Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ರಸ್ತೆಯಲ್ಲೇ ಶಾಲಾ ಬಾಲಕಿಯ ಜಿಮ್ನಾಸ್ಟಿಕ್: ವೈರಲ್ ವಿಡಿಯೋ
ನಮ್ಮ ಸುತ್ತಮುತ್ತ ನಿತ್ಯ ಸಾಕಷ್ಟು ಅಚ್ಚರಿಯ ಘಟನೆಗಳು ನಡೆಯುತ್ತಲೇ ಇರುತ್ತದೆ, ಆದರೆ ಎಲ್ಲವೂ ಬೆಳಕಿಗೆ ಬರುವುದಿಲ್ಲ. ನಮ್ಮಲ್ಲೆ ಹಲವರು ತಮಗೇ ತಿಳಿಯದಂತೇ ಕೆಲವು ವಿದ್ಯೆ, ಕಲೆಗಳಲ್ಲಿ ಪಾಂಗತರಾಗಿರುತ್ತಾರೆ, ಆದರೆ ಅರಿವಿಗೇ ಬರದೆಯೋ ಅಥವಾ ಅದಕ್ಕೆ ತಕ್ಕ ಪ್ರೋತ್ಸಾಹ ಸಿಗದೆಯೋ ಎಲೆಮರೆಕಾಯಿಯಂತೆ ಹಾಗೆ ಉಳಿದುಬಿಡುತ್ತಾರೆ.
ಹೀಗೆ ಎಲೆಮರೆಕಾಯಿಂಯಂತಿದ್ದ ಬಾಲಕಿಯೊಬ್ಬಳ ಅಗಾಧ ಪ್ರತಿಭೆಯ ಬಗ್ಗೆ ಈ ಲೇಖನದಲ್ಲಿ ಹೇಳಲಿದ್ದೇವೆ.
ಕೆಲವು ದಿನಗಳ ಹಿಂದೆ ತೆಗೆಯಲಾದ ಶಾಲಾ ಬಾಲಕಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೀಗ ಸಾಕಷ್ಟು ವೈರಲ್ ಆಗಿದೆ. ಅಂಥದ್ದೇನಿದೆ ಅದರಲ್ಲಿ ಅಂತಾ ಕೇಳ್ತಿರಾ?.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಶಾಲಾ ಸಮವಸ್ತ್ರದಲ್ಲೆ, ಬ್ಯಾಗ್ ಹಾಕಿಕೊಂಡೇ ಇದ್ದಕ್ಕಿಂದ್ದಂತೆ ನಡುರಸ್ತೆಯಲ್ಲಿ ಆಕರ್ಷಕ ಜಿಮ್ನಾಸ್ಟಿಕ್ ಮಾಡಿ ಎಲ್ಲರ ಹುಬ್ಬೆರುವಂತೆ ಮಾಡಿದ್ದಾಳೆ. ಹೌದು, ಈ ಬಾಲಕಿಯ ಪ್ರತಿಭೆ ಕಂಡು ಹಲವು ಕ್ರೀಡಾ ವಲಯದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
This is awesome pic.twitter.com/G3MxCo0TzG
— Nadia Comaneci (@nadiacomaneci10) August 29, 2019
ಕಠಿಣ ತರಬೇತಿ ಬಳಿಕ ಒಲಿಯುವ ಕಲೆ ಜಿಮ್ನಾಸ್ಟಿಕ್. ಆದರೆ ವಿಡಿಯೋದಲ್ಲಿ ಓರ್ವ ಬಾಲಕ ಹಾಗೂ ಬಾಲಕಿ ಇಬ್ಬರು ಕಾರ್ಟ್ ವೀಲಿಂಗ್ ಅನ್ನು ಬಹಳ ನಿರಾಯಾಸವಾಗಿ ಮಾಡಿದ್ದಾರೆ. ಬಾಲಕ ಒಂದು ಬಾರಿ ಕಾರ್ಟ್ ವೀಲಿಂಗ್ ಮಾಡಿದ್ದರೆ, ಬಾಲಕಿ ಎರಡು ಬಾರಿ ಅದುವೇ ಶಾಲಾ ಬ್ಯಾಗ್ ಹಾಕಿಕೊಂಡೇ ಕಾರ್ಟ್ ವೀಲಿಂಗ್ ಮಾಡಿದ್ದು ನೋಡಗುರ ಮೈ ಜುಮ್ಮೆನ್ನಿಸುವಂತಿದೆ.
ಮತ್ತೊಂದು ವಿಶೇಷವೆಂದರೆ ಒಲಂಪಿಕ್ಸ್ ಜಿಮ್ನಾಸ್ಟಿಕ್ ನಲ್ಲಿ ಐದು ಬಾರಿ ಚಿನ್ನದ ಪದಕ ಪಡೆದಿದ್ದ ರೊಮೇನಿಯಾದ ಮಾಜಿ ಜಿಮ್ನಾಸ್ಟಿಕ್ ಆಟಗಾರ್ತಿ ನಾಡಿಯಾ ಕೊಮಾನೆಸಿ ಟ್ವೀಟ್ ಮಾಡಿ"ಇದು ಬಹಳ ಆಕರ್ಷಕವಾಗಿದೆ, ಅದ್ಭುತ'' ಎಂದು ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಕೆಲವೇ ದಿನಗಳಲ್ಲಿ ಐದು ಲಕ್ಷಕ್ಕಿಂತ ಹೆಚ್ಚು ಬಾರಿ ವೀಕ್ಷಿಸಲಾದ ಈ ವಿಡಿಯೋ ಯಾವ ಪ್ರದೇಶದದ್ದು ಎಂಬ ಖಚಿತ ಮಾಹಿತಿ ಇಲ್ಲವಾದರೂ, ನಾಗಾಲ್ಯಾಂಡ್ ನಲ್ಲಿ ತೆಗೆದ ವಿಡಿಯೋ ಎಂದು ಹೇಳಲಾಗಿದೆ. ಬಹುಶಃ ಈ ಬಾಲಕಿಗೆ ಅಗತ್ಯ ತರಬೇತಿ ದೊರೆತರೆ ಮುಂದೆ ಭಾರತವನ್ನು ಪ್ರತಿನಿಧಿಸುವ ಉತ್ತಮ ಕ್ರೀಡಾಪಟು ಆಗಬಹುದು ಎಂಬ ಆಶಾಭಾವನೆ ನಮ್ಮದು!.



Click it and Unblock the Notifications

