For Quick Alerts
ALLOW NOTIFICATIONS  
For Daily Alerts

ನಿಮ್ಮ ಜನ್ಮ ನಕ್ಷತ್ರದ ಪ್ರಕಾರ 2021 ಭವಿಷ್ಯ ಹೇಗಿರಲಿದೆ?

|

ಜ್ಯೋತಿಷ್ಯವು ನಮ್ಮ ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ನಮ್ಮ ಮುಂದಿನ ಭವಿಷ್ಯ ಹೇಗಿರುತ್ತದೆ ಎಂದು ಹೇಳಲಾಗುತ್ತದೆ. 2021ರ ಬಗ್ಗೆ ಹಲವಾರು ಜ್ಯೋತಿಷ್ಯವನ್ನು ನೀವು ಓದಿರುತ್ತೀರಿ.

Nakshatra Astrology 2021

ನಾವಿಲ್ಲಿ ನಿಮ್ಮ ನಕ್ಷತ್ರ ಹಾಗೂ ರಾಶಿಗೆ ಅನುಗುಣವಾಗಿ ಈ ವರ್ಷದ 2021ರ ಭವಿಷ್ಯ ನೀಡಿದ್ದೇವೆ ನೋಡಿ.

ಇಲ್ಲಿ ಹಸ್ತಾದವರೆಗೆ ನೀಡಲಾಗಿದೆ, ಉಳಿದ ನಕ್ಷತ್ರಗಳ ಭವಿಷ್ಯ ಸ್ವಲ್ಪ ಸಮಯದಲ್ಲಿ ನೀಡಲಾಗುವುದು, ನಿರೀಕ್ಷಿಸಿ.

ಅಶ್ವಿನಿ ನಕ್ಷತ್ರ:

ಅಶ್ವಿನಿ ನಕ್ಷತ್ರ:

ಅಶ್ವಿನಿ ನಕ್ಷತ್ರದವರ ಅಧಿಪತಿ ಮಂಗಳ ಹಾಗೂ ಇವರ ರಾಶಿ ಮೇಷ. ನಕ್ಷತ್ರ ಭವಿಷ್ಯ 2021ರ ಪ್ರಕಾರ ವರ್ಷದ ಆರಂಭವೂ ಆರ್ಥಿಕ ದೃಷ್ಟಿಯಿಂದ ತುಂಬಾ ಫಲಪ್ರದವಾಗಿದೆ. ಆದರೆ ನಿಮ್ಮ ವೃತ್ತಿ ಜೀವನದಲ್ಲಿ ಜನವರಿ ಮಧ್ಯದಿಂದ ಮಾರ್ಚ್‌ವರೆಗೆ ಸ್ವಲ್ಪ ಬದಲಾವಣೆ ಕಂಡು ಬರಬಹುದು. ಈ ಸಮಯದಲ್ಲಿ ನಿಮ್ಮ ಸಂಗಾತಿಯಲ್ಲಿ ನಂಬಿಕೆ ಇಡಿ. ಯಾವುದೇ ತಪ್ಪು ಕಲ್ಪನೆ ಬೆಳೆಸಿಕೊಳ್ಳದಂತೆ ಸೂಚಿಸಲಾಗಿದೆ. ತುಂಬಾ ಅವಶ್ಯಕತೆಯಿಲ್ಲದಿದ್ದರೆ ಸೆಪ್ಟೆಂಬರ್‌ 16ರಿಂದ ನವೆಂಬರ್‌ 9ರವರೆಗೆ ಪ್ರಯಾಣ ಮಾಡದಿರುವುದು ಒಳ್ಳೆಯದು. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುವುದು. ನಿಮ್ಮ ಸಂಗಾತಿಯ ಯೋಗವು ನಿಮ್ಮ ಬೆಂಬಲಕ್ಕೆ ಇರಲಿದೆ.

