For Quick Alerts
ALLOW NOTIFICATIONS  
For Daily Alerts

Numerology Today, 11 Dec: ಸಂಖ್ಯಾಶಾಸ್ತ್ರ ಭವಿಷ್ಯ: 1, 7 ಅದೃಷ್ಟ ಸಂಖ್ಯೆಯವರಿಗೆ ಇಂದು ಪ್ರವಾಸದ ಸಾಧ್ಯತೆ ಇದೆ

|

ನಮ್ಮ ಗುಣಲಕ್ಷಣ ಮತ್ತು ನಮ್ಮ ಬದುಕಿನಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಮೇಲೂ ಅಂಕಿಅಂಶದ ಪ್ರಭಾವ ಇದೆ, ಸಂಖ್ಯೆಗಳಿಗೂ ಶಕ್ತಿ ಇದೆ. ಸಂಖ್ಯಾಶಾಸ್ತ್ರ ನಮ್ಮ ಬದುಕಿನ ಭವಿಷ್ಯವನ್ನು ಹೇಳುವ ಕನ್ನಡಿ. ಸಂಖ್ಯಾಶಾಸ್ತ್ರ ಸಹ ಜ್ಯೋತಿಷ್ಯದ ಇನ್ನೊಂದು ಭಾಗವೆಂದು ಪರಿಗಣಿಸಲಾಗುತ್ತದೆ. ಇದರ ಸಹಾಯದಿಂದ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು. ನಮ್ಮ ಇಂದಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ?

123
ನಮ್ಮ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ?
ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಅದೃಷ್ಟ ಸಂಖ್ಯೆಯನ್ನು ಪತ್ತೆ ಮಾಡುವ ವಿಧಾನ: ನಾವು ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ಒಟ್ಟಾಗಿ ಕೂಡಿಸಬೇಕು, ಕೂಡಿಸಿದ ನಂತರ ಮತ್ತೆ ಎರಡು ಅಂಕಿ ಬಂದರೆ ಅದನ್ನೂ ಕೂಡಿಸಿದರೆ ಒಂದು ಅಂಕಿ ಆಗುತ್ತದೆ ಅದೇ ನಮ್ಮ ಅದೃಷ್ಟ ಸಂಖ್ಯೆ.
ಡಿಸೆಂಬರ್‌ 2023ನೇ ಸಾಲಿನ 11ನೇ ತಾರೀಕಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ ಮುಂದೆ ನೋಡೋಣ:
1ರ ಸಂಖ್ಯಾಶಾಸ್ತ್ರ ಭವಿಷ್ಯ

1ರ ಸಂಖ್ಯಾಶಾಸ್ತ್ರ ಭವಿಷ್ಯ

ಈ ದಿನವು ಆಹ್ಲಾದಕರವಾಗಿರುತ್ತದೆ. ನಿಮ್ಮ ಕೆಲಸದ ಸ್ಥಳ ಮತ್ತು ವ್ಯವಹಾರದಲ್ಲಿ ಪರಿಸರವು ಅನುಕೂಲಕರವಾಗಿರುತ್ತದೆ. ಸಹೋದ್ಯೋಗಿಗಳು ಮತ್ತು ಅಧಿಕಾರಿಗಳ ಸಹಕಾರ ದೊರೆಯಲಿದೆ. ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಬಹುದು. ವ್ಯಾಪಾರದಲ್ಲಿ ಲಾಭದ ನಡುವೆಯೂ ಕುಟುಂಬ ಸಮೇತ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಮಾಧುರ್ಯದ ಜೊತೆಗೆ, ನಿಮ್ಮ ಆರೋಗ್ಯವು ಸಾಮಾನ್ಯವಾಗಿರುತ್ತದೆ.

2ರ ಸಂಖ್ಯಾಶಾಸ್ತ್ರ ಭವಿಷ್ಯ

2ರ ಸಂಖ್ಯಾಶಾಸ್ತ್ರ ಭವಿಷ್ಯ

ಸಕಾರಾತ್ಮಕತೆಯಿಂದ ಇರುವಿರಿ, ಕೆಲಸದ ಸ್ಥಳ ಮತ್ತು ವ್ಯವಹಾರದಲ್ಲಿನ ಪರಿಸರ ಅನುಕೂಲಕರವಾಗಿರುತ್ತದೆ. ಸಹೋದ್ಯೋಗಿಗಳ ಸಹಕಾರದ ಜೊತೆಗೆ ಅಧಿಕಾರಿಗಳ ಸಹಕಾರವೂ ಸಿಗಲಿದೆ. ಹೊಸ ಜವಾಬ್ದಾರಿಗಳನ್ನು ಪಡೆಯುವಿರಿ, ವೈವಾಹಿಕ ಜೀವನದಲ್ಲಿ ಮಧುರತೆ ಇರುತ್ತದೆ. ಉತ್ತಮ ಆರೋಗ್ಯದ ಜೊತೆಗೆ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ.

