For Quick Alerts
ALLOW NOTIFICATIONS  
For Daily Alerts

Numerology Today, 21 Dec: ಸಂಖ್ಯಾಶಾಸ್ತ್ರ ಭವಿಷ್ಯ: ಈ ಅದೃಷ್ಟ ಸಂಖ್ಯೆಯವರಿಗೆ ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯುವಿರಿ

|

ಜಾತಕದಲ್ಲಿ ಗ್ರಹಗಳ ಸ್ಥಾನವು ವ್ಯಕ್ತಿಯ ಬಗ್ಗೆ ಹೇಳುವಂತೆ, ಸಂಖ್ಯಾಶಾಸ್ತ್ರದಲ್ಲಿ ವ್ಯಕ್ತಿಯ ಸಂಖ್ಯೆಯು ಅವರ ಸಂಪೂರ್ಣ ಭವಿಷ್ಯವನ್ನು ಹೇಳುತ್ತದೆ. ಇದರ ಸಹಾಯದಿಂದ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು. ನಮ್ಮ ಇಂದಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ?

123

ನಮ್ಮ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ?
ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಅದೃಷ್ಟ ಸಂಖ್ಯೆಯನ್ನು ಪತ್ತೆ ಮಾಡುವ ವಿಧಾನ: ನಾವು ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ಒಟ್ಟಾಗಿ ಕೂಡಿಸಬೇಕು, ಕೂಡಿಸಿದ ನಂತರ ಮತ್ತೆ ಎರಡು ಅಂಕಿ ಬಂದರೆ ಅದನ್ನೂ ಕೂಡಿಸಿದರೆ ಒಂದು ಅಂಕಿ ಆಗುತ್ತದೆ ಅದೇ ನಮ್ಮ ಅದೃಷ್ಟ ಸಂಖ್ಯೆ.

ಡಿಸೆಂಬರ್‌ 2022ನೇ ಸಾಲಿನ 21ನೇ ತಾರೀಕಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ ಮುಂದೆ ನೋಡೋಣ:

ಅದೃಷ್ಟ ಸಂಖ್ಯೆ 1

ಅದೃಷ್ಟ ಸಂಖ್ಯೆ 1

ಮನೆ ಅಥವಾ ಕಾರಿನ ರಿಪೇರಿ ಅಥವಾ ನವೀಕರಣವು ನಿಮಗೆ ಸಮಸ್ಯೆ ಉಂಟುಮಾಡಬಹುದು. ಕೌಟುಂಬಿಕ ಉತ್ತಮ ಸಮಯ ಕಳೆಯುವಿರಿ, ಹೆತ್ತವರೊಂದಿಗೆ ಮತ್ತು ಹಿಯರೊಂದಿಗಿನ ಸಂಬಂಧದಲ್ಲಿ ತೃಪ್ತಿಯನ್ನು ಅನುಭವಿಸುವಿರಿ. ನೀವು ಪಡೆಯುವ ಜ್ಞಾನವು ಮುಂದೆ ಯೋಜಿಸಲು ನಿಮಗೆ ಸಹಾಯ ಮಾಡುತ್ತದೆ.

ಅದೃಷ್ಟ ಸಂಖ್ಯೆ- 19

ಅದೃಷ್ಟದ ಬಣ್ಣ- ನೇರಳೆ

ಅದೃಷ್ಟ ಸಂಖ್ಯೆ 2

ಅದೃಷ್ಟ ಸಂಖ್ಯೆ 2

ನಿಮ್ಮ ಉದ್ದೇಶದ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ ಮತ್ತು ಕಠಿಣ ಪರಿಶ್ರಮಕ್ಕೆ ಫಲ ಖಂಡಿತ ಸಿಗುತ್ತದೆ. ಆದರೆ ಶ್ರಮ ಅಗತ್ಯ ಎಂದು ನಿಮಗೆ ತಿಳಿದಿದೆ. ಮನಸ್ಸು ಗೊಂದಲಕ್ಕೊಳಗಾಗಬಹುದು ಆದ್ದರಿಂದ ನಿಮ್ಮ ಗಮನವನ್ನು ಗುರಿಯ ಮೇಲೆ ಮಾತ್ರ ಇರಿಸಿ.

ಅದೃಷ್ಟ ಸಂಖ್ಯೆ- 21

ಅದೃಷ್ಟ ಬಣ್ಣ - ಕೆಂಪು

ಅದೃಷ್ಟ ಸಂಖ್ಯೆ 3

ಅದೃಷ್ಟ ಸಂಖ್ಯೆ 3

ನೀವು ಪ್ರಯಾಣಿಸಲು ಅಥವಾ ವಿದೇಶಕ್ಕೆ ಹೋಗುವ ಅವಕಾಶ ಪಡೆಯಬಹುದು. ಪ್ರಯಾಣದ ವೇಳೆ ಗಾಯ ಅಥವಾ ಅಪಘಾತವನ್ನು ತಪ್ಪಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ನಿಮ್ಮ ನಂಬಿಕೆಗಳನ್ನು ಮರುಪರಿಶೀಲಿಸಲು ಮತ್ತು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಸಂಶೋಧನೆ ಮಾಡಲು ಇದು ಉತ್ತಮ ಸಮಯ.

ಅದೃಷ್ಟ ಸಂಖ್ಯೆ - 15

ಅದೃಷ್ಟ ಬಣ್ಣ - ಗುಲಾಬಿ

ಅದೃಷ್ಟ ಸಂಖ್ಯೆ 4

ಅದೃಷ್ಟ ಸಂಖ್ಯೆ 4

ಇದು ನಿಮಗೆ ಅದೃಷ್ಟದ ಸಮಯ ಆದ್ದರಿಂದ ಈ ಕ್ಷಣವನ್ನು ಆನಂದಿಸಿ. ಸಹಕಾರ ಅಥವಾ ಸಂಬಂಧಗಳ ಕ್ಷೇತ್ರಗಳಲ್ಲಿ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿನ ವಿವಾದಗಳಿಂದ ನಿಮ್ಮ ಚಿಂತೆಗೆ ಕಾರಣವಾಗಬಹುದು. ಕಷ್ಟಪಟ್ಟು ಕೆಲಸ ಮಾಡಿ ಮತ್ತು ಅಡೆತಡೆಗಳನ್ನು ನಿವಾರಿಸಿಕೊಳ್ಳಿ.

ಅದೃಷ್ಟ ಸಂಖ್ಯೆ - 10

ಅದೃಷ್ಟದ ಬಣ್ಣ-ಬೂದು

ಅದೃಷ್ಟ ಸಂಖ್ಯೆ 5

ಅದೃಷ್ಟ ಸಂಖ್ಯೆ 5

ಯಾವುದೆ ಕೆಲಸ ಮಾಡಲು ನಿಮ್ಮ ಕಠಿಣ ಮತ್ತು ಬಲವಂತದ ವಿಧಾನಕ್ಕಿಂತ ಚಾತುರ್ಯವನ್ನು ಬಳಸಿ. ನೀವು ಕೆಲವು ಅನಿರೀಕ್ಷಿತ ಹಣದ ಮೂಲವನ್ನು ಇಂದು ಪಡೆಯಲಿದ್ದೀರಿ. ಕೆಟ್ಟ ಅಭ್ಯಾಸಗಳು ಮತ್ತು ಅಪಾಯಕಾರಿ ನಡವಳಿಕೆಯನ್ನು ತಪ್ಪಿಸಿ, ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಬಳಸಿ.

ಅದೃಷ್ಟ ಸಂಖ್ಯೆ- 26

ಅದೃಷ್ಟ ಬಣ್ಣ - ನೀಲಿ

ಅದೃಷ್ಟ ಸಂಖ್ಯೆ 6

ಅದೃಷ್ಟ ಸಂಖ್ಯೆ 6

ನಿಮ್ಮ ತಂದೆ ಅಥವಾ ಕುಟುಂಬದವರು ಯಾರಾದರೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅವರ ಜತೆ ಇದ್ದು ಕಾಳಜಿವಹಿಸಿ. ಕೆಲವು ರಹಸ್ಯಗಳನ್ನು ಸಹ ಬಹಿರಂಗಪಡಿಸಬಹುದು. ಕಠಿಣ ಪರಿಶ್ರಮ ಮತ್ತು ಬಲವಾದ ನಂಬಿಕೆ ನಿಮ್ಮ ಯಶಸ್ಸಿನ ಕೀಲಿಯಾಗಿದೆ. ನಿಮ್ಮ ಆರೋಗ್ಯ ಮತ್ತು ಹಣಕಾಸಿನ ಬಗ್ಗೆ ಕಾಳಜಿ ವಹಿಸಿ, ಅಗತ್ಯವಿದ್ದರೆ ಕುಟುಂಬದವರ ಸಲಹೆ ತೆಗೆದುಕೊಳ್ಳಲು ಮರೆಯಬೇಡಿ.

ಅದೃಷ್ಟ ಸಂಖ್ಯೆ - 11

ಅದೃಷ್ಟದ ಬಣ್ಣ- ಕಂದು

ಅದೃಷ್ಟ ಸಂಖ್ಯೆ 7

ಅದೃಷ್ಟ ಸಂಖ್ಯೆ 7

ಸಂಬಂಧಗಳು, ಪಾಲುದಾರಿಕೆಗಳು ಮತ್ತು ವ್ಯಾಪಾರ ವ್ಯವಹಾರಗಳಿಗೆ ಇಂದು ಉತ್ತಮ ದಿನವಾಗಿದೆ. ಹೊಸ ಮತ್ತು ವಿಭಿನ್ನವಾದದ್ದನ್ನು ಪ್ರಯತ್ನಿಸುತ್ತಿರಿ ಮತ್ತು ಪ್ರಯತ್ನಗಳನ್ನು ಮಾಡಲು ಹಿಂಜರಿಯಬೇಡಿ, ಏಕೆಂದರೆ ಕಲಿಕೆಯಿಂದ ಮಾತ್ರ ನೀವು ಪರಿಪೂರ್ಣರಾಗುತ್ತೀರಿ. ಸ್ವಯಂಸೇವಕರಾಗಿ ಅಥವಾ ಇತರರಿಗೆ ಸೇವೆ ಸಲ್ಲಿಸುವ ಸುವರ್ಣಾವಕಾಶ ನಿಮಗೆ ಸಿಗಲಿದೆ.

ಅದೃಷ್ಟ ಸಂಖ್ಯೆ- 31

ಅದೃಷ್ಟದ ಬಣ್ಣ - ಕೇಸರಿ

ಅದೃಷ್ಟ ಸಂಖ್ಯೆ 8

ಅದೃಷ್ಟ ಸಂಖ್ಯೆ 8

ಸಂಬಂಧಿಕರು ಅಥವಾ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ನಿಮ್ಮನ್ನು ಕಾಡಬಹುದು. ಹಣಕಾಸಿನ ನಷ್ಟದ ಬಗ್ಗೆಯೂ ನೀವು ಚಿಂತಿತರಾಗಬಹುದು. ಭವಿಷ್ಯದ ಯೋಜನೆಗಳನ್ನು ಇಂದೇ ಮಾಡಿ. ಭವಿಷ್ಯದಲ್ಲಿ ಸಮೃದ್ಧಿ ಮತ್ತು ಶಾಂತಿಗಾಗಿ ಕಾನೂನು ಅಥವಾ ವ್ಯಾಪಾರ ವ್ಯವಸ್ಥೆಗಳನ್ನು ಮುಂಚಿತವಾಗಿಯೇ ಮಾಡಿ.

ಅದೃಷ್ಟ ಸಂಖ್ಯೆ-19

ಅದೃಷ್ಟ ಬಣ್ಣ - ಕಿತ್ತಳೆ

ಅದೃಷ್ಟ ಸಂಖ್ಯೆ 9

ಅದೃಷ್ಟ ಸಂಖ್ಯೆ 9

ಇಂದಿನ ದಿನವು ಶಾಂತಿಯುತವಾಗಿ ಪ್ರಾರಂಭವಾಗಲಿದೆ. ರಹಸ್ಯ ಸಭೆಗಳು, ಅಪರಿಚಿತ ಮೈತ್ರಿಗಳು ಮತ್ತು ಶಾಂತಿಯುತ ಮಾತುಕತೆಗಳ ಸಾಧ್ಯತೆಯೂ ಇದೆ. ಚಟುವಟಿಕೆಗಳು ಮತ್ತು ಸಾಮಾಜಿಕತೆಯ ಹೊರತಾಗಿಯೂ ನಿಮ್ಮ ಮನಸ್ಥಿತಿ ಖಿನ್ನತೆಗೆ ಒಳಗಾಗಬಹುದು. ನಿಧಾನವಾಗಿ ಚಾಲನೆ ಮಾಡಿ ಮತ್ತು ಸಾಧ್ಯವಾದರೆ ಸಾರ್ವಜನಿಕ ಸಾರಿಗೆಯನ್ನು ಬಳಸಿ.

ಅದೃಷ್ಟ ಸಂಖ್ಯೆ- 29

ಅದೃಷ್ಟ ಬಣ್ಣ - ಬಿಳಿ

English summary

Numerology Today, 21 December, 2022: Check Numerology Predictions for wednesday in Kannada

Numerology Today, December 21, 2022 Predictions in Kannada: Check Out What is the Numerology predictions for Number one, two, three, four, five, six, seven, eight and nine. Read more.
X
Desktop Bottom Promotion