ಭರಣಿ ನಕ್ಷತ್ರ:

ಭರಣಿ ನಕ್ಷತ್ರ:

ಭರಣಿ ನಕ್ಷತ್ರದವರ ಅಧಿಪತಿ ಶುಕ್ರ ಹಾಗೂ ರಾಶಿ ಮೇಷವಾಗಿದೆ. ನಕ್ಷತ್ರ ಭವಿಷ್ಯ 2021ರ ಪ್ರಕಾರ ಜನವರಿ 17ರಿಂದ ಮಾರ್ಚ್‌ವರೆಗೆ ಹಣಕಾಸಿನ ದೃಷ್ಟಿಯಿಂದ ತುಂಬಾ ಒಳ್ಳೆಯ ಸಮಯವಾಗಿದೆ. ಈ ಸಮಯದಲ್ಲಿ ಸಾಕಷ್ಟು ಹಣ ನಿಮ್ಮ ಕೈ ಸೇರುವುದು, ಆದರೆ ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸುವಂತೆ ಸೂಚಿಸಲಾಗಿದೆ. ನಿಮ್ಮ ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಅಲ್ಲದೆ ಪ್ರೇಮಿಗಳಿಗೂ ಈ ವರ್ಷ ಚೆನ್ನಾಗಿದೆ, ನೀವು ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡಬಹುದು. ಈ ವರ್ಷ ಯಾರಿಗೆ ಹಣ ಕೊಡಲೂ ಹೋಗಬೇಡಿ, ಅದೇ ರೀತಿ ಹಣ ಸಾಲ ಪಡೆಯಲೂ ಬೇಡಿ.

ಕೃತಿಕಾ ನಕ್ಷತ್ರ:

ಕೃತಿಕಾ ನಕ್ಷತ್ರ:

ಸೂರ್ಯನು ಕೃತಿಕಾ ನಕ್ಷತ್ರದವರ ಅಧಿಪತಿ. ಮೇಷ ಹಾಗೂ ವೃಷಭ ರಾಶಿಗಳಾಗಿದೆ. ಜನ್ಮ ನಕ್ಷತ್ರ ಭವಿಷ್ಯ 2021ರ ಪ್ರಕಾರ ಕುಟುಂಬದವರ ಜೊತೆ ಜಗಳವಾಡದಂತೆ ಸೂಚಿಸಲಾಗಿದೆ. ಫೆಬ್ರವರಿ ಕೊನೆಯಲ್ಲಿ ನೀವು ಕಳೆದುಕೊಂಡ ಅಥವಾ ತುಂಬಾ ಇಷ್ಟಪಟ್ಟ ವಸ್ತುವನ್ನು ಪಡೆದುಕೊಳ್ಳುವಿರಿ. ಈ ವರ್ಷ ವಿದ್ಯಾರ್ಥಿಗಳು ತಮ್ಮ ಅಧ್ಯಾಯನದ ಕಡೆ ತುಂಬಾನೇ ಗಮನಹರಿಸಬೇಕು. ಇಲ್ಲದಿದ್ದರೆ ನೀವು ಬಯಸಿದ ಫಲಿತಾಂಶ ದೊರೆಯುವುದಿಲ್ಲ. ನಿಮ್ಮ ಕೋಪವನ್ನು ಫೆಬ್ರವರಿ9-ಏಪ್ರಿಲ್ 11ರವರೆಗೆ ನಿಯಂತ್ರಣದಲ್ಲಿ ಇಡುವಂತೆ ಸೂಚಿಸಲಾಗಿದೆ. ಇನ್ನು ವ್ಯವಹಾರ ಹಾಗೂ ಹಣಕಾಸಿನ ದೃಷ್ಟಿಯಿಂದ ಈ ವರ್ಷ ಉತ್ತಮವಾಗಿದೆ, ಮತ್ತೊಂದೆಡೆ ನೀವು ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ, ಇಂಥ ಸಮಯದಲ್ಲಿ ನಿಮ್ಮ ಬಗ್ಗೆ ಗಮನಹರಿಸುವುದು ಒಳ್ಳೆಯದು. ನವೆಂಬರ್‌5ರಿಂದ ವರ್ಷದ ಕೊನೆಯವರಿಗೆ ಯಾವುದೇ ಮೂಢ ನಂಬಿಕೆ ನಂಬಿ ಹಾಳಾಗದಂತೆ ಸೂಚಿಸಲಾಗಿದೆ, ನಿಮ್ಮ ಪ್ರೀತಿ ಪಾತ್ರರ ಜೊತೆ ಸಮಯ ಕಳೆಯಿರಿ.

