Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುಬ್ಬಾ ನಕ್ಷತ್ರ ಭವಿಷ್ಯ 2023: ಹೊಸ ವರ್ಷದಲ್ಲಿ ನೀವು ವೃತ್ತಿ, ಆರೋಗ್ಯ ಕಡೆಗಣಿಸಬಾರದು
ಪೂರ್ವ ಫಲ್ಗುಣಿ ಹಾಗೂ ಉತ್ತರ ಫಲ್ಗುಣಿ ಅವಳಿ ನಕ್ಷತ್ರಗಳು. ಪೂರ್ವ ಫಲ್ಗುಣಿ ನಕ್ಷತ್ರವನ್ನ ಪುಬ್ಬಾ ನಕ್ಷತ್ರ ಎಂದು ಕರೆಯಲಾಗುವುದು. ಈ ನಕ್ಷತ್ರದಲ್ಲಿ ತುಂಬಾ ಕಡಿಮೆ ಜನನವಾಗುವುದು. ಇದನ್ನು ತುಂಬ ಶುಭ ನಕ್ಷತ್ರವೆಂದು ಪರಿಗಣಿಸಲಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು, ಉತ್ತಮ ಜ್ಞಾನ ಹೊಂದಿರುತ್ತಾರೆ. ಇವರು ಸಕಲ ಕಲಾ ವಲ್ಲಭರು, ಭವಿಷ್ಯದ ಬಗ್ಗೆ ಉತ್ತಮ ಆಲೋಚನೆ ಮಾಡುವವರಾಗಿರುತ್ತಾರೆ.

ಪುಬ್ಬಾ ನಕ್ಷತ್ರದವರ ಗುಣಗಳು
ಪುಬ್ಬಾ ನಕ್ಷತ್ರದವರಿಗೆ ಬೇಗನೆ ಸಿಟ್ಟು ಬರುತ್ತದೆ. ಆದ್ರೆ ಇವರ ಮನಸ್ಸಿನಲ್ಲಿ ಕಪಟವಿರುವುದಿಲ್ಲ, ದ್ವೇಷವಿರುವುದಿಲ್ಲ. ಪೂರ್ವ ಫಲ್ಗುಣಿ ನಕ್ಷತ್ರವನ್ನು ತುಂಬಾ ಅದೃಷ್ಟದ ನಕ್ಷತ್ರವೆಂದು ಹೇಳಲಾಗುವುದು. ಈ ನಕ್ಷತ್ರದಲ್ಲಿ ಮಕ್ಕಳು ಜನಿಸಿದರೆ ತಂದೆ ತಾಯಿಯ ಆರ್ಥಿಕ ತೊಂದರೆ ನಿವಾರಣೆಯಾಗುವುದು.
ಇವರು ಸಕಲ ಕಲಾ ವಲ್ಲಭರಾಗಿದ್ದರು ಕೂಡ, ತಮ್ಮ ಬಗ್ಗೆ ಎಲ್ಲಿಯೂ ಕೊಚ್ಚಿಕೊಳ್ಳುವುದಿಲ್ಲ. ಇವರಿಗೆ ಒಂದಕ್ಕಿಂತ ಹೆಚ್ಚಿನ ವಿದ್ಯೆ ಗೊತ್ತಿರುತ್ತದೆ, ತುಂಬಾ ಬುದ್ಧಿವಂತರಾಗಿರುತ್ತಾರೆ.
ಪೂರ್ವ ಫಲ್ಗುಣಿ ನಕ್ಷತ್ರದ ಅಧಿದೇವತೆ ಶಿವ,
ಅಧಿಪತಿ ಶುಕ್ರ,
ರಾಶಿ- ಸಿಂಹ.
ವೃತ್ತಿ ಲೇಖನ, ವಾಣಿಜ್ಯ ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ಕಲಾಕ್ಷೇತ್ರದಲ್ಲಿ ಇವರು ಹೆಸರು ಸಾಧಿಸುತ್ತಾರೆ. ಅಲ್ಲದೇ ಇವರಿಗೆ ಗವರ್ನ್‌ಮೆಂಟ್ ಕೆಲಸ ಕೂಡ ಸಿಗುವ ಸಾಧ್ಯತೆ ಇದೆ.
