Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಮಿಥುನ ರಾಶಿಯ ಹೆಣ್ಣುಮಕ್ಕಳಿಗೆ ಬದ್ಧತೆ ಇಷ್ಟಪಡುವುದಿಲ್ಲ ಏಕೆ ಗೊತ್ತೆ?
ಹನ್ನೆರಡು ರಾಶಿಚಕ್ರಗಳಲ್ಲಿ ಪ್ರತಿತಿಯೊಂದಕ್ಕೂ ತನ್ನದೇ ಆದ ವಿಭಿನ್ನ ಗುಣಾವಗುಣಗಳಿವೆ. ಯಾವ ರಾಶಿಚಕ್ರದಲ್ಲೂ ಸಂಪೂರ್ಣ ಒಳ್ಳೆಯ ಗುಣಗಳು ಅಥವಾ ಈ ರಾಶಿಚಕ್ರದವರು ತುಂಬಾ ಕೆಟ್ಟದು ಎಂಬುದಿಲ್ಲ. ಆದರೆ ಈ ಕೆಟ್ಟ ಹಾಗೂ ಒಳ್ಳೆಯ ಗುಣಗಳ ಅಂದಾಜಿನಲ್ಲಿ ವ್ಯತ್ಯಾಸಗಳು ಇದೆ. ಕೆಲವು ಕಡಿಮೆ ನಕಾರಾತ್ಮಕ ಗುಣಗಳನ್ನು ಹೊಂದಿದ್ದರೆ ಇನ್ನೂ ಕೆಲವು ಹೆಚ್ಚು ಒಳ್ಳೆಯ ಗುಣಗಳನ್ನು ಹೊಂದಿರಬಹುದು.
ಈ ಹಿನ್ನೆಲೆ ನಾವಿಂದು ಮಿಥುನ ರಾಶಿಯ ಮಹಿಳೆಯರ ವಿಶೇಷವಾದ ಕೆಲವು ಗುಣಗಳ ಬಗ್ಗೆ ಚರ್ಚಿಸಲಿದ್ದೇವೆ. ಮಿಥುನ ರಾಶಿಯ ಮಹಿಳೆಯರು ವಿಚಿತ್ರ ಹಾಗೂ ವಿಶೇಷ ಗುಣವೆಂದರೆ ಇವರು ಜೀವನ ಪೂರ್ತಿ ಏಕಾಂಗಿಯಾಗಿರಲು ಬಯಸುತ್ತಾರಂತೆ ಅಲ್ಲದೆ, ಇವರು ಯಾರಿಗೂ ಬದ್ಧತೆ ನೀಡಲು ಇಷ್ಟಪಡುವುದಿಲ್ಲ. ಇವರಿಗೆ ಕಟ್ಟಿಹಾಕುವುದಕ್ಕಿಂತ ಅವರ ಒಂಟಿತನವನ್ನು ಅನುಭವಿಸಲು ಆದ್ಯತೆ ನೀಡುವ ಕೆಲವೇ ರಾಶಿಗಳಲ್ಲಿ ಮಿಥುನ ರಾಶಿಯ ಮಹಿಳೆಯರು ಕೂಡ ಒಬ್ಬರು.
ಯಾವುದೇ ಸಂದರ್ಭವು ಒತ್ತಡದಿಂದ ಕೂಡಿದರೆ ಮತ್ತು ಸಮಸ್ಯೆಯಿಂದ ಇದ್ದರೆ ಅಲ್ಲಿಂದ ಹೇಗೆ ನುಣುಚಿಕೊಳ್ಳುವುದು ಅಥವಾ ದೂರಾಗುವುದು ಹೇಗೆ ಎಂಬುದು ಮಿಥುನ ರಾಶಿಚಕ್ರಕ್ಕೆ ಇರುವ ಅಧ್ಭುತ ಜಾಣ್ಮೆಯ ಗುಣವಾಗಿದೆ. ಆದರೆ ಇದೇ ಗುಣ ಅವರ ಜೀವನದಲ್ಲಿ ಕೆಲವು ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂಬುದು ಸಹ ಅಷ್ಟೇ ಸತ್ಯ.
ಮಿಥುನ ರಾಶಿಯ ಮಹಿಳೆಯರು ಯಾರಿಗೂ ಬದ್ಧತೆ ನೀಡಲು ಇಷ್ಟಪಡುವುದಿಲ್ಲ, ಯಾರೊಂದಿಗೂ ಕಟ್ಟುಬೀಳಲು ಇಷ್ಟಪಡುವುದಿಲ್ಲ ಏಕೆ ಇಲ್ಲಿದೆ ಕೆಲವು ಅಂಶಗಳು ಹಾಗೂ ಇವರ ವಿಶಿಷ್ಠ ಗುಣಗಳು:

1. ಅವಳು ಹೆಚ್ಚು ಸ್ವತಂತ್ರಳು
* ಮಿಥುನ ರಾಶಿಯ ಮಹಿಳೆಯರು ಅತ್ಯಂತ ಸ್ವತಂತ್ರರು ಮತ್ತು ಅವರ ಸ್ವಾತಂತ್ರ್ಯವನ್ನು ಬಹಳವಾಗಿ ಗೌರವಿಸುತ್ತಾರೆ.
* ಗಾಳಿಯ ಅಂಶದ ಮಿಥುನ ರಾಶಿಯ ಮಹಿಳೆಯು ಪ್ರಕೃತಿಯಂತೆ ಸ್ವತಂತ್ರ ಮನೋಭಾವದವಳು ಮತ್ತು ಜೀವನವನ್ನು ತಂಗಾಳಿಯಂತೆ ಸ್ವೀರಿಸಲು ಇಷ್ಟಪಡುತ್ತಾರೆ.
* ಅವಳು ಬಯಸಿದಾಗ ಬಯಸಿದ್ದನ್ನು ಮಾಡಲು ಇಷ್ಟಪಪಡುತ್ತಾಳೆ ಮತ್ತು ಯಾರಾದರೂ ಇದನ್ನು ತಡೆಯುತ್ತಿದ್ದರೆ, ಅವಳು ನಿಸ್ಸಂದೇಹವಾಗಿ ಉಸಿರುಗಟ್ಟಿದಂತೆ ಭಾವಿಸುತ್ತಾಳೆ.
* ಅವಳ ನಡವಳಿಕೆಯನ್ನು ನಿಯಂತ್ರಿಸುವ ಯಾವುದೇ ಯಾವುದನ್ನೇ ಅವಳು ನೋಡಿದರೆ, ಅವುಗಳನ್ನು ನಿರ್ಲಕ್ಷಿಸುವ ಚಾಣಾಕ್ಷೆ. ಅವಳನ್ನು ನಿಯಂತ್ರಿಸುವ ವ್ಯಕ್ತಿಯೊಂದಿಗಿನ ಸಂಬಂಧವು ಎಂದಿಗೂ ಶಾಶ್ವತವಾಗಿರುವುದಿಲ್ಲ ಎಂದು ಅವಳಿಗೆ ಚೆನ್ನಾಗಿ ಗೊತ್ತು, ಆದ್ದರಿಂದ ಆ ಸಂಬಂಧವನ್ನೇ ಕೊನೆಗೊಳಿಸಲು ಅವಳು ಸಿದ್ಧಳಾಗಿರುತ್ತಾಳೆ.

2. ಮಿಥುನ ಮಹಿಳೆಯರು ನಿರ್ದಾಕ್ಷಿಣ್ಯರು
* ಮಿಥುನ ರಾಶಿಯ ಮಹಿಳೆಯರು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಣಗಾಡುತ್ತಾರೆ ಮತ್ತು ಒಂದು ಸಂಬಂಧಕ್ಕೆ ಬದ್ಧರಾಗುವುದಕ್ಕೆ ಇವರಿಗೆ ಇವರದೇ ಆದ ಕಟ್ಟುಪಾಡುಗಳಿವೆ.
* ಅವಳು ತನ್ನ ಸಂಗಾತಿಯೊಂದಿಗೆ ದೀರ್ಘಕಾಲದ ಸಂಬಂಧವನ್ನು ಕಾಣುವುದಿಲ್ಲ ಎಂಬುದು ವಿಷಯವಲ್ಲ, ಆದರೆ ಒಬ್ಬ ವ್ಯಕ್ತಿಯಾಗಿ ಅವಳು ಸದಾ ಬದಲಾಗುತ್ತಾಳೆ.
* ಮಿಥುನ ರಾಶಿಯವರ ರೂಪಾಂತರಗೊಳ್ಳುವ ಅಥವಾ ಬದಲಾಗುವ ಗುಣದಿಂದಾಗಿ ಅವಳು ಕೆಲವು ಬಾರಿ ಹೊಂದಿಕೊಳ್ಳುವಳು ಕೆಲವು ಬಾರಿ ಹೊಂದಿಕೊಳ್ಳುವುದೇ ಇಲ್ಲ. ಹೇಗಾದರೂ, ಅವಳು ನಿರಂತರವಾಗಿ ತನ್ನ ಮನಸ್ಸನ್ನು ಬದಲಾಯಿಸಲು ಒಲವು ತೋರುತ್ತಾಳೆ.
* ಮಿಥುನ ರಾಶಿಯ ಮಹಿಳೆ ಬದ್ಧರಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ, ಕಾರಣ ಅವರು ಮೊದಲಾಗಿ ಅವರಿಗೇ ಮನಸ್ಸು ಬದಲಾಯಿಸುವುದಿಲ್ಲ ಎಂದು ಮೂರು ಬಾರಿ ಪರಿಶೀಲಿಸಿಕೊಳ್ಳಲು ಬಯಸುತ್ತಾರೆ.

