Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
Numerology Today, 05 Jan: ಸಂಖ್ಯಾಶಾಸ್ತ್ರ ಭವಿಷ್ಯ: ಈ ಅದೃಷ್ಟ ಸಂಖ್ಯೆಯವರು ಖರ್ಚಿನ ಬಗ್ಗೆ ನಿಗಾ ಇರಲಿ
ಸಂಖ್ಯಾಶಾಸ್ತ್ರ ನಮ್ಮ ಬದುಕಿನ ಭವಿಷ್ಯವನ್ನು ಹೇಳುವ ಕನ್ನಡಿ. ಸಂಖ್ಯಾಶಾಸ್ತ್ರ ಸಹ ಜ್ಯೋತಿಷ್ಯದ ಇನ್ನೊಂದು ಭಾಗವೆಂದು ಪರಿಗಣಿಸಲಾಗುತ್ತದೆ. ಇದರ ಸಹಾಯದಿಂದ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು. ನಮ್ಮ ಇಂದಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ?

ನಮ್ಮ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ?
ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಅದೃಷ್ಟ ಸಂಖ್ಯೆಯನ್ನು ಪತ್ತೆ ಮಾಡುವ ವಿಧಾನ: ನಾವು ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ಒಟ್ಟಾಗಿ ಕೂಡಿಸಬೇಕು, ಕೂಡಿಸಿದ ನಂತರ ಮತ್ತೆ ಎರಡು ಅಂಕಿ ಬಂದರೆ ಅದನ್ನೂ ಕೂಡಿಸಿದರೆ ಒಂದು ಅಂಕಿ ಆಗುತ್ತದೆ ಅದೇ ನಮ್ಮ ಅದೃಷ್ಟ ಸಂಖ್ಯೆ.
ಜನವರಿ 2023ನೇ ಸಾಲಿನ 05ನೇ ತಾರೀಕಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ ಮುಂದೆ ನೋಡೋಣ:

ಅದೃಷ್ಟ ಸಂಖ್ಯೆ 1
ನಿಮ್ಮ ಖರ್ಚುಗಳಲ್ಲಿ ಹೆಚ್ಚಳವಾಗಬಹುದು, ಈ ಕಾರಣದಿಂದ ನಿಮ್ಮ ಬಜೆಟ್ ಅನ್ನು ಯೋಚಿಸಿ ಪ್ಲಾನ್ ಮಾಡಿದರೆ ಲಾಭ ಸಿಗುತ್ತದೆ. ಮುಂದಿನ ದಿನಗಳಲ್ಲಿ ಖರ್ಚು ಹೆಚ್ಚಾಗಬಹುದು. ಅವಿವಾಹಿತರ ವಿವಾಹ ನಿಶ್ಚಯವಾಗಬಹುದು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಆರ್ಥಿಕ ಲಾಭದ ಸಾಧ್ಯತೆ ಇದೆ.
ಅದೃಷ್ಟ ಸಂಖ್ಯೆ- 9
ಅದೃಷ್ಟ ಬಣ್ಣ - ಗುಲಾಬಿ

ಅದೃಷ್ಟ ಸಂಖ್ಯೆ 2
ಇಂದು ಮಿಶ್ರ ದಿನವಾಗಿರಬಹುದು. ನೀವು ಧರ್ಮ ಕಾರ್ಯಗಳಲ್ಲಿ ತೊಡಗಬಹುದು. ನಿಮ್ಮ ಖರ್ಚುಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಅತಿಯಾದ ಕೋಪ ಸಹೋದರ-ಸಹೋದರಿ ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು.
ಅದೃಷ್ಟ ಸಂಖ್ಯೆ- 42
ಅದೃಷ್ಟ ಬಣ್ಣ - ಗುಲಾಬಿ

ಅದೃಷ್ಟ ಸಂಖ್ಯೆ 3
ಇಂದು ನಿಮಗೆ ಮಿಶ್ರ ದಿನವಾಗಿರಬಹುದು ಮತ್ತು ನಿಮ್ಮ ಆರೋಗ್ಯ ಕುಸಿಯಬಹುದು. ಕಾಲು ನೋವಿನಿಂದಾಗಿ ನೀವು ದುರ್ಬಲರಾಗಬಹುದು. ಪರೀಕ್ಷೆಯಲ್ಲಿ ಯಶಸ್ಸು ಸಿಗಲಿದೆ. ಹಣವನ್ನು ಎಚ್ಚರಿಕೆಯಿಂದ ಬಳಸಿ. ಹೆಚ್ಚಿನ ಲಾಭದ ಆಸೆ ಬೇಡ, ಇದು ನಷ್ಟಕ್ಕೆ ಕಾರಣವಾಗಬಹುದು.
ಅದೃಷ್ಟ ಸಂಖ್ಯೆ- 3
ಅದೃಷ್ಟದ ಬಣ್ಣ- ಕೇಸರಿ

ಅದೃಷ್ಟ ಸಂಖ್ಯೆ 4
ಮನಸ್ಸು ಚಂಚಲವಾಗಿರುತ್ತದೆ, ಮನಸ್ಸಿನ ಶಾಂತಿಗಾಗಿ ದೇವರನ್ನು ಧ್ಯಾನಿಸಿ ಅಥವಾ ಯಾವುದಾದರೂ ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸಿ. ನಿಷ್ಪ್ರಯೋಜಕ ವಸ್ತುಗಳಿಗಾಗಿ ಖರ್ಚು ಹೆಚ್ಚಬಹುದು. ಪತಿ ಪತ್ನಿಯರ ನಡುವೆ ಸಾಮರಸ್ಯ ಕಡಿಮೆಯಾಗಲಿದೆ.
ಅದೃಷ್ಟ ಸಂಖ್ಯೆ - 10
ಅದೃಷ್ಟದ ಬಣ್ಣ- ತಿಳಿ ನೀಲಿ

