For Quick Alerts
ALLOW NOTIFICATIONS  
For Daily Alerts

Shani Asta 2023 : ಶನಿ ಅಸ್ತ 2023: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹಾಗೂ ಪರಿಹಾರ

|

ಜನವರಿ 17ಕ್ಕೆ ಶನಿಯು ಕುಂಭ ರಾಶಿಗೆ ಸಂಚಾರ ಮಾಡಿತ್ತು. ಇದೀಗ ಜನವರಿ 30ಕ್ಕೆ ಶನಿಯು ಅಸ್ತಂಗತವಾಗಲಿದೆ. ಯಾವುದೇ ಗ್ರಹ ಅಸ್ತಂಗತವಾದರೆ ಅದು ಒಳ್ಳೆಯ ಪರಿಣಾಮ ಬೀರುವುದಿಲ್ಲ. ಯಾವುದೇ ಗ್ರಹ ಸೂರ್ಯನ ಸಮೀಪಕ್ಕೆ ಬಂದಾಗ ಗ್ರಹ ಅಸ್ತಂಗತವಾಗುವುದು ಎಂದು ಹೇಳಲಾಗುವುದು.

Saturn Combust In Aquarius

ಜನವರಿ 30ಕ್ಕೆ ಶನಿಯು ಅಸ್ತಂಗತವಾದಾಗ ಇದರ ಪ್ರಭಾವ ದ್ವಾದಶ ರಾಶಿಗಳ ಮೇಲೆ ಬೀರಲಿದ್ದು ಈ ಸಮಯದಲ್ಲಿ ಕೆಟ್ಟ ಪರಿಣಾಮ ತಡೆಗಟ್ಟಲು ಪರಿಹಾರ ಏನು ಎಂದು ನೋಡೋಣ ಬನ್ನಿ:

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರಿಗೆ ಶನಿಯು ನಿಮ್ಮ ಹತ್ತನೇ ಮತ್ತು ಹನ್ನೊಂದನೇ ಮನೆಗೆ ಅಧಿಪತಿಯಾಗಿದ್ದಾನೆ. ಶನಿ ಅಸ್ತಂಗತವಾದಾಗ ವೃತ್ತಿಪರ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಉದಾಹರಣೆಗೆ ಬಡ್ತಿ ಅಥವಾ ಸಂಬಳದಲ್ಲಿ ವಿಳಂಬ, ಮಕ್ಕಳ ಶಿಕ್ಷಣಕ್ಕೆ ಖರ್ಚು ಅಥವಾ ಹಣಕಾಸಿನ ಸಮಸ್ಯೆಗಳು ಬರಬಹುದು. ಸ್ಟಾಕ್ ಮಾರುಕಟ್ಟೆಯಲ್ಲಿ, ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು, ಆದ್ದರಿಂದ ಯಾವುದೇ ರೀತಿಯ ಹೊಸ ಹೂಡಿಕೆಯನ್ನು ಮಾಡುವಾಗ ಎಚ್ಚರವಹಿಸಿ, ಯಾರನ್ನಾದರೂ ಸರಿ ಕುರುಡಾಗಿ ನಂಬಬೇಡಿ.

ಪರಿಹಾರ: ಪ್ರತಿದಿನ ಹನುಮಾನ್ ಚಾಲೀಸವನ್ನು ಪಠಿಸಿ, ಪ್ರತಿ ಮಂಗಳವಾರ, ಶನಿವಾರದಂದು ಹನುಮಂತನ ದೇವಾಲಯಕ್ಕೆ ಭೇಟಿ ನೀಡಿ.

ವೃಷಭ ರಾಶಿ

ವೃಷಭ ರಾಶಿ

ಕುಂಭ ರಾಶಿಯಲ್ಲಿ ಶನಿಯು ಅಸ್ತಂಗತವಾದಾಗ ವೈಯಕ್ತಿಕ ಜೀವನದಲ್ಲಿ ಹಾಗೂ ವೃತ್ತಿಪರ ಜೀವನದಲ್ಲಿ ಪರಿಣಾಮ ಬೀರಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗದಿರುವ ಸಾಧ್ಯತೆ ಇದೆ. ಕಂಪನಿ ಬದಲಾಯಿಸುವುದರ ಬಗ್ಗೆ ಯೋಚಿಸುತ್ತಿದ್ದರೆ ಭವಿಷ್ಯಕ್ಕಾಗಿ ಈ ಯೋಜನೆಯನ್ನು ಮುಂದೂಡುವುದು ಉತ್ತಮ. ಅಲ್ಲದೆ ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

ಪರಿಹಾರ: ಶನಿವಾರದಂದು ಬಡವರಿಗೆ ಆಹಾರವನ್ನು ನೀಡಿ.

