For Quick Alerts
ALLOW NOTIFICATIONS  
For Daily Alerts

Shani Gochar 2022 : ಶನಿ ಗೋಚರ ಫಲ ಯಾವ ರಾಶಿಗೆ ಶುಭ ಯಾವ ರಾಶಿಗೆ ಅಶುಭ ?

|

Shani Gochar 2022 Predictions in Kannada : ಜ್ಯೋತಿಷ್ಯದಲ್ಲಿ ಶನಿ ಸಂಚಾರಕ್ಕೆ ತುಂಬಾ ಮಹತ್ವವಿದೆ. ಶನಿ ಸಂಚಾರದ ಪ್ರಭಾವ ಪ್ರತಿಯೊಂದು ರಾಶಿಗಳ ಮೇಲೂ ಇರುತ್ತದೆ. ಈ ಸಂಚಾರ ಕೆಲವೊಂದು ರಾಶಿಗೆ ಒಳಿತು ಮಾಡಿದರೆ ಇನ್ನು ಕೆಲವೊಂದು ರಾಶಿಗಳಿಗೆ ಈ ಸಂಚಾರ ಸಮಯ ಕಷ್ಟವಾಗಿರುತ್ತದೆ. ಶನಿ ದೇವನನ್ನು ಪೂಜಿಸುವುದರಿಂದ , ದಾನ-ಧರ್ಮಗಳನ್ನು ಮಾಡಿದರೆ ಶನಿಯ ಕೃಪೆಯಿಂದ ಶನಿ ದೋಷದಿಂದ ಪಾರಾಗಬಹುದು.

hani Rashi Parivartan In Year 2022

ಶನಿ ಏಪ್ರಿಲ್‌ 29, 2022ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸಿ ಜುಲೈ 11, 2022ರವರೆಗೆ ಮಾತ್ರ ಕುಂಭ ರಾಶಿಯಲ್ಲಿ ಇರಲಿದೆ, ನಂತರ ಹಿಮ್ಮುಖವಾಗಿ ಮಕರ ರಾಶಿಗೆ ಚಲಿಸಲಿದೆ. ನಂತರ ಜನವರಿ 18, 2023ರಲ್ಲಿ ಮತ್ತೆ ಕುಂಭ ರಾಶಿಗೆ ಚಲಿಸಲಿದೆ. ಶನಿಯ ಹಿಮ್ಮುಖ ಚಲನೆಯ 6 ತಿಂಗಳವರೆಗೆ ಪ್ರಭಾವ ಬೀರಲಿದೆ.

ಶನಿಯ ಈ ರೀತಿಯ ಚಲನೆಯಿಂದ 2022ರಲ್ಲಿ ನಿಮ್ಮ ರಾಶಿಯ ಮೇಲೆ ಬೀರುವ ಪ್ರಭಾವವೇನು ಎಂದು ನೋಡೋಣ ಬನ್ನಿ:

 ಮೇಷ ರಾಶಿ

ಮೇಷ ರಾಶಿ

ಮೇಷರಾಶಿಯವರಲ್ಲಿ ನೇರ ಚಲನೆ ಸಮಯದಲ್ಲಿ 11ನೇ, ಹಿಮ್ಮುಖ ಚಲನೆ ಸಮಯದಲ್ಲಿ 10ನೇ ಮನೆಯಲ್ಲಿ ಇರಲಿದೆ. ಈ ಸಂಚಾರ ಮೇಷ ರಾಶಿಯವರಿಗೆ ಒಳ್ಳೆಯದೊದೆ. ನಿಮ್ಮ ನಿರ್ಧಾರಗಳು ಸರಿಯಾಗಿರುತ್ತೆ, ನಿಮ್ಮ ಪ್ಲ್ಯಾನ್‌ನಲ್ಲಿ ಸಕ್ಸಸ್‌ ಆಗುತ್ತೀರಿ. ನಿಮಗೆ ಅನೇಕ ಅವಕಾಶಗಳು ತೆರೆದುಕೊಳ್ಳುತ್ತದೆ, ನಿಮ್ಮ ಪ್ರಯತ್ನಕ್ಕೆ ತಕ್ಕಂತೆ ಧನ ಲಾಭವಾಗುವುದು. ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಸಂತೋಷವಿರುತ್ತದೆ.

