Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
Pushya Nakshatra Prediction 2023: ಪುಷ್ಯ ನಕ್ಷತ್ರದವರಿಗೆ 2023 ಹೇಗಿರಲಿದೆ?
ವ್ಯಕ್ತಿಯು ಜನಿಸಿದ ದಿನಾಂಕ, ಸಮಯದ ಅನುಸಾರ ಅವರ ನಕ್ಷತ್ರ ಬರುತ್ತದೆ.
ಪುಷ್ಯನಕ್ಷತ್ರ- ಜ್ಯೋತಿಷ್ಯದ ಪ್ರಕಾರ 27 ನಕ್ಷತ್ರಗಳಲ್ಲಿ 8ನೇ ನಕ್ಷತ್ರ
ಪುಷ್ಯ ನಕ್ಷತ್ರದವರ ಗುಣಗಳು
ಪುಷ್ಯ ನಕ್ಷತ್ರದ ಪುರುಷರು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಸ್ವಲ್ಪ ದುರ್ಬಲ ಸ್ವಭಾವದವರು, ಅವರು ಯಾವುದೇ ನಿರ್ಧಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವುದಿಲ್ಲ. ಅಲ್ಲದೆ ಈ ನಕ್ಷತ್ರದ ಮಹಿಳೆಯರಿಗೆ ಜೀವನದಲ್ಲಿ ಮಾನಸಿಕ ನೆಮ್ಮದಿ ಎಂಬುವುದೇ ಇರುವುದಿಲ್ಲ. ಇವರು ನೋಡಲು ಸುಂದರವಾಗಿರುತ್ತಾರೆ, ಶಾಂತ ಸ್ವಭಾವದವರು, ಆದರೆ ಹಿರಿಯರ ಮಾತುಗಳನ್ನು ಗೌರವಿಸುವುದು ಕಡಿಮೆ.
2023 ಪುಷ್ಯನಕ್ಷತ್ರದವರಿಗೆ ಹೇಗೆ ಇರಲಿದೆ ಎಂದು ತಿಳಿಯಲು ಈ ನಕ್ಷತ್ರ ಭವಿಷ್ಯ ಓದಿ...
ಪುಷ್ಯಾ ನಕ್ಷತ್ರದವರಿಗೆ 2023ರಲ್ಲಿ ಫೆಬ್ರವರಿ, ಏಪ್ರಿಲ್, ಜುಲೈ, ಆಗಸ್ಟ್, ಅಕ್ಟೋಬರ್ ತುಂಬಾ ಅದೃಷ್ಟದ ತಿಂಗಳಾಗಿದೆ. ಆದರೆ ನೀವು ಜನವರಿ, ಮಾರ್ಚ್, ಮೇ ತಿಂಗಳಿನಲ್ಲಿ ತುಂಬಾನೇ ಎಚ್ಚರಿಕೆಯಿಂದಿರಬೇಕು. ಜೂನ್, ನವೆಂಬರ್, ಡಿಸೆಂಬರ್ ಸಾಮಾನ್ಯವಾಗಿರುತ್ತದೆ.

ಪುಷ್ಯ ನಕ್ಷತ್ರದ ವೃತ್ತಿ ಜೀವನ 2023
ವರ್ಷದ ಆರಂಭ ನಿಮಗೆ ಒಳ್ಳೆಯ ರೀತಿಯಲ್ಲಿ ಪ್ರಾರಂಭವಾಗುವುದು. ಗ್ರಹಗಳ ಸ್ಥಾನದಿಂದಾಗಿ ಕೆಲಸದಲ್ಲಿ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುವುದು. ನೀವು ಯಾವುದೇ ಸಮಸ್ಯೆಯಾಗಿದ್ದರೂ ಸುಲಭವಾಗಿ ನಿಭಾಯಿಸುತ್ತೀರಿ. ಸೇಲ್ಸ್ ನಲ್ಲಿ ಇರುವವರು ಒಳ್ಳೆಯ ಬೆಳವಣಿಗೆ ಕಾಣುವಿರಿ.
ವೃತ್ತಿ ಬಗ್ಗೆ ನಿಮಗೆ ತೃಪ್ತಿ ಇರುತ್ತದೆ, ಹೊಸ ಉದ್ಯೋಗಕ್ಕೆ ಹುಡುಕುತ್ತಿದ್ದರೆ ಸಮಯ ತುಂಬಾನೇ ಅನುಕೂಲಕರವಾಗಿದೆ. ನಿಮ್ಮ ಕೌಶಲ್ಯ ಪ್ರದರ್ಶನಕ್ಕೆ ಅವಕಾಶಗಳು ದೊರೆಯಲಿದೆ. ಕೆಲವೊಂದು ಘಟನೆಗಳು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲಿದೆ.
ನಿಮ್ಮ ವೃತ್ತಿ ಜೀವನದಲ್ಲಿ ಸ್ಥಿರ ಬೆಳವಣಿಗೆಯನ್ನು ಕಾಣಬಹುದು. ಒಂದು ವೇಳೆ ನೀವು ಬೇಗ ಯಶಸ್ಸು ಪಡೆಯಲು ಅಡ್ಡದಾರಿ ಹಿಡಿದರೆ ಅಡಚಣೆ ಕಂಡು ಬರುವುದು. ಜೂನ್-ಜುಲೈ ತಿಂಗಳಿನಲ್ಲಿ ನಿಮ್ಮ ವೃತ್ತಿ ಜೀವನದ ಬಗ್ಗೆ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು. ಸೆಪ್ಟೆಂಬರ್ ತಿಂಗಳು ಹಾಗೂ ಅದರ ನಂತರ ವೃತ್ತಿ ಜೀವನದಲ್ಲಿ ಬೆಳವಣಿಗೆ ಕಂಡು ಬರುವುದು. ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳು ದೊರೆಯಲಿದೆ.