ರೋಹಿಣಿ ನಕ್ಷತ್ರ:

ರೋಹಿಣಿ ನಕ್ಷತ್ರ:

ರೋಹಿಣಿ ನಕ್ಷತ್ರದವರ ಅಧಿಪತಿ ಚಂದ್ರ, ರಾಶಿ ವೃಷಭ. ಜನ್ಮ ನಕ್ಷತ್ರ 2021ರ ಪ್ರಕಾರ ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದವರಿಗೆ ಈ ವರ್ಷ ಅನುಕೂಲಕರವಾಗಿದೆ. ಫೆಬ್ರವರಿ 11ರಿಂದ ಏಪ್ರಿಲ್ ಒಳಗೆ ವೃತ್ತಿಯಲ್ಲೂ ಯಶಸ್ಸು ಕಾಣುವಿರಿ. ಈ ಸಮಯದಲ್ಲಿ ಸೀನಿಯರ್ಸ್ ಕೂಡ ನಿಮಗಿರುವುದು. ವ್ಯವಹಾರಸ್ಥರಿಗೆ ಸಂಗಾತಿಯ ಬೆಂಬಲ ಪ್ರತಿ ಹಂತದಲ್ಲೂ ಇರುವುದು. ಈ ವರ್ಷ ಜೂನ್ 16ರಿಂದ ಆಗಸ್ಟ್‌ವರೆಗಿನ ಸಮಯ ತುಂಬಾ ಶುಭವಾಗಿದೆ. ಈ ಸಮಯದಲ್ಲಿ ಕೆಲ ಒಳ್ಳೆಯ ವ್ಯಕ್ತಿಗಳನ್ನು ಭೇಟಿ ಮಾಡುವಿರಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ, ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುವವರಿಗೆ ಅಕ್ಟೋಬರ್ 8 ರಿಂದ ವರ್ಷದ ಕೊನೆಯವರೆಗೆ ಪರಿಸ್ಥಿತಿ ಅನುಕೂಲಕರವಾಗಿದೆ.

ಮೃಗಶಿರ ನಕ್ಷತ್ರ:

ಮೃಗಶಿರ ನಕ್ಷತ್ರ:

ಮೃಗಶಿರ ನಕ್ಷತ್ರದವರ ಅಧಿಪತಿ ಮಂಗಳ, ವೃಷಭ ಹಾಗೂ ಮಿಥುನ ರಾಶಿಯಾಗಿದೆ. ಜನ್ಮ ನಕ್ಷತ್ರ 2021ರ ಭವಿಷ್ಯ ಪ್ರಕಾರ ಈ ವರ್ಷ ಆರಂಭದಲ್ಲಿ ನೀವು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಫೆಬ್ರವರಿ 14ರಿಂದ ಮೇವರೆಗೆ ಮಕ್ಕಳ ದೃಷ್ಟಿಯಿಂದ ಸಮಯ ಅನುಕೂಲಕರವಾಗಿದೆ. ಮಗು ಅಪೇಕ್ಷಿತರಿಗೆ ಈ ಸಮಯದಲ್ಲಿ ಶುಭ ಸುದ್ದಿ ಸಿಗುವುದು. ಸೆಪ್ಟೆಂಬರ್ 26ರಿಂದ ಆರೋಗ್ಯ ಉತ್ತಮವಾಗುವುದು. ವಿದೇಶ ಪ್ರಯಾಣದ ಯೋಗವೂ ಇದೆ.

ಆರ್ದ್ರ ನಕ್ಷತ್ರ:

ಆರ್ದ್ರ ನಕ್ಷತ್ರ:

ರಾಹು ಆರ್ದ್ರ ನಕ್ಷತ್ರವನ್ನು ಆಳ್ವಿಕೆ ಮಾಡುತ್ತಿರುವುದು, ರಾಶಿ ಮಿಥುನವಾಗಿದೆ. ಜನ್ಮ ನಕ್ಷತ್ರ 2021ರ ಭವಿಷ್ಯ ಪ್ರಕಾರ ಉದ್ಯೋಗ ಆಕಾಂಕ್ಷಿಗಳಿಗೆ ಈ ವರ್ಷ ಒಳ್ಳೆಯ ಅವಕಾಶಗಳು ಸಿಗಲಿದೆ. ನಿಮ್ಮ ಸಮಸ್ಯೆಗಳೂ ದೂರವಾಗಲಿದೆ, ಆದರೆ ಸಂಗಾತಿ ಬಗ್ಗೆ ಎಚ್ಚರವಹಿಸಲು ಸೂಚಿಸಲಾಗಿದೆ. ಅಲ್ಲದೆ ಸೆಪ್ಟೆಂಬರ್ 11ರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಹಿರಿಯರ ಜಿತೆ ಚರ್ಚಿಸಿ. ನವೆಂಬರ್‌ನಿಂದ ಆರೋಗ್ಯದಲ್ಲಿ ಏರಲಿತ ಕಂಡು ಬರಬಹುದು, ನಿಮ್ಮ ಆರೋಗ್ಯದ ಕಡೆ ಎಚ್ಚರವಹಿಸಿ.