 ವೃಷಭ ರಾಶಿ

ವೃಷಭ ರಾಶಿ

ವೃಷಭ ರಾಶಿಯಲ್ಲಿ 2022ರಲ್ಲಿ 10ನೇ ಹಾಗೂ ಜುಲೈಯಿಂದ 9ನೇ ಮನೆಯಲ್ಲಿ ಇರಲಿದೆ. ಇದರಿಂದ ನಿಮ್ಮ ಭವಿಷ್ಯದ ಯೋಜನೆಯಲ್ಲಿ ಯಶಸ್ಸು ಕಾಣುವಿರಿ. ಈ ಸಂಚಾರ ನಿಮ್ಮ ವೃತ್ತಿ ಮನೆಯಲ್ಲಿ ಇರುವುದರಿಂದ ಸಂತೋಷ, ದುಃಖ, ಲಾಭ-ನಷ್ಟ ಎಲ್ಲವೂ ಇರುತ್ತದೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ ಆದರೆ ಸ್ವಲ್ಪ ಅಡೆತಡೆಗಳನ್ನು ಎದುರಿಸಬೇಕಾಗುವುದು. ಹೊಸ ಮನೆಕೊಳ್ಳಲು ಅಥವಾ ಹೊಸ ಗಾಡಿ ಕೊಳ್ಳಲು ಬಯಸಿದ್ದರೆ ಖರೀದಿಸಿ. ಕೌಟಂಬಿಕ ಹಾಗೂ ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆ ಇರುತ್ತದೆ. ದೈಹಿಕವಾಗಿಯೂ ನೀವಾಬಹುದು. ಆತುರದಲ್ಲಿ ಕೆಲಸ ಬದಲಾಯಿಸಬೇಡಿ. ವಿದ್ಯಾರ್ಥಿಗಳಿಗೆ ಕೆಲ ಅಡೆತಡೆ ಇರಬಹುದು.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರಲ್ಲಿ 2022ರಲ್ಲಿ ಶನಿ 9ನೇ ಹಾಗೂ 8ನೇ ಮನೆಯಲ್ಲಿ ಇರಲಿದೆ. ಈ ಸ್ಥಾನಗಳು ಮಿಶ್ರಫಲ ನೀಡುವುದು. ಆದರೆ ನಿಮ್ಮಲ್ಲಿ ಕೋಪ ಕೂಡ ಹೆಚ್ಚಾಗಲಿದೆ. ಇದರಿಂದ ನಿಮ್ಮ ವೈಯಕ್ತಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಮಾನಸಿಕ ಒತ್ತಡ ಹೆಚ್ಚಾಗುವುದು. ನಿಮ್ಮ ಋಣಾತ್ಮ ಚಿಂತನೆಯಿಂದ ಸಂಬಂಧಗಳಲ್ಲಿ ಬಿರುಕು ಉಂಟಾಗುವುದು. ಕೋರ್ಟ್‌ನಲ್ಲಿ ಏನಾದರೂ ಕೇಸ್‌ ಇದ್ದರೆ ನಿಮ್ಮ ವಿರುದ್ಧ ಬರುವ ಸಾಧ್ಯತೆ ಇದೆ. ಕೆಲಸದಲ್ಲಿ ಸ್ಪರ್ಧೆಯನ್ನು ಗೆದ್ದರೆ ಯಶಸ್ಸು ದೊರೆಯುವುದು. ಶನಿ ನಿಮ್ಮ ಕಾಯಿಲೆಯ ಮನೆ ಮೇಲೆ ದೃಷ್ಟಿ ಹಾಕಿರುವುದರಿಂದ ಆರೋಗ್ಯದತ್ತ ಗಮನ ಹರಿಸಿ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರಲ್ಲಿ 8ನೇ ಹಾಗೂ ಜುಲೈ 11ರಿಂದ 7ನೇ ಮನೆಯಲ್ಲಿ ಇರಲಿದೆ. ಈ ಸಂಚಾರ ನಿಮಗೆ ಸವಾಲುಗಳನ್ನು ತರಲಿದೆ. ವೃತ್ತಿ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಬಹುದು. ವೈವಾಹಿಕ ಜೀವನದಲ್ಲೂ ಸಮಸ್ಯೆಗಳು ಎದುರಾಗಬಹುದು. ಬ್ಯುಸ್‌ನೆಸ್‌ನಲ್ಲಿ ನಷ್ಟ ಸಂಭವಿಸಬಹುದು. ಈ ಎಲ್ಲಾ ಕಾರಣಗಳಿಂದಾಗಿ ಮಾನಸಿಕ ಒತ್ತಡ ಹೆಚ್ಚುವುದು. ಆರ್ಥಿಕವಾಗಿಯೂ ಸ್ವಲ್ಪ ತೊಂದರೆ ಎದುರಾಗುತ್ತದೆ. ಆರೋಗ್ಯದ ಕಡೆಗೆ ಗಮನ ನೀಡಿ.

 ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ 2022ರಲ್ಲಿ ಶನಿ 7ನೇ ಹಾಗೂ 6ನೇ ಮನೆಯಲ್ಲಿ ಇರಲಿದೆ. ವೈವಾಹಿಕ ಜೀವನದಲ್ಲಿ ತೊಂದರೆ ಎದುರಾಗಬಹುದು. ಸ್ವಲ್ಪ ಸಮಯ ಬೇರೆ-ಬೇರೆ ಕಡೆ ವಾಸಿಸಬೇಕಾಗುವುದು. ಪತ್ನಿಯ ಸಹಾಯದಿಂದ ಆರ್ಥಿಕ ಸ್ಥಿತಿ ಮತ್ತಷ್ಟು ಬಲವಾಗುವುದು. ಪ್ರಾರಂಭದಲ್ಲಿ ಯಶಸ್ಸು ಸಿಗಬಹುದೇ ಎಂಬ ಸಂಶಯವಿರುತ್ತದೆ, ಎಲ್ಲಾ ಕೆಲಸದಲ್ಲೂ ಸವಾಲುಗಳು ಇದ್ದೇ ಇರುತ್ತದೆ, ಪ್ರಯತ್ನಪಟ್ಟರೆ ಯಶಸ್ಸು ಸಿಗುವುದು. ಸಂಗಾತಿ ತಂದೆಯ ಆರೋಗ್ಯ ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದು. ಶೇರ್ ಮಾರ್ಕೆಟ್ ಕೆಲಸ ಮಾಡುವವರು ಜಾಗ್ರತೆಯಿಂದ ಮಾಡಿ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲಿ ಶನಿ 2022ರಲ್ಲಿ 6ನೇ ಹಾಗೂ 5ನೇ ಮನೆಯಲ್ಲಿ ಇರಲಿದೆ. 6ನೇ ಮನೆಯನ್ನು ಕಾಯಿಲೆ, ದುಃಖ, ಜಗಳದ ಮನೆಯೆಂದು ಪರಿಗಣಿಸಲಾಗಿದೆ ಐದನೇ ಮನೆಯನ್ನು ವಿದ್ಯಾಭ್ಯಾಸ, ಮಕ್ಕಳು, ಲಕ್ಷ್ಮಿಯ ಮನೆಯೆಂದು ಪರಿಗಣಿಸಲಾಗಿದೆ. ಈ ಶನಿ ಸಂಚಾರ ಸಮಯದಲ್ಲಿ ನಿಮಗೆ ನಿಮ್ಮ ಶತ್ರುಗಳನ್ನು ಸೋಲಿಸಲು ಸಾಧ್ಯವಾಗುವುದು. ವಿದೇಶ ಪ್ರಯಾಣ ಮಾಡ ಬಯಸುವವರಿಗೆ ಅವಕಾಶ ಕೂಡಿ ಬರಲಿದೆ. ಅನಗ್ಯತ ಖರ್ಚುಗಳನ್ನು ನಿಯಂತ್ರಿಸಿ. ನಿಮ್ಮ ಸ್ಥಳದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ನಿಮ್ಮ ವೈವಾಹಿಕ ಜೀವನದ ಸಂಬಂಧ ಈಗಾಗಲೇ ಸಮಸ್ಯೆಯಲ್ಲಿದ್ದರೆ ವಿಚ್ಛೇದನವಾಗುವ ಸಾಧ್ಯತೆ ಇದೆ. ಪ್ರೇಮಿಗಳ ಜೀವನ ಚೆನ್ನಾಗಿರಲಿದೆ. ಕೆಲಸದಲ್ಲಿ ಕೆಲವೊಂದು ಅಡೆತಡೆ ಎದುರಾಗಬಹುದು. ಉದ್ಯೋಗಿಗಳಿಗೆ ಸಹೋದ್ಯೋಗಿಗಳ ಬೆಂಬಲ ಸಿಗುವುದು. ಆರೋಗ್ಯದ ಕಡೆ ಗಮನ ನೀಡಿ.

 ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರಲ್ಲಿ 2022 ಏಪ್ರಿಲ್‌ 29ಕ್ಕೆ ಕುಂಭರಾಶಿಯನ್ನು ಪ್ರವೇಶಿಸಿದಾಗ ತುಲಾರಾಶಿಯಲ್ಲಿ 5ನೇ ಮನೆಯಲ್ಲಿ ಜುಲೈ 11ರಂದು ಹಿಮ್ಮುಖವಾಗಿ ಚಲಿಸಿದಾಗ 4ನೇ ಮನೆಯಲ್ಲಿ ಇರಲಿದೆ. ಶನಿಯು ನಿಮ್ಮ ವೈವಾಹಿಕ ಮನೆ, ಲಾಭದ ಮನೆ, ಹಣದ ಮನೆಯನ್ನು ನೋಡುವುದರಿಂದ ನಿಮಗೆ ಈ ಸಮಯ ವೈವಾಹಿಕ ಬದುಕಿನಲ್ಲಿ, ಹಣದ ವಿಷಯದಲ್ಲಿ ಅನುಕೂಲಕರವಾಗಿದೆ. ವೈವಾಹಿಕ ಜೀವನದಲ್ಲಿ ಖುಷಿ ಇರುತ್ತದೆ. ಆದಾಯ ಕಡಿಮೆಯಾದರೂ ಮನಸ್ಸಿನಲ್ಲಿ ತೃಪ್ತಿ ಇರುತ್ತದೆ. ನೀವು ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಪಾಲುದಾರರನ್ನು ಕಣ್ಮುಚ್ಚಿ ನಂಬಬೇಡಿ. ವಿದ್ಯಾರ್ಥಿಗಳಲ್ಲಿ ಆಲಸ್ಯ ಹೆಚ್ಚಬಹುದು. ಮಕ್ಕಳ ಕಡೆಯಿಂದ ನೋವುಂಟಾಗಬಹುದು, ಗರ್ಭಿಣಿಯರು ಜಾಗ್ರತೆವಹಿಸಬೇಕು. ಸಂಗಾತಿಯ ಆರೋಗ್ಯ ನಿಮ್ಮ ಚಿಂತೆಗೆ ಕಾರಣವಾಗಬಹುದು, ಅವರ ಆರೋಗ್ಯದತ್ತ ಕಾಳಜಿವಹಿಸಿ.

 ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಶನಿಯು 2022 ಏಪ್ರಿಲ್‌ 29ಕ್ಕೆ ಕುಂಭರಾಶಿಯನ್ನು ಪ್ರವೇಶಿಸಿದಾಗ ವೃಶ್ಚಿಕರಾಶಿಯಲ್ಲಿ 4ನೇ ಮನೆಯಲ್ಲಿ ಜುಲೈ 11ರಂದು ಹಿಮ್ಮುಖವಾಗಿ ಚಲಿಸಿದಾಗ 3ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನೀವು ಮನೆಯಿಂದ ದೂರ ಪ್ರಯಾಣಿಸಬಹುದು. ತಾಯಿ, ಕುಟುಂಬ, ಗಾಡಿ, ಆಸ್ತಿ ಇವುಗಳಿಂದ ನಿಮ್ಮ ಸಂತೋಷ ಹೆಚ್ಚುವುದು. ನಿಮ್ಮ ಪೋಷಕರ ಮೇಲಿರುವ ಜವಾಬ್ದಾರಿಯನ್ನು ಪೂರೈಸಲು ನಿಮಗೆ ಸಾಧ್ಯವಾಗದೇ ಹೋದಾಗ ನಿಮಗೆ ಅಸಮಧಾನ ಉಂಟಾಗಬಹುದು. ನೀವು ಮನೆ ರಿಪೇರಿ ಅಥವಾ ಮನೆ ಖರೀದಿಸಲು ಲೋನ್‌ ತೆಗೆದುಕೊಳ್ಳಬಹುದು. ಇನ್ನು ಕೋರ್ಟ್‌ನಲ್ಲಿ ಏನಾದರೂ ಹಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಕೇಸ್‌ ಇದ್ದರೆ ಅದು ನಿಮ್ಮ ಪರವಾಗಿ ಬರುವುದು. ಗಾಡಿಯನ್ನು ಜಾಗ್ರತೆಯಿಂದ ಓಡಿಸುವಂತೆ ಸೂಚಿಸಲಾಗಿದೆ. ಆರ್ಥಿಕ ವಿಷಯದಲ್ಲಿ ಏರಿಳಿತ ಇರಬಹುದು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಕೆಲಸದ ಹುಡುಕಾಟದಲ್ಲಿ ಇದ್ದರೆ ಯಶಸ್ಸು ಸಿಗುವುದು. ನೀವು ಹೃದ್ರೋಗಿಯಾಗಿದ್ದರೆ ನಿಯಮಿತವಾಗಿ ವೈದ್ಯರಿಂದ ಚಿಕಿತ್ಸೆ ಪಡೆಯಿರಿ.

 ಧನು ರಾಶಿ

ಧನು ರಾಶಿ

ಶನಿಯು 2022 ಏಪ್ರಿಲ್‌ 29ಕ್ಕೆ ಕುಂಭರಾಶಿಯನ್ನು ಪ್ರವೇಶಿಸಿದಾಗ ಧನುರಾಶಿಯಲ್ಲಿ 3ನೇ ಮನೆಯಲ್ಲಿ ಜುಲೈ 11ರಂದು ಹಿಮ್ಮುಖವಾಗಿ ಚಲಿಸಿದಾಗ 2ನೇ ಮನೆಯಲ್ಲಿ ಇರಲಿದೆ. ಶನಿ 3ನೇ ಮನೆಯಲ್ಲಿದ್ದಾಗ ನಿಮ್ಮ ಅದೃಷ್ಟ ಹೆಚ್ಚುವುದು. ನಿಮ್ಮ ಸಮಪತ್ತು ವೃದ್ಧಿಯಾಗುವುದು. ನೀವು ಯಾರೊಂದಿಗೂ ಕೆಲಸವನ್ನು ಹಂಚಿಕೊಳ್ಳದಿರುವುದು ಒಳ್ಳೆಯದು. ಪ್ರಯಾಣದ ಯೋಗವಿದೆ. ಮನೆ ಬದಲಾಯಿಸುವ ಸಾಧ್ಯತೆಯೂ ಇದೆ. ನೀವು ರಿಯಲ್ ಎಸ್ಟೇಟ್‌ ಬ್ಯುಸ್‌ನೆಸ್‌ ಮಾಡಿದರೆ ಬಯಸಿದ್ದಕ್ಕಿಂತ ಕಡಿಮೆ ಆದಾಯ ಸಿಗಬಹುದು. ಈ ಸಂಚಾರ ನಿಮಗೆ ಸರಾಸರಿಯಾಗಿದೆ.