ಸಂಬಂಧದಲ್ಲಿ
ಜೀವನ ಸಂಗಾತಿ, ಕುಟುಂಬಸ್ಥರ ಜೊತೆ ಚೆನ್ನಾಗಿರುತ್ತಾರೆ. ಈ ನಕ್ಷತ್ರದವರು ಪ್ರೀತಿಯಲ್ಲಿ ಯಶಸ್ಸು ಕಾಣುತ್ತಾರೆ, ತಮ್ಮವರಿಗಾಗಿ ಎಂಥದ್ದೇ ಸವಾಲು ಸ್ವೀಕರಿಸಲು ಸಿದ್ಧ.
ಪೂರ್ವಫಲ್ಗುಣಿ ನಕ್ಷತ್ರ 2023ರ ಭವಿಷ್ಯ ನೋಡುವುದಾದರೆ
ಪೂರ್ವ ಫಲ್ಗುಣಿ ನಕ್ಷತ್ರ ಪದ 1ರಲ್ಲಿ ಜನಿಸಿದ ಸಿಂಹ ರಾಶಿಯವರಿಗೆ ಆರ್ಥಿಕ ತೊಂದರೆ ಹಾಗೂ ಉದ್ಯೋಗದಲ್ಲಿ ಅಭದ್ರತೆ ಕಂಡು ಬರಬಹುದು. ಪದ 2ರಲ್ಲಿ ಜನಿಸಿದ ಸಿಂಹರಾಶಿಯವರು ಆರೋಗ್ಯ ಹಾಗೂ ಸಂಬಂಧದಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಪೂರ್ವ ಫಲ್ಗುಣಿ ನಕ್ಷತ್ರ ಪದ 3ರಲ್ಲಿ ಜನಿಸಿದವರು ಕೆಲಸ ಬಿಡಲು ತೀರ್ಮಾನಿಸಬಹುದು.ಪೂರ್ವ ಫಲ್ಗುಣಿ ನಕ್ಷತ್ರ ಪದ 4ರಲ್ಲಿ ಜನಿಸಿದ ಸಿಂಹ ರಾಶಿಯವರು ಕಾನೂನು ಸಂಬಂಧಿಸಿದ ಸಮಸ್ಯೆ ಎದುರಿಸಬಹುದು.
ಜನವರಿ, ಮಾರ್ಚ್, ಆಗಸ್ಟ್, ಸೆಪ್ಟೆಂಬರ್, ನವೆಂಬರ್ ತಿಂಗಳು ಅತ್ಯುತ್ತಮವಾದ ತಿಂಗಳಾಗಿರುತ್ತದೆ. ಏಪ್ರಿಲ್, ಅಕ್ಟೋಬರ್, ಡಿಸೆಂಬರ್‌ನಲ್ಲಿ ಜಾಗ್ರತೆಯಿಂದಿರಬೇಕು. ಮೇ , ಜೂನ್, ಜುಲೈ ತಿಂಗಳು ನಿಮಗೆ ಸಾಮಾನ್ಯವಾಗಿರುತ್ತದೆ.
ಪೂರ್ವ ಫಲ್ಗುಣಿ ನಕ್ಷತ್ರದವರ ವೃತ್ತಿ ಭವಿಷ್ಯ
ಈ ವರ್ಷ ಗ್ರಹಗತಿಗಳು ನಿಮ್ಮ ಪರವಾಗಿದೆ. ಮಾರ್ಚ್ ಹಾಗೂ ಜೂನ್ ತಿಂಗಳಿನಲ್ಲಿ ಸ್ವಲ್ಪ ಅಡೆತಡೆಗಳು ಎದುರಾಗಬಹುದು. ಉದ್ಯಮದಲ್ಲೂ ಕೆಲ ಸವಾಲುಗಳು ಎದುರಾಗಬಹುದು. ಜುಲೈ 23ರ ನಂತರ ನಿಮಗೆ ಪರಿಸ್ಥಿತಿಗಳು ಅನುಕೂಲಕರವಾಗಿದೆ. ನೀವು ತುಂಬಾ ಶ್ರಮ ಪಡಬೇಕಾಗುತ್ತದೆ. ಆದರೆ ಅದಕ್ಕೆ ತಕ್ಕ ಪ್ರತಿಫಲ ಸಿಗುವುದು.