ಪುನರ್ವಸು ನಕ್ಷತ್ರ:

ಪುನರ್ವಸು ನಕ್ಷತ್ರ:

ಪುನರ್ವಸು ನಕ್ಷತ್ರದವರ ಅಧಿಪತಿ ಗುರು, ರಾಶಿ ಮಿಥುನ ಮತ್ತು ಕರ್ಕ.ಜನ್ಮ ನಕ್ಷತ್ರ 2021ರ ಭವಿಷ್ಯ ಪ್ರಕಾರ ವರ್ಷದ ಆರಂಭದಲ್ಲಿ ಏರಳಿತ ಎದುರಿಸಬೇಕಾಗುವುದು, ಈ ಸಮಯದಲ್ಲಿ ಎಚ್ಚರವಾಗಿರಲು ಸೂಚಿಸಾಗಿದೆ. ಫೆಬ್ರವರಿ 11ರಿಮದ ಜೂನ್‌ವರೆಗೆ ವ್ಯವಹಾರದ ದೃಷ್ಟಿಯಿಂದ ಸಮಯ ತುಂಬಾ ಚೆನ್ನಾಗಿದೆ, ಈ ಸಮಯದಲ್ಲಿ ಆರ್ಥಿಕ ಲಾಭ ಉಂಟಾಗುವುದು. ಜುಲೈ 14ರಿಂದ ಧನಾತ್ಮಕ ಫಲಿತಾಂಶ ಕಾಣುವಿರಿ, ಇದ್ದ ಕಾಯಿಲೆಯೂ ದೂರವಾಗುವುದು, ಅಲ್ಲದೆ ಹೊಸ ಉದ್ಯೋಗವೂ ಸಿಗುವ ಸಾಧ್ಯತೆ ಇದೆ.

 ಪುಷ್ಯಾ ನಕ್ಷತ್ರ :

ಪುಷ್ಯಾ ನಕ್ಷತ್ರ :

ಪುಷ್ಯ ನಕ್ಷತ್ರದ ಅಧಿಪತಿ ಶನಿ, ರಾಶಿ ಕರ್ಕ. ಪ್ರಾರಂಭದ ಕೆಲ ತಿಂಗಳು ಕರ್ಕ ರಾಶಿಯವರಿಗೆ ಅನುಕೂಲಕರವಾಗಿದೆ. ನಿಮ್ಮ ಬಾಕಿಯುಳಿದ ಕೆಲಸ ಮಾಡಿ ಮುಗಿಸುವಿರಿ, ಫೆಬ್ರವರಿ 17ರವರೆಗೆ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತದೆ. ಆರ್ಥಿಕವಾಗಿಯೂ ಸದೃಢವಾಗಿರುವಿರಿ. ಜೂನ್ ಮಧ್ಯ ಭಾಗ ಆಗುವಷ್ಟರಲ್ಲಿ ಇನ್ನೂ ಉತ್ತಮವಾದ ಕೆಲಸ ಸಿಗುವ ಸಾಧ್ಯತೆ ಇದೆ. ವಿದೇಶ ಕಂಪನಿಯಲ್ಲಿ ಕೆಲಸ ಸಿಗುವ ಸಾಧ್ಯತೆಯೂ ಇದೆ. ವರ್ಷದ ಕೊನೆಯಲ್ಲಿ ಬಹುಕಾಲದ ಆರೋಗ್ಯ ಸಮಸ್ಯೆಯಿಂದ ಹೊರಬರುವಿರಿ.