 ಮಕರ ರಾಶಿ

ಮಕರ ರಾಶಿ

ಶನಿಯು 2022 ಏಪ್ರಿಲ್‌ 29ಕ್ಕೆ ಕುಂಭರಾಶಿಯನ್ನು ಪ್ರವೇಶಿಸಿದಾಗ ಮಕರರಾಶಿಯಲ್ಲಿ 2ನೇ ಮನೆಯಲ್ಲಿ ಜುಲೈ 11ರಂದು ಹಿಮ್ಮುಖವಾಗಿ ಚಲಿಸಿದಾಗ 1ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನಿಮ್ಮ ಸ್ವಭಾವದಲ್ಲಿ ಕಠಿಣತೆ ಇರುತ್ತದೆ. ನಿಮ್ಮ ವರ್ತನೆಯಿಂದ ತಾಯಿ ಮನಸ್ಸಿಗೆ ನೋವಾಗಬಹುದು. ಅಲ್ಲದೆ ಶನಿಯೂ ನಿಮ್ಮ ಸ್ಥಳವನ್ನು ಬದಲಾಯಿಸಬಹುದು ಅಂದ್ರೆ ಮನೆ, ಕುಟುಂಬದಿಂದ ದೂರ ಇರಬೇಕಾಗುವುದು. ಶನಿ 2ನೇ ಮನೆಯಲ್ಲಿ ಇದ್ದಾಗ ವೈವಾಹಿಕ ಜೀವನದಲ್ಲಿ ರೊಮ್ಯಾನ್ಸ್ ಕಡಿಮೆಯಾಗಬಹುದು. ನೀವು ಮನೆ ಅಥವಾ ಗಾಡಿ ಖರೀದಿಸಬೇಕೆಂದು ಬಯಸಿದರೆ ಅದು ನೆರವೇರುವುದು. ವ್ಯವಹಾರದಲ್ಲಿ ಈ ಸಂಚಾರ ಸಾಧಾರಣ ಫಲ ನೀಡಲಿದೆ.

ನೀವು ರಾಜಕೀಯದಲ್ಲಿದ್ದರೆ ಈ ಸಮಯದಲ್ಲಿ ತುಂಬಾ ಎಚ್ಚರದಿಂದ ಇರಬೇಕು. ಉದ್ಯೋಗಿಗಳಿಗೆ, ಉದ್ಯಮಿಗಳಿಗೆ ಅನುಕೂಲಕರವಾದ ಸಮಯವಾಗಿದೆ. ಆರೋಗ್ಯ ಚೆನ್ನಾಗಿರುತ್ತದೆ.

