For Quick Alerts
ALLOW NOTIFICATIONS  
For Daily Alerts

ವೃಶ್ಚಿಕ ರಾಶಿಯವರೊಂದಿಗೆ ಎಂದಿಗೂ ಇಂಥ ವಿಷಯಗಳನ್ನು ಚರ್ಚಿಸಬೇಡಿ!

|

ಪ್ರತಿಯೊಂದು ರಾಶಿಯವರು ತಮ್ಮದೇ ಆದ ಭಿನ್ನ ಗುಣಾವಗುಣಗಳನ್ನು ಹೊಂದಿರುತ್ತಾರೆ. ಉದಾರಿಗಳು, ಕೋಪಿಷ್ಠರು, ಹೊಟ್ಟೆಕಿಚ್ಚಿನ ಸ್ವಭಾವ, ಎಲ್ಲವನು ವಿಮರ್ಶಿಸುವ ಗುಣ ಹೀಗೆ ಒಂದೊಂದು ರಾಶಿಯವರಲ್ಲೂ ಕೆಲವು ಗುಣಗಳು ಸ್ವಭಾವದಲ್ಲೇ ಹೆಚ್ಚಾಗಿ ಬೆರೆತಿರುತ್ತದೆ. ಹಾಗೆಂದ ಮಾತ್ರಕ್ಕೆ ಇವರು ಕೆಟ್ಟವರು, ಒಳ್ಳೆವರು ಎಂದು ನಿರ್ಧರಿಸಲಾಗದು, ಎಲ್ಲ ರಾಶಿಗಳಲ್ಲು ಎಲ್ಲ ಗುಣಗಳು ಇದ್ದರು, ಕೆಲವು ಗುಣ ಹೆಚ್ಚಾಗಿರುತ್ತದೆಯಷ್ಟೇ.

ಇದೇ ರೀತಿ ವೃಶ್ಚಿಕ ರಾಶಿಯವರು ಸಹ ತಮ್ಮದೇ ಗುಣಾವಗುಣಗಳನ್ನು ಹೊಂದಿದ್ದಾರೆ. ಆದರೆ ಎಚ್ಚರ ಇವರ ಬಳಿ ಎಂದಿಗೂ ಕೆಲವು ವಿಷಯಗಳನ್ನು ಚರ್ಚಿಸಲೇಬೇಡಿ. ತೀವ್ರ ಹಾಗೂ ನಿರ್ಭೀತ ಗುಣವನ್ನು ಹೊಂದಿರುವುದರಿಂದಲೇ ಹೆಸರುವಾಸಿಯಾಗಿರುವ ವೃಶ್ಚಿಕ ರಾಶಿಯವರ ಸ್ವಭಾವ ಜನರಿಗೆ ತುಂಬಾ ಅಹಿತಕರವೆನಿಸುತ್ತದೆ.

ಬೇಕಿದ್ದರೆ ಒಮ್ಮೆ ವೃಶ್ಚಿಕ ರಾಶಿಯವರನ್ನ "ನೀನೇಕೆ ವಿಷಯಗಳನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತೀಯ ಅಥವಾ ಭಯವೇ ಇಲ್ಲದಂತೆ ಏಕೆ ವರ್ತಿಸುವೆ,'' ಎಂದು ಕೇಳಿ ನೋಡಿ, ಅವರ ಸ್ವಭಾವದಲ್ಲಾಗುವ ಬದಲಾವಣೆಯನ್ನು ಗಮನಿಸಿ!.

ಅದರಲ್ಲೂ ನೀವೇನಾದರೂ ವೃಶ್ಚಿಕ ರಾಶಿಯವರನ್ನು ಪ್ರೀತಿಸಿದ್ದರೆ ಅಥವಾ ವಿವಾಹವಾಗುತ್ತಿದ್ದರೆ ಕೆಲವು ವಿಷಯಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಮುಂದೆ ಹೇಳಲಾಗುವಂಥ ಪ್ರಶ್ನೆಗಳನ್ನು ಎಂದಿಗೂ ಅವರ ಬಳಿ ಕೇಳುವ ಪ್ರಯತ್ನ ಮಾಡಬೇಡಿ, ಇಲ್ಲವಾದಲ್ಲಿ ಅವರ ಮತ್ತೊಂದು ಪ್ರತಿರೂಪವನ್ನೇ ನೋಡಬೇಕಾದೀತು.

ಎಂಥಹ ವಿಷಯಗಳನ್ನು ವೃಶ್ಚಿಕ ರಾಶಿಯವರ ಬಳಿ ಚರ್ಚಿಸಬಾರದು.....

ALSO READ: ಯಾವ ರಾಶಿ ಹೇಗೆ ಹಣ ಉಳಿಸಬೇಕು? ಇಲ್ಲಿದೆ ಟಿಪ್ಸ್

ಮಾಡಿದ ತಪ್ಪನ್ನು ಮರೆತು, ನನ್ನನೆಂದಾದರೂ ಕ್ಷಮಿಸಿದ್ದೀಯಾ?

ಮಾಡಿದ ತಪ್ಪನ್ನು ಮರೆತು, ನನ್ನನೆಂದಾದರೂ ಕ್ಷಮಿಸಿದ್ದೀಯಾ?

ಇತರೆ ರಾಶಿಯವರಿಗೆ ಹೋಲಿಸಿದರೆ ವೃಶ್ಚಿಕ ರಾಶಿಯವರು ತೀವ್ರವಾದ ದ್ವೇಷ, ಹಗೆಯನ್ನು ಸಾಧಿಸುವ ಸ್ವಭಾವದವರಾಗಿರುತ್ತಾರೆ. ಅವರಿಗೆ ಯಾರಾದರೂ ಕೆಟ್ಟದ್ದು ಮಾಡಿದರೆ, ಅವರ ಕಣ್ಣಿಗೆ ಕೆಟ್ಟವರಾಗಿ ಕಂಡರೆ ಎಂದಿಗೂ ಮರೆಯುವುದಿಲ್ಲ ಹಾಗೂ ಕ್ಷಮಿಸುವುದಿಲ್ಲ. ಅವರ ನಂಬಿಕೆಗೇನಾದರೂ ದ್ರೋಹ ಮಾಡಿದರೆ ಸುಮ್ಮನೆ ಬಿಡುವ ಸ್ವಭಾವದವರಲ್ಲ, ತಮ್ಮ ಕೈವಾಡವನ್ನು ಸಹ ಪ್ರದರ್ಶಿಸುತ್ತಾರೆ, ಆಗ ದೇವರೇ ನಿಮ್ಮನ್ನು ಕಾಪಾಡಬೇಕು. ಸಿಹಿಯಾದ ಹಲವು ಗುಣಗಳಿರುವ ವೃಶ್ಚಿಕ ರಾಶಿಯವರಿಗೆ ಮೋಸ ಮಾಡಿದವರನ್ನು ಮರೆಯಲು ಕಷ್ಟವಾಗುತ್ತದೆ ಅಥವಾ ತುಂಬಾ ಸಮಯ ಹಿಡಿಯುತ್ತದೆ. ಆದರೆ ಅವರೇ ಕೊನೆಯಲ್ಲಿ ನಿಮ್ಮ ಬಳಿ ಬರುತ್ತಾರೆ. ಅವರಿಗೆ ತಾಳ್ಮೆ ಹೆಚ್ಚಾಗಿ ಇರುವುದರಿಂದ ಮತ್ತೊಬ್ಬರ ಮೇಲೆ ಸೇಡು ತೀರಿಕೊಳ್ಳುವ ಮುನ್ನ ತುಂಬಾ ಸಮಯ ಕಾಯುತ್ತಾರೆ.

ಅಚ್ಚರಿಗಳು ಬೇಡ

ಅಚ್ಚರಿಗಳು ಬೇಡ

ವೃಶ್ಚಿಕ ರಾಶಿಯವರು ಜನರನ್ನು ನಂಬದೇ ಇದ್ದರೂ ಎಲ್ಲವನ್ನು ತಿಳಿಯಲು ಬಯಸುತ್ತಾರೆ. ಯಾವುದೂ ಕಾರಣಕ್ಕೂ ಕೋಪ ಗೊಂಡ ಅಥವಾ ವಾಗ್ವಾದ ನಡೆಯುವ ಸಂದರ್ಭಗಳಲ್ಲಿ "ನರಕ'' ಎಂಬ ಪದ ಅಥವಾ ಇನ್ನಷ್ಟು ಕೋಪ ಉಂಟಾಗುವ ಪದಗಳನ್ನು ಬಳಸದಿರಿ. ಇವರಿಗೆ ಆಶ್ಚರ್ಯಗಳು, ಅಚ್ಚರಿಗಳು ಎಂದರೆ ಆಗುವುದಿಲ್ಲ, ಆದ್ದರಿಂದ ಇವರಿಗೆ ಮೊದಲೇ ಎಲ್ಲವನ್ನು ತಿಳಿಸಿಬಿಡಿ. ಎತ್ತರದ ಧ್ವನಿಯಲ್ಲಿ ಮಾತನಾಡುವುದಕ್ಕಿಂತ ನಿಮ್ಮ ನಿಯತ್ತನ್ನು ಇವರಿಗೆ ಪ್ರದರ್ಶಿಸುವುದು ನಿಮಗೇ ಉತ್ತಮ.

ALSO READ: ಈ ರಾಶಿಗಳಿಗೆ ಸುಳ್ಳನ್ನು ಹೇಗೆ ಹೇಳಬೇಕೆಂದು ಗೊತ್ತಿಲ್ಲ!

ಯಾಕಿಷ್ಟು ತೀಕ್ಷ್ಣ ನೀನು?

ಯಾಕಿಷ್ಟು ತೀಕ್ಷ್ಣ ನೀನು?

ಈ ರಾಶಿಯವರು ನಿಮ್ಮನ್ನು ಅಗಾಧವಾಗಿ ಇಷ್ಟಪಡುತ್ತಾರೆ ಇಲ್ಲವಾದರೆ ದ್ವೇಷಿಸುತ್ತಾರೆ. ಈ ಎರಡನ್ನು ಹೊರತುಪಡಿಸಿ ಬೇರೆಯ ನಿರ್ಧಾರಗಳಿಗೆ ಇವರಲ್ಲಿ ಅವಕಾಶವೇ ಇಲ್ಲ. ಇವರು ಕೋಪವನ್ನು, ತೀವ್ರತೆಯನ್ನು ಅಂತರಾಳದಲ್ಲೇ ಹುದುಗಿಸುವುದು ಮಂಜುಗಡ್ಡೆಯಂತೆ, ಬಹಳ ಬೇಗ ಕರಗಿ ಎಲ್ಲವನ್ನು ಹೊರಹಾಕಿಬಿಡುತ್ತಾರೆ. ಇವರು ಯಾವುದೇ ವೃತ್ತಿಯಲ್ಲಿರಲಿ ಬಹಳ ಆಳವಾದ ಸಂಶೋಧನೆ, ತನಿಖೆಯನ್ನು ಮಾಡುತ್ತಾರೆ. ನೀನು ಏಕೆ ಇಷ್ಟು ಆಳವಾಗಿ ಚಿಂತಿಸುತ್ತೀಯಾ ಎಂದು ಏನಾದರು ಕೇಳಿದರೆ, ಇವರಿಗೆ ಬಹಳ ಕೋಪ ಬರುತ್ತದೆ ಅಥವಾ ನನ್ನ ಪ್ರತಿಭೆಯನ್ನು ಇವರು ಕಡೆಗಣಿಸುತ್ತಿದ್ದಾರೆ, ಕೀಳಾಗಿ ನೋಡುತ್ತಿದ್ದಾರೆ ಎಂದು ತಪ್ಪಾಗಿ ಸಹ ಅರ್ಥೈಸಬಹುದು.

ತಾನೇ ಸರಿ!

ತಾನೇ ಸರಿ!

ಇವರು ತನ್ನದೇ ಆದ ದಾರಿಯಲ್ಲಿ ಎಲ್ಲವನ್ನು ಮಾಡಲು ಮುಂದಾಗುತ್ತಾರೆ. ನೀವು ಈ ಕೆಲಸವನ್ನು ಹೇಗೆ ಮಾಡುತ್ತೀರಾ ಎಂದಾದರೆ ಅವರು ಏನನ್ನು ಹೇಳುವುದಿಲ್ಲ, ಆದರೆ ಆಂತರಿಕವಾಗಿ ಅದನ್ನು ಹಾಗೆಯೇ ಮಾಡುವ ಮನಸ್ಸನ್ನು ಹೊಂದಿರುತ್ತಾರೆ. ಅವರು ತನ್ನದೇ ದಾರಿಯಲ್ಲಿ ಸರಿಯಾಗಿದ್ದಾನಷ್ಟೇ ಎಂದು ಬೇರೆಯವರು ಹೇಳುವುದನ್ನು ಇವರು ಇಷ್ಟಪಡುವುದಿಲ್ಲ. ಅಂದ ಮಾತ್ರಕ್ಕೆ ಇವರು ಪರಿಪೂರ್ಣ ಎಂದಲ್ಲ, ಆದರೆ ಇವರು ಹಿಡಿದ ಕೆಲಸವನ್ನು ತಮ್ಮದೇ ಆದ ರೀತಿಯಲ್ಲಿ ಪಟ್ಟಿನಿಂದ ಮಾಡುತ್ತಾರೆ, ಸ್ಪರ್ಧಾತ್ಮಕವಾದ ಗೀಳು ಇವರಿಗಿದೆ.