ಮಿಥುನ ರಾಶಿ

ಮಿಥುನ ರಾಶಿ

ಶನಿಯು ಅಸ್ತಂಗತವಾದಾಗ ಮಿಥುನ ರಾಶಿಯವರು ತಮ್ಮ ತಂದೆ, ಗುರು ಮತ್ತು ತಂದೆಯಂತಹ ವ್ಯಕ್ತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಈ ಸಮಯದಲ್ಲಿ ನೀವು ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ಪರೀಕ್ಷೆಯ ಸಮಯ ಆದ್ದರಿಂದ ಕಠಿಣ ಪರಿಶ್ರಮದಿಂದ ಹಿಂದೆ ಸರಿಯಬೇಡಿ ಖಂಡಿತ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.

ಪರಿಹಾರ: ಶನಿವಾರದಂದು ಬಡವರಿಗೆ ಅನ್ನದಾನ ಮಾಡಿ.

ಕರ್ಕ ರಾಶಿ

ಕರ್ಕ ರಾಶಿ

ಶನಿಯು ಅಸ್ತಂಗತವಾದಾಗ ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಬಹುದು. ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಸಂಗಾತಿಯೊಂದಿಗೆ ಮನಸ್ತಾಪ ಹೆಚ್ಚಾಗಲಿದೆ. ವ್ಯಾಪಾರಸ್ಥರು ಪಾಲುದಾರಿಕೆಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಪರಿಹಾರ: ಸೋಮವಾರ ಮತ್ತು ಶನಿವಾರದಂದು ಶಿವನಿಗೆ ಕಪ್ಪು ಎಳ್ಳನ್ನು ಅರ್ಪಿಸಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರ ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರಲಿದೆ. ನಿಮ್ಮ ಆರೋಗ್ಯದಲ್ಲಿ ಏರುಪೇರುಗಳ ಸಾಧ್ಯತೆಗಳಿರುವುದರಿಂದ ನಿಮ್ಮ ಆರೋಗ್ಯದ ಬಗ್ಗೆ ನೀವು ಗಮನ ಹರಿಸಬೇಕು. ಈ ಅವಧಿಯಲ್ಲಿ ನಿಮ್ಮ ಶತ್ರುಗಳು ನಿಮಗೆ ತೊಂದರೆ ಕೊಡುತ್ತಾರೆ ಅನ್ನುವುದಕ್ಕಿಂತ ನೀವೇ ಸಮಸ್ಯೆಗಳನ್ನು ಸೃಷ್ಟಿಸುತ್ತೀರಿ ಎಂದು ಹೇಳಬಹುದು.

ಪರಿಹಾರ: ನಿರ್ಗತಿಕರಿಗೆ ಸಹಾಯ ಮಾಡಿ.

ಕನ್ಯಾ ರಾಶಿ

ಕನ್ಯಾ ರಾಶಿ

ಶನಿ ಅಸ್ತಂಗತವಾದಾಗ ನೀವೇನಾದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರೆ ಫಲಿತಾಂಶಗಳಲ್ಲಿ ವಿಳಂಬದ ಜೊತೆಗೆ ಅಧ್ಯಯನದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವವರಯ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ನಿಮ್ಮ ಆರೋಗ್ಯದ ಕಡೆ ಗಮನಹರಿಸಬೇಕು. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆ ಕುಸಿಯಬಹುದು.

ಪರಿಹಾರ: ಹನುಮಾನ್ ಚಾಲೀಸ ಪಠಿಸಿ.

ತುಲಾ ರಾಶಿ

ತುಲಾ ರಾಶಿ

ಶನಿಯು ಅಸ್ತಂಗತವಾದಾಗ ಷೇರು ಮಾರುಕಟ್ಟೆಗೆ ಸಂಬಂಧಿಸಿದವರಿಗೆ ಈ ಸಮಯ ಕಷ್ಟವಾಗಬಹುದು. ಈ ರಾಶಿಯವರು ಆರೋಗ್ಯ ಮತ್ತು ನಡವಳಿಕೆಯ ಬಗ್ಗೆ ಗಮನ ಹರಿಸಬೇಕು. ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ಮಕ್ಕಳ ನಡವಳಿಕೆ ಮೇಲೆ ಗಮನ ಹರಿಸಿ.

ಪರಿಹಾರ: ಅಂಧರಿಗೆ ಸಹಾಯ ಮಾಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ನೀವು ಹೊಸ ಮನೆ, ವಾಹನ ಅಥವಾ ಯಾವುದೇ ಆಸ್ತಿ ಇತ್ಯಾದಿಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ ಸ್ವಲ್ಪ ಸಮಯ ಕಾಯಬೇಕಾಗಿದೆ. ನೀವು ನಡೆಯುತ್ತಿರುವ ಒತ್ತಡದಿಂದಾಗಿ, ನಿಮ್ಮ ಮನೆ-ಕುಟುಂಬದ ವಾತಾವರಣವು ಅಷ್ಟು ಸರಿಯಿರಲ್ಲ, ಆದ್ದರಿಂದ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಸಲಹೆ ನೀಡಲಾಗಿದೆ. ಈ ಅವಧಿಯಲ್ಲಿ, ನೀವು ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಪರಿಹಾರ:ಯಾವುದೇ ದೊಡ್ಡ ಹೂಡಿಕೆಯನ್ನು ತಪ್ಪಿಸಬೇಕಾಗುತ್ತದೆ. ವೃತ್ತಿಪರ ಜೀವನದಲ್ಲಿ ಹನುಮಾನ್ ಚಾಲೀಸ ಪಠಿಸಿ.

