Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಜ. 17ರಿಂದ ಮೀನ ರಾಶಿಗೆ ಶನಿ ಸಾಡೇಸಾತಿ ಪ್ರಾರಂಭ, ಮಕರ, ಕುಂಭ ರಾಶಿಯವರಿಗೂ ಇದೇ ಶನಿ ಸಾಡೇಸಾತಿ ಪ್ರಭಾವ
ಜನವರಿ 17 ಜ್ಯೋತಿಷ್ಯದ ದೃಷ್ಟಿಯಿಂದ ಪ್ರಮುಖವಾದ ದಿನ. ಏಕೆಂದರೆ ಈ ದಿನ ಶನಿ ಸಂಚಾರವಿದೆ. ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ಸಂಚರಿಸಲಿದೆ. 30 ವರ್ಷದ ಬಳಿಕ ಕುಂಭ ರಾಶಿಗೆ ಸಂಚರಿಸಲಿದೆ.

ಶನಿಯ ಈ ಸಂಚಾರ ಕೆಲ ರಾಶಿಗಳ ಮೇಲೆ ಒಳ್ಳೆಯ ಪ್ರಭಾವ ಬೀರಿದರೆ ಇನ್ನು ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಕೆಟ್ಟ ಪ್ರಭಾವ ಬೀರಿರುವ ರಾಶಿಯವರು ಶನಿಯ ಕೋಪ ತಗ್ಗಿಸಲು ಪರಿಹಾರ ಮಾಡಬೇಕು, ಇಲ್ಲದಿದ್ದರೆ ಜೀವನದಲ್ಲಿ ತುಂಬಾ ಕಷ್ಟಗಳನ್ನು ಎದುರಿಸಬೇಕಾಗುವುದು.
ಶನಿ ಸಾಡೇಸಾತಿ
ಶನಿ ಸಾಡೇಸಾತಿ, ಈ ಪದ ಕೇಳಿದರೆ ಸಾಕು ಜನ ಬೆಚ್ಚಿ ಬೀಳುತ್ತಾರೆ. ಶನಿ ಸಾಡೇಸಾತಿ ಏಳೂವರೆ ವರ್ಷ ಇರುತ್ತದೆ. ಈ ಏಳೂವರೆ ವರ್ಷ ಶನಿಯು ಆ ರಾಶಿಯವರಿಗೆ ಇನ್ನಿಲ್ಲದ ಕಾಟ ಕೊಡುತ್ತಾನೆ, ಈ ಸಮಯದಲ್ಲಿ ಅವಮಾನ ಎದುರಿಸಬೇಕಾಗುವುದು, ಆರ್ಥಿಕ ತೊಂದರೆ ಉಂಟಾಗುವುದು, ಹಲವು ಸಮಸ್ಯೆಗಳು ಉಂಟಾಗುವುದು.
ಈ ಸಾಡೇಸಾತಿ ಮುಗಿದಾಗ ನಂತರ ಜೀವನದಲ್ಲಿ ಒಳ್ಳೆಯ ಘಟನೆಗಳು ಸಂಭವಿಸುವುದು. ಯಾರಿಗೆಲ್ಲಾ ಶನಿ ಸಾಡೇಸಾತಿಯ ಪ್ರಭಾವವಿದೆ ಎಂದು ನೋಡೋಣ ಬನ್ನಿ:

ಧನು ರಾಶಿಗೆ ಶನಿ ಸಾಡೇಸಾತಿ ಮುಕ್ತಾಯ, ಮೀನ ರಾಶಿಗೆ ಶುರು
ಜನವರಿ 17ಕ್ಕೆ ಶನಿಯು ಕುಂಭ ರಾಶಿಗೆ ಸಂಚರಿಸುವುದು, ಇದೇ ರಾಶಿಯಲ್ಲಿ ಎರಡೂವರೆ ವರ್ಷ ಇರಲಿದೆ. 30 ವರ್ಷಗಳ ಬಳಿಕ ಶನಿಯು ಕುಂಭ ರಾಶಿಗೆ ಪ್ರವೇಶಿಸಲಿದೆ. ಶನಿಯು ಕುಂಭ ರಾಶಿಗೆ ಪ್ರವೇಶಿಸಿದಾಗ ಮೀನ ರಾಶಿಗೆ ಸಾಡೇಸಾತಿ ಶುರುವಾಗಲಿದೆ, ಧನು ರಾಶಿ ಶನಿ ಸಾಡೇಸಾತಿಯಿಂದ ಮುಕ್ತವಾಗಲಿದೆ.