3ರ ಸಂಖ್ಯಾಶಾಸ್ತ್ರ ಭವಿಷ್ಯ

3ರ ಸಂಖ್ಯಾಶಾಸ್ತ್ರ ಭವಿಷ್ಯ

ದಿನವು ಸಾಮಾನ್ಯವಾಗಿರುತ್ತದೆ. ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಬಹುದು. ನಿಮ್ಮ ಕೆಲಸದ ಸ್ಥಳ ಮತ್ತು ವ್ಯವಹಾರದ ಪರಿಸರವು ಅನುಕೂಲಕರವಾಗಿರುತ್ತದೆ. ಅಡೆತಡೆಗಳ ನಿವಾರಣೆಯೊಂದಿಗೆ ವ್ಯವಹಾರದಲ್ಲಿ ಲಾಭದ ಅವಕಾಶಗಳು ಇದೆ. ಕುಟುಂಬದವರ ಸಹಕಾರದ ನಡುವೆ ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ.

4ರ ಸಂಖ್ಯಾಶಾಸ್ತ್ರ ಭವಿಷ್ಯ

4ರ ಸಂಖ್ಯಾಶಾಸ್ತ್ರ ಭವಿಷ್ಯ

ದಿನವು ಮಿಶ್ರಣವಾಗುತ್ತದೆ. ಈಗ ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಬೇಡಿ, ವಿರೋಧಿಗಳ ಸಮಸ್ಯೆ ಇದೆ. ಕೆಲಸ ಮತ್ತು ವ್ಯವಹಾರದಲ್ಲಿ ಎಚ್ಚರಿಕೆಯೊಂದಿಗೆ ವಿವಾದಗಳಿಂದ ದೂರವಿರಿ. ನಿಮ್ಮ ಸಕಾರಾತ್ಮಕತೆಯಿಂದಾಗಿ ಕುಟುಂಬದ ಬೆಂಬಲ ಪಡೆಯುತ್ತೀರಿ. ಹವಾಮಾನ ಬದಲಾವಣೆಯು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

5ರ ಸಂಖ್ಯಾಶಾಸ್ತ್ರ ಭವಿಷ್ಯ

5ರ ಸಂಖ್ಯಾಶಾಸ್ತ್ರ ಭವಿಷ್ಯ

ದಿನವು ಆಹ್ಲಾದಕರವಾಗಿರುತ್ತದೆ. ವಿತ್ತೀಯ ಲಾಭದ ಅವಕಾಶದೊಂದಿಗೆ ವ್ಯಾಪಾರದಲ್ಲಿ ಬೆಳವಣಿಗೆಗೆ ಅವಕಾಶಗಳಿವೆ. ಕೆಲಸದ ಸ್ಥಳ ಮತ್ತು ವ್ಯವಹಾರದಲ್ಲಿ ಪರಿಸರವು ನಿಮಗೆ ಅನುಕೂಲಕರವಾಗಿರುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ನಡವಳಿಕೆಯಲ್ಲಿ ಮೃದುತ್ವ ಕಾಪಾಡಿಕೊಳ್ಳಿ. ಕುಟುಂಬದವರ ಬೆಂಬಲದಿಂದ ವೈವಾಹಿಕ ಜೀವನ ಸುಖಮಯವಾಗಿರುತ್ತದೆ.

6ರ ಸಂಖ್ಯಾಶಾಸ್ತ್ರ ಭವಿಷ್ಯ

6ರ ಸಂಖ್ಯಾಶಾಸ್ತ್ರ ಭವಿಷ್ಯ

ನೀವು ವ್ಯವಹಾರದಲ್ಲಿ ಅದೃಷ್ಟವನ್ನು ಪಡೆಯುತ್ತೀರಿ. ಮನಸ್ಸಿನಲ್ಲಿ ಯಾವುದೋ ಚಿಂತೆಯ ಭಾವನೆ ಇರುತ್ತದೆ. ಹಣಕಾಸಿನ ಲಾಭದ ಅವಕಾಶದ ನಡುವೆ ಸ್ಪರ್ಧೆಯಿಂದ ದೂರವಿರಿ. ಕೋಪವನ್ನು ತಪ್ಪಿಸಿ, ಸಂಯಮದಿಂದ ವರ್ತಿಸಿ. ಕುಟುಂಬದವರ ಬೆಂಬಲ ಸಿಗಲಿದೆ.

7ರ ಸಂಖ್ಯಾಶಾಸ್ತ್ರ ಭವಿಷ್ಯ

7ರ ಸಂಖ್ಯಾಶಾಸ್ತ್ರ ಭವಿಷ್ಯ

ದಿನವು ಸಾಮಾನ್ಯವಾಗಿದ್ದರೂ ಕೆಲಸದ ಸ್ಥಳ ಮತ್ತು ವ್ಯವಹಾರದಲ್ಲಿನ ವಾತಾವರಣವು ಅನುಕೂಲಕರವಾಗಿರುತ್ತದೆ. ಏನೇ ಅಡೆತಡೆಗಳು ಬಂದರೂ ಪರಿಹಾರ ಸಿಗುತ್ತದೆ. ವ್ಯಾಪಾರದಲ್ಲಿ ಲಾಭ ಇದೆ, ಅವಕಾಶದ ನಡುವೆ ಸ್ಪರ್ಧೆಯಿಂದ ದೂರವಿರಿ. ವ್ಯಾಪಾರಕ್ಕಾಗಿ ಪ್ರಯಾಣದ ಸಾಧ್ಯತೆ ಇದೆ ಮತ್ತು ಕುಟುಂಬದ ಬೆಂಬಲ ಇರುತ್ತದೆ.

8ರ ಸಂಖ್ಯಾಶಾಸ್ತ್ರ ಭವಿಷ್ಯ

8ರ ಸಂಖ್ಯಾಶಾಸ್ತ್ರ ಭವಿಷ್ಯ

ವ್ಯವಹಾರದಲ್ಲಿ ಹೆಚ್ಚಿನ ಕೆಲಸದಿಂದಾಗಿ ದಿನವು ಕಾರ್ಯನಿರತವಾಗಿರುತ್ತದೆ. ಹೊಸ ಯೋಜನೆಗಳಲ್ಲಿ ಕೆಲಸ ಪ್ರಾರಂಭಿಸುವ ಮೊದಲು ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿ. ವಿವಾದಗಳಿಂದ ಅಂತರ ಕಾಯ್ದುಕೊಳ್ಳಿ. ಕುಟುಂಬದವರ ಬೆಂಬಲ ಇರಲಿದೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ.

9ರ ಸಂಖ್ಯಾಶಾಸ್ತ್ರ ಭವಿಷ್ಯ

9ರ ಸಂಖ್ಯಾಶಾಸ್ತ್ರ ಭವಿಷ್ಯ

ದಿನವು ಸಾಧನೆಗಳಿಂದ ತುಂಬಿರುತ್ತದೆ, ಕೆಲಸದ ಸ್ಥಳ ಮತ್ತು ವ್ಯವಹಾರದಲ್ಲಿನ ವಾತಾವರಣವು ನಿಮಗೆ ಅನುಕೂಲಕರವಾಗಿರುತ್ತದೆ. ಸಮಯವನ್ನು ವ್ಯರ್ಥ ಮಾಡದೆ ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಬಹುದು. ವ್ಯವಹಾರದಲ್ಲಿ ಲಾಭದ ಅವಕಾಶ ಇದೆ. ಪ್ರಮುಖ ವಿಷಯಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅನುಭವಿ ವ್ಯಕ್ತಿಯಿಂದ ಸಲಹೆ ಪಡೆಯಿರಿ.

English summary

Numerology Today, 11 December, 2022: Check Numerology Predictions for Sunday in Kannada

Numerology Today, December 12, 2022 Predictions in Kannada: Check Out What is the Numerology predictions for Nummber one, two, three, four, five, six, seven, eight and nine. Read more.
Story first published: Sunday, December 11, 2022, 8:30 [IST]
X
Desktop Bottom Promotion