Just In
Don't Miss
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Movies ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿಸೆಂಬರ್ನಲ್ಲಿ 7 ಗ್ರಹಗಳ ಸಂಚಾರ: ಈ 5 ರಾಶಿಯವರಿಗೆ ವಿಶೇಷ ಲಾಭ
ನವಗ್ರಹಗಳಲ್ಲಿ ಪ್ರತಿಯೊಂದು ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವಾಗ ಅದರ ಪ್ರಭಾವ ನಮ್ಮ ರಾಶಿಯ ಮೇಲಿರುತ್ತದೆ. ಜ್ಯೋತಿಷ್ಯ ಪ್ರಕಾರ ಈ ಗ್ರಹ ಸಂಚಾರ 12 ರಾಶಿಗಳ ಮೇಲೆ ಅನುಕೂಲಕರ ಹಾಗೂ ಅನಾನೂಕೂಲಕರತ ಪ್ರಭಾವ ಬೀರುವುದು.
ಕೆಲವೊಂದು ಗ್ರಹ ಸಂಚಾರ ಕೆಲ ರಾಶಿಗೆ ಅನುಕೂಲಕರವಾಗಿದ್ದರೆ ಇನ್ನು ಕೆಲ ರಾಶಿಗಳಿಗೆ ಅಷ್ಟು ಅನುಕೂಲಕರವಾಗಿರುವುದಿಲ್ಲ. ಅದಕ್ಕೂ ವೈದಿಕ ಶಾಸ್ತ್ರದಲ್ಲಿ ಪರಿಹಾರವಿರುತ್ತದೆ.
ಈ ಡಿಸೆಂಬರ್ ತಿಂಗಳಿನಲ್ಲಿ ವರ್ಷದ ಕೊನೆಯ ಸೂರ್ಯಗ್ರಹಣವಿದೆ. ಇದರ ಪ್ರಭಾವ ಕೂಡ ರಾಶಿ ಮೇಲಿರುತ್ತದೆ. ಈ ತಿಂಗಳಿನಲ್ಲಿ ಒಟ್ಟು 7 ಗ್ರಹ ಸಂಚಾರವಿದೆ. ಅವುಗಳಲ್ಲಿ ಎರಡು ಬಾರಿ ಗ್ರಹ ಸಂಚಾರ ಶುಕ್ರನ ಹಿಮ್ಮುಖ ಚಲನೆಯಿಂದಾಗಿ ಉಂಟಾಗಿದೆ. ಈ ತಿಂಗಳಿನಲ್ಲಿ ಯಾವಾಗ, ಯಾವೆಲ್ಲಾ ಗ್ರಹಗಳ ಸಂಚಾರವಿದೆ ಎಂದು ನೋಡೋಣ ಬನ್ನಿ:
ಈ ತಿಂಗಳಿನಲ್ಲಿ ಒಟ್ಟು 7 ಗ್ರಹ ಸಂಚಾರ
ವೃಶ್ಚಿಕದಲ್ಲಿ ಮಂಗಳನ ಸಂಚಾರ
ವರ್ಷದ ಕೊನೆಯ ಸೂರ್ಯಗ್ರಹಣವು ಡಿಸೆಂಬರ್ನಲ್ಲಿ ಮೊದಲು ಸಂಭವಿಸುತ್ತದೆ. ಈ ಗ್ರಹಣ ಡಿಸೆಂಬರ್ 04 ರಂದು ಸಂಭವಿಸಲಿದೆ. ಇದಾದ ನಂತರ ಡಿಸೆಂಬರ್ 05 ರಂದು ಎಲ್ಲಾ ಗ್ರಹಗಳ ಅಧಿಪತಿ ಮತ್ತು ಮಹಾಪರಾಕ್ರಮಿ ಎಂದು ಪರಿಗಣಿಸಲ್ಪಟ್ಟಿರುವ ಮಂಗಳವು ವೃಶ್ಚಿಕ ರಾಶಿಯಲ್ಲಿ ಸಾಗಲಿದೆ.
ಡಿಸೆಂಬರ್ 5, 2021 ಬೆಳಗ್ಗೆ 5:01ಕ್ಕೆ ಮಂಗಳ ವೃಶ್ಚಿಕ ರಾಶಿಗೆ ಪ್ರವೇಶಿಸುವುದು. ಜನವರಿ 2ರವರೆಗೆ ಇದೇ ರಾಶಿಯಲ್ಲಿ ಇರಲಿದೆ.
ಮಕರ ರಾಶಿಗೆ ಶುಕ್ರ ಸಂಚಾರ
ಮಂಗಳ ಸಂಕ್ರಮಣದ ನಂತರ ಡಿಸೆಂಬರ್ 8 ರಂದು ಸುಖ, ಸಮೃದ್ಧಿ, ತೇಜಸ್ಸು ನೀಡುವ ಶುಕ್ರ ಗ್ರಹ ಮಕರ ರಾಶಿಯಲ್ಲಿ ಸಾಗಲಿದೆ. ಮಂಗಳ ಮತ್ತು ಶುಕ್ರ ಗ್ರಹಗಳ ನಂತರ ಧನು ರಾಶಿಯಲ್ಲಿ ಸೂರ್ಯಗ್ರಹದ ಬದಲಾವಣೆ ಆಗುವುದರಿಂದ ಕರ್ಮಗಳು ಪ್ರಾರಂಭವಾಗುತ್ತವೆ.