ಅಶ್ಲೇಷ ನಕ್ಷತ್ರ:

ಅಶ್ಲೇಷ ನಕ್ಷತ್ರ:

ಅಶ್ಲೇಷ ನಕ್ಷತ್ರದವರ ಅಧಿಪತಿ ಬುಧ, ರಾಶಿ ಕರ್ಕ. ಈ ರಾಶಿಯವರು ವರ್ಷದ ಆರಂಭದ ತಿಂಗಳಿನಲ್ಲಿ ಸ್ಟಾಕ್‌ ಮಾರುಕಟ್ಟೆಯಲ್ಲಿ ಲಾಭ ಗಳಿಸಬಹುದು. ಜೂನ್‌-ಸೆಪ್ಟೆಂಬರ್‌ಯೊಳಗೆ ಮನೆಯಲ್ಲಿ ಶುಭ ಸುದ್ದಿ ಕೇಳುವಿರಿ. ಕೆಲಸದ ಜಾಗದಲ್ಲಿ ಹುಷಾರು. ಜುಲೈನಿಂದ ನವೆಂಬರ್‌ ನಡುವೆ ಕೆಲವೊಂದು ಸಮಸ್ಯೆಯನ್ನು ಎದುರಿಸಬೇಕಾಗುವುದು. ವಿದ್ಯಾರ್ಥಿಗಳಿಗೆ ಈ ವರ್ಷ ಉತ್ತಮವಾಗಿದೆ.

ಮಘಾ ನಕ್ಷತ್ರ:

ಮಘಾ ನಕ್ಷತ್ರ:

ಮಘಾ ನಕ್ಷತ್ರದವರ ಅಧಿಪತಿ ಬುಧ, ರಾಶಿ ಸಿಂಹ. ವರ್ಷ ಆರಂಭ ನಿಮಗೆ ತುಂಬಾ ಅನುಕೂಲಕರವಾಗಿದೆ. ಮೇಲಾಧಿಕಾರಿಗಳ ಜೊತೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ಕುಟುಂಬ ಹಾಗೂ ವೈವಾಹಿಕ ಜೀವನದಲ್ಲಿನ ಸಮಸ್ಯೆ ಬಗೆಹರಿಸಲು ಹಿರಿಯರ ಸಲಹೆ ಪಡೆಯಿರಿ. ಆರೋಗ್ಯ ಉತ್ತಮವಾಗುವುದು, ಪ್ರೀತಿ ಜೀವನ ಸುಂದರವಾಗಿರುತ್ತೆ, ನೀವು ಸೆಪ್ಟೆಂಬರ್ ಹೊತ್ತಿಗೆ ಬೇರೆ ಸ್ಥಳಕ್ಕೆ ಹೋಗಬಹುದು. ವರ್ಷದ ಕೊನೆಯಲ್ಲಿ ತಾಳ್ಮೆ ತುಂಬಾ ಮುಖ್ಯ.

ಪೂರ್ವ ಪಲ್ಗುಣಿ ನಕ್ಷತ್ರ:

ಪೂರ್ವ ಪಲ್ಗುಣಿ ನಕ್ಷತ್ರ:

ಪೂರ್ವ ಪಲ್ಗುಣಿ ನಕ್ಷತ್ರದವರ ಅಧಿಪತಿ ಶುಕ್ರ, ರಾಶಿ ಸಿಂಹ. ಈ ನಕ್ಷತ್ರದವರಿಗೆ 2021 ತುಂಬಾ ಉತ್ತಮವಾಗಿರುತ್ತದೆ. ಫೆಬ್ರವರಿಯಲ್ಲಿ ಮಧ್ಯದಲ್ಲಿ ಸ್ವಲ್ಪ ಬದಲಾವಣೆ ಕಾಣಬಹುದು, ಹೊಸ ಉದ್ಯೋಗ ಹುಡುಕುತ್ತಿರುವವರು ಸಫಲ ಕಾಣುವಿರಿ, ನಿಮ್ಮ ಹೆಂತಿಯ ಬೆಂಬಲ ನಿಮಗೆ ಸಿಗುವುದು, ನವೆಂಬರ್‌ನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಉತ್ತರ ಪಲ್ಗುಣಿ ನಕ್ಷತ್ರ:

ಉತ್ತರ ಪಲ್ಗುಣಿ ನಕ್ಷತ್ರ:

ಉತ್ತರ ಪಲ್ಗುಣಿ ನಕ್ಷತ್ರದವರ ಅಧಿಪತಿ ಸೂರ್ಯ, ರಾಶಿ ಕನ್ಯಾ. ಈ ವರ್ಷ ನಿಮ್ಮ ಬಾಸ್‌ ಹಾಗೂ ಸೀನಿಯರ್ಸ್ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಈ ವರ್ಷ ನಿಮ್ಮ ಗೌರವ ಹೆಚ್ಚುವುದು, ನಿಮ್ಮ ಕಾಯಿಲೆ ಬಗ್ಗೆ ತಿಳಿಯುವುದರಿಂದ ಆರೋಗ್ಯದ ಕಡೆ ನಿಮ್ಮ ಕಾಳಜಿ ಹೆಚ್ಚುವುದು, ಇದರಿಂದ ಆರೋಗ್ಯ ಉತ್ತಮವಾಗುವುದು. ಸೆಪ್ಟೆಂಬರ್ 19ರಿಂದ ಕಾನೂನು ಸಂಬಂಧಿತ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ, ವರ್ಷದ ಕೊನೆಯ ತಿಂಗಳುಗಳು ವಿದ್ಯಾರ್ಥಿಗಳಿಗೆ ತುಂಬಾ ಉತ್ತಮವಾಗಿದೆ.

ಹಸ್ತಾ ನಕ್ಷತ್ರ:

ಹಸ್ತಾ ನಕ್ಷತ್ರ:

ಹಸ್ತಾ ನಕ್ಷತ್ರದವರ ಅಧಿಪತಿ ಚಮದ್ರ, ರಾಶಿ ಕನ್ಯಾ. ಆರ್ಥಿಕ ದೃಷ್ಟಿಯಿಂದ ಈ ವರ್ಷ ತುಂಬಾ ಉತ್ತಮವಾಗಿದೆ. ಫೆಬ್ರವರಿಯಷ್ಟರಲ್ಲಿ ಕೆಲಸದ ಜಾಗದಲ್ಲಿ ಪ್ರಗತಿ ಕಾಣುವಿರಿ, ಈ ವರ್ಷ ನಿಮ್ಮ ಕನಸ್ಸುಗಳು ನೆರವೇರುವುದು. ಸೆಪ್ಟೆಂಬರ್ 13ರಿಂದ ನಿಮ್ಮ ಆರೋಗ್ಯವೂ ಉತ್ತಮವಾಗುವುದು. ನಿಮ್ಮ ಸಂಗಾತಿ ಜೊತೆ ಸಮಸ್ಯೆ ಬರುವ ಸಾಧ್ಯತೆ ಇದೆ, ಇದರಿಂದ ಮಾನಸಿಕ ಒತ್ತಡ ಹೆಚ್ಚುವುದು, ಚಿಕ್ಕ ವಿಷಯಕ್ಕೂ ತುಂಬಾ ಚಿಂತೆ ಮಾಡದಂತೆ ಸೂಚಿಸಲಾಗಿದೆ.

ಚಿತ್ರ ನಕ್ಷತ್ರ:

ಚಿತ್ರ ನಕ್ಷತ್ರ:

ಚಿತ್ರ ನಕ್ಷತ್ರದವರ ಅಧಿಪತಿ ಮಂಗಳ, ರಾಶಿ ಕನ್ಯಾ ಮತ್ತು ತುಲಾ. ವೃತ್ತಿ ಬದುಕಿನ ದೃಷ್ಟಿಯಿಂದ ಜೂನ್‌ವರೆಗಿನ ಸಮಯ ಉತ್ತಮವಾಗಿದೆ. ಈ ಸಮಯ ಹೊಸದು ಏನಾದರೂ ಪ್ರಯತ್ನ ಕೂಡಲು ಒಳ್ಳೆಯದಿದೆ. ಫೆಬ್ರವರಿಯಿಂದ ಮೇ ತಿಂಗಳವರೆಗೆ ನಿಮ್ಮ ಎಲ್ಲಾ ಕಾರ್ಯಕ್ಕೆ ಆಪ್ತರ ಬೆಂಬಲ ಸಿಗುವುದು. ಸಂಗಾತಿ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ, ಆರ್ಥಿಕ ದೃಷ್ಟಿಯಿಂದಲೂ ಚೆನ್ನಾಗಿದೆ.

