Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
Pink Super Moon 2020 : ಏಪ್ರಿಲ್ 7ಕ್ಕೆ ಗೋಚರಿಸಲಿರುವ ಹುಣ್ಣಿಮೆ ಚಂದ್ರನ ವಿಶೇಷವೇನು ಗೊತ್ತೇ?
ಚಂದ್ರ ಮಕ್ಕಳಿಗೆ ಮುದ್ದಿನ ಚಂದಮಾಮ, ಕವಿಗಳಿಗೆ ಪ್ರಿಯೆತಮೆ, ವಿಜ್ಞಾನಿಗಳಿಗೆ ಕೌತುಕದ ಲೋಕ ಹೀಗೆ ಪ್ರತಿಯೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸುವ ಚಂದ್ರ ಇಂದು ಮತ್ತಷ್ಟು ಸುಂದರವಾಗಿ ಕಾಣಲಿದ್ದಾನೆ. ಖಗೋಳಸಾಸ್ತ್ರದಲ್ಲಿ ಈ ಪ್ರಕ್ರಿಯೆಗೆ ಸೂಪರ್‌ಮೂನ್ ಎಂದು ಕರೆಯಲಾಗುತ್ತದೆ. ಈ ಬಾರಿಯ ಹುಣ್ಣಿಮೆಗೆ ಪಿಂಕ್ ಸೂಪರ್‌ಮೂನ್ ಎಂದು ಕರೆಯಲಾಗಿದೆ.
ಚಂದ್ರ ಮಕ್ಕಳಿಗೆ ಮುದ್ದಿನ ಚಂದಮಾಮ, ಕವಿಗಳಿಗೆ ಪ್ರಿಯೆತಮೆ, ವಿಜ್ಞಾನಿಗಳಿಗೆ ಕೌತುಕದ ಲೋಕ ಹೀಗೆ ಪ್ರತಿಯೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸುವ ಚಂದ್ರ ಇಂದು ಮತ್ತಷ್ಟು ಸುಂದರವಾಗಿ ಕಾಣಲಿದ್ದಾನೆ. ಖಗೋಳಸಾಸ್ತ್ರದಲ್ಲಿ ಈ ಪ್ರಕ್ರಿಯೆಗೆ ಸೂಪರ್‌ಮೂನ್ ಎಂದು ಕರೆಯಲಾಗುತ್ತದೆ. ಈ ಬಾರಿಯ ಹುಣ್ಣಿಮೆಗೆ ಪಿಂಕ್ ಸೂಪರ್‌ಮೂನ್ ಎಂದು ಕರೆಯಲಾಗಿದೆ.
ಖಗೋಳಸಾಸ್ತ್ರದ ಪ್ರಕಾರ ಏಪ್ರಿಲ್ 2.08pm. EDT ಸಮಯಕ್ಕೆ ಭೂಮಿ ಸಮೀಪಕ್ಕೆ ಬರುತ್ತಾನೆ, ಈ ಸಮಯದಲ್ಲಿ ಸೂರ್ಯನ ಬೆಳಕು ಇರುವುದರಿಂದ ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ. ಆದರೆ ರಾತ್ರಿ ನೋಡಿದರೆ ಸ್ವಲ್ಪ ದೊಡ್ಡ ಚಂದ್ರ ನಿಮ್ಮ ಕಣ್ಣಿಗೆ ಗೋಚರಿಸುತ್ತಾನೆ. ಆದರೆ ಇಂದು ರಾತ್ರಿ ನೋಡುವುದಕ್ಕಿಂತ ನಾಳೆ ನೋಡಿದರೆ ಮಂಗಳವಾರಕ್ಕಿಂತ, ಬುಧವಾರ ಚಂದ್ರ ಸ್ವಲ್ಪ ದೊಡ್ಡದಾಗಿಯೇ ನಿಮ್ಮ ಕಣ್ಣಿಗೆ ಗೋಚರಿಸುತ್ತಾನೆ. ಸೋಮವಾರ ಚಿಕ್ಕದಾಗಿ ಚಂದ್ರನ ಎಡಭಾಗದಲ್ಲಿ ಗೋಚರಿಸಿದ ಕಪ್ಪು ಗೆರೆಗಳು ಬುಧವಾರ ಚಂದ್ರನ ಬಲಭಾಗದಲ್ಲಿ ಗೋಚರಿಸುವುದು, ಸೂಕ್ಷ್ಮವಾಗಿ ಗಮನಿಸಿ.
1948ರಲ್ಲಿ ಈ ರೀತಿಯ ಹುಣ್ಣಿಮೆ ಕಂಡು ಬಂದಿತ್ತು. ಅದಾಗಿ 68 ವರ್ಷಗಳ ಬಳಿಕ ಈ ರೀತಿಯ ಹುಣ್ಣಿಮೆ ಇಂದು ಉಂಟಾಗಲಿದೆ. ಈ ಸೂಪರ್‌ನ ವಿಶೇಷತೆಗಳೇನು ಎಂದು ನೋಡೋಣ ಬನ್ನಿ:

2020ರಲ್ಲಿ ಚಂದ್ರ ತುಂಬಾ ದೊಡ್ಡದಾಗಿ ಕಾಣುವ ಹುಣ್ಣಿಮೆ ಇದು
ಏಪ್ರಿಲ್ 7ರಂದು ಸಮಯಏಪ್ರಿಲ್ 2.08pm. EDT ಸಮಯದಲ್ಲಿ ಚಂದ್ರ ಭೂಮಿಯ ತುಂಬಾ ಸಮೀಪ ಬರಲಿದ್ದಾನೆ. ಭೂಮಿಯಿಂದ ಚಂದ್ರನಿಗಿರುವ ಅಂತರ 221, 772 ಅಂದರೆ 356, 907 ಕಿಮೀ ದೂರದಲ್ಲಿ ಚಂದ್ರ ಗೋಚರಿಸಲಿದ್ದಾನೆ. ಇದಾಗಿ 8 ಗಂಟೆ, 35 ನಿಮಿಷಕ್ಕೆ ಚಂದ್ರ ಮರಳಿದ್ದಾನೆ.

