Latest Updates
-
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ನವೆಂಬರ್‌ನಲ್ಲಿದೆ 3 ಗ್ರಹಗಳ ರಾಶಿ ಸಂಚಾರ: ಈ ನಾಲ್ಕು ರಾಶಿಗಳಿಗೆ ಒಳ್ಳೆಯದಿದೆ
ಜ್ಯೋತಿಷ್ಯದಲ್ಲಿ, ಎಲ್ಲಾ 9 ಗ್ರಹಗಳ ಚಲನೆಯು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ. ಗ್ರಹಗಳ ಚಲನೆಯೆಂದರೆ ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುವುದು. ಪ್ರತೀ ತಿಂಗಳು 3-4 ಗ್ರಹಗಳ ಚಲನೆ ಇದ್ದೇ ಇರುತ್ತದೆ. ಕೆಲವೊಂದು ಗ್ರಹಗಳು ತಿಂಗಳಿಗೊಮ್ಮೆ ಸ್ಥಾನ ಬದಲಾಯಿಸಿದರೆ, ಇನ್ನು ಕೆಲ ಗ್ರಹಗಳು ಸ್ಥಾನಪಲ್ಲಟವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇನ್ನು ಕೆಲವೊಮ್ಮೆ ನೇರವಾಗಿ ಚಲಿಸುತ್ತಿದ್ದ ಗ್ರಹ ಹಿಮ್ಮುಖವಾಗಿ ಚಲಿಸಲಾರಂಭಿಸುತ್ತದೆ. ಜ್ಯೋತಿಷ್ಯದ ಪ್ರಕಾರ ಇವೆಲ್ಲಾ ವ್ಯಕ್ತಿಯ ರಾಶಿಯ ಮೇಲೆ ಪರಿಣಾಮ ಬೀರುವುದು.

ಕೆಲವೊಂದು ರಾಶಿಗಳಿಗೆ ಈ ಗ್ರಹಗಳ ಸ್ಥಾನಪಲ್ಲಟದಿಂದ ಒಳ್ಳೆಯದಾದರೆ ಇನ್ನು ಕೆಲವು ರಾಶಿಯವರಿಗೆ ಆ ಸಮಯ ಅಷ್ಟು ಒಳ್ಳೆಯದಲ್ಲ. ಈ ತಿಂಗಳು 3 ಗ್ರಹಗಳ ರಾಶಿಯ ಸ್ಥಾನ ಪಲ್ಲಟವಾಗುತ್ತಿದೆ. ಬುಧ ಎರಡು ಬಾರಿ ಸ್ಥಾನ ಬದಲಾಯಿಸುತ್ತಿದ್ದಾನೆ.
ಯಾವಾಗ, ಯಾವೆಲ್ಲಾ ಗ್ರಹಗಳ ಗ್ರಹ ಸಂಚಾರವಿದೆ, ಈ ತಿಂಗಳು ಯಾವ ರಾಶಿಗಳಿಗೆ ಇದರಿಂದ ಒಳ್ಳೆಯದು ಎಂದ ನೋಡೋಣ ಬನ್ನಿ:

ನವೆಂಬರ್‌ನಲ್ಲಿದೆ 3 ಗ್ರಹಗಳ ಸಂಚಾರ
ಮೊದಲ ಗ್ರಹ ಸಂಚಾರ
ನವೆಂಬರ್ 2: ತುಲಾ ರಾಶಿಗೆ ಬುಧನ ಸಂಚಾರ
ಎರಡನೇ ಗ್ರಹ ಸಂಚಾರ
ವೃಶ್ಚಿಕ ರಾಶಿಗೆ ಸೂರ್ಯ ಸಂಚಾರ
ಮೂರನೇ ಗ್ರಹ ಸಂಚಾರ
ಕುಂಭ ರಾಶಿಗೆ ಗುರು ಸಂಚಾರ
ನಾಲ್ಕನೇ ಗ್ರಹ ಸಂಚಾರ
ವೃಶ್ಚಿಕ ರಾಶಿಗೆ ಬುಧ ಸಂಚಾರ
ಈ ತಿಂಗಳು ಬುಧನ ಸಂಚಾರ ಎರಡು ಬಾರಿ ಇದೆ.
ಈ ಗ್ರಹಗಳ ಬದಲಾವಣೆಯಿಂದ ಈ ರಾಶಿಚಕ್ರದ ಜನರು ತುಂಬಾ ಶುಭ ಫಲಿತಾಂಶಗಳನ್ನು ಪಡೆಯಲಿದ್ದಾರೆ:

ಮೇಷ ರಾಶಿ
ನವೆಂಬರ್ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಹಲವು ರೀತಿಯ ಸುಖ ಸಿಗಬಹುದು. ಆರಂಭದ ದಿನಗಳಲ್ಲಿ ಬುಧ ಗ್ರಹವು ತುಲಾ ರಾಶಿಗೆ ಪ್ರವೇಶಿಸುವುದರಿಂದ ಮೇಷ ರಾಶಿಯವರಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಕೆಲಸದಲ್ಲಿ ನೀವು ಬಯಸಿದ ಸಂಬಳವನ್ನು ಪಡೆಯುವ ನಿರೀಕ್ಷೆಯಿದೆ. ವ್ಯಾಪಾರದಲ್ಲಿಯೂ ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ. ಇದಲ್ಲದೆ, ಮೇಷ ರಾಶಿಯವರಿಗೆ ಸೂರ್ಯ ಮತ್ತು ಗುರುಗಳ ರಾಶಿ ಬದಲಾವಣೆಯು ಸಹ ಮಂಗಳಕರವಾಗಿರುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಕೆಲ ದಿನಗಳಿಂದ ನಡೆಯುತ್ತಿದ್ದ ತೊಂದರೆಗಳು ಈಗ ಹಂತಹಂತವಾಗಿ ಕಡಿಮೆಯಾಗುವ ಲಕ್ಷಣ ಕಂಡುಬರುತ್ತಿದೆ. ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವಿರಿ. ಗುರುವು ಕುಂಭ ರಾಶಿಗೆ ಪ್ರವೇಶಿಸಿದಾಗ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಪ್ರಗತಿಯ ಲಕ್ಷಣಗಳು ಕಂಡುಬರುತ್ತವೆ.

ಕನ್ಯಾ ರಾಶಿ
ಸೂರ್ಯನ ಸಂಚಾರವು ಕನ್ಯಾ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ವ್ಯವಹಾರದಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸಲಾಗುವುದು. ಹೊಸ ವ್ಯವಹಾರದ ಅಡಿಪಾಯವನ್ನು ಹಾಕುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಇದಲ್ಲದೇ ಎಲ್ಲಾ ಗ್ರಹಗಳಲ್ಲಿ ಅತ್ಯಂತ ಶುಭ ಫಲವನ್ನು ನೀಡುವ ಗ್ರಹವೆಂದು ಪರಿಗಣಿಸಲ್ಪಟ್ಟಿರುವ ಗುರುವು ಕನ್ಯಾ ರಾಶಿಯವರ ಮೇಲೂ ಶುಭ ಪರಿಣಾಮವನ್ನು ಬೀರುತ್ತದೆ.

ಮಕರ ರಾಶಿ -
ಮಕರ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಬಹಳಷ್ಟು ಲಾಭಗಳು ಇರುತ್ತವೆ. ಉದ್ಯೋಗದಲ್ಲಿರುವವರಿಗೆ ಈ ತಿಂಗಳು ವರದಾನಕ್ಕಿಂತ ಕಡಿಮೆಯಿಲ್ಲ. ಅದೇ ಸಮಯದಲ್ಲಿ, ಸಮಾಜದಲ್ಲಿ ನಿಮ್ಮ ಗೌರವವು ಹೆಚ್ಚಾಗುತ್ತದೆ ಮತ್ತು ಹೊಸದನ್ನು ಮಾಡುವ ಉತ್ಸಾಹವು ನಿಮ್ಮ ಮನಸ್ಸಿನಲ್ಲಿ ಮೇಲುಗೈ ಸಾಧಿಸುತ್ತದೆ, ಇದರಲ್ಲಿ ನೀವು 100% ಯಶಸ್ಸನ್ನು ಪಡೆಯುತ್ತೀರಿ.



Click it and Unblock the Notifications











