Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸಂಚಾರವು ಬುಮುಖ್ಯವಾದ ಪಾತ್ರ ವಹಿಸುತ್ತವೆ. ಅದೇ ರೀತಿ ಫೆಬ್ರವರಿಯಲ್ಲಿ 3 ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಲಿವೆ. ಈ ಸಂಚಾರದಿಂದ ಪ್ರತಿಯೊಂದು ರಾಶಿಯ ಮೇಲೆ ಪ್ರಭಾವ ಉಂಟಾಗುತ್ತವೆ. ಹಾಗಾದರೆ, ಈ ತಿಂಗಳಲ್ಲಿರುವ ಗ್ರಹಗಳ ಸಂಚಾರ ಯಾವುವು ಹಾಗೂ ಇದ್ರಿಂದ ಒಳಿತು ಕಾಣುವ ರಾಶಿಚಕ್ರಗಳು ಯಾವುವು ಎಂಬುದನ್ನು ನೋಡೋಣ.

ಫೆಬ್ರವರಿಯಲ್ಲಿರುವ ಗ್ರಹಗಳ ರಾಶಿ ಪರಿವರ್ತನೆ ಹೀಗಿವೆ:
ಫೆಬ್ರವರಿ 7ರಂದು ಬುಧ ಮಕರ ರಾಶಿಗೆ ಸಂಚಾರ:
ಈ ದಿನದಂದು ಬುಧನು ಧನಸ್ಸು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಈ ಸಂಚಾರವು ರಾತ್ರಿ 8:02ನಿಮಿಷಕ್ಕೆ ಸಂಭವಿಸಲಿದೆ.
ಫೆಬ್ರವರಿ 13ರಂದು ಸೂರ್ಯನು ಕುಂಭಕ್ಕೆ ಸಂಚಾರ:
ಅದುವರೆಗೆ ಮಕರ ರಾಶಿಯಲ್ಲಿದ್ದ ಸೂರ್ಯನು ತನ್ನ ಸಂಚಾರ ಮುಂದುವರಿಸಿ ಕುಂಭ ರಾಶಿಗೆ ಚಲಿಸಲಿದ್ದಾನೆ. ಈ ಸಂಚಾರ ಸಮಯ ಬೆಳಗ್ಗೆ 9;44ಕ್ಕೆ ನಡೆಯಲಿದೆ.
ಫೆಬ್ರವರಿ 15ರಂದು ಶುಕ್ರನು ಮೀನ ರಾಶಿಗೆ ಸಂಚಾರ:
ಈ ದಿನದಂದು ಶುಕ್ರನು ಬೆಳಗ್ಗೆ 7:43ರ ವೇಳಗೆ ಮೀನ ರಾಶಿಗೆ ಸಂಚಾರ ಬೆಳೆಸಲಿದ್ದಾನೆ. ಮಾರ್ಚ್ 12ರವರೆಗೆ ಶುಕ್ರನು ಇದೇ ರಾಶಿಯಲ್ಲಿದ್ದು, ಮುಂದೆ ನಂತರದ ರಾಶಿಗೆ ಸಂಚಾರ ಬೆಳೆಸಲಿದ್ದಾನೆ.
ಈ ಗ್ರಹಗಳ ಸಂಚಾರದಿಂದ ಪ್ರತಿಯೊಬ್ಬರ ರಾಶಿಯ ಮೇಲೆ ಪರಿಣಾಮಗಳು ಬೀರಲಿದ್ದು, ಈ ಕೆಳಗೆ ಕೊಟ್ಟಿರುವ ರಾಶಿಗಳ ಮೇಲೆ ಉತ್ತಮವಾದ ಫಲಿತಾಂಶ ಬರಲಿದೆ. ಉತ್ತಮ ಫಲಿತಾಂಶ ಇರುವ ರಾಶಿಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಗ್ರಹಗಳ ಸಂಚಾರದಿಂದ ಶುಭವಿರುವ ರಾಶಿಚಕ್ರಗಳು:

ಮೇಷ ರಾಶಿ:
3 ಗ್ರಹಗಳ ರಾಶಿಚಕ್ರ ಬದಲಾವಣೆಯು ನಿಮಗೆ ಮಂಗಳಕರ ಮತ್ತು ಫಲಪ್ರದವಾಗಿರಲಿದೆ. ಈ ಸಮಯದಲ್ಲಿ ಉದ್ಯಮಿಗಳು ಹಣ ಗಳಿಸಬಹುದು. ಇದರೊಂದಿಗೆ ವಾಹನ ಅಥವಾ ಆಸ್ತಿಯನ್ನು ಖರೀದಿಸಲು ಮನಸ್ಸು ಮಾಡಬಹುದು. ಅದೇ ಸಮಯದಲ್ಲಿ, ನೀವು ಹಳೆಯ ಹೂಡಿಕೆಗಳಿಂದ ಲಾಭಗಳನ್ನು ಸಹ ಪಡೆಯುತ್ತೀರಿ. ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಲ್ಲದೆ, ಯಾವುದೋ ವಿಷಯದ ಬಗ್ಗೆ ಟೆನ್ಷನ್ ಆಗಿದ್ದರೆ, ಅದು ಕೂಡ ನಿವಾರಣೆಯಾಗಬಹುದು.

ಕನ್ಯಾ ರಾಶಿ:
ಫೆಬ್ರವರಿ ತಿಂಗಳು ನಿಮಗೆ ಆಹ್ಲಾದಕರ ಮತ್ತು ಪ್ರಯೋಜನಕಾರಿಯಾಗಿರುತ್ತದೆ. ಮುಖ್ಯವಾಗಿ ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಕೆಲಸ ಸಿಗುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ, ಬಾಕಿ ಉಳಿದಿರುವ ಕೆಲಸವು ಪೂರ್ಣಗೊಳ್ಳುತ್ತದೆ. ಇದರೊಂದಿಗೆ ಸಹೋದರ ಸಹೋದರಿಯರ ಸಹಕಾರ ದೊರೆಯುತ್ತದೆ. ಮತ್ತೊಂದೆಡೆ, ಉದ್ಯಮಿಗಳು, ಈ ಅವಧಿಯಲ್ಲಿ ಉತ್ತಮ ಬೇಡಿಕೆ ಪಡೆಯುವುದರಿಂದ ಅವರಿಗೆ ಲಾಭದ ಅವಕಾಶಗಳಿವೆ. ಜೊತೆಗೆ ಮನೆಯಲ್ಲಿ ಯಾವುದೇ ಧಾರ್ಮಿಕ ಅಥವಾ ಶುಭ ಕಾರ್ಯಕ್ರಮವೂ ನಡೆಯಬಹುದು.

ತುಲಾ ರಾಶಿ:
ಫೆಬ್ರವರಿ ತಿಂಗಳು ತುಲಾ ರಾಶಿಯ ಜನರಿಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ, ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳ ಆಸೆ ಈಡೇರಬಹುದು. ಉದ್ಯಮಿಗಳು ಕೆಲಸ-ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಬಹುದು. ಮತ್ತೊಂದೆಡೆ, ವಿವಾಹಿತರ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಬಲವಿರುತ್ತದೆ. ಈ ಸಮಯದಲ್ಲಿ, ನೀವು ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಪ್ರಯಾಣ ಮಾಡಲು ಯೋಜನೆಗಳನ್ನು ಮಾಡಬಹುದು.

ಧನು ರಾಶಿ:
ಫೆಬ್ರವರಿ ತಿಂಗಳಿನಲ್ಲಿ ಗ್ರಹಗಳ ರಾಶಿ ಬದಲಾವಣೆಯು ಧನು ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ. ಏಕೆಂದರೆ ಜನವರಿ 17 ರಿಂದ ನಿಮಗೆ ಶನಿ ಸಾಡೇ ಸತಿಯಿಂದ ಮುಕ್ತಿ ಸಿಕ್ಕಿದೆ. ಆದ್ದರಿಂದಲೇ ನಿಧಾನಗತಿಯಲ್ಲಿ ಸಾಗುತ್ತಿದ್ದ ನಿಮ್ಮ ಕೆಲಸ-ವ್ಯವಹಾರಗಳು ಈ ಸಮಯದಲ್ಲಿ ವೇಗ ಕಾಣುತ್ತವೆ. ಮತ್ತೊಂದೆಡೆ, ಉದ್ಯೋಗಿಗಳು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ ಮತ್ತು ಹೊಸ ಉದ್ಯೋಗವನ್ನು ಸಹ ಹುಡುಕಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ನ್ಯಾಯಾಲಯ-ಕೋರ್ಟ್ ವಿಷಯಗಳಲ್ಲಿ ಯಶಸ್ಸನ್ನು ಪಡೆಯಬಹುದು.



Click it and Unblock the Notifications
