Latest Updates
-
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು!
ಫೆಬ್ರವರಿ: ಗ್ರಹಗಳ ರಾಶಿ ಸಂಚಾರ ತರಲಿದೆ ಈ 5 ರಾಶಿಯವರಿಗೆ ಅದೃಷ್ಟ
ಪ್ರತಿ ತಿಂಗಳು ಗ್ರಹಗಳ ಸ್ಥಾನದಲ್ಲಿ ಬದಲಾವಣೆಗಳಾಗುತ್ತಿರುತ್ತವೆ. ಒಂದು ಗ್ರಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಿದಾಗ ಅದರ ಪರಿಣಾಮ 12 ರಾಶಿಗಳ ಮೇಲಿರುತ್ತದೆ. ಆ ಗ್ರಹದ ಚಲನೆಯಿಂದ ಕೆಲ ರಾಶಿಗಳಿಗೆ ಅದೃಷ್ಟವನ್ನು ತಂದರೆ ಇನ್ನು ಕೆಲ ರಾಶಿಗಳಿಗೆ ಸವಾಲು ತರಬಹುದು. ಗ್ರಹಗಳ ರಾಶಿ ಪರಿವರ್ತನೆ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಒಂದೇ ರೀತಿ ಇರುವುದಿಲ್ಲ.
ಈ ತಿಂಗಳು ಬುಧ ಮಾರ್ಗಿಯಾಗಿ ಚಲಿಸದೆ. ಸೂರ್ಯ ಕುಂಭ ರಾಶಿಗೆ ಪ್ರವೇಶಿಲಸಿದೆ. ಮಂಗಳ ಮಕರ ರಾಶಿಗೆ ಸಂಚಾರ ಮಾಡಲಿದೆ. ಶುಕ್ರ ಧನು ರಾಶಿಗೆ ಪ್ರವೇಶಿಸಲಿದೆ. ಈ ಗ್ರಹಗಳ ಸ್ಥಾನ ಬದಲಾವಣೆ 5 ರಾಶಿಗಳಿಗೆ ಅದೃಷ್ಟವನ್ನು ತರಲಿದೆ. ಈ ತಿಂಗಳು ಗ್ರಹಗಳ ರಾಶಿ ಪರಿವರ್ತನೆಯಿಂದ ಈ ರಾಶಿಗಳಿಗೆ ತುಂಬಾನೇ ಒಳ್ಳೆಯದು.

ಮೇಷ ರಾಶಿ
ಫೆಬ್ರವರಿಯಲ್ಲಿ ಗ್ರಹಗಳ ಬದಲಾವಣೆಯು ಮೇಷ ರಾಶಿಯ ಜನರಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಆತ್ಮವಿಶ್ವಾಸ ಹೆಚ್ಚಲಿದೆ. ವೃತ್ತಿ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಹಣವು ಪ್ರಯೋಜನಕಾರಿಯಾಗಲಿದೆ. ಹೊಸ ಅವಕಾಶಗಳು ಬರಲಿವೆ.

ವೃಷಭ ರಾಶಿ
ವೃಷಭ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಲಾಭವನ್ನು ಪಡೆಯುತ್ತಾರೆ. ನೀವು ಬಹಳ ಸಮಯದಿಂದ ಕಾಯುತ್ತಿರುವ ಅವಕಾಶ ಸಿಗಬಹುದು. ವ್ಯಾಪಾರಿಗಳಿಗೆ ಲಾಭವಾಗಲಿದೆ. ಕುಟುಂಬ, ಪ್ರೀತಿಯ ವಿಷಯದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಆಹ್ಲಾದಕರ ಪ್ರಯಾಣವಿರುತ್ತದೆ. ಆದಾಯ ಹೆಚ್ಚಲಿದೆ. ಕೆಲವರು ಆಸ್ತಿಯನ್ನು ಖರೀದಿಸಬಹುದು.

ತುಲಾ ರಾಶಿ
ತುಲಾ ರಾಶಿಯವರಿಗೆ ಹಣದ ಲಾಭವಾಗಲಿದೆ. ಹಳೆಯ ಹೂಡಿಕೆ ಲಾಭದಾಯಕವಾಗಿರುತ್ತದೆ. ವಹಿವಾಟುಗಳು ಸಹ ಲಾಭವನ್ನು ತರುತ್ತವೆ. ವೃತ್ತಿಯಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಅಂಟಿಕೊಂಡಿರುವ ಕೆಲಸ ನಡೆಯಲಿದೆ.

ಮಕರ ರಾಶಿ
ಈ ತಿಂಗಳು ಮಕರ ರಾಶಿಯವರಿಗೆ ಆರ್ಥಿಕ ಲಾಭವನ್ನೂ ನೀಡುತ್ತದೆ. ಕೊಟ್ಟ ಸಾಲವನ್ನು ಮರಳಿ ಪಡೆಯಬಹುದು. ಕೆಲವು ಆಶ್ಚರ್ಯ ಅಥವಾ ಉಡುಗೊರೆಯನ್ನು ಎಲ್ಲಿಂದಲಾದರೂ ಕಾಣಬಹುದು, ಅದು ನಿಮಗೆ ಸಂತೋಷವನ್ನು ನೀಡುತ್ತದೆ. ಕುಟುಂಬದಲ್ಲಿ ಪ್ರೀತಿ ಮತ್ತು ಸಂತೋಷ ಇರುತ್ತದೆ.

ಮೀನ ರಾಶಿ
ನಿಮಗೆ ಈ ಸಮಯವು ಸ್ಥಾನ, ಹಣ ಮತ್ತು ಗೌರವವನ್ನು ತರುತ್ತದೆ. ನೀವು ಶ್ರದ್ಧೆಯಿಂದ ಕೆಲಸ ಮಾಡುತ್ತೀರಿ ಮತ್ತು ಅದರ ಸಂಪೂರ್ಣ ಫಲವನ್ನು ನೀವು ಪಡೆಯುತ್ತೀರಿ. ಸರ್ಕಾರಿ ವಲಯಕ್ಕೆ ಸಂಬಂಧಿಸಿದ ಜನರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರೆ. ಹಳೆಯ ಹೂಡಿಕೆ ಲಾಭವನ್ನು ನೀಡುತ್ತದೆ. ನೀವು ಜೀವನ ಸಂಗಾತಿಯಿಂದ ಸಂತೋಷವನ್ನು ಪಡೆಯುತ್ತೀರಿ.



Click it and Unblock the Notifications