Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
Numerology Today, 04 Jan: ಸಂಖ್ಯಾಶಾಸ್ತ್ರ ಭವಿಷ್ಯ: ಈ ಅದೃಷ್ಟ ಸಂಖ್ಯೆಯವರಿಗೆ ಇಂದು ಪ್ರಯಾಣದ ಸಾಧ್ಯತೆ ಇದೆ
ಸಂಖ್ಯಾಶಾಸ್ತ್ರ ಸಹ ಜ್ಯೋತಿಷ್ಯದ ಇನ್ನೊಂದು ಭಾಗವೆಂದು ಪರಿಗಣಿಸಲಾಗುತ್ತದೆ. ಇದರ ಸಹಾಯದಿಂದ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು. ನಮ್ಮ ಇಂದಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ?

ನಮ್ಮ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ?
ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಅದೃಷ್ಟ ಸಂಖ್ಯೆಯನ್ನು ಪತ್ತೆ ಮಾಡುವ ವಿಧಾನ: ನಾವು ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ಒಟ್ಟಾಗಿ ಕೂಡಿಸಬೇಕು, ಕೂಡಿಸಿದ ನಂತರ ಮತ್ತೆ ಎರಡು ಅಂಕಿ ಬಂದರೆ ಅದನ್ನೂ ಕೂಡಿಸಿದರೆ ಒಂದು ಅಂಕಿ ಆಗುತ್ತದೆ ಅದೇ ನಮ್ಮ ಅದೃಷ್ಟ ಸಂಖ್ಯೆ.
ಜನವರಿ 2023ನೇ ಸಾಲಿನ 04ನೇ ತಾರೀಕಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ ಮುಂದೆ ನೋಡೋಣ:

ಅದೃಷ್ಟ ಸಂಖ್ಯೆ 1
ಮನೆಯಿಂದ ಹೊರಬರಲು ಸಮಯ ತೆಗೆದುಕೊಳ್ಳಿ, ಸಮಾಧಾನದಿಂದ ವರ್ತಿಸಿ ಮತ್ತು ನಿಮ್ಮ ಆಲೋಚನೆಗಳೂ ಸಹ ಶಾಂತಿಯುತವಾಗಿರಲಿ. ನಿಮ್ಮ ಉದ್ದೇಶದ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ ಮತ್ತು ಕಠಿಣ ಪರಿಶ್ರಮ ಎಂಬುದು ಆಯ್ಕೆಯಲ್ಲ, ಆದರೆ ಅದು ಅಗತ್ಯ ಎಂದು ನಿಮಗೆ ತಿಳಿದಿರಲಿ.
ಅದೃಷ್ಟ ಸಂಖ್ಯೆ -12
ಅದೃಷ್ಟ ಬಣ್ಣ - ಹಳದಿ

ಅದೃಷ್ಟ ಸಂಖ್ಯೆ 2
ಇಂದಿನ ದಿನವು ನಿಮಗೆ ತುಂಬಾ ಅದೃಷ್ಟ ತರಲಿದೆ. ಹೊಸ ಅವಕಾಶಗಳು ಇಂದು ನಿಮಗಾಗಿ ಕಾಯುತ್ತಿವೆ. ಪ್ರಯಾಣದ ಸಾಧ್ಯತೆಯೂ ಇದೆ. ನಿಮ್ಮನ್ನು ನಂಬಿ ಮುಂದುವರೆಯಿರಿ. ನಿಮ್ಮ ಮನಸ್ಸಿನಲ್ಲಿರುವ ಸೃಜನಶೀಲ ವಿಚಾರಗಳನ್ನು ಹಂಚಿಕೊಳ್ಳಿ.
ಅದೃಷ್ಟ ಸಂಖ್ಯೆ -15
ಅದೃಷ್ಟ ಬಣ್ಣ - ಹಸಿರು

ಅದೃಷ್ಟ ಸಂಖ್ಯೆ 3
ಇಂದು ನೀವು ಸಂಪತ್ತು ಮತ್ತು ಖ್ಯಾತಿಯನ್ನು ಪಡೆಯುತ್ತೀರಿ. ನೀವು ಪಡೆಯುವುದಕ್ಕೆ ನೀವು ನಿಜವಾಗಿಯೂ ಅರ್ಹರು. ಜೀವನದ ಬಗೆಗಿನ ನಿಮ್ಮ ಮನೋಭಾವವು ಭವಿಷ್ಯದಲ್ಲಿ ನೀವು ಏನಾಗುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ, ಆದ್ದರಿಂದ ಯಾವಾಗಲೂ ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳಿ.
ಅದೃಷ್ಟ ಸಂಖ್ಯೆ - 2
ಅದೃಷ್ಟ ಬಣ್ಣ - ಕೆಂಪು

ಅದೃಷ್ಟ ಸಂಖ್ಯೆ 4
ನಿಮ್ಮ ಕುಟುಂಬಕ್ಕೆ ನೀವು ಅಗತ್ಯವಾಗಿ ಸಮಯ ನೀಡಬಹುದು, ಉತ್ತಮ ಸಮಯ ಕಳೆಯುವಿರಿ. ನೀವು ಇಂದು ಸ್ವಲ್ಪ ದುಃಖಿತರಾಗಿರಬಹುದು, ಆದರೆ ಇತರರೊಂದಿಗೆ ನಿಮ್ಮ ಸಮಸ್ಯೆ ಹೇಳಿಕೊಳ್ಳುವ ಮೂಲಕ ಮನಸ್ಸು ಹಗುರವಾಗುತ್ತದೆ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಅಥವಾ ಪ್ರದರ್ಶನವನ್ನು ವೀಕ್ಷಿಸುವ ಮೂಲಕ ಕಲೆಯ ಮೇಲಿನ ನಿಮ್ಮ ಪ್ರೀತಿಯನ್ನು ಗೌರವಿಸುವಿರಿ.
ಅದೃಷ್ಟ ಸಂಖ್ಯೆ - 11
ಅದೃಷ್ಟ ಬಣ್ಣ - ಹಸಿರು

ಅದೃಷ್ಟ ಸಂಖ್ಯೆ 5
ಭರವಸೆ ಮತ್ತು ಆತ್ಮವಿಶ್ವಾಸವಿಲ್ಲದೆ ಏನನ್ನೂ ಸಾಧಿಸಲಾಗುವುದಿಲ್ಲ. ಈ ಸಮಯದಲ್ಲಿ ನೀವು ಎರಡನ್ನೂ ಹೊಂದಿದ್ದೀರಿ, ಕೇವಲ ಹೊಸ ಪ್ರಾರಂಭವನ್ನು ಮಾಡಿ ಖಂಡಿತ ಯಶಸ್ಸು ನಿಮ್ಮದೆ. ಇಂದು ನೀವು ಆಶಾವಾದ ಮತ್ತು ಸಕಾರಾತ್ಮಕತೆಯಿಂದ ತುಂಬಿರುತ್ತೀರಿ.
ಅದೃಷ್ಟ ಸಂಖ್ಯೆ -12
ಅದೃಷ್ಟ ಬಣ್ಣ - ಕಿತ್ತಳೆ

ಅದೃಷ್ಟ ಸಂಖ್ಯೆ 6
ಇಂದು ಹೊಸ ಯೋಜನೆಗಳು ಅಥವಾ ಸಂಬಂಧಗಳು ಪ್ರಾರಂಭವಾಗಬಹುದು. ನಿಮ್ಮ ಜೀವನದ ಬೆಳವಣಿಗೆಗಾಗಿ ನಿಮ್ಮನ್ನು ನೀವು ಸ್ವಯಂ ಮೌಲ್ಯಮಾಪನ ಮಾಡುವುದು ಅಗತ್ಯ. ಸಮಯವು ಅನುಕೂಲಕರವಾಗಿಲ್ಲದ ಕಾರಣ ಇಂದು ಅನಗತ್ಯ ಅಪಾಯ ತೆಗೆದುಕೊಳ್ಳಬೇಡಿ.
ಅದೃಷ್ಟ ಸಂಖ್ಯೆ-14
ಅದೃಷ್ಟದ ಬಣ್ಣ- ಕಂದು

ಅದೃಷ್ಟ ಸಂಖ್ಯೆ 7
ಮನೆಯ ದುರಸ್ತಿ ಅಥವಾ ನವೀಕರಣ ಖರ್ಚು ಮಾಡುವ ಸಮಯ ಬಂದರೆ ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಬಹಳ ಸಮಯದಿಂದ ಕಷ್ಟಪಟ್ಟು ಕೆಲಸ ಮಾಡಿದ ನಂತರ, ಈಗ ಸಮಯ ನಿಮಗಾಗಿ ಕಾದಿದೆ ಅದನ್ನು ಆನಂದಿಸಿ. ಆದರೆ ಹಣ ವಿಚಾರದಲ್ಲಿ ಜಾಗರೂಕರಾಗಿರಿ.
ಅದೃಷ್ಟ ಸಂಖ್ಯೆ - 4
ಅದೃಷ್ಟ ಬಣ್ಣ - ನೀಲಿ

ಅದೃಷ್ಟ ಸಂಖ್ಯೆ 8
ನಿಮ್ಮ ಸೃಜನಶೀಲತೆಯನ್ನು ಕುಟುಂಬದೊಂದಿಗೆ ಹಂಚಿಕೊಳ್ಳಿ. ಶಾಂತತೆಯನ್ನು ಕಾಪಾಡಿಕೊಳ್ಳುವ ಮೂಲಕ ನೀವು ಇಂದಿನ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು. ನಿಮ್ಮಲ್ಲಿನ ಹೆಚ್ಚಿನ ಆತ್ಮವಿಶ್ವಾಸವು ಯಶಸ್ಸನ್ನು ತರುತ್ತದೆ.
ಅದೃಷ್ಟ ಸಂಖ್ಯೆ-25
ಅದೃಷ್ಟದ ಬಣ್ಣ - ನಿಂಬೆ

ಅದೃಷ್ಟ ಸಂಖ್ಯೆ 9
ನಿಮ್ಮ ಮನಸ್ಸು ಈಗ ನಿಮಗಾದ ಕೆಲವು ನಷ್ಟದ ಸುತ್ತ ಸುತ್ತುತ್ತಿದೆ. ನೀವು ಇದೀಗ ಸಮಸ್ಯೆಯಿಂದ ಹೊರಬರಲು ಕೆಲವು ಆಧ್ಯಾತ್ಮಿಕ ಮಾರ್ಗಗಳನ್ನು ಹುಡುಕುತ್ತಿದ್ದೀರಿ. ನಿಮ್ಮ ಕಾಳಜಿಯನ್ನು ಇತರರೊಂದಿಗೆ, ವಿಶೇಷವಾಗಿ ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ ಮನಸ್ಸು ನಿರಾಳವಾಗುತ್ತದೆ.
ಅದೃಷ್ಟ ಸಂಖ್ಯೆ-5
ಅದೃಷ್ಟ ಬಣ್ಣ - ಬಿಳಿ



Click it and Unblock the Notifications