ಪುಷ್ಯ ನಕ್ಷತ್ರದವರ ಆರ್ಥಿಕ ಜೀವನ 2023
ಆರ್ಥಿಕವಾಗಿ ಈ ಅವಧಿ ತುಂಬಾನೇ ಚೆನ್ನಾಗಿದೆ, ಕುಟುಂಬದವರ ಸಂಪೂರ್ಣ ಬೆಂಬಲ ಸಿಗಲಿದೆ, ಪೂರ್ವಜರ ಆಸ್ತಿ ಸಂಬಂಧಿಸಿದ ವಿವಾದಗಳು ಬಗೆಹರಿಯಲಿದ್ದು ಎಲ್ಲವೂ ನಿಮಗೆ ಅನುಕೂಲಕರವಾಗಿ ಇರಲಿದೆ, ಅಲ್ಪಾವಧಿ ಹೂಡಿಕೆಯಿಂದ ನಷ್ಟ ಉಂಟಾಗಬಹುದು ಜಾಗ್ರತೆವಹಿಸಿ. ಹಣಕಾಸಿನ ವಿಷಯದಲ್ಲಿ ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ನಿಮ್ಮ ಗುರಿಯನ್ನು ಮುಟ್ಟಲು ನೀವು ಸರಿಯಾಗಿ ಪ್ಲ್ಯಾನ್ ಮಾಡಿ ಕಾರ್ಯರೂಪಕ್ಕೆ ಇಳಿಯಬೇಕಾಗಿದೆ. ನಿಮ್ಮ ಆರ್ಥಿಕ ಗುರಿ ತಲುಪಲು ಕೆಲ ಸಮಸ್ಯೆಗಳು ಕಾಣಬಹುದು. 2023 ಮೇ ಮಧ್ಯದಿಂದ ನೀವು ತುಂಬಾ ಬುದ್ಧಿವಂತಿಕೆಯಿಂದ ಯೋಚಿಸುವುದರಿಂದ ಆರ್ಥಿಕ ಸ್ಥಿತಿ ಬಲವಾಗುವುದು. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಿರಿಯರ ಹಾಗೂ ಅನುಭವಿಗಳ ಸಲಹೆ ಪಡೆಯಿರಿ.

ಪುಷ್ಯ ನಕ್ಷತ್ರ ಸಂಬಂಧ ಭವಿಷ್ಯ 2023
ಪ್ರೀತಿ ಹಾಗೂ ಸಂಬಂಧದ ವಿಷಯದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಂಬಂಧದ ವಿಷಯದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಪ್ಪುಗಳಾಗದಂತೆ ಎಚ್ಚರವಹಿಸಿ. ಅದರಲ್ಲೂ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಕೆಲವೊಂದು ಸಮಸ್ಯೆಗಳು ಬರಬಹುದು, ನಂತರ ಸಂಬಂಧ ಸುಧಾರಿಸಲಿದೆ. ನಿಮ್ಮ ಹಿತಶತ್ರು ನಿಮ್ಮ ಕುಟುಂಬದಲ್ಲಿ ನೆಮ್ಮದಿ ಹಾಳು ಮಾಡಲು ಪ್ರಯತ್ನಿಸಬಹುದು, ಜಾಗೃತಿವಹಿಸಿ.
ಆದರೆ ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಯಾವುದೋ ತಪ್ಪು ಕಲ್ಪನೆಯಿಂದ ದೂರಾದ ಸ್ನೇಹಿತರ ಅಥವಾ ಕುಟುಂಬಸ್ಥರು ಮತ್ತೆ ನಿಮ್ಮ ಜೊತೆ ಮಾತನಾಡಲು ಪ್ರಾರಂಭಿಸುತ್ತಾರೆ. ಯಾರು ಮರು ವಿವಾಹಕ್ಕೆ ಪ್ರಯತ್ನಿಸುತ್ತಿದ್ದಾರೋ ಅವರಿಗೆ ಈ ವರ್ಷದಲ್ಲಿ ಮದುವೆಯಾಗಲಿದೆ. ಏನಾದರೂ ಕೌಟುಂಬಿಕ ಸಮಸ್ಯೆಗಳು ಕೋರ್ಟ್‌ನಲ್ಲಿದ್ದರೆ ತೀರ್ಪು ದೊರೆಯಲಿದೆ.

ಪುಷ್ಯ ನಕ್ಷತ್ರ ಆರೋಗ್ಯ ಭವಿಷ್ಯ 2023
ಕೆಟ್ಟ ಚಟಗಳಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗಬಹುದು, ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ಈ ವರ್ಷ ಸುಧಾರಿಸಿಕೊಳ್ಳುವಿರಿ, ಆದರೆ ಜೂನ್ -ಜುಲೈ ತಿಂಗಳಿನಲ್ಲಿ ನಿಮ್ಮ ಆರೋಗ್ಯ ದುರ್ಬಲವಾಗುವುದರಿಂದ ಆರೋಗ್ಯ ಹಾಗೂ ಆಹಾರಕ್ರಮದ ಕಡೆಗೆ ತುಂಬಾನೇ ಗಮನಹರಿಸಬೇಕು. ಅತ್ಯಧಿಕ ಕೆಲಸದ ಒತ್ತಡ ಆರೋಗ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.
ಒಟ್ಟಾರೆಯಾಗಿ ನೋಡುವುದಾದರೆ ಪುಷ್ಯ ನಕ್ಷತ್ರದವರಿಗೆ ಈ ವರ್ಷ ಸರಾಸರಿಯಾಗಿರಲಿದೆ.



Click it and Unblock the Notifications