ಉದ್ಯಮಿಗಳು ಈ ವರ್ಷ ಲಾಭ ಗಳಿಸಬಹುದು, ಈ ಸಮಯದಲ್ಲಿ ಸ್ವಂತ ಉದ್ಯೋಗ ಮಾಡುವವರು ಒಳ್ಳೆಯ ಲಾಭ ಗಳಿಸಬಹುದು. ವರ್ಷದ ಕೊನೆಯಲ್ಲಿ ಕೆಲಸದಲ್ಲಿ ಕೆಲ ತೊಂದರೆಗಳು ಎದುರಾಗಬಹುದು. ವರ್ಷದ ಎರಡನೇ ಭಾಗದಲ್ಲಿ ತುಂಬಾ ಲಾಭ ಗಳಿಸಬಹುದು. ನಿಮ್ಮಲ್ಲಿ ಕೆಲವರಿಗೆ ಹಳೆಯ ಸಾಲ ಮರು ಪಾವತಿ ಮಾಡಲು ಪ್ರಯತ್ನಿಸಬಹುದು. ದೀರ್ಘ ಕಾಲದ ಹೂಡಿಕೆಯಿಂದ ಲಾಭ ಗಳಿಸುವಿರಿ.
ಪೂರ್ವ ಫಲ್ಗುಣಿ ನಕ್ಷತ್ರ ಆರ್ಥಿಕ ಭವಿಷ್ಯ
ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಾಣುವಿರಿ. ಆದರೆ ಹಣ ಗಳಿಸಲು ಕೆಲವೊಂದು ಸವಾಲುಗಳನ್ನು ಎದುರಿಸಬಹುದು. ತಪ್ಪಾದ ನಿರ್ಧಾರಗಳಿಂದ ಹಣಗಳಿಕೆ ಕಡಿಮೆಯಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ತುಂಬಾನೇ ಗಮನ ನೀಡಬೇಕು. ವೃತ್ತಿ ಜೀವನದಲ್ಲಿ ಕೆಲವೊಂದು ಸವಾಲುಗಳು ಎದುರಾಗಬಹುದು.
ಪೂರ್ವ ಫಲ್ಗುಣ ನಕ್ಷತ್ರ 2023 ಸಂಬಂಧ ಭವಿಷ್ಯ
ಈ ವರ್ಷ ನಿಮ್ಮ ಸಂಬಂಧಕ್ಕೆ ತುಂಬಾ ಒಳ್ಳೆಯದಿದೆ, ನಿಮ್ಮ ಸಂಗಾತಿಯ ಬೆಂಬಲ ಸಿಗಲಿದೆ. ಪ್ರೇಮಿಗಳಿಗೆ ಈ ವರ್ಷ ಕೆಲವು ಸಮಸ್ಯೆಗಳು ಎದುರಾಗಬಹುದು. ಈ ಸಮಯದಲ್ಲಿ ಸಂಬಂಧ ಉಳಿಸಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಸಂಬಂಧದ ವಿಷಯದಲ್ಲಿ ತುಂಬಾನೇ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
ಪೂರ್ವ ಫಲ್ಗುಣಿ ನಕ್ಷತ್ರ 2023 ಆರೋಗ್ಯ ಭವಿಷ್ಯ
ಜನವರಿ-ಏಪ್ರಿಲ್ ತಿಂಗಳವರೆಗೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಡೆ ತುಂಬಾನೇ ಗಮನ ನೀಡಬೇಕು. ನೀವು ಏನಾದರೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ ಈ ಅವಧಿಯಲ್ಲಿ ತುಂಬಾನೇ ಜಾಗ್ರತೆವಹಿಸಬೇಕು. ನಿಮ್ಮ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ಕಡೆ ಗಮನಹರಿಸಬೇಕು. ನಿಮ್ಮ ಆರೋಗ್ಯ ಮೇ ತಿಂಗಳಿನಿಂದ ಹೆಚ್ಚಾಗಬಹುದು. ಈ ವರ್ಷ ನಿಮ್ಮ ಆರೋಗ್ಯಕ್ಕಾಗಿ ಆಹಾರಕ್ರಮ ಹಾಗೂ ಆರೋಗ್ಯದ ಕಡೆ ಗಮನ ನೀಡಿ.



Click it and Unblock the Notifications



