Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಜುಲೈನಲ್ಲಿ ಹುಟ್ಟಿದವರಲ್ಲಿ ಈ ಗುಣಗಳು ಇರುತ್ತವೆಯಂತೆ
ಮನುಷ್ಯರ ಸ್ವಭಾವ ಒಬ್ಬರಿಂದ ಮತ್ತೊಬ್ಬರಿಗೆ ತುಂಬಾನೇ ಭಿನ್ನವಾಗಿರುತ್ತದೆ. ಕೆಲವರಲ್ಲಿ ಸಂಕೋಚ, ಇನ್ನೂ ಕೆಲವರಿಗೆ ತುಂಬಾ ಧೈರ್ಯ, ಕೆಲವರಿಗೆ ದುರ್ವಾಸ ಮುನಿಗಳಂತೆ ಬೇಗನೆ ಕೋಪ ಬಂದ್ರೆ ಇನ್ನು ಕೆಲವರಿಗೆ ಭೂಮಿಯಷ್ಟೇ ತಾಳ್ಮೆ... ಹೀಗೆ ಮನುಷ್ಯನ ಸ್ವಭಾವಗಳು ಭಿನ್ನವಾಗಿರುತ್ತದೆ. ಆದರೆ ಜ್ಯೋತಿಷ್ಯವು ರಾಶಿಗೆ ತಕ್ಕಂತೆ, ಜನಿಸಿದ ತಿಂಗಳಿಗೆ ತಕ್ಕಂತೆ ವ್ಯಕ್ತಿಗಳ ಸ್ವಭಾವದಲ್ಲಿ ವ್ಯತ್ಯಾಸವಿರುತ್ತದೆ ಎಂದು ಹೇಳುತ್ತದೆ.

ಈಗ ಜುಲೈ ಪ್ರಾರಂಭವಾಗಿದೆ. ಜುಲೈನಲ್ಲಿ ಹುಟ್ಟಿದವರು ಕೆಲವೊಂದು ಪ್ರತ್ಯೇಕ ಸ್ವಭಾವಗಳನ್ನು ಹೊಂದಿರುತ್ತಾರಂತೆ, ಬನ್ನಿ ಅವರ ಆ ಸ್ವಭಾಗಳು, ಅವರಲ್ಲಿರುವ ಆಸಕ್ತಿಗಳೇನು ಎಂದು ತಿಳಿಯೋಣ:

ಸ್ವಭಾವ:
ಜುಲೈನಲ್ಲಿ ಹುಟ್ಟಿದವರು ಸ್ವಲ್ಪ ಮೂಡಿಯಾಗಿರುತ್ತಾರೆ. ಕೆಲವು ಸೆಕೆಂಡ್ ಸಾಕು ಅವರ ಮೂಡ್ ಬದಲಾಗಲು. ಈಗ ಇದ್ದಂತೆ ಮತ್ತೊಂದು ಕ್ಷಣದಲ್ಲಿ ಇರುವುದಿಲ್ಲ. ತುಂಬಾ ಖುಷಿಯಲ್ಲಿರುತ್ತಾರೆ, ಇದ್ದಕ್ಕಿದ್ದಂತೆ ಯಾವುದೋ ಚಿಕ್ಕ ವಿಷಯಕ್ಕೆ ಕೋಪ ಮಾಡಿಕೊಳ್ಳುತ್ತಾರೆ, ಜೊತೆಯಲ್ಲಿದ್ದವರಿಗೆ ಅವರನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ..

ಆಸಕ್ತಿ
ಜುಲೈನಲ್ಲಿ ಜನಿಸಿದವರು ಪತ್ರಿಕೋದ್ಯಮ, ಸಿನಿಮಾ, ಸ್ಪೋರ್ಟ್ಸ್ ಇವುಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ, ಅವರು ಇದೇ ವೃತ್ತಿಯಲ್ಲಿದ್ದರೆ ತುಂಬಾ ಯಶಸ್ಸು ಗಳಿಸುತ್ತಾರೆ. ಇನ್ನು ಉದ್ಯಮಿಯಾಗಿದ್ದರೆ ಅದನ್ನು ಮತ್ತಷ್ಟು ಬೆಳೆಸುತ್ತೀರಿ. ಗುರಿ ಮುಟ್ಟುವವರೆಗೆ ವಿಶ್ರಾಂತಿ ತೆಗೆಯುವ ಸ್ವಭಾವದವರಲ್ಲ.

ಒಳ್ಳೆಯ ಮಾತುಗಾರರು
ಜುಲೈನಲ್ಲಿ ಹುಟ್ಟಿದವರು ಒಳ್ಳೆಯ ಮಾತುಗಾರರಾಗಿರುತ್ತಾರೆ. ತಮ್ಮ ಮಾತಿನ ಮೂಲಕವೇ ಮತ್ತೊಬ್ಬರನ್ನು ಸೆಳೆಯುವ ಶಕ್ತಿ ಇರುತ್ತದೆ. ಕೆಲವೊಮ್ಮೆ ಜನರು ನಿಮ್ಮಿಂದ ಪ್ರಯೋಜ ಪಡೆದು ನಿಮಗೇ ದ್ರೋಹ ಬಗೆಯಬಹುದು.

ಸಹಾಯ ಮಾಡುವ ಗುಣದವರು
ಈ ತಿಂಗಳಿನಲ್ಲಿ ಹುಟ್ಟಿದವರು ಯಾರೇ ಕಷ್ಟ ಎಂದರೂ ಕೂಡಲೇ ಸಹಾಯಕ್ಕೆ ಮುಂದಾಗುತ್ತಾರೆ. ಇವರ ಈ ಗುಣದಿಂದಲೇ ಇತರರಿಗಿಂತ ಪ್ರತ್ಯೇಕವಾಗಿ ಕಾಣುತ್ತಾರೆ.

ಪ್ರತಿಭಾವಂತರು
ಜುಲೈನಲ್ಲಿ ಜನಿಸಿದವರು ಒಳ್ಳೆಯ ಪ್ರತಿಭಾವಂತರು, ತಮಗೆ ವಹಿಸಿದ ಕೆಲಸವನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಾರೆ. ಕಷ್ಟದ ಕೆಲಸವನ್ನೂ ಕೂಡ ಸರಳವಾಗಿ ಮಾಡಿ ಮುಗಿಸುತ್ತಾರೆ. ಅಲ್ಲದೆ ಕೆಲಸ-ಕಾರ್ಯಗಳನ್ನು ಬೇಗನೇ ಮಾಡಿ ಮುಗಿಸಬೇಕೆಂದು ಬಯಸುತ್ತಾರೆ.



Click it and Unblock the Notifications
