Latest Updates
-
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ!
Punarvasu Nakshatra Prediction 2023: ಪುನರ್ವಸು ನಕ್ಷತ್ರದವರಿಗೆ 2023 ಹೇಗಿರಲಿದೆ?
ವ್ಯಕ್ತಿಯು ಜನಿಸಿದ ದಿನಾಂಕ, ಸಮಯದ ಅನುಸಾರ ಅವರ ನಕ್ಷತ್ರ ಬರುತ್ತದೆ.
2023 ಪುನರ್ವಸು ನಕ್ಷತ್ರದವರಿಗೆ ಹೇಗೆ ಇರಲಿದೆ ಎಂದು ತಿಳಿಯಲು ಈ ನಕ್ಷತ್ರ ಭವಿಷ್ಯ ಓದಿ...

ಪುನರ್ವಸು ನಕ್ಷತ್ರ- ಜ್ಯೋತಿಷ್ಯದ ಪ್ರಕಾರ 27 ನಕ್ಷತ್ರಗಳಲ್ಲಿ7ನೇ ನಕ್ಷತ್ರ
ಪುನರ್ವಸು ನಕ್ಷತ್ರದ ಕೆಲವು ಪ್ರಾಥಮಿಕ ಆಂಶಗಳು
ಪುನರ್ವಸು ನಕ್ಷತ್ರದ ಕೆಲವು ಪ್ರಾಥಮಿಕ ಆಂಶಗಳು
ಪ್ರಧಾನ ದೇವತೆ: ಅದಿತಿ, ಸುಗ್ಗಿಯ ದೇವತೆ
ಆಡಳಿತ ಗ್ರಹ: ಗುರು
ಆಳುವ ಗ್ರಹದ ಆಡಳಿತ ದೇವತೆ: ಶಿವ
ಗಣ: ದೇವಗಣ
ನಕ್ಷತ್ರ ಸಂಖ್ಯೆ: 7
ಲಿಂಗ: ಸ್ತ್ರೀಲಿಂಗ
ಚಿಹ್ನೆ: ಬಿಲ್ಲು ಮತ್ತು ಬಾಣಗಳ ಬತ್ತಳಿಕೆ
ಗುಣ: ಸಾತ್ವಿಕ
ಅಂಶ: ನೀರು
ಪಕ್ಷಿಯ ಹೆಸರು: ಹಂಸ
ಪ್ರಾಣಿ ಚಿಹ್ನೆ: ಹೆಣ್ಣು ಬೆಕ್ಕು
ಜಾತಿ: ವೈಶ್ಯ
ಪ್ರಕೃತಿ: ಚಲಿಸಬಲ್ಲ ಅಥವಾ ಅಲ್ಪಕಾಲಿಕ (ಚರ)
ದೇಹ ವರಾಹಮಿಹಿರ: ಬೆರಳುಗಳು
ದೇಹ ಪರಾಶರ: ಕೆನ್ನೆ
ರಾಶಿ: ಮಿಥುನ ಮತ್ತು ಕರ್ಕ
ಬೀಜಾಕ್ಷರ: ಕೇ, ಕೋ, ಹ, ಹೀ
ಅದೃಷ್ಟ ಅಕ್ಷರಗಳು: ಕೆ ಮತ್ತು ಹೆಚ್
ಅದೃಷ್ಟದ ಕಲ್ಲು: ಹಳದಿ ನೀಲಮಣಿ
ಅದೃಷ್ಟ ಬಣ್ಣ: ಸೀಸ
ಅದೃಷ್ಟ ಸಂಖ್ಯೆಗಳು: 3
ನಕ್ಷತ್ರದ ಮರ: ಬಿದಿರು ಮತ್ತು ವೇಣು ವೃಕ್ಷ
ಪುನರ್ವುಸು ನಕ್ಷತ್ರದವರಿಗೆ ಯಾವ ವೃತ್ತಿ ಸೂಟ್ ಆಗುತ್ತೆ
ಶಿಕ್ಷಕ ವೃತ್ತಿ, ಮನಶಾಸ್ತ್ರ, ಅತೀಂದ್ರಿಯ ಜ್ಞಾನ, ವಾಸ್ತುಶಿಲ್ಪ, ಎಂಜಿನಿಯಂರಿಂಗ್, ಬರವಣಿಗೆ, ಕಲೆ, ನಾಟಕ, ಸಿನಿಮಾ ಈ ಬಗೆಯ ವೃತ್ತಿಗಳಲ್ಲಿ ಹೆಚ್ಚು ಪ್ರಗತಿ ಸಾಧಿಸುತ್ತಾರೆ.
ಪುನರ್ವಸು ನಕ್ಷತ್ರದವರ ಗುಣಗಳು
* ಇವರು ತುಂಬಾ ಸರಳ ಸ್ವಭಾವದವರು, ಸ್ನೇಹ ಜೀವಿಗಳು, ಎಲ್ಲರೊಂದಿಗೆ ಸುಲಭವಾಗಿ ಬೆರೆಯುತ್ತಾರೆ.
* ಇವರು ವಾಸ್ತವಕ್ಕೆ ತುಂಬಾ ಹತ್ತಿರವಾಗಿ ಯೋಚಿಸುವವರು
* ತುಂಬಾ ಪ್ರತಿಭಾವಂತರು, ಬರವಣಿಗೆ ಕ್ಷೇತ್ರದಲ್ಲಿದ್ದರೆ ತುಂಬಾನೇ ಹೆಸರು ಮಾಡುತ್ತಾರೆ.
* ತುಂಬಾ ಹೃದಯವಂತರು
* ಇವರಿಗೆ ನೆನಪಿನ ಶಕ್ತಿ ತುಂಬಾ ಇರುತ್ತದೆ.
ಪುನರ್ವಸು ನಕ್ಷತ್ರದವರ 2023ರ ನಕ್ಷತ್ರ ಭವಿಷ್ಯ ನೋಡುವುದಾದರೆ ....
ಪುನರ್ವಸು ನಕ್ಷತ್ರದವರಿಗೆ ಜನವರಿ, ಫೆಬ್ರವರಿ, ಏಪ್ರಿಲ್, ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳು ತುಂಬಾ ಒಳ್ಳೆಯದಿದೆ. ಮಾರ್ಚ್, ಮೇ, ಜೂನ್, ನವೆಂಬರ್ ತಿಂಗಳಿನಲ್ಲಿ ಸ್ವಲ್ಪ ಜಾಗ್ರತೆಯಿಂದಿರಿ.

