Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅಕ್ಟೋಬರ್‌ನಲ್ಲಿದೆ 6 ಗ್ರಹಗಳ ಸಂಚಾರ: ಈ 5 ರಾಶಿಯವರಿಗೆ ಈ ಅವಧಿ ಲಾಭದಾಯಕ
ಪ್ರತಿ ತಿಂಗಳು ಗ್ರಹಗಳ ಬದಲಾಣೆ ಇರುತ್ತದೆ. ಒಂದು ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವಾಗ ಅದರ ಪ್ರಭಾವ ದ್ವಾದಶ ರಾಶಿಗಳ ಮೇಲೆ ಇರಲಿದೆ ಎಂದು ವೈದಿಕ ಶಾಸ್ತ್ರ ಹೇಳುತ್ತದೆ. ಈ ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 7 ಗ್ರಹಗಳ ರಾಶಿ ಬದಲಾವಣೆ ಇದೆ. ಇದರಿಂದಾಗಿ ಈ ತಿಂಗಳು ಕೆಲವು ರಾಶಿಯವರಿಗೆ ಅದೃಷ್ಟದ ತಿಂಗಳಾಗಲಿದೆ.

ಈ ತಿಂಗಳಿನಲ್ಲಿ ಯಾವೆಲ್ಲಾ ಗ್ರಹಗಳ ಸಂಚಾರವಿದೆ, ಯಾವ ರಾಶಿಯವರಿಗೆ ಈ ತಿಂಗಳು ಅದೃಷ್ಟದ ತಿಂಗಳಾಗಲಿದೆ ಎಂದು ನೋಡೋಣ:

ಗ್ರಹಗಳ ಸಂಚಾರ
ಅಕ್ಟೋಬರ್ 16, 2022ಕ್ಕೆ ಮಿಥುನ ರಾಶಿಯಲ್ಲಿ ಮಂಗಳ ಸಂಚಾರವಾಗಲಿದೆ.
17 ಅಕ್ಟೋಬರ್ 2022ಕ್ಕೆ ಸೂರ್ಯನು ಕನ್ಯಾರಾಶಿಯಿಂದ ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ:
18 ಅಕ್ಟೋಬರ್ 2022 ಶುಕ್ರವು ತುಲಾ ರಾಶಿಯನ್ನು ಪ್ರವೇಶಿಸುತ್ತದೆ.
23 ಅಕ್ಟೋಬರ್ 2022 ಶನಿಯಯ ಮಕರ ರಾಶಿಯಲ್ಲಿ ನೇರವಾಗಿ ಚಲಿಸಲಿದೆ.
26 ಅಕ್ಟೋಬರ್ 2022 ಬುಧವು ತುಲಾ ರಾಶಿಯನ್ನು ಪ್ರವೇಶಿಸುತ್ತದೆ.
ಅಕ್ಟೋಬರ್ 28, 2022 ಮೇಷ ರಾಶಿಯಲ್ಲಿ ಗುರು ಸಂಚಾರವಾಗಲಿದೆ.

ಗ್ರಹ ಸಂಚಾರದ ಪ್ರಭಾವ
ಅಕ್ಟೋಬರ್ ತಿಂಗಳಿನಲ್ಲಿ ಮೇಲಿನ ಗ್ರಹಗಳ ಸಂಕ್ರಮಣದಿಂದಾಗಿ ಕೆಲವು ರಾಶಿಯವರಿಗೆ ಈ ಸಮಯವು ತುಂಬಾ ಒಳ್ಳೆಯದಿದೆ, ನೀವು ಈ ಅವಧಿಯಲ್ಲಿ ಸಂಪತ್ತು, ವೈಭವ ಮತ್ತು ಸಮೃದ್ಧಿಯನ್ನು ಪಡೆಯಲಿದ್ದೀರಿ.
ಬುಧ ಸಂಚಾರದ ಪರಿಣಾಮ
ವೃಷಭ ರಾಶಿಯವರಿಗೆ ಮತ್ತು ತುಲಾ ರಾಶಿಯವರಿಗೆ ಬುಧ ಗ್ರಹದ ಸಂಚಾರದಿಂದಾಗಿ ಈ ಸಮಯವು ಶುಭವಾಗಲಿದೆ. ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಹೊಂದುವಿರಿ. ನಿಮ್ಮ ಆದಾಯ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ.

ಮಂಗಳ ಸಂಚಾರದ ಪರಿಣಾಮ
ಮಿಥುನ ರಾಶಿಯಲ್ಲಿ ಮಂಗಳನ ಸಂಚಾರವು ಮೇಷ ಮತ್ತು ಮೀನ ರಾಶಿಯವರಿಗೆ ಆಹ್ಲಾದಕರ ಸಮಯವನ್ನು ತರಲಿದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಹಣ ಸಿಗುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ.

ಸೂರ್ಯನ ಸಂಚಾರದ ಲಾಭಗಳು
ಸೂರ್ಯನ ರಾಶಿ ಬದಲಾವಣೆಯಿಂದ ಸಿಂಹ ಮತ್ತು ಮಕರ ರಾಶಿಯವರಿಗೆ ಉತ್ತಮ ಲಾಭ ದೊರೆಯಲಿದೆ. ಅವರ ವ್ಯವಹಾರದಲ್ಲಿ ಲಾಭ ಹೆಚ್ಚಾಗುತ್ತದೆ. ಇದು ಕೆಲಸದ ಪ್ರದೇಶದಲ್ಲಿ ಕಾರ್ಯಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ನೀವು ಸಹೋದ್ಯೋಗಿಗಳ ಬೆಂಬಲವನ್ನು ಸಹ ಪಡೆಯುತ್ತೀರಿ.

ಈ ರಾಶಿಯವರಿಗೆ ತುಲಾ ರಾಶಿಯಲ್ಲಿ ಶುಕ್ರ ಸಂಕ್ರಮಣ ಶುಭ
ತುಲಾ ರಾಶಿಯಲ್ಲಿ ಶುಕ್ರನ ಸಂಚಾರವು ಮೇಷ ಮತ್ತು ಕರ್ಕಾಟಕ ರಾಶಿಯವರಿಗೆ ಮಂಗಳಕರವಾಗಿದೆ. ಹಣದ ಲಾಭ ಪಡೆಯುವಿರಿ. ಕ್ಷೇತ್ರದಲ್ಲಿ ಯಶಸ್ಸು ಕಾಣುವಿರಿ. ನಿಮ್ಮ ಆದಾಯ ಹೆಚ್ಚಾಗುತ್ತದೆ.



Click it and Unblock the Notifications
