನ ಮತ್ತು ಹಣದ ಮನೆಯಲ್ಲಿ ಹಿಮ್ಮುಖವಾಗಿ ಸಾಗುತ್ತಿದೆ. ಈ ಸಮಯದಲ್ಲಿ ನಿಮ್ಮ ಸ್ನೇಹಿತರು ಮತ್ತು ಒಡಹುಟ್ಟಿದವರೊಂದಿಗಿನ ಸಂಬಂಧದಲ್ಲಿ ಕೆಲ ಮನಸ್ತಾಪಗಳು ಎದುರಾಗಬಹುದು. ಆದರೆ ಈ ಅವಧಿ ಆರ್ಥಿಕವಾಗಿ ಅನುಕೂಲಕರವಾಗಿದೆ. ಕುಟುಂಬದಲ್ಲಿ ಶಾಂತಿಯ ಕೊರತೆಯಿದೆ. ವ್ಯಾಪಾರಸ್ಥರು ಫಲಪ್ರದ ಫಲಿತಾಂಶಗಳನ್ನು ಪಡೆಯಲು ಹೆಚ್ಚಿನ ಪ್ರಯತ್ನಮಾಡಬೇಕಾಗುತ್ತದೆ. ಸ್ಟಾಕ್ ಮಾರುಕಟ್ಟೆ, ಷೇರು ಮಾರುಕಟ್ಟೆ ಮುಂತಾದ ಊಹಾತ್ಮಕ ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿದ್ದರೆ ಈ ಅವಧಿಯಲ್ಲಿ ನಷ್ಟದ ಅಪಾಯ ಹೆಚ್ಚಿದೆ, ಆದ್ದರಿಂದ ಇಂಥ ಹೂಡಿಕೆಗಳಿಂದ ದೂರವಿರಿ.
ಪರಿಹಾರ: ಹನುಮಾನ್ ಚಾಲೀಸಾವನ್ನು ದಿನಕ್ಕೆ 9 ಬಾರಿ ಪಠಿಸಿ.
* ಶನಿವಾರ ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ.

ಕುಂಭ ರಾಶಿ :
ಈ ರಾಶಿಯ ಅಧಿಪತಿ ಶನಿಯೂ ಆಗಿದ್ದು, ಈ ರಾಶಿಗೆ ಸಂಚಾರ ಮಾಡಿದ್ದ ಶನಿ ಇದೀಗ ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಇದರಿಂದ ವೈವಾಹಿಕ ಜೀವನದಲ್ಲಿ ಹೊಸ ಸಮಸ್ಯೆಗಳು ಎದುರಾಗಬಹುದು. ಆದರೆ ಸಂಯಮದಿಂದ ಪರಿಸ್ಥಿತಿ ನಿಭಾಯಿಸಬೇಕಾಗಿದೆ.
ನಿಮ್ಮ ಮಾತಿನ ಮೇಲೆ ಹಿಡಿತವಿರಲು, ಇಲ್ಲದಿದ್ದರೆ ನಿಮ್ಮ ಮಾತೇ ನಿಮಗೆ ಶತ್ರುವಾಗಬಹುದು. ಹಣದ ಹೂಡಿಕೆ ಮಾಡುವಾಗ ಎಚ್ಚರವಹಿಸಿ.
ಪರಿಹಾರ: ಶನಿವಾರ ಸಂಜೆ ಕೂಲಿಕಾರ್ಮಿಕರು ಅಥವಾ ಬಡವರಿಗೆ ಸಾಸಿವೆ ಎಣ್ಣೆ ಮತ್ತು ಕರಿಬೇವನ್ನು ದಾನ ಮಾಡಿ.
* ಬಡವರಿಗೆ ಆಹಾರ ದಾನ ಮಾಡಿ, ಇದರಿಂದ ಶನಿ ತೃಪ್ತನಾಗುತ್ತಾನೆ.



Click it and Unblock the Notifications