ಮಂಗಳವಾರಕ್ಕಿಂತ ಬುಧವಾರ ಅತ್ಯಾಕರ್ಷಕವಾಗಿ ಕಾಣಲಿದ್ದಾನೆ
ಖಗೋಳಸಾಸ್ತ್ರದ ಪ್ರಕಾರ ಏಪ್ರಿಲ್ 11:38 pm ಸಮಯಕ್ಕೆ ಭೂಮಿ ಸಮೀಪಕ್ಕೆ ಬರುತ್ತಾನೆ, ಈ ಸಮಯದಲ್ಲಿ ಸೂರ್ಯನ ಬೆಳಕು ಇರುವುದರಿಂದ ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ. ಆದರೆ ರಾತ್ರಿ ನೋಡಿದರೆ ಸ್ವಲ್ಪ ದೊಡ್ಡ ಚಂದ್ರ ನಿಮ್ಮ ಕಣ್ಣಿಗೆ ಗೋಚರಿಸುತ್ತಾನೆ. ಆದರೆ ಇಂದು ರಾತ್ರಿ ನೋಡುವುದಕ್ಕಿಂತ ನಾಳೆ ನೋಡಿದರೆ ಮಂಗಳವಾರಕ್ಕಿಂತ, ಬುಧವಾರ ಚಂದ್ರ ಸ್ವಲ್ಪ ದೊಡ್ಡದಾಗಿಯೇ ನಿಮ್ಮ ಕಣ್ಣಿಗೆ ಗೋಚರಿಸುತ್ತಾನೆ. ಸೋಮವಾರ ಚಿಕ್ಕದಾಗಿ ಚಂದ್ರನ ಎಡಭಾಗದಲ್ಲಿ ಗೋಚರಿಸಿದ ಕಪ್ಪು ಗೆರೆಗಳು ಬುಧವಾರ ಚಂದ್ರನ ಬಲಭಾಗದಲ್ಲಿ ಗೋಚರಿಸುವುದು, ಸೂಕ್ಷ್ಮವಾಗಿ ಗಮನಿಸಿ.

ಪ್ರತಿಯೊಬ್ಬರು ರಿಲ್ಯಾಕ್ಸ್ ಆಗಿ ಚಂದ್ರನ ಸವಿಯಬಹುದು
ಇದೀಗ ಲಾಕ್‌ಡೌನ್ ಆಗಿರುವುದರಿಂದ ಕೆಲಸ, ಜಂಜಾಟವಿಲ್ಲದೆ ಮನೆಯ ಟೆರೇಸ್ ಮೇಲೆ ಅಥವಾ ಅಂಗಳದಲ್ಲಿ ನಿಂತು ಚಂದ್ರನನ್ನು ವೀಕ್ಷಿಸಿದರೆ ಮನಸ್ಸಿಗೆ ಮುದ ಉಂಟಾಗುವುದು. ಒಂದು ನಿಮಿಷ ನೆನಪಿಟ್ಟುಕೊಳ್ಳಿ, ಫ್ಲ್ಯಾಟ್ ಅಥವಾ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವವರು ಸಾಮಾಜಿಕ ಅಂತರ ಕಾಯ್ದುಕೊಂಡು ಸೂಪರ್ ಮೂನ್ ವೀಕ್ಷಿಸಿ.

ಈ ಅವಕಾಶ ಮಿಸ್ ಆದರೆ ಇನ್ಯಾವಗ ನೋಡಬಹುದು:
ಇಷ್ಟು ದೊಡ್ಡದಾದ ಚಂದ್ರನನ್ನು ನೋಡಲು ಮಿಸ್ ಮಾಡಿದರೆ ನವೆಂಬರ್ 25, 2034ರವರೆಗೆ ಕಾಯಬೇಕು.

ಪಿಂಕ್ ಸೂಪರ್‌ಮೂನ್ ಎಂದರೆ ಚಂದ್ರನ ಬಣ್ಣ ಬದಲಾಗುವುದೇ?
ಇಲ್ಲಾ, ಇಂದು ಕಾಣುವ ಚಂದ್ರನ ಬಣ್ಣದಲ್ಲಿ ಯಾವುದೇ ವ್ಯತ್ಯಾಸ ಗೋಚರಿಸುವುದಿಲ್ಲ. ಉತ್ತರ ಅಮೆರಿಕದ ಪೂರ್ವಭಾಗದಲ್ಲಿ ಕಾಣಿಸಿಕೊಳ್ಳುವ ಪಿಂಕ್ ಹೂ(Phlox subulata) ನಿಂದ ಚಂದ್ರನಿಗೆ ಈ ಹೆಸರು ಬಂದಿದೆ. ಪ್ರಾದೇಶಿಕ ಹಾಗೂ ವಿವಿಧ ಋತುಗಳ ಆಧಾರದ ಮೇಲೆ ಬೇರೆ ಬೇರೆ ಹೆಸರಿನಲ್ಲಿ ದೊಡ್ಡ ಗಾತ್ರದ ಚಂದ್ರನನ್ನು ಕರೆಯುವುದು ರೂಢಿಯಲ್ಲಿದೆ.



Click it and Unblock the Notifications