ಮೀನ ರಾಶಿಯವರಿಗೆ ಶನಿ ಸಾಡೇಸಾತಿ ಮೊದಲ ಹಂತ ಶುರುವಾಗುವುದು
ಮೀನ ರಾಶಿಯ ಜನರು 17 ಏಪ್ರಿಲ್ 2030 ರವರೆಗೆ ಶನಿಸಾಡೇ ಸತಿಯ ಹಿಡಿತದಲ್ಲಿ ಇರುತ್ತಾರೆ. ಶನಿ ಸಾಡೇ ಸತಿಯ ಮೊದಲ ಹಂತ ಜನವರಿ 17ರಿಂದ ಪ್ರಾರಂಭವಾಗುವುದು.
ಮಕರ ರಾಶಿಯವರಿಗೆ ಜನವರಿ 17ರಿಂದ ಶನಿಗ್ರಹದ ಅರ್ಧಾರ್ಧ ಪ್ರಾರಂಭವಾಗಿದೆ. ಇದು 29 ಮಾರ್ಚ್ 2025ಕ್ಕೆ ಮುಕ್ತಾಯವಾಗಲಿದೆ
ಕುಂಭ: ಕುಂಭ ರಾಶಿಯವರಿಗೆ ಶನಿ ಸಾಡೇಸಾತಿ ಜನವರಿ 24, 2020ರಿಂದ ಪ್ರಾರಂಭವಾಗಿದೆ. ಫೆಬ್ರವರಿ 23, 2028ರವರೆಗೆ ಶನಿಯ ಕೆಟ್ಟ ದೃಷ್ಟಿ ಇರಲಿದೆ. ಶನಿಯು ನೇರವಾದಾಗ ಕುಂಭ ರಾಶಿಯವರು ಶನಿಯ ಸಾಡೇ ಸತಿಯಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುತ್ತಾರೆ

ಶನಿ ಸಾಡೇಸಾತಿ ಪ್ರಭಾವ
ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು, ಆರೋಗ್ಯ ಸಮಸ್ಯೆಗಳಿರುತ್ತದೆ, ಆಸ್ತಿ ಅಥವಾ ಸಂಪತ್ತಿಗೆ ಹಾನಿಯುಂಟಾಗಲಿದೆ, ವೈವಾಹಿಕ ಜೀವನದಲ್ಲಿ ತೊಂದರೆಗಳು ಬರುವುದು, ಕುಟುಂಬ ಜೀವನದಲ್ಲಿ ನೆಮ್ಮದಿ ಇಲ್ಲವಾಗುತ್ತೆ. ಕೋಪ, ನೋವು , ಹತಾಶೆ ಇವೆಲ್ಲಾ ಹೆಚ್ಚಾಗುವುದು. ಅನಗ್ಯತ ಸಮಸ್ಯೆಗಳು ಎದುರಾಗುವುದು, ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಅದರಲ್ಲಿ ತುಂಬಾನೇ ಸವಾಲುಗಳು ಎದುರಾಗುವುದು. ಆರ್ಥಿಕವಾಗಿ ತುಂಬಾನೇ ಕಷ್ಟ ಎದುರಾಗುವುದು. ಸಮಾಜದಲ್ಲಿ ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗಬಹುದು.
ಈ ರೀತಿಯೆಲ್ಲಾ ಶನಿಯ ಕೆಟ್ಟದೃಷ್ಟಿಯಿಂದ ಉಂಟಾಗುತ್ತಿರುತ್ತದೆ.
ಶನಿ ಸಾಡೇಸಾತಿ ಇರುವವರು ಶನಿದೇವ ಮೆಚ್ಚುವ ಕಲಸ ಮಾಡಿದರೆ ಶನಿಯ ಕೆಟ್ಟ ಪ್ರಭಾವ ತಗ್ಗಿಸಬಹುದು.

ಶನಿಸಾಡೇಸಾತಿ ಪ್ರಭಾವ ತಗ್ಗಿಸಲು ಪರಿಹಾರ:
* ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ
* ಓಂ ಹನುಮಂತೇಯ ನಮಃ ಎಂದು ಪ್ರತಿದಿನ ಪಠಿಸಿ
* ಮಂಗಳವಾರ ಹಾಗೂ ಶನಿವಾರ ಆಲದ ಮರಕ್ಕೆ ಪೂಜೆ ಮಾಡಿ ಎಳ್ಳೆಣ್ಣೆ ದೀಪ ಹಚ್ಚಿ
* ಶನಿವಾರ ಶನಿ ದೇವಾಲಯಕ್ಕೆ ಭೇಟಿ ನಿಡಿ
* ಶನಿವಾರ ಬಡವರಿಗೆ ನಿಮ್ಮ ಕೈಯಲ್ಲಾದ ಸಹಾಯ ಮಾಡಿ
* ಕರಿ ಎಳ್ಳು, ಕಪ್ಪು ಕಂಬಳಿ ಇವುಗಳನ್ನು ದಾನ ಮಾಡಿ
* ಶನಿವಾರ ಕಪ್ಪು ಬಣ್ಣದ ಬಟ್ಟೆ ಧರಿಸಿ
* ಶನಿ ಬೀಜ ಮಂತ್ರ ಪ್ರತಿದಿನ ಪಠಿಸಿ
* 43 ದಿಗಳವರೆಗೆ ದೇವಾಲಯಕ್ಕೆ ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ

ಶನಿ ಮಂತ್ರಗಳನ್ನು ಪಠಿಸಿ
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇಸೂರ್ಯಪುತ್ರಾಯ ದಹಿಮಹಿತನ್ನೊ ಮಂಡಾ ಪ್ರಚೋದಾಯತ್
ಶನಿ ದೋಷ ನಿವಾರಣೆಗೆ
''ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ
ಊರ್ವಾರೂಕಮಿವ ಬಂದನಾನ್ ಮೃತ್ಯೋರ್ಮುಕ್ಷೀಯಮಾಮೃತಾತ್''
ಶನಿ ಬೀಜ ಮಂತ್ರ.
ಓಂ ಶನೈಶ್ಚರಾಯ ನಮಃ. ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ ||.



Click it and Unblock the Notifications