ಪುನರ್ವಸು ನಕ್ಷತ್ರದವರ ವೃತ್ತಿ ಜೀವನ 2023
ನಿಮ್ಮ ವೃತ್ತಿ ಜೀವನದಲ್ಲಿ ಸ್ಥಿರ ಬೆಳವಣಿಗೆಯನ್ನು ಕಾಣಬಹುದು. ಒಂದು ವೇಳೆ ನೀವು ಬೇಗ ಯಶಸ್ಸು ಪಡೆಯಲು ಅಡ್ಡದಾರಿ ಹಿಡಿದರೆ ಅಡಚಣೆ ಕಂಡು ಬರುವುದು. ಜೂನ್-ಜುಲೈ ತಿಂಗಳಿನಲ್ಲಿ ನಿಮ್ಮ ವೃತ್ತಿ ಜೀವನದ ಬಗ್ಗೆ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು. ಸೆಪ್ಟೆಂಬರ್ ತಿಂಗಳು ಹಾಗೂ ಅದರ ನಂತರ ವೃತ್ತಿ ಜೀವನದಲ್ಲಿ ಬೆಳವಣಿಗೆ ಕಂಡು ಬರುವುದು.

ಪುನರ್ವಸು ನಕ್ಷತ್ರದವರ ಆರ್ಥಿಕ ಸ್ಥಿತಿ
ನಿಮ್ಮ ಹಣಕಾಸಿನ ಯೋಜನೆ ರೂಪಿಸಲು ಈ ವರ್ಷ ಉತ್ತಮವಾಗಿದೆ. ನೀವು ಈ ವರ್ಷ ಯಾರ ಸಂಗ ಸೇರುತ್ತೀರಿ ಎಂಬುವುದರ ಬಗ್ಗೆ ಎಚ್ಚರವಹಿಸಬೇಕು, ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ. ಯಾವುದೇ ಅಗ್ರಿಮೆಂಟ್ ಮಾಡದೆ ಹಣವನ್ನು ಯರಿಗೂ ಕೊಡಬೇಡಿ, ಇಲ್ಲದಿದ್ದರೆ ನಷ್ಟವಾಗುವ ಸಾಧ್ಯತೆ ಇದೆ. ಜುಲೈ ನಂತರ ಹೂಡಿಕೆಗೆ ಒಳ್ಳೆಯ ಸಮಯವಾಗಿದೆ.

ಪುನರ್ವಸು ನಕ್ಷತ್ರದವರ ಸಂಬಂಧ ಭವಿಷ್ಯ
ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ತರಲು ತುಂಬಾ ಪ್ರಯತ್ನಿಸುತ್ತೀರಿ. ವಿವಾಹಕ್ಕೆ ಸಂಬಂಧ ಹುಡುಕುತ್ತಿದ್ದರೆ ಯೋಗ್ಯ ಸಂಬಂಧ ಕೂಡಿ ಬರಲಿದೆ. ವಿವಾಹಿತರ ಕುಟುಂಬ ಜೀವನದಲ್ಲಿ ಖುಷಿ ಇರುತ್ತದೆ. ಒಟ್ಟಿನಲ್ಲಿ ಈ ವರ್ಷ ನಿಮ್ಮ ಕುಟುಂಬ ಜೀವನ ಚೆನ್ನಾಗಿರುತ್ತದೆ.

ಪುನರ್ವಸು ನಕ್ಷತ್ರದವರ ಆರೋಗ್ಯ ಭವಿಷ್ಯ 2023
ಈ ವರ್ಷ ನೀವು ಶಕ್ತಿಯಿಂದ ಕೂಡಿರುತ್ತೀರಿ, ನಿಮ್ಮ ಆರೋಗ್ಯ ಸ್ಥಿತಿ ಚೆನ್ನಾಗಿರುತ್ತದೆ, ಆದರೆ ಯಾವುದೇ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಲು ಹೋಗಬಾರದು. ನಿಮ್ಮ ಆಹಾರಕ್ರಮದ ಕಡೆ ಗಮನ ನೀಡಬೇಕು. ವೃತ್ತಿ ಜೀವನದ ಒತ್ತಡದಿಂದ ಫಿಟ್ನೆಸ್ ಕಡೆ ಗಮನ ನೀಡಲು ಕಷ್ಟವಾಗಬಹುದು ಆದರೆ ನಿಮ್ಮ ಆರೋಗ್ಯಕ್ಕಾಗಿ ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಿ.
ಒಟ್ಟಿನಲ್ಲಿ 2023 ನಿಮಗೆ ಎಲ್ಲಾ ರೀತಿಯಿಂದಲೂ ಒಳ್ಳೆಯದಿದೆ.



Click it and Unblock the Notifications