ನೀನು ಗರ್ವಿ

ನೀನು ಗರ್ವಿ

ವೃಶ್ಚಿಕ ರಾಶಿಯ ಬಗ್ಗೆ ಹೇಳಿಕೆಯೊಂದಿದೆ, "ನೀನು ವೃಶ್ಚಿಕ ರಾಶಿಯವರನ್ನು ಕಡೆಗಣಿಸಿದರೆ ಮತ್ತೆ ತಪ್ಪಿಸಿಕೊಳ್ಳಲು ಬೇರೆ ಅವಕಾಶ ಇಲ್ಲದಿದ್ದರೆ ಕೊನೆಗೆ ಅವರೇ ಅಂತ್ಯಕಾಣುತ್ತಾರೆ,'' ಎಂದು. ಅಂದರೆ ವೃಶ್ಚಿಕ ರಾಶಿಯವರು ಎಷ್ಟು ಗರ್ವಿಷ್ಟರೆಂದರೆ ಯಾವುದೇ ಸಂದರ್ಭದಲ್ಲೂ ತಮ್ಮದೇ ನಡೆಯಬೇಕು, ಬೇರೆಯವರ ಮೇಲೆ ಅವಲಂಬನೆ ಇಷ್ಟಪಡುವುದಿಲ್ಲ. ಹಾಗೇನಾದರೂ ಅದರೆ ತಮ್ಮನ್ನ ತಾವೇ ದಹಿಸಿಕೊಳ್ಳುತ್ತಾರೆಯೇ ವಿನಃ ಯಾರ ಮುಂದೆಯೂ ತಲೆ ಬಾಗುವುದಿಲ್ಲ.

ALSO READ: ಸಾಲದಿಂದ ಮುಕ್ತಿ ಪಡೆಯಬೇಕೆ? ಜ್ಯೋತಿಷ್ಯಶಾಸ್ತ್ರದ ಈ ವಿಧಾನಗಳನ್ನು ಪಾಲಿಸಿ

ಇಲ್ಲ

ಇಲ್ಲ

ವೃಶ್ಚಿಕ ರಾಶಿಯವರಿಗೆ ಯಾರಾದರೂ ಇಲ್ಲ ಎನ್ನುವುದು ಅಥವಾ ಅವರನ್ನು ನಿರಾಕರಿಸುವುದನ್ನು ಇಷ್ಟಪಡುವುದಿಲ್ಲ. ಅಕಸ್ಮಾತ್ ಇಂಥ ಪದಗಳು ಅವರ ಕಿವಿಗೆ ಬಿದ್ದರೆ, ತಮಗೆ ಅದು ಕೇಳಿಸಿಯೇ ಇಲ್ಲ ಎಂಬಂತೆ ನಾಟಕವಾಡುತ್ತಾರೆ. ಇವರ ಈ ವರ್ತನೆಯೇ ವಿಷಕಾರಿ ಎನ್ನುವ ಸ್ನೇಹಕ್ಕೆ ಕಾರಣವಾಗಬಹುದು. ಇವರ ಗರ್ವವು ಇವರನ್ನು ಮತ್ತೆ ಕಳಚಿಕೊಂಡ ಸ್ನೇಹ, ಸಂಬಂಧವನ್ನು ಮತ್ತೆ ಬೆಸೆಯಲು ನಿರಾಕರಿಸುತ್ತದೆ. ಸ್ನೇಹವನ್ನು ಕಳೆದುಕೊಳ್ಳಲು ಸಿದ್ಧರಿದ್ದಾರೆಯೇ ವಿನಃ ಇಲ್ಲ ಎನ್ನು ಪದ ಕೇಳಲು ಇವರಿಗೆ ಇಷ್ಟವಿಲ್ಲ.

ಹೊಟ್ಟೆಕಿಚ್ಚು ಇದೆಯೇ?

ಹೊಟ್ಟೆಕಿಚ್ಚು ಇದೆಯೇ?

ಇವರಿಗೆ ಯಾರಾದರೂ ನಿನಗೆ ಹೊಟ್ಟೆಕಿಚ್ಚು ಇದೆಯೇ ಎಂದರೆ ಸ್ವಲ್ಪವು ಇಷ್ಟವಾಗುವುದಿಲ್ಲ, ಮುಖ ಕೆಂಪಾಗುತ್ತದೆ. ಇವರ ಹೊಟ್ಟೆಕಿಚ್ಚಿನ ಸ್ವಭಾವವೇ ಇವರು ಎಲ್ಲವನ್ನು, ಎಲ್ಲರನ್ನು ಸುಲಭವಾಗಿ ಬಿಟ್ಟುಕೊಡಲು ಕಾರಣವಾಗಿರುತ್ತದೆ. ನಿಮಗೆ ಶಾಂತಿಯುತ, ನೆಮ್ಮದಿಯ ಜೀವನ ಬೇಕಿದ್ದರೆ ಇಂತಹ ಯಾವ ಪ್ರಶ್ನೆಗಳನ್ನು ಕೇಳದೇ, ಇವರ ಮನಸ್ಥಿತಿಗೆ ಅನುಗುಣವಾಗಿದ್ದರೆ ನಿಮಗೇ ಒಳಿತು.

English summary

Never Tell These Things To A Scorpio

There are a few things that you should completely avoid telling a Scorpio as these individuals are known for their intense and fearless side that can kill people! From asking them why they are so intense or why they do not forget or forgive easily would make you see a different side of a Scorpio.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X