Latest Updates
-
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ?
ಜೂನ್ 2021: ಸಂಖ್ಯಾಶಾಸ್ತ್ರ ಪ್ರಕಾರ ಈ ತಿಂಗಳು ಹೇಗಿರಲಿದೆ?
ಜ್ಯೋತಿಷ್ಯಶಾಸ್ತ್ರ ಬೇರೆ, ಸಂಖ್ಯಾಶಾಸ್ತ್ರ ಬೇರೆ, ಜ್ಯೋತಿಷ್ಯಶಾಸ್ತ್ರದಲ್ಲಿ ರಾಶಿಗಳ ಆದಾರದ ಮೇಲೆ ಭವಿಷ್ಯ ಹೇಳಿದರೆ ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳ ಆಧಾರದ ಮೇಲೆ ಭವಿಷ್ಯ ಹೇಳಲಾಗುವುದು.

ಸಂಖ್ಯಾಶಾಸ್ತ್ರದಲ್ಲಿ ವ್ಯಕ್ತಿಗೆ ಜನ್ಮ ದಿನಾಂಕ ಹಾಗೂ ಜೀವನ ಪಥದ ಸಂಖ್ಯೆ ಬಹಳ ಮುಖ್ಯ. ಉದಾಹರಣೆಗೆ 7-9-1984 ರಲ್ಲಿ ಜನಿಸಿದ ವ್ಯಕ್ತಿಯ ಹುಟ್ಟಿದ ಸಂಖ್ಯೆ 7 ಹಾಗೂ ಲೈಫ್ ಪಾಥ್ ಸಂಖ್ಯೆ 2( 7+9+1+9+8+4=38, 3+8=11, 1+1=2) ಆಗುತ್ತದೆ. ಕೆಲವು ಸಂಖ್ಯೆಗಳನ್ನು ಮಾಸ್ಟರ್ ಸಂಖ್ಯೆ ಎಂದು ಕರೆಯಲಾಗುತ್ತದೆ. ಅವುಗಳು ಕೂಡ ನಮ್ಮ ಮೇಲೆ ಪ್ರತ್ಯೇಕವಾಗಿ ಪ್ರಭಾವ ಬೀರುತ್ತವೆ. 11 22 33 44 55 66 77 88 99 ಇವುಗಳೆಲ್ಲ ಮಾಸ್ಟರ್ ನಂಬರ್‌ಗಳು. ಇನ್ನು ಎರಡು ಸಂಖ್ಯೆ ಬಂದಾಗ ಎರಡು ಗ್ರಹದ ಪ್ರಭಾವ ಇರುತ್ತದೆ. ಆಗ 3-ಗುರು, 8-ಶನಿ, 2-ಚಂದ್ರ ಈ ಮೂರರ ಪ್ರಭಾವವೂ ಇರುತ್ತದೆ. ಜತೆಗೆ 11 ಮಾಸ್ಟರ್ ನಂಬರ್ ಕೂಡ ತನ್ನ ಪ್ರಭಾವ ತೋರುತ್ತದೆ.
ಸಂಖ್ಯೆಗಳು ಗ್ರಹವನ್ನು ಸೂಚಿಸುತ್ತದೆ ಎಂಬುದನ್ನೂ ತಿಳಿದುಕೊಳ್ಳಿ. 1- ರವಿ, 2- ಚಂದ್ರ, 3-ಗುರು, 4-ರಾಹು, 5-ಬುಧ, 6-ಶುಕ್ರ, 7-ಕೇತು, 8-ಶನಿ, 9-ಕುಜ ಹೀಗೆ ಒಂದೊಂದು ಗ್ರಹಕ್ಕೆ ಒಂದೊಂದು ಸಂಖ್ಯೆಯನ್ನು ನೀಡಿ, ಜನ್ಮ ದಿನಾಂಕದ ಆಧಾರದಲ್ಲಿ ಆ ವ್ಯಕ್ತಿಯ ಮೇಲೆ ಯಾವ ಗ್ರಹದ ಪ್ರಭಾವ ಇರುತ್ತದೆ ಎಂದು ನಿರ್ಧರಿಸಲಾಗುತ್ತದೆ. ಉದಾಹರಣೆಗೆ: ಯಾವುದೇ ತಿಂಗಳ 1 10 19 28ನೇ ತಾರೀಕು ಹುಟ್ಟಿದವರ ಮೇಲೆ ರವಿಯ ಪ್ರಭಾವ, ಯಾವುದೇ ತಿಂಗಳ 2, 11, 20, 29ನೇ ತಾರೀಕು ಜನಿಸಿದವರ ಮೇಲೆ ಚಂದ್ರನ ಪ್ರಭಾವ ಹೀಗೆ ಗ್ರಹಗಳ ವಿಚಾರ ಪರಿಶೀಲಿಸಬಹುದು. ಇಲ್ಲಿ ಒಂಟಿ ಸಂಖ್ಯೆಯಾದರೆ ಬೀರುವ ಪ್ರಭಾವ ಬೇರೆ, ಎರಡು ಸಂಖ್ಯೆಗಳು ಇದ್ದಲ್ಲಿ ಆಗುವ ಪ್ರಭಾವ ಬೇರೆ (ಉದಾಹರಣೆ 11, 19 ಹೀಗೆ).
ಇಲ್ಲಿ ನಿಮ್ಮ ಸಂಖ್ಯೆ ಆಧಾರದ ಮೇಲೆ ಜೂನ್ ತಿಂಗಳು ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:

ನಿಮ್ಮ ಗ್ರಹ ರವಿ
ಆರ್ಥಿಕ ದೃಷ್ಟಿಕೋನದಿಂದ, ಈ ತಿಂಗಳು ನಿಮಗಾಗಿ ಶುಭವಾಗಿದೆ , ಸಂಪತ್ತು ವೃದ್ಧಿಯಾಗುವುದು. ಕೆಲಸದ ಸ್ಥಳದಲ್ಲಿ ಇರುವ ಸಮಸ್ಯೆಗಳನ್ನು ಸಂಭಾಷಣೆಯ ಮೂಲಕ ಪರಿಹರಿಸುವುದು ಉತ್ತಮ. ಪ್ರೀತಿಯ ಸಂಬಂಧದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ನೀವು ಈ ತಿಂಗಳು ಸ್ವಲ್ಪ ಚುರುಕಾಗಿ ಮತ್ತು ಜಾಗೃತರಾಗಿ ಕೆಲಸ ಮಾಡಿದರೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.

ನಿಮ್ಮ ಗ್ರಹ ಚಂದ್ರ
ಈ ತಿಂಗಳು ನಿಮ್ಮ ಪ್ರೀತಿಯ ಸಂಬಂಧದಲ್ಲಿ ಸಂತೋಷವಿರುತ್ತದೆ. ಈ ತಿಂಗಳು ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಾದರೆ ಆತುರಬೇಡ. ಹಣಕಾಸಿನ ಸಂಬಂಧದಲ್ಲಿ ಚಿಂತೆ ಹೆಚ್ಚಾಗುತ್ತದೆ ಮತ್ತು ಮನಸ್ಸು ತೊಂದರೆಗೀಡಾಗುತ್ತದೆ. ಕೆಲಸದ ಸ್ಥಳದಲ್ಲೂ ಪರಿಸ್ಥಿತಿ ಇದೇ ರೀತಿ ಇರುತ್ತದೆ. ನಿಮ್ಮ ಕಾರ್ಯಗಳತ್ತ ಹೆಚ್ಚು ಗಮನ ಹರಿಸಿದರೆ ಕೊನೆಯಲ್ಲಿ ಉತ್ತಮ ಫಲಿತಾಂಶ ಸಿಗುವುದು.

ನಿಮ್ಮ ಗ್ರಹ ಗುರುವಾಗಿದ್ದರೆ
ನೀವು ಈ ತಿಂಗಳು ಮಾಡುವ ಹೂಡಿಕೆಯಿಂದ ಕ್ರಮೇಣ ಲಾಭಗಳು ಕಂಡುಬರುತ್ತವೆ , ಇದರಿಂದ ಸಂಪತ್ತು ಕೂಡ ವೃದ್ದಿಸುವುದು. ಕಾರ್ಯ ಕ್ಷೇತ್ರದಲ್ಲಿ ಅನುಕೂಲಕರ ಫಲಿತಾಂಶ ಸಿಗದ ಕರಣ ನೀವು ಅತೃಪ್ತರಾಗುತ್ತೀರಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರವಾಸಗಳನ್ನು ತಪ್ಪಿಸುವುದು ಉತ್ತಮ. ಪ್ರೀತಿಯ ಸಂಬಂಧದಲ್ಲಿಯೂ ಸಹ, ನೀವು ಅಹಂ ದೂರವಿಟ್ಟರೆ ಯಾವುದೇ ಸಮಸ್ಯೆಯಿಲ್ಲದೆ ಜೀವನದಲ್ಲಿ ಸಂತೋಷವಾಗಿರುತ್ತೀರಿ.

ನಿಮ್ಮ ಗ್ರಹ ರಾಹು
ಆರ್ಥಿಕ ದೃಷ್ಟಿಯಿಂದ ಈ ತಿಂಗಳು ಉತ್ತಮವಾಗಿದೆ. ಜೂನ್ ತಿಂಗಳು ವಿಶೇಷವಾಗಿ ಶುಭ ಫಲಿತಾಂಶಗಳನ್ನು ತರುತ್ತದೆ. ಸಂಬಂಧದಲ್ಲಿ ಕ್ರಮೇಣ ಹೊಂದಾಣಿಕೆ ಬರುತ್ತದೆ ಮತ್ತು ಖುಷಿಯಾಗಿರುವಿರಿ. ಮಾನಹಾನಿಯ ಸಾಧ್ಯತೆಗಳು ಕಾರ್ಯ ಕ್ಷೇತ್ರದಲ್ಲಿ ಆಗುವ ಸಾಧ್ಯತೆ ಇದೆ, ಆದ್ದರಿಂದ ನೀವು ಈ ರೀತಿ ಜಾಗೃತರಾಗಿರಬೇಕು.

ನಿಮ್ಮ ಗ್ರಹ ಬುಧ
ಈ ತಿಂಗಳು ನಿಮ್ಮ ಹೂಡಿಕೆಗಳ ಬಗ್ಗೆ ನೀವು ಗಮನ ಹರಿಸ ಬೇಕಾಗಿರುವುದರಿಂದ ಹಣಕಾಸಿನ ವೆಚ್ಚವೂ ಈ ತಿಂಗಳು ಹೆಚ್ಚಿರುತ್ತದೆ. ಆದಾಗ್ಯೂ, ಪಾಲುದಾರಿಕೆಯಲ್ಲಿ ಮಾಡಿದ ಹೂಡಿಕೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕೆಲಸದ ಸ್ಥಳದಲ್ಲಿ ಬರುವ ಸಮಸ್ಯೆಯನ್ನು ಮಾತಿನ ಮೂಲಕ ಪರಿಹರಿಸಿ. ಈ ತಿಂಗಳು ನೀವು ಯಶಸ್ಸನ್ನು ಪಡೆಯುತ್ತೀರಿ ಆದರೆ ಅದು ನಿಮ್ಮ ನಿರೀಕ್ಷೆಗಳಿಗಿಂತ ಕಡಿಮೆ ಇರುತ್ತದೆ.

ನಿಮ್ಮ ಗ್ರಹ ಶುಕ್ರ
ನಿಮ್ಮ ಅಂತಃಪ್ರಜ್ಞೆಯನ್ನು ಅವಲಂಬಿಸಿ ನಿಮ್ಮ ಹೂಡಿಕೆಗಳನ್ನು ನೀವು ನಿರ್ಧರಿಸಿದಾಗ ಮಾತ್ರ ಆರ್ಥಿಕ ಸಂಪತ್ತಿನ ಬೆಳವಣಿಗೆಯನ್ನು ಕಾಣಲು ಸಾಧ್ಯವಾಗುವುದು. ಈ ತಿಂಗಳು ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಆತಂಕ ಹೆಚ್ಚಾಗುತ್ತದೆ. ಪ್ರೀತಿಯ ವಿಷಯದಲ್ಲೂ ಚಿಂತೆ ಹೆಚ್ಚುವುದು. ಸಂಬಂಧದಲ್ಲಿ ಒತ್ತಡ ಹೆಚ್ಚಾಗುವುದು. ಅಗ್ಯತ ಇರುವವರಿಗೆ ಮಾಡುವ ದಾನ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ನಿಮ್ಮ ಗ್ರಹ ಕೇತು
ಪ್ರೀತಿ ಹಾಗೂ ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಸಂಗಾತಿಯೊಂದಿಗೆ ನೀವು ಆಹ್ಲಾದಕರ ಸಮಯವನ್ನು ಕಳೆಯುತ್ತೀರಿ. ಕಾರ್ಯ ಕ್ಷೇತ್ರದಲ್ಲಿ ಹಠಾತ್ ನಷ್ಟವಾಗಬಹುದು. ಹಣದ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ನೀವು ಹೊಸ ಕೆಲಸಕ್ಕೆ ಧೈರ್ಯದಿಂದ ಮುನ್ನುಗಬಹುದು, ಅದರಲ್ಲಿ ಯಶಸ್ವಿ ಕಾಣುವಿರಿ.

ನಿಮ್ಮ ಗ್ರಹ ಶನಿ
ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ, ನೀವು ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸುತ್ತೀರಿ. ಈ ತಿಂಗಳು ನಿಮಗೆ ಶುಭವಾಗಲಿದೆ. ಜೂನ್ ತಿಂಗಳಲ್ಲಿ ಆರ್ಥಿಕ ಪ್ರಗತಿಯನ್ನು ಸಹ ನೀವು ನೋಡಲಾರಂಭಿಸುತ್ತೀರಿ. ಈ ತಿಂಗಳು ಪರಸ್ಪರ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ. ಜೂನ್ ಕೊನೆಯ ಹಂತದಲ್ಲಿ ಪ್ರಗತಿ ಇರುತ್ತದೆ ಮತ್ತು ಮನಸ್ಸು ಸಂತೋಷವಾಗಿರುತ್ತದೆ.

ನಿಮ್ಮ ಗ್ರಹ ಕುಜ
ಸಂಬಂಧದಲ್ಲಿ ಪ್ರೀತಿ ಮತ್ತು ಸಂತೋಷ ಇರುತ್ತದೆ. ಕೆಲಸದ ಕ್ಷೇತ್ರದಲ್ಲಿಯೂ ಬದಲಾವಣೆ ಕಾಣುತ್ತೀರಿ, ಅದು ಒಳ್ಳೆಯ ಬೆಳವಣಿಗೆಯಾಗಿರುತ್ತದೆ. ಈ ತಿಂಗಳು ಹಣಕಾಸಿನ ಖರ್ಚು ಹೆಚ್ಚಾಗಲಿದ್ದು, ಈ ಬಗ್ಗೆ ಗಮನ ಹರಿಸಬೇಕಾಗಿದೆ. ತಿಂಗಳ ಕೊನೆಯ ಹಂತದಲ್ಲಿ ಮನಸ್ಸು ಸಂತೋಷವಾಗಿರುತ್ತದೆ.



Click it and Unblock the Notifications