ಡಿಸೆಂಬರ್ 8, 2021 ಮಧ್ಯಾಹ್ನ 12:56ಕ್ಕೆ ಮಕರ ರಾಶಿ ಪ್ರವೇಶಿಸುವುದು. ಆದರೆ ಶುಕ್ರನು ಈ ರಾಶಿಯಲ್ಲಿ ಡಿಸೆಂಬರ್ 30ರವರೆಗೆ ಇರಲಿದ್ದಾನೆ.
ಬುಧಾದಿತ್ಯ-ಯೋಗ
ಧನು ರಾಶಿಯಲ್ಲಿ ಬುಧ ಸಂಚಾರ
ಡಿಸೆಂಬರ್ 10ಕ್ಕೆ ಬುಧನು ಧನು ರಾಶಿ ಪ್ರವೇಶಿಸುವುದು. ಡಿಸೆಂಬರ್ 29ರವರೆಗೆ ಈ ರಾಶಿಯಲ್ಲಿ ಇರಲಿದೆ.
ಧನು ರಾಶಿಗೆ ಸೂರ್ಯ ಸಂಚಾರ
ಡಿಸೆಂಬರ್ 16, ಮುಂಜಾನೆ 3:28ಕ್ಕೆ ಸೂರ್ಯ ಧನು ರಾಶಿಗೆ ಸಂಚರಿಸುತ್ತಿದ್ದು ಜನವರಿ 14, 2022 ಮಧ್ಯಾಹ್ನ 2:29ರವರೆಗೆ ಇದೇ ರಾಶಿಯಲ್ಲಿ ಇರಲಿದೆ.
ಆದಿತ್ಯ ಬುಧನೊಂದಿಗೆ ಒಟ್ಟಾಗಿ ಬುಧಾದಿತ್ಯ ಯೋಗವನ್ನು ರಚಿಸುತ್ತಾರೆ.
ಮಕರದಲ್ಲಿ ಶುಕ್ರ ಹಿಮ್ಮುಖ ಚಲನೆ
ಡಿಸೆಂಬರ್ 19ರಿಂದ ಶುಕ್ರನು ಮಕರದಲ್ಲಿ ಹಿಮ್ಮುಖವಾಗಿ ಚಲಿಸುವುದು. ಇದರ ಪ್ರಭಾವ ಎಲ್ಲಾ ರಾಶಿಗಳ ಮೇಲಿರುವುದು.
ಮಕರ ರಾಶಿಗೆ ಬುಧ ಸಂಚಾರ
ಡಿಸೆಂಬರ್ 29 ರಂದು, ಬುಧವು ಮಕರ ಸಂಕ್ರಾಂತಿಯಲ್ಲಿ ಸಾಗುತ್ತದೆ
ಡಿಸೆಂಬರ್ 29, ಬೆಳಗ್ಗೆ 11.15ಕ್ಕೆ ಬುಧನು ಮಕರ ರಾಶಿ ಪ್ರವೇಶಿಸುವುದು, ಇದರ ಪ್ರಭಾವ ಹೊಸ ವರ್ಷದಲ್ಲಿ ಇರಲಿದೆ.
ಧನುರಾಶಿಯಲ್ಲಿ ಶುಕ್ರನ ಹಿಮ್ಮುಖ ಚಲನೆ
ತಿಂಗಳ ಕೊನೆಯಲ್ಲಿ ಅಂದರೆ ಡಿಸೆಂಬರ್ 30 ರಂದು, ಶುಕ್ರವು ಧನು ರಾಶಿಯಲ್ಲಿ ಹಿಮ್ಮುಖವಾಗಲಿದೆ.
ಧನುರಾಶಿಯಲ್ಲಿ ಶುಕ್ರನು ಡಿಸೆಂಬರ್ 30 ಬೆಳಗ್ಗೆ 9:57ಕ್ಕೆ ಹಿಮ್ಮುಖವಾಗಿ ಚಲಿಸಲಿದೆ.
ಡಿಸೆಂಬರ್ ತಿಂಗಳಲ್ಲಿ ಐದು ರಾಶಿಯವರು ಅದೃಷ್ಟಶಾಲಿಯಾಗಿರುತ್ತವೆ
ಜ್ಯೋತಿ ಲೆಕ್ಕಾಚಾರದ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ ಅನೇಕ ಗ್ರಹಗಳ ಸಂಕ್ರಮಣದಿಂದಾಗಿ ಎಲ್ಲಾ 12 ರಾಶಿಗಳಲ್ಲಿರುವ ಐದು ರಾಶಿಯವರಿಗೆ ವಿಶೇಷ ಲಾಭಗಳ ಸೂಚನೆಗಳಿವೆ. ಮೇಷ, ಮಿಥುನ, ಸಿಂಹ, ಧನು ರಾಶಿ ಮತ್ತು ಕುಂಭ ರಾಶಿಯವರಿಗೆ ಈ ತಿಂಗಳು ಅಗಾಧವಾದ ಲಾಭಗಳು ಸಿಗಲಿವೆ.