Latest Updates
-
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ!
ಸೆಪ್ಟೆಂಬರ್‌ನಲ್ಲಿದೆ 4 ಗ್ರಹಗಳ ರಾಶಿ ಬದಲಾವಣೆ, ಗ್ರಹಗಳ ಅಶುಭ ಫಲ ಕಡಿಮೆ ಮಾಡಲು ಪರಿಹಾರವೇನು?
ಗ್ರಹಗಳ ಚಲನೆಯ ದೃಷ್ಟಿಯಿಂದ ಸೆಪ್ಟೆಂಬರ್ ತಿಂಗಳು ತುಂಬಾನೇ ಮುಖ್ಯವಾಗಿದೆ. ಈ ತಿಂಗಳು ಗ್ರಹಗಳ ಚಲನೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಈ ತಿಂಗಳಿನಲ್ಲಿ ಬುಧ ಗ್ರಹ ಕನ್ಯಾ ರಾಶಿಯಲ್ಲಿ ಹಿಮ್ಮೆಟ್ಟುತ್ತಿದೆ, ಕನ್ಯ ಸಂಕ್ರಮಣವಿದೆ, ಕನ್ಯಾ ರಾಶಿಯಲ್ಲಿಯೇ ಶುಕ್ರ ಸಂಚಾರವಿದೆ. ಈ ಎಲ್ಲಾ ಗ್ರಹಗಳ ಚಲನೆ ಸಂಭವಿಸುತ್ತಿರುವುದು ಕನ್ಯಾ ರಾಶಿಯಲ್ಲಿಯೇ ಆಗುತ್ತಿದೆ. ಈ ಗ್ರಹಗಳ ಸ್ಥಾನ ಬದಲಾವಣೆ ದ್ವಾದಶ ರಾಶಿಗಳ ಮೇಲಿರುತ್ತದೆ.
ಈ ತಿಂಗಳಿನಲ್ಲಿ ಯಾವೆಲ್ಲಾ ಗ್ರಹಗಳ ಬದಲಾವಣೆಯಿದೆ ಎಂದು ನೋಡೋಣ ಬನ್ನಿ:

ಸೆಪ್ಟೆಂಬರ್ 10ಕ್ಕೆ ಕನ್ಯಾ ರಾಶಿಯಲ್ಲಿ ಬುಧನ ವಕ್ರೀಯ ಚಲನೆ
ಈ ತಿಂಗಳ ಗ್ರಹಗಳ ಮೊದಲ ರಾಶಿ ಬದಲಾವಣೆ ಸೆಪ್ಟೆಂಬರ್ 10ರಂದು ನಡೆಯಲಿದೆ. ಈ ರಾಶಿ ಬದಲಾವಣೆಯು ಕನ್ಯಾ ರಾಶಿಯಲ್ಲಿ ಕಂಡುಬರುತ್ತದೆ. ಈ ದಿನ ಕನ್ಯಾ ರಾಶಿಯಲ್ಲಿ ಬುಧನು ಹಿಮ್ಮೆಟ್ಟಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹವು ಹಿಮ್ಮುಖವಾಗಿದ್ದಾಗ, ಅದನ್ನು ಪೀಡಿತ ಗ್ರಹ ಎಂದು ಪರಿಗಣಿಸಲಾಗುತ್ತದೆ. ಬುಧ ಗ್ರಹದ ಅಶುಭವನ್ನು ತಪ್ಪಿಸಲು, ಗಣೇಶನನ್ನು ಪೂಜಿಸಬೇಕು.

ಸೆಪ್ಟೆಂಬರ್ 15 ರಂದು ಸಿಂಹ ರಾಶಿಯಲ್ಲಿ ಶುಕ್ರ ಗ್ರಹವು ಅಸ್ತಂಗತ
ಸದ್ಯ ಶುಕ್ರನು ಸಿಂಹರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಜ್ಯೋತಿಷ್ಯದಲ್ಲಿ, ಶುಕ್ರ ಗ್ರಹವನ್ನು ಸಂತೋಷದ ಅಂಶವೆಂದು ಪರಿಗಣಿಸಲಾಗಿದೆ, . ಸೆಪ್ಟೆಂಬರ್ 15 ರಂದು, ಶುಕ್ರ ಗ್ರಹವು ಸಿಂಹರಾಶಿಯಲ್ಲಿ ಅಸ್ತಮಿಸಲಿದೆ. ಶುಕ್ರವನ್ನು ಬೆಳಗಿನ ನಕ್ಷತ್ರ ಎಂದೂ ಕರೆಯುತ್ತಾರೆ. ಧಾರ್ಮಿಕ ದೃಷ್ಟಿಕೋನದಿಂದ ಶುಕ್ರನ ಅಸ್ತಂಗತವನ್ನು ಸಹ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಶುಕ್ರವು ಅಸ್ತಂಗತವಾಗಿದ್ದಾಗ ಅದು ಪೂರ್ಣ ಫಲಿತಾಂಶಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಶುಕ್ರನ ಅಶುಭವನ್ನು ತಪ್ಪಿಸಲು ಬಿಳಿ ವಸ್ತುಗಳನ್ನು ದಾನ ಮಾಡಬೇಕು ಹಾಗೂ ಶುಕ್ರವಾರ ಹುಡುಗಿಯರಿಗೆ ಉಡುಗೊರೆಗಳನ್ನು ನೀಡಬೇಕು.

17 ಸೆಪ್ಟೆಂಬರ್ ಕನ್ಯಾರಾಶಿಯಲ್ಲಿ ಸೂರ್ಯ ಸಂಕ್ರಮಣ
ಸೆಪ್ಟೆಂಬರ್ ತಿಂಗಳಲ್ಲಿ ಮೂರನೇ ಗ್ರಹ ಬದಲಾವಣೆಯು ಕನ್ಯಾರಾಶಿಯಲ್ಲಿರುತ್ತದೆ. ಈ ದಿನ ಗ್ರಹಗಳ ಅಧಿಪತಿಯಾದ ಸೂರ್ಯನು ತಾನು ಅಧಿಪತಿಯಾಗಿರುವ ಸಿಂಹವನ್ನು ಬಿಟ್ಟು ಕನ್ಯಾರಾಶಿಯಲ್ಲಿ ಸಾಗುತ್ತಾನೆ. ಸೂರ್ಯನ ಆಗಮನವು ಕನ್ಯಾ ರಾಶಿಯವರಿಗೆ ಕೆಲವು ವಿಷಯಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಸೆಪ್ಟೆಂಬರ್ 24 ರಂದು ಕನ್ಯಾರಾಶಿಯಲ್ಲಿ ಶುಕ್ರ ಸಂಕ್ರಮಣ
ಸೆಪ್ಟೆಂಬರ್ ತಿಂಗಳ ಕೊನೆಯ ಗ್ರಹ ಬದಲಾವಣೆಯು ಕನ್ಯಾರಾಶಿಯಲ್ಲಿಯೇ ಆಗಲಿದೆ. ಸೆಪ್ಟೆಂಬರ್ 24 ರಂದು ಶುಕ್ರನು ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಈ ಅವಧಿಯಲ್ಲಿ ಕನ್ಯಾ ರಾಶಿಯವರಿಗೆ ಖರ್ಚು ಹೆಚ್ಚಾಗಬಹುದು. ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಲಕ್ಷ್ಮೀದೇವಿಯನ್ನು ಆರಾಧಿಸಿ ಮತ್ತು ದಾನ ಕಾರ್ಯಗಳಲ್ಲಿ ಆಸಕ್ತಿ ವಹಿಸಿ.



Click it and Unblock the Notifications