 ಕುಂಭ ರಾಶಿ

ಕುಂಭ ರಾಶಿ

ಶನಿಯು 2022 ಏಪ್ರಿಲ್‌ 29ಕ್ಕೆ ಕುಂಭರಾಶಿಯನ್ನು ಪ್ರವೇಶಿಸಿದಾಗ ಕುಂಭರಾಶಿಯಲ್ಲಿ 1ನೇ ಮನೆಯಲ್ಲಿ ಜುಲೈ 11ರಂದು ಹಿಮ್ಮುಖವಾಗಿ ಚಲಿಸಿದಾಗ 12ನೇ ಮನೆಯಲ್ಲಿ ಇರಲಿದೆ. ಶನಿ ಕುಂಭ ರಾಶಿಯಲ್ಲಿ ಇರುವ ಸಮಯ ಅಷ್ಟು ಅನುಕೂಲಕರವಲ್ಲ. ದೈಹಿಕ ನೋವು ಉಂಟಾಗಬಹುದು. ಇದೇ ಸಮಯದಲ್ಲಿ ಸಾಡೇಸಾತಿ ಕೂಡ ನಡೆಯುತ್ತಿರುವುದರಿಂದ ಖರ್ಚು ಹೆಚ್ಚುವುದು. ಇದರಿಂದ ನಿಮ್ಮ ಸಂಗಾತಿಯನ್ನು ಖುಷಿ ಪಡಿಸಲು ಸಾಧ್ಯವಿಲ್ಲ. ಶನಿ 12ನೇ ಮನೆಯಲ್ಲಿ ಇರುವಾಗ ಸುಸ್ತು, ಆಲಸ್ಯ ಹೆಚ್ಚುವುದು. ನಿಮ್ಮ ಕೆಲಸದ ಕ್ರೆಡಿಟ್ ಬೇರೆಯವರು ತೆಗೆದುಕೊಳ್ಳಬಹುದು. ಕುಟುಂಬದಲ್ಲಿ ಕೆಲ ಸಮಸ್ಯೆಗಳು ಎದುರಾಗಬಹುದು, ಅವುಗಳನ್ನು ಮಾತಿನ ಮೂಲಕ ಪರಿಹರಿಸಲು ಪ್ರಯತ್ನಿಸಿ. ಮುಂದಿನ ಎರಡೂವರೆ ವರ್ಷ ಕೆಲಸ ಹಾಗೂ ವ್ಯವಹಾರದಲ್ಲಿ ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲಿತಾಂಶ ಸಿಗುವುದು. ಕೆಲವೊಂದು ಆರೋಗ್ಯ ಸಮಸ್ಯೆಗಳು ಎದುರಾಗುವುದು, ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.

 ಮೀನ ರಾಶಿ

ಮೀನ ರಾಶಿ

ಶನಿಯು 2022 ಏಪ್ರಿಲ್‌ 29ಕ್ಕೆ ಕುಂಭರಾಶಿಯನ್ನು ಪ್ರವೇಶಿಸಿದಾಗ ಮೀನರಾಶಿಯಲ್ಲಿ 12ನೇ ಮನೆಯಲ್ಲಿ ಜುಲೈ 11ರಂದು ಹಿಮ್ಮುಖವಾಗಿ ಚಲಿಸಿದಾಗ 11ನೇ ಮನೆಯಲ್ಲಿ ಇರಲಿದೆ. ಶನಿ 12ನೇ ಮನೆಯಲ್ಲಿರುವಾಗ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ತೊಂದರೆಗಳು ಎದುರಾಗುವುದು. ಈ ಸಮಯದಲ್ಲಿ ಆದಾಯ ಬರುವುದಾದರೆ ಖರ್ಚು ಹೆಚ್ಚುವುದು. ಬ್ಯಾಂಕ್‌ನಲ್ಲಿ ಕೂಡಿಟ್ಟ ಹಣ ಕೂಡ ನಿಧಾನಕ್ಕೆ ಕರಗುತ್ತಾ ಬರಬಹುದು. ವೈವಾಹಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಬಹದು. ವಿದ್ಯಾರ್ಥಿಗಳು ಕಠಿಣ ಶ್ರಮ ಹಾಕಬೇಕಾಗುತ್ತದೆ. ಉದ್ಯೋಗಿಗಳು ಕೆಲಸದ ಜಾಗದಲ್ಲಿ ತುಂಬಾ ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ತಾಳ್ಮೆ ತುಂಬಾ ಮುಖ್ಯವಾಗಿದೆ.

English summary

Shani Gochar Saturn Transit 2022 in Aquarius ; Effects on Dhaiya And Sade Sati On Zodiac Signs in Kannada

Shani Sade Sati 2022 : Saturn Transit 2022 in Aquarius from 29th April 2022. Shani Gochar happen in 2022 and 8 zodiac signs shani will face sade sati and dhaiya know effect on all zodiac signs in kannada. Read on.
X
Desktop Bottom Promotion