ಧನು ರಾಶಿ

ಧನು ರಾಶಿ

ಶನಿಯು ಅಸ್ತಂಗತವಾದಾಗ ನೀವು ನಿಮ್ಮ ಮಾತಿನ ಮೇಲೆ ತುಂಬಾ ಗಮನ ಹರಿಸಬೇಕು. ಶಿಕ್ಷಕರು, ಸಲಹೆಗಾರರು , ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡುವವರು ಸಮಸ್ಯೆಗಳನ್ನು ಎದುರಿಸಬಹುದು. ಈ ಅವಧಿಯಲ್ಲಿ ತಮ್ಮ ಒಡಹುಟ್ಟಿದವರೊಂದಿಗಿನ ಸಂಬಂಧಗಳನ್ನು ಕಾಳಜಿ ವಹಿಸಬೇಕಾಗಿದೆ. ಅನಗ್ಯತ ವಾದ ಮಾಡದಿರುವುದು ಒಳ್ಳೆಯದು.

ಪರಿಹಾರ: ಅಂಗ ವಿಕಲರಿಗೆ ಸಹಾಯ ಮಾಡಿ

ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಕುಟುಂಬದಲ್ಲಿ ಜಗಳವಾಗದಂತೆ ಎಚ್ಚರವಹಿಸಿ. ಮತ್ತೊಂದೆಡೆ, ನಿಗೂಢ ವಿಜ್ಞಾನ ಅಥವಾ ಜ್ಯೋತಿಷ್ಯದಂತಹ ವಿಷಯಗಳನ್ನು ಅಧ್ಯಯನ ಮಾಡಲು ಬಯಸುವವರಿಗೆ ಈ ಸಮಯವು ಅನುಕೂಲಕರವಾಗಿದೆ.

ಪರಿಹಾರ: "ಓಂ ಪ್ರಾಣ್ ಪ್ರಿಂ ಪ್ರಾಣ್ ಸಹ ಶನೈಶ್ಚರಾಯ ನಮಃ" ಎಂಬ ಶನಿ ಮಂತ್ರವನ್ನು ಪಠಿಸಿ.

ಕುಂಭ ರಾಶಿ

ಕುಂಭ ರಾಶಿ

ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು. ಬೇರೆಯವರ ಜೊತೆ ಚರ್ಚೆ ಮಾಡುವಾಗ ನೀವಾಡುವ ಮಾತಿನ ಬಗ್ಗೆ ಗಮನವಿರಲಿ. ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಶನಿಯು ನಿಮ್ಮ ಅಭಿವೃದ್ಧಿಗೆ ತಡೆ ಉಂಟು ಮಾಡಬಹುದು. ಆದ್ದರಿಂದ ನೀವು ಜಾಗರೂಕರಾಗಿರಬೇಕು.

ಪರಿಹಾರ: ಶನಿವಾರದಂದು ಶನಿ ದೇವರ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ.

ಮೀನ ರಾಶಿ:

ಮೀನ ರಾಶಿ:

ಈ ಅವಧಿ ಖರ್ಚು ಹೆಚ್ಚಾಗಲಿದೆ. ನೀವು ಯಾವುದೇ ಸಾಲ ತೆಗೆದುಕೊಳ್ಳದಿದ್ದರೆ ಒಳ್ಳೆಯದು. ಮತ್ತೊಂದೆಡೆ, ತೀರ್ಥಯಾತ್ರೆ ಅಥವಾ ವ್ಯಾಪಾರ ಪ್ರವಾಸಕ್ಕೆ ಹೋಗಲು ಯೋಜಿಸುತ್ತಿರುವವರು ತಮ್ಮ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಂದಾಗಿ ಅವುಗಳನ್ನು ರದ್ದುಗೊಳಿಸಬೇಕಾಗಬಹುದು.

ಪರಿಹಾರ: ಒಂದು ಪಾತ್ರೆಯಲ್ಲಿ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಪ್ರತಿಬಿಂಬವನ್ನು ನೋಡಿ ನಂತರ ಶನಿ ದೇವಸ್ಥಾನದಲ್ಲಿ ದಾನ ಮಾಡಬೇಕು.

English summary

Saturn Combust In Aquarius on 30 January 2023 Effects And Remedies On 12 Zodiac Signs In Kannada

Saturn Combust In Aquarius 2023 Effects on Zodiac Signs : The Saturn Combust In Aquarius will take place on 30 January 2023. Learn about remedies to perform in Kannada,
Story first published: Friday, January 27, 2023, 11:17 [IST]
X
Desktop Bottom Promotion