ಅದೃಷ್ಟ ಸಂಖ್ಯೆ 5
ಇಂದು ನಿಮಗೆ ಶುಭ ದಿನ. ಇದರಿಂದ ವಾಸ್ತು ದೋಷಗಳೂ ನಿವಾರಣೆಯಾಗಿ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ. ನಿಮ್ಮ ಪ್ರೇಮಿಯೊಂದಿಗೆ ಸಮಯ ಕಳೆಯುವ ಅವಕಾಶ ಪಡೆಯಬಹುದು. ವಿದ್ಯಾರ್ಥಿಗಳಿಗೆ ಶುಭ ದಿನ. ನಿಷ್ಪ್ರಯೋಜಕ ವಸ್ತುಗಳಿಗೆ ಖರ್ಚು ಮಾಡಬೇಡಿ.
ಅದೃಷ್ಟ ಸಂಖ್ಯೆ - 2
ಅದೃಷ್ಟದ ಬಣ್ಣ- ಕಂದು

ಅದೃಷ್ಟ ಸಂಖ್ಯೆ 6
ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ. ಸ್ಥಿರಾಸ್ತಿಯಿಂದ ಲಾಭವಾಗುವ ಸಾಧ್ಯತೆ ಇದೆ. ಕಚೇರಿಯ ಕೆಲಸದಿಂದಾಗಿ ನಿಮ್ಮ ಇಡೀ ದಿನದ ದಿನಚರಿ ಬದಲಾಗಬಹುದು. ಸ್ನೇಹಿತರೊಡನೆ ಮಾತನಾಡಿ ಮನಸ್ಸು ಹಗುರವಾಗುತ್ತದೆ.
ಅದೃಷ್ಟ ಸಂಖ್ಯೆ - 25
ಅದೃಷ್ಟ ಬಣ್ಣ - ಹಸಿರು

ಅದೃಷ್ಟ ಸಂಖ್ಯೆ 7
ಈ ದಿನ ನಿಮಗೆ ಉತ್ಸಾಹ ಮತ್ತು ಶಕ್ತಿಯಿಂದ ತುಂಬಿರುತ್ತದೆ. ಅತಿಯಾದ ಆತ್ಮವಿಶ್ವಾಸ ಬೇಡ. ಯಾವುದನ್ನೇ ಆಗಲಿ ನೀವು ನಿರ್ಧರಿಸುವ ಮೊದಲು ಪರಿಶೀಲಿಸಿ. ಇಂದು ಗೌರವವನ್ನು ಪಡೆಯುತ್ತೀರಿ. ವ್ಯಾಪಾರ ಪ್ರಯಾಣ ಲಾಭದಾಯಕವಾಗಿರುತ್ತದೆ. ಹೊಸ ವ್ಯಾಪಾರ ಆರಂಭಿಸಬಹುದು.
ಅದೃಷ್ಟ ಸಂಖ್ಯೆ - 11
ಅದೃಷ್ಟದ ಬಣ್ಣ - ನಿಂಬೆ

ಅದೃಷ್ಟ ಸಂಖ್ಯೆ 8
ಆರ್ಥಿಕ ಪ್ರಗತಿಯ ಸಾಧ್ಯತೆ ಇದೆ. ಕಚೇರಿ ಸಹೋದ್ಯೋಗಿಗಳೊಂದಿಗೆ ಜಾಗರೂಕರಾಗಿರಿ, ಯಾರಾದರೂ ನಿಮ್ಮ ಕೆಲಸವನ್ನು ತಪ್ಪಾಗಿ ಪ್ರತಿನಿಧಿಸಬಹುದು, ನಿಮ್ಮ ಜಾಗ್ರತೆಯಲ್ಲಿ ಇರುವುದು ಅತ್ಯವಶ್ಯ. ಭವಿಷ್ಯದ ಯೋಜನೆಯಲ್ಲಿ ಸಂಗಾತಿಯ ಸಹಕಾರ ಇರುತ್ತದೆ.
ಅದೃಷ್ಟ ಸಂಖ್ಯೆ - 5
ಅದೃಷ್ಟ ಬಣ್ಣ - ನೀಲಿ

ಅದೃಷ್ಟ ಸಂಖ್ಯೆ 9
ನಿಮ್ಮ ಉತ್ಸಾಹ ಮತ್ತು ಬುದ್ಧಿವಂತಿಕೆಯಿಂದಾಗಿ ಸ್ಥಗಿತಗೊಂಡ ಕೆಲಸ ಮುಂದುವರಿಯುತ್ತದೆ. ಕುಟುಂಬದ ಬೆಂಬಲ ಸಿಗಲಿದೆ. ಆಸ್ತಿ ಸಂಬಂಧಿತ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಪ್ರೇಮಿಯನ್ನು ಮೆಚ್ಚಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು.
ಅದೃಷ್ಟ ಸಂಖ್ಯೆ- 9
ಅದೃಷ್ಟದ ಬಣ್ಣ- ತಿಳಿ ಹಳದಿ



Click it and Unblock the Notifications