ಸ್ವಾತಿ ನಕ್ಷತ್ರ:

ಸ್ವಾತಿ ನಕ್ಷತ್ರ:

ಸ್ವಾತಿ ನಕ್ಷತ್ರವನ್ನು ರಾಹು ಆಳ್ವಿಕೆ ಮಾಡುತ್ತಿದ್ದು, ರಾಶಿ ತುಲಾ. ಜನ್ಮ ನಕ್ಷತ್ರ 2021ರ ಪ್ರಕಾರ ನಿಮ್ಮ ಬಾಕಿ ಉಳಿದ ಕೆಲಸಗಳು ಪೂರ್ಣವಾಗುತ್ತದೆ. ಇದ್ದಕ್ಕಿದ್ದಂತೆ ವರ್ಗಾವಣೆ ಆಗುವುದರಿಮದ ಸ್ವಲ್ಪ ಬೇಸರ ಉಂಟಾಗುವುದು. ಈ ವರ್ಷ ನಿಮ್ಮ ತಂದೆಯ ಬೆಂಬಲ ಇರುತ್ತದೆ, ವೈವಾಹಿಕ ಜೀವನದಲ್ಲಿ ಖುಷಿ ನೆಲೆಸುವುದು, ಆರೋಗ್ಯ ಸಮಸ್ಯೆಯಿದ್ದರೆ ಸೆಪ್ಟೆಂಬರ್ ನಂತರ ಆರೋಗ್ಯ ಸುಧಾರಿಸುವುದು.

ವೈಶಾಖ ನಕ್ಷತ್ರ:

ವೈಶಾಖ ನಕ್ಷತ್ರ:

ವೈಶಾಖ ನಕ್ಷತ್ರದವರ ಅಧಿಪತಿ ಗುರು, ರಾಶಿ ತುಲಾ ಹಾಗೂ ವೃಶ್ಚಿಕ. ಜೂನ್‌ 19ರ ಬಳಿಕ ವೃತ್ತಿ ಜೀವನದಲ್ಲಿ ಮೇಲಾಧಿಕಾರಿಗಳ ಬೆಂಬಲ ಸಿಗುವುದು, ಸಂಗಾತಿಯ ಬೆಂಬಲ ಕೂಡ ನಿಮಗಿರುವುದು. ಜುಲೈ ಆರಂಭ ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದಿದೆ. ಆರ್ಥಿಕ ಸಮತೋಲನ ಕಾಪಾಡಲು ಬಯಸಿದರೆ ಹಣವನ್ನು ನೋಡಿಕೊಂಡು ಖರ್ಚು ಮಾಡಿ.

ಅನುರಾಧ ನಕ್ಷತ್ರ:

ಅನುರಾಧ ನಕ್ಷತ್ರ:

ಶನಿ ಅನುರಾಧ ನಕ್ಷತ್ರದವರ ಅಧಿಪತಿ, ರಾಶಿ ವೃಶ್ಚಿಕ. ಆರೋಗ್ಯದ ದೃಷ್ಟಿಯಿಂದ ಈ ವರ್ಷದ ಆರಂಭ ಉತ್ತಮವಾಗಿದೆ ಆಗಸ್ಟ್‌ ಮಧ್ಯದ ನಂತರ ಶುಭ ಕಾರ್ಯವೊಂದು ನಡೆಯಲಿದೆ, ಇದರಿಂದ ನಿಮ್ಮ ಬದುಕಿನಲ್ಲಿ ಒಳಿತಾಗಲಿದೆ. ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ, ಸೆಪ್ಟೆಂಬರ್ ಬಳಿಕ ಸ್ನೇಹಕ್ಕೆ ತುಂಬಾ ಮಹತ್ವ ನೀಡಿ ತೊಂದರೆಗೆ ಸಿಲುಕಬೇಡಿ.

ಜ್ಯೇಷ್ಠ ನಕ್ಷತ್ರ:

ಜ್ಯೇಷ್ಠ ನಕ್ಷತ್ರ:

ಜ್ಯೇಷ್ಠ ನಕ್ಷತ್ರವನ್ನು ಆಳ್ವಿಕೆ ಮಾಡುತ್ತಿರುವುದು ಬುಧ, ರಾಶಿ ವೃಶ್ಚಿಕ. ಜನ್ಮ ನಕ್ಷತ್ರ 2021ರ ಭವಿಷ್ಯ ಪ್ರಕಾರ ಕೆಲಸದ ದೃಷ್ಟಿಯಿಂದ ಈ ವರ್ಷ ತುಂಬಾ ಒಳ್ಳೆಯದಿದೆ. ಫೆಬ್ರವರಿಯಲ್ಲಿ ಮಗುವನ್ನು ಪಡೆಯುವಿರಿ, ವೈವಾಹಿಕ ಜೀವನಕ್ಕೂ ಈ ವರ್ಷ ಒಳ್ಳೆಯದಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಬಡ್ತಿ ಪಡೆಯಬಹುದು. ನವೆಂಬರ್‌ನಿಂದ ಆರೋಗ್ಯವೂ ಚೆನ್ನಾಗಿರುತ್ತದೆ.

ಮೂಲ ನಕ್ಷತ್ರ:

ಮೂಲ ನಕ್ಷತ್ರ:

ಮೂಲ ನಕ್ಷತ್ರದವರ ಅಧಿಪತಿ ಕೇತು ರಾಶಿ ಧನು. ವೃತ್ತಿ ಜೀವನದಲ್ಲಿ ಕೆಲವೊಂದು ತೊಂದರೆಗಳನ್ನು ಅನುಭವಿಸುವಿರಿ. ಜನವರಿ ಮಧ್ಯದಿಂದ ಮಾರ್ಚ್‌ ತುಂಬುವುದರೊಳಗೆ ವೃತ್ತಿಯಲ್ಲಿ ಬದಲಾವಣೆ ಕಾಣುವಿರಿ. ಸಾಧ್ಯವಾದರೆ ಸೆಪ್ಟೆಂಬರ್‌ 16ರಿಂದ ನವೆಂಬರ್‌ 9ರವರೆಗೆ ಪ್ರಯಾಣಿಸಲು ಹೋಗಬೇಡಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಪೂರ್ವ ಆಷಾಢ ನಕ್ಷತ್ರ:

ಪೂರ್ವ ಆಷಾಢ ನಕ್ಷತ್ರ:

ಪೂರ್ವ ಆಷಾಢ ನಕ್ಷತ್ರದವರ ಅಧಿಪತಿ ಶುಕ್ರ, ರಾಶಿ ಧನು. ವರ್ಷದ ಪ್ರಾರಂಭ ಅನುಕೂಲಕರವಾಗಿದೆ. ಫೆಬ್ರವರಿ 13ರಿಂದ ಜೂನ್‌18ರವರೆಗೆ ಆರ್ಥಿಕ ದೃಷ್ಟಿಯಿಂದ ತುಂಬಾ ಚೆನ್ನಾಗಿದೆ. ಈ ಸಮಯದಲ್ಲಿ ಕಳೆದ ಹಣವನ್ನು, ಸಾಲ ಕೊಟ್ಟ ಹಣವನ್ನು ಕೂಡ ಮರಳಿ ಪಡೆಯುವಿರಿ. ಮಗು ಅಪೇಕ್ಷಿತರಿಗೆ ಸಂತಾನ ಭಾಗ್ಯವಿದೆ.

ಉತ್ತರ ಆಷಾಢ ನಕ್ಷತ್ರ:

ಉತ್ತರ ಆಷಾಢ ನಕ್ಷತ್ರ:

ಸೂರ್ಯ ಉತ್ತರ ಆಷಾಢ ನಕ್ಷತ್ರದವರ ಅಧಿಪತಿ, ರಾಶಿ ಧನು. ಜನ್ಮ ನಕ್ಷತ್ರ ಭವಿಷ್ಯ 2021ರ ಪ್ರಕಾರ ಈ ವರ್ಷ ತುಂಬಾ ವೃತ್ತಿ ಬದುಕಿನ ದೃಷ್ಟಿಯಿಂದ ತುಂಬಾ ಅನುಕೂಲಕರವಾಗಿದೆ, ಆದರೆ ವೈವಾಹಿಕ ಜೀವನದಲ್ಲಿ ಕೆಲವು ತೊಂದರೆಗಳು ಕಾಣಿಸಬಹುದು. ಜೂನ್‌ನಲ್ಲಿ ಆಸ್ತಿ ವಿವಾದ ಕೂಡ ಎದುರಿಸುವಿರಿ. ಆರೋಗ್ಯ ಚೆನ್ನಾಗಿರುತ್ತದೆ, ಆದರೆ ಹಲ್ಲಿಗೆ ಸಂಬಂಧಿತ ಸಮಸ್ಯೆ ಕಾಣಿಸಬಹುದು,ಆದ