3. ಮಿಥುನ ರಾಶಿಯವರ ಅನಿರಂತರತೆ
* ಮಿಥುನ ರಾಶಿಯನ್ನು ಅವಳಿ ಸಂಕೇತಗಳಂತೆ ಈ ಚಿಹ್ನೆಯು ಎರಡು ಮನಸ್ಸು ಅಥವಾ ವಿಭಜಿತ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದ ಗುಣವಾಗಿದೆ ಎಂದು ಅರ್ಥ.
* ಮಿಥುನ ರಾಶಿಯವರು ಸ್ಥಿರ ಮನಸ್ಸು ಇಲ್ಲದಿರುವುದರಿಂದ ಅವಳ ಭಾವನೆಗಳು ಬದಲಾಗುತ್ತವೆ ಅಥವಾ ಅವಳ ಭಾವನೆಗಳು ಒಂದೇ ಆಗಿ ಉಳಿಯುವುದಿಲ್ಲ ಎಂದು ಅವಳಿಗೇ ಚೆನ್ನಾಗಿ ಗೊತ್ತಿರುವುದರಿಂದ ಆತಂಕಗೊಂಡು ಬದ್ಧರಾಗಲು ಹೆದರಬಹುದು.
* ಬಹುಶಃ, ಅವಳು ಎಂದಿಗೂ ಬದ್ಧರಾಗಿಸಲು ಸಿದ್ಧನಾಗಿರುವುದಿಲ್ಲ, ಆದರೆ ಬದ್ಧತೆ ನೀಡಲು ಬಯಸಿದರೆ ಸಿದ್ಧವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ.

4. ಅವಳು ಒಂದೇ ದಿನಚರಿ ಅಥವಾ ಏಕತಾನತೆಯನ್ನು ಇಷ್ಟಪಡುವುದಿಲ್ಲ
* ಮಿಥುನ ರಾಶಿಯ ಮಹಿಳೆಯರು ಸುಲಭವಾಗಿ ಬೇಸರಗೊಳ್ಳುತ್ತಾರೆ ಮತ್ತು ನಿರಂತರವಾಗಿ ಬದಲಾವಣೆಯನ್ನು ಹಂಬಲಿಸುತ್ತಾರೆ.
* ಅವಳು ಕೆಲಸ ಅಥವಾ ಸಂಬಂಧವಾಗಲಿ ಒಂದೇ ತೆರನಾದ ದಿನಚರಿಯಲ್ಲಿ ಸಿಲುಕಿಕೊಂಡರೆ ಆಗ ಅವಳು ಹುಚ್ಚಿಡಿದಂತೆ ಭಾವಿಸುತ್ತಾಳೆ.
* ಮಿಥುನ ರಾಶಿಯ ಮಹಿಳೆಯರು ಏಕತಾನತೆಗೆ ಹೆದರುತ್ತಾರೆ, ಆದ್ದರಿಂದ ಬದ್ಧತೆಯ ಸಂಬಂಧದಲ್ಲಿಯೂ ಸದಾ ಉತ್ಸಾಹ ಮತ್ತು ಬದಲಾವಣೆಯನ್ನು ಅವಳು ಬಯಸುತ್ತಾಳೆ.

5. ಮಿಥುನ ರಾಶಿಯ ಮಹಿಳೆಯರಿಗೆ ಬೇಜವಾಬ್ದಾರಿಯ ಭಯ
* ಮಿಥುನ ರಾಶಿಯ ಮಹಿಳೆಯರು ಮೋಜು ಮಾಡಲು ಇಷ್ಟಪಡುತ್ತಾರೆ, ಆದರೆ ಅದು ಜವಾಬ್ದಾರಿಯುತ ಮೋಜಲ್ಲ.
* ಅವಳು ಸಾಹಸವನ್ನು ಬಯಸುತ್ತಾಳೆ, ಆದರೆ ಅದರ ಪರಿಣಾಮಗಳು ಹಾನಿಗೊಳಗಾಗುತ್ತವೆ.
* ಸ್ಥಿರತೆ ಮತ್ತು ಉತ್ಸಾಹದ ನಡುವೆ, ಅವಳು ಯಾವಾಗಲೂ ಹಿಂದಿನದನ್ನು ಆರಿಸಿಕೊಳ್ಳುತ್ತಾಳೆ.

6. ಅವಳದ್ದು ನಿಯಂತ್ರಿಸುವ ಗುಣ
* ಮಿಥುನ ರಾಶಿಯ ಮಹಿಳೆಯರು ನಿಯಂತ್ರಿಸುವುದನ್ನು ದ್ವೇಷಿಸಬಹುದು, ಆದರೆ ಇವರು ಇತರರನ್ನು ನಿಯಂತ್ರಿಸುವುದನ್ನು ಮಾತ್ರ ತಡೆಯುವುದಿಲ್ಲ.
* ಇವರು ಯಾವುದೇ ಕೆಲಸಗಳನ್ನು ಸರಿಯಾಗಿ ಮಾಡಲು ತನ್ನನ್ನು ಮಾತ್ರ ನಂಬುತ್ತಾಳೆ, ಇನ್ನೊಬ್ಬ ವ್ಯಕ್ತಿಗೆ ಸಂಪೂರ್ಣವಾಗಿ ಬದ್ಧರಾಗಲು ಮತ್ತು ನಂಬಲು ಇಷ್ಟಪಡುವುದಿಲ್ಲ.
* ಬುಧ ಗ್ರಹದಿಂದ ಆಳಲ್ಪಟ್ಟ ಮಿಥುನ ರಾಶಿಯ ಇವಳು ಹೆಚ್ಚು ವಾದ ಮಾಡುವ ಯಾರೊಂದಿಗೂ ಬದ್ಧರಾಗಲು ಇಷ್ಟಪಡುವುದೇ ಇಲ್ಲ.

7. ಮಿಥುನ ರಾಶಿಯ ಮಹಿಳೆಯರು ಸ್ವಯಂಪ್ರೇರಿತರು
* ಬದಲಾವಣೆ ಬಯಸುವ ಮಿಥುನ ರಾಶಿಯ ಮಹಿಳೆ ನಿರಂತರವಾಗಿ ದೊಡ್ಡ ಸಾಹಸವನ್ನು ಮಾಡಲು ಬಯಸುತ್ತಾರೆ ಮತ್ತು ಈ ಬಗ್ಗೆ ಹುಡುಕುತ್ತಿರುತ್ತಾರೆ.
* ಇವಳು ಬಹಳ ವಿನೋದದ ಪ್ರೀತಿಯ ಗುಣದವರಾಗಿದ್ದು ಮತ್ತು ಒಮ್ಮೆ ಬದ್ಧರಾದರೆ ಬಹಳ ಸುಲಭವಾಗಿ ಜೀವನ ನಡೆಸಬಹುದು.

8. ಅವಳು ಈ ಕ್ಷಣ ಬದುಕುತ್ತಾಳೆ
* ಅವಳು ಲಭ್ಯವಿರುವ ಪ್ರತಿಯೊಂದು ಅವಕಾಶವನ್ನೂ ಪಡೆದುಕೊಳ್ಳಲು ಬಯಸುತ್ತಾಳೆ ಮತ್ತು ಅವಳು ಹಾಗೆ ಮಾಡದಿದ್ದರೆ ಏನನ್ನೋ ಕಳೆದುಕೊಂಡವಳಂತೆ ಚಿಂತೆ ಮಾಡುತ್ತಾಳೆ.
* ನೀವು ಮಿಥುನ ರಾಶಿಯ ಮಹಿಳೆಯನ್ನು ಪ್ರೀತಿಸುತ್ತಿದ್ದರೆ ಅವರ ಜತೆ ಬದ್ಧರಾಗಲು ಪ್ರಯತ್ನಿಸುತ್ತಿದ್ದರೆ, ಅವರು ಮಾಡುವ ಸಾಹಸಗಳಿಗೆ ಬೆಂಬಲಿಸಿ, ಅವರನ್ನು ಚೆನ್ನಾಗಿ ಅರ್ಥೈಸಿಕೊಳ್ಳಿ, ಅವರ ಬದಲಾವಣೆಯ ಗುಣ ಸ್ವಭಾವವನ್ನು ಒಪ್ಪಿಕೊಳ್ಳಿ, ಬದಲಾವಣೆಗೆ ನೀವು ಸಹ ಅನುವು ಮಾಡಿಕೊಡಿ ಮತ್ತು ಆಕೆಯ ಕೆಲಸಗಳಲ್ಲಿ ನೀವು ಪಾಲುದಾರರಾಗಿ ಇದನ್ನು ಅವಳು ನಿಮ್ಮಿಂದ ಬಯಸುತ್ತಾಳೆ.



Click it and Unblock the Notifications











