Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೆಪ್ಚೂನ್ ಹಿಮ್ಮುಖ ಚಲನೆ 2020: ನಿಮ್ಮ ರಾಶಿಗಳ ಮೇಲೆ ಹೇಗಿದೆ ಇದರ ಪ್ರಭಾವ
ಇದೀಗ ನೆಪ್ಚೂನ್ ಗ್ರಹದ ಹಿಮ್ಮುಖ ಚಲನೆ ಶುರುವಾಗಿದೆ. ತನ್ನ ಮನೆಯಾದ ಮೀನದಿಂದ ಜೂನ್ 23ಕ್ಕೆ ನೆಪ್ಚೂನ್ ಹಿಮ್ಮುಖವಾಗಿ ಚಲಿಸಲಾರಂಭಿಸಿದೆ. ಈ ಹಿಮ್ಮುಖ ಚಲನೆ ನವೆಂಬರ್ 23ರವೆಗೆ ಇರುತ್ತದೆ. ನೆಪ್ಚೂನ್ ಗ್ರಹವನ್ನು ಕನಸು ಹಾಗೂ ಭ್ರಮೆಗಳ ಗ್ರಹವೆಂದೇ ಗುರುತಿಸಲಾಗಿದೆ.

ಈ ಗ್ರಹದ ಹಿಮ್ಮುಖ ಚಲನೆ ಗ್ರಹಗತಿಗಳ ಮೇಲೆಯೂ ಪ್ರಭಾವ ಬೀರಲಿದೆ. ಜ್ಯೋತಿಷ್ಯ ಪ್ರಕಾರ ನೆಪ್ಚೂನ್‌ನ ಹಿಮ್ಮುಖ ಚಲನೆಯು ಯಾವ ಗ್ರಹಗಳ ಹೇಗೆ ಪರಿಣಾಮ ಬೀರಿದೆ ಎಂದು ನೋಡೋಣ:
ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

ಮೇಷ:
ಮುಂಬರುವ ತಿಂಗಳಿನಲ್ಲಿ ನಿಮ್ಮ ಬದುಕಿನಲ್ಲಿ ಬದಲಾವಣೆ ಉಂಟಾಗಲಿದೆ. ಕ್ವಾರೆಂಟೈನ್ ಸಮಯದಲ್ಲಿ ನಿಮ್ಮಲ್ಲಿಯಾದ ಬದಲಾವಣೆ ನಿಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಲಿದೆ. ಮುಂಬರುವ ತಿಂಗಳಿನಲ್ಲಿ ನಿಮ್ಮ ಕೌಶಲ್ಯ ಬಳಸಿಕೊಳ್ಳುವ ಅವಕಾಶ ದೊರೆಯಲಿದೆ. ನಿಮ್ಮ ಪ್ರೀತಿ ಪಾತ್ರರಿಗೂ ಸಮಯ ನೀಡಲು ಮರೆಯದಿರಿ. ನೀವು ಆಧ್ಯಾತ್ಮದ ಕಡೆಗೆ ಒಲವು ತೋರಿದರೆ ಒಳಿತಾಗಲಿದೆ.

ವೃಷಭ
ಈ ಸಮಯದಲ್ಲಿ ನೀವು ನಿಮ್ಮ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು ಹಾಗೂ ನಿಮ್ಮ ಕೆರಿಯರ್ ಕಡೆಗೆ ಹೆಚ್ಚಿನ ಗಮನ ನೀಡುವ ಅಗ್ಯತವಿದೆ. ನೆಪ್ಚೂನ್ ನಿಮ್ಮ ಸಾಮಾಜಿಕ ಜೀವನದಲ್ಲಿ ಸ್ವಲ್ಪ ತೊಂದರೆಗಳನ್ನು ತರಬಹುದು. ಆದರೆ ನಿಮಗೆ ಏನು ಬೇಕೋ ಅದರತ್ತ ಗಮನ ನೀಡುವುದು ಒಳ್ಲೆಯದು. ನಿಮ್ಮ ಬದುಕಿಗೆ ಅವಶ್ಯಕವಿಲ್ಲದ ವಿಷಯಗಳ ಸಮಯ ವ್ಯರ್ಥ ಮಾಡಿ, ನಿಮ್ಮ ವೈಯಕ್ತಿಕ ಬದುಕಿಗೆ ಹೆಚ್ಚು ಗಮನ ನೀಡಿದರೆ ತಪ್ಪೇನಿಲ್ಲ.

ಮಿಥುನ
ಈ ನೆಪ್ಚೂನ್ ಹಿಮ್ಮುಖ ಚಲನೆ ನಿಮ್ಮ ಬದುಕಿನಲ್ಲಿ ಮಹತ್ವರದ ಬದಲಾವಣೆ ತರಲಿದ್ದು ಅದನ್ನು ಎದುರಿಸಲು ಸಿದ್ಧರಾಗಿರಿ. ನಿಮ್ಮ ಗುರಿ ಸಾಧಿಸಲು, ನಿಮ್ಮ ಕನಸ್ಸು ಪೂರೈಸಲು ಹೊಸ ಸ್ಪೂರ್ತಿಯೊಂದು ದೊರೆಯಲಿದೆ. ಈ ಬದಲಾವಣೆ ನಿಮಗೆ ಕಷ್ಟವಾದರೆ ನಿಮ್ಮಲ್ಲಿರುವ ಕೌಶಲ್ಯವನ್ನು ಮತ್ತಷ್ಟು ಕರಗತ ಮಾಡಿಕೊಳ್ಳಲು ಯತ್ನಿಸುವುದು ಒಳ್ಳೆಯದು. ಅಲ್ಲದೆ ನಿಮ್ಮ ಆಲೋಚನೆ ಹಾಗೂ ದೃಷ್ಟಿಕೋಣದಲ್ಲೂ ಬದಲಾವಣೆ ಆಗಲಿದೆ, ನಿಮ್ಮ ಹತ್ತಿರದವರ ಜೊತೆ ನಿಮ್ಮ ಬಾಂಧವ್ಯ ಉತ್ತಮವಾಗಿರಲಿದೆ.

ಕರ್ಕ
ಈ ಕೊರೊನಾವೈರಸ್ ಆತಂಕ ಮರೆಯಾದ ತಕ್ಷಣ ಹೊಸ ಸ್ಥಳಗಳಿಗೆ ಭೇಟಿ ನೀಡಲು ಬಯಸುತ್ತಿದ್ದೀರಿ. ಹೊಸ ಸ್ಥಳಗಳಿಗೆ ಹೋಗಬೇಕು, ಹೊಸತನ್ನು ಅನುಭವಿಸಬೇಕು ಎಂದು ನೀವು ಬಯಸುವುದಾದರೆ ನಿಮ್ಮ ಆಸೆಯನ್ನು ಸ್ವಲ್ಪ ಹಿಡಿದಿಟ್ಟುಕೊಳ್ಳುವುದು ಒಳ್ಳೆಯದು. ಏಕೆಂದರೆ ಹೀಗೆ ಸಾಹಸಿ ಟ್ರಿಪ್‌ಗಳಿಗೆ ಹೋಗಲು ಪರಿಸ್ಥಿತಿ ಅನುಕೂಲಕರವಾಗಿಲ್ಲ.

ಸಿಂಹ
ಮುಂದಿನ ಕೆಲ ತಿಂಗಳು ಸ್ವಲ್ಪ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬ ಹಾಗೂ ಜೀವನದಲ್ಲಿ ಹಲವಾರು ಕಷ್ಟಗಳು ಎದುರಾಗಲಿದೆ. ಆದರೆ ಕಷ್ಟದ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸಿ. ಹಣ ಖರ್ಚು ಮಾಡುವಾಗ ಎಚ್ಚರವಹಿಸಿ. ಸುಮ್ಮನೆ ಅನವಶ್ಯಕ ಜಗಳದಲ್ಲಿ ತೊಡಗಿ ನಿಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುವುದಕ್ಕಿಂತ ನಿಮ್ಮ ಶಕ್ತಿಯನ್ನು ಒಳಿತಿಗೆ ವಿನಿಯೋಗಿಸಲು ಪ್ರಯತ್ನಿಸಿ. ಯಾವುದೇ ಕಾರಣಕ್ಕೆ ಭರವಸೆ ಕಳೆದುಕೊಳ್ಳಬೇಡಿ.

ಕನ್ಯಾ
ನೀವು ಸಂಬಂಧದಲ್ಲಿ ಖುಷಿಯಾಗಿದ್ದರೂ ಸಂಬಂಧದ ಸವಾಲಿನ ಮತ್ತೊಂದು ಮುಖದ ಪರಿಚಯವಾಗಲಿದೆ. ನಿಮ್ಮ ಸಂಗಾತಿ ವಿಚಿತ್ರ ಅಭ್ಯಾಸಗಳು, ನಡುವಳಿಕೆಗಳ ಬಗ್ಗೆ ತಿಳಿದು ಬರುವುದು. ಸಾಮರಸ್ಯ ತೊಂದರೆ ಉಂಟಾದರೂ ಸಂಬಂಧದಲ್ಲಿನ ಸಮಸ್ಯೆ ಬಗೆಹರಿಸಬಹುದಾಗಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಮನಸ್ಸಿಗೆ ಶಾಂತಿ ದೊರೆಯುವುದು.

ತುಲಾ
ಈ ಮುಂಬರುವ ತಿಂಗಳಿನಲ್ಲಿ ನಿಮಗೆ ಏನು ಸಾಧ್ಯವೋ ಅದನ್ನಷ್ಟೇ ಒಪ್ಪಿಕೊಳ್ಳಿ, ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಲೆಯದು. ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ದೊರೆಯಲು ಹೆಚ್ಚಿನ ಗಮನ ನೀಡಬೇಕು. ನಿಮ್ಮ ಕೆಲಸದ ಕಡೆ ಹೆಚ್ಚಿನ ಗಮನ ನೀಡಿ. ನಿಮ್ಮ ಕೆಲಸ ಹಾಗೂ ವೈಯಕ್ತಿ ಬದುಕು ಸರಿದೂಗಿಸಿಕೊಂಡು ಹೋಗುವಂತೆ ಯೋಜನೆ ರೂಪಿಸಿ ಕೆಲಸ ಮಾಡಿ.

ವೃಶ್ಚಿಕ
ನೆಪ್ಚೂನ್ ಹಿಮ್ಮುಖ ಚಲನೆ ನಿಮ್ಮ ಕೌಶಲ್ಯ ಹಾಗೂ ಕ್ರಿಯಾಶೀಲತೆ ಮತ್ತಷ್ಟು ಹೆಚ್ಚಿಸಲಿದೆ. ನೀವು ನಿಮ್ಮನ್ನು ಕಲೆ ಹಾಗೂ ನೀವು ಬಯಸಿದ ರೀತಿಯಲ್ಲಿ ಬಿಂಬಿಸಲು ಅವಕಾಶ ದೊರೆಯಲಿದೆ. ಕೆಲವೊಂದು ಸವಾಲುಗಳು ಬರುತ್ತದೆ, ಆದರೆ ಭರವಸೆ ಇರಲಿ, ಸಮಸ್ಯೆಗಳು ದೂರವಾಗುವುದು. ಹೊಸ ಹವ್ಯಾಸ ಕಲಿಯುತ್ತೀರಿ, ಹೊಸತನ್ನು ಕಲಿಯಲು ಇದು ಉತ್ತಮವಾದ ಅವಕಾಶವಾಗಿದೆ.

ಧನು
ನಿಮ್ಮ ಬದುಕಿನಲ್ಲಿ ಬಯಸಿದ ಕಾರ್ಯ ನೆರವಾಗಲಿದೆ. ನಿಮ್ಮ ಬದುಕಿನಲ್ಲಿ ಒಳಿತಿನ ಕಡೆಗೆ ಹೆಚ್ಚಿನ ಗಮನ ನೀಡಿ. ಮುಂಬರುವ ದಿನಗಳಲ್ಲಿ ಕೆಲವೊಂದು ತೊಂದರೆಗಳು ಎದುರಾಗುವುದು, ಅವುಗಳನ್ನು ಎದುರಿಸದೆ ಓಡಿ ಹೋಗುವುದಕ್ಕಿಂತ ಎದುರಿಸಿದರೆ ನಿಮ್ಮ ಜೀವನದಲ್ಲಿ ಒಳಿತಾಗಲಿದೆ.

ಮಕರ
ಮುಂಬರುವ ದಿನಗಳಲ್ಲಿ ಇತರರೊಂದಿಗೆ ನೀವು ಮಾತನಾಡುವ ವೈಖರಿ ಬದಲಾಯಿಸುತ್ತೀರಿ. ನಿಮ್ಮ ಸುತ್ತಲಿನ ಜನರ ಸ್ವಭಾವ ಗೊತ್ತಾಗಿ ನೀವು ಕೂಡ ಎಚ್ಚರಿಕೆಯಿಂದ ವರ್ತಿಸುವಿರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಉತ್ತಮವಾಗಿ ಆಲೋಚಿಸಿ ತೆಗೆದುಕೊಳ್ಳುವಿರಿ. ಈ ನೆಪ್ಚೂನ್ ಹಿಮ್ಮುಖ ಚಲನೆ ನಿಮ್ಮನ್ನು ಮತ್ತಷ್ಟು ಪಕ್ವ ಮಾಡಲಿದೆ.

ಕುಂಭ
ನಮ್ಮ ಬದುಕಿನಲ್ಲಿ ಹೊಸದೊಂದು ಅಧ್ಯಾಯ ಆರಂಭವಾಗಲಿದೆ. ನಿಮ್ಮ ಬದುಕಿನಲ್ಲಿ ಏನು ಮಾಡಬೇಕೆಂದು ಒಂದು ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳವಂತೆ ಬದುಕು ನಿಮಗೆ ಪಾಠ ಕಲಿಸುತ್ತದೆ. ಹಣದ ಹಿಂದೆ ಓಡಬೇಕಾ ಅಥವಾ ಉತ್ತಮ ವ್ಯಕ್ತಿಯಾಗಿರಬೇಕಾ ಎಂಬುವುದು ತಿಳಿಯುತ್ತದೆ. ನಿಮ್ಮ ಸಮಸ್ಯೆಗಳನ್ನು ಯುಕ್ತಿಯಿಂದ ಸೋಲಿಸಲು ಪ್ರಯತ್ನಿಸಿ, ಇದರಿಂದ ಒಳಿತಾಗಲಿದೆ.

ಮೀನ
ನೆಪ್ಚೂನ್ ಹಿಮ್ಮುಖ ಚಲನೆ ನಿಮ್ಮ ಮೇಲೆ ಒಳ್ಳೆಯ ರೀತಿಯಲ್ಲಿಯೇ ಪ್ರಭಾವ ಬೀರಲಿದೆ. ನೀವು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವಿರಿ. ನಿಮ್ಮ ಆಸೆ, ಗುರಿ ಎಲ್ಲವೂ ನೆರವೇರುವುದು. ಬದುಕಿನಲ್ಲಿ ಬರುವುದನ್ನು ಸ್ವೀಕರಿಸಿ, ಆಧ್ಯಾತ್ಮದ ಚಿಂತನೆಯಿಂದಾಗಿ ಒಳಿತು ಉಂಟಾಗಲಿದೆ.
ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.
ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344



Click it and Unblock the Notifications









