Latest Updates
-
ಲಕ್ಷ್ಮಿ ಪೂಜೆಯ ಮುಹೂರ್ತದ ಗೊಂದಲ: ಕುಟುಂಬದ ಶಾಂತಿಗಾಗಿ ಇಲ್ಲಿದೆ ಸರಳ ಪರಿಹಾರಗಳು -
ದೀಪಾವಳಿ ಹಬ್ಬದ ಸಂಭ್ರಮ: ಡಯಾಬಿಟಿಸ್ ಇದ್ದರೂ ಸಿಹಿ ಸವಿಯಲು ಈ ಟಿಪ್ಸ್ ಫಾಲೋ ಮಾಡಿ -
ಅಯೋಧ್ಯೆ ದೀಪೋತ್ಸವ 2026: 36 ಲಕ್ಷ ದೀಪಗಳ ಬೆಳಕಿನ ವೈಭವ, ಸಂಚಾರ ಮಾರ್ಗ ಮತ್ತು ವೀಕ್ಷಣೆಯ ಟಿಪ್ಸ್ -
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ!
Numerology Today, 15 Dec: ಸಂಖ್ಯಾಶಾಸ್ತ್ರ ಭವಿಷ್ಯ: ಈ ಅದೃಷ್ಟ ಸಂಖ್ಯೆಯವರು ವ್ಯಾಪಾರಿಗಳಿಗೆ ಲಾಭದ ದಿನ
ಸಂಖ್ಯಾಶಾಸ್ತ್ರ ನಮ್ಮ ಬದುಕಿನ ಭವಿಷ್ಯವನ್ನು ಹೇಳುವ ಕನ್ನಡಿ. ಸಂಖ್ಯಾಶಾಸ್ತ್ರ ಸಹ ಜ್ಯೋತಿಷ್ಯದ ಇನ್ನೊಂದು ಭಾಗವೆಂದು ಪರಿಗಣಿಸಲಾಗುತ್ತದೆ. ಇದರ ಸಹಾಯದಿಂದ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು. ನಮ್ಮ ಇಂದಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ?

ನಮ್ಮ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ?
ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಅದೃಷ್ಟ ಸಂಖ್ಯೆಯನ್ನು ಪತ್ತೆ ಮಾಡುವ ವಿಧಾನ: ನಾವು ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ಒಟ್ಟಾಗಿ ಕೂಡಿಸಬೇಕು, ಕೂಡಿಸಿದ ನಂತರ ಮತ್ತೆ ಎರಡು ಅಂಕಿ ಬಂದರೆ ಅದನ್ನೂ ಕೂಡಿಸಿದರೆ ಒಂದು ಅಂಕಿ ಆಗುತ್ತದೆ ಅದೇ ನಮ್ಮ ಅದೃಷ್ಟ ಸಂಖ್ಯೆ.
ಡಿಸೆಂಬರ್ 2022ನೇ ಸಾಲಿನ 15ನೇ ತಾರೀಕಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ ಮುಂದೆ ನೋಡೋಣ:

ಅದೃಷ್ಟ ಸಂಖ್ಯೆ 1
ಸಂಖ್ಯೆ 1 ಮತ್ತು 5 ಇಂದಿನ ನಿಮ್ಮ ಅದೃಷ್ಟ ಸಂಖ್ಯೆಗಳು. ಈ ದಿನ ನಿಮಗೆ ಸ್ವಲ್ಪ ಹೋರಾಟ ಇರುತ್ತದೆ. ಇಂದು ಕೆಲವು ವಿಶೇಷ ಕೆಲಸಗಳಲ್ಲಿ ನಿರತರಾಗಿರುತ್ತೀರಿ. ಹಣದ ಲಾಭ ಇರಲಿದೆ. ನೀಲಿ ಮತ್ತು ನೇರಳೆ ಬಣ್ಣವು ಮಂಗಳಕರವಾಗಿದೆ. ಪರಿಹಾರಕ್ಕೆ ಹಸುವಿಗೆ ಆಹಾರ ನೀಡಿ. ಬೇಳೆಕಾಳು ದಾನ ಮಾಡಿ.

ಅದೃಷ್ಟ ಸಂಖ್ಯೆ 2
ಸಂಖ್ಯೆ 2 ಮತ್ತು 5 ಇಂದಿನ ನಿಮ್ಮ ಅದೃಷ್ಟ ಸಂಖ್ಯೆಗಳು. ಕೆಲಸಕ್ಕಾಗಿ ಇಂದು ಪ್ರಯಾಣಿಸಬಹುದು. ವ್ಯವಹಾರದಲ್ಲಿ ಲಾಭದ ಚಿಹ್ನೆ ಇದೆ. ಆಕಾಶದ ಬಣ್ಣ ಶುಭದಾಯಕವಾಗಿದೆ. ಶುಭ ಲಭಿಸಲು ಶ್ರೀಸೂಕ್ತವನ್ನು ಪಠಿಸಿ.

ಅದೃಷ್ಟ ಸಂಖ್ಯೆ 3
ಸಂಖ್ಯೆ 2 ಮತ್ತು 3 ಇಂದಿನ ಅದೃಷ್ಟ ಸಂಖ್ಯೆಗಳು. ನಿಮ್ಮ ಮನಸ್ಸು ಇಂದು ಧಾರ್ಮಿಕ ಕಾರ್ಯಗಳಲ್ಲಿ ತೊಡಗಲಿದೆ. ಹಳದಿ ಬಣ್ಣವು ಮಂಗಳಕರವಾಗಿದೆ. ಹಣ ವ್ಯಯವಾಗುವ ಸೂಚನೆಗಳಿವೆ. ಹಸುವಿಗೆ ಬೆಲ್ಲ ತಿನ್ನಿಸಿ.

ಅದೃಷ್ಟ ಸಂಖ್ಯೆ 4
ಸಂಖ್ಯೆ 2 ಮತ್ತು 6 ಇಂದು ನಿಮ್ಮ ಅದೃಷ್ಟದ ಬಣ್ಣಗಳಾಗಿವೆ. ಇಂದು ಧಾರ್ಮಿಕ ಕಾರ್ಯಗಳಲ್ಲಿ ನಿರತರಾಗಿರುತ್ತೀರಿ. ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ಹಳದಿ ಬಣ್ಣವು ಮಂಗಳಕರವಾಗಿದೆ. ಹಸುವಿಗೆ ಬಾಳೆಹಣ್ಣು ತಿನ್ನಿಸಿ. ಚಲನಚಿತ್ರ ಮತ್ತು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಜನರಿಗೆ ಪ್ರಯೋಜನವಾಗಲಿದೆ.

ಅದೃಷ್ಟ ಸಂಖ್ಯೆ 5
ಸಂಖ್ಯೆ 3 ಮತ್ತು 5 ಇಂದು ನಿಮಗೆ ಮಂಗಳಕರವಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ ಇರುತ್ತದೆ. ಯಾವುದೇ ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಇಂದು ವಿಶೇಷ ಕಾರ್ಯವನ್ನು ಪೂರ್ಣಗೊಳಿಸಲು ಉತ್ಸಾಹವಿರುತ್ತದೆ. ಹಸಿರು ಬಣ್ಣವು ಮಂಗಳಕರವಾಗಿದೆ.

ಅದೃಷ್ಟ ಸಂಖ್ಯೆ 6
1, 2 ಮತ್ತು 9 ಸಂಖ್ಯೆಗಳು ನಿಮ್ಮ ಅದೃಷ್ಟದ ಬಣ್ಣಗಳಾಗಿವೆ. ಇಂದು ಮನಸ್ಸು ಚಂಚಲವಾಗಿರುತ್ತದೆ. ಆಹ್ಲಾದಕರ ಪ್ರಯಾಣದ ಸಾಧ್ಯತೆ ಇದೆ. ಕೆಂಪು ಬಣ್ಣವು ಮಂಗಳಕರವಾಗಿದೆ. ವಿದ್ಯಾರ್ಥಿಗಳು ಹರಸಾಹಸ ಪಡಬೇಕಾಗಿದೆ. ಹನುಮಂತನ ದೇವಸ್ಥಾನಕ್ಕೆ ಹೋಗಿ.

ಅದೃಷ್ಟ ಸಂಖ್ಯೆ 7
ಸಂಖ್ಯೆ 3 ಮತ್ತು 9 ಇಂದು ನಿಮ್ಮ ಅದೃಷ್ಟ ಸಂಖ್ಯೆಗಳು. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇಂದು ನಿಮ್ಮ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಿ. ಯಾವುದೇ ಬಾಕಿಯಿರುವ ಕೆಲಸವನ್ನು ಸ್ನೇಹಿತರ ಸಹಾಯದಿಂದ ಮಾಡಿ. ಕಿತ್ತಳೆ ಬಣ್ಣವು ಮಂಗಳಕರವಾಗಿದೆ. ಇಂದು ಹಣ ವ್ಯಯವಾಗುವ ಲಕ್ಷಣಗಳಿವೆ. ಬಡವರಿಗೆ ದಾನ ಮಾಡಿ.

ಅದೃಷ್ಟ ಸಂಖ್ಯೆ 8
ಸಂಖ್ಯೆ 3 ಮತ್ತು 5 ಇಂದು ನಿಮ್ಮ ಅದೃಷ್ಟ ಸಂಖ್ಯೆಗಳು. ವಿದ್ಯಾರ್ಥಿಗಳಿಗೆ ಇಂದು ತುಂಬಾ ಶುಭಕರವಾಗಿದೆ. ಇಂದು ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ವ್ಯಾಪಾರಸ್ಥರಿಗೆ ಇದು ಯಶಸ್ವಿ ದಿನವಾಗಿರುತ್ತದೆ. ಬಿಳಿ ಬಣ್ಣವು ಮಂಗಳಕರವಾಗಿದೆ.

ಅದೃಷ್ಟ ಸಂಖ್ಯೆ 9
ಸಂಖ್ಯೆ 3 ಮತ್ತು 9 ಇಂದು ನಿಮ್ಮ ಅದೃಷ್ಟ ಸಂಖ್ಯೆಗಳು. ಇಂದು ವ್ಯವಹಾರದಲ್ಲಿ ಯಶಸ್ಸು ಇರುತ್ತದೆ. ಹಳದಿ ಮತ್ತು ಬಿಳಿ ಬಣ್ಣಗಳು ಮಂಗಳಕರ. ಬಹಳ ದಿನಗಳ ನಂತರ ಆತ್ಮೀಯ ಗೆಳೆಯರನ್ನು ಭೇಟಿಯಾಗುವಿರಿ. ಭಗವಾನ್ ಶಿವನನ್ನು ಧ್ಯಾನಿಸಿ.



Click it and Unblock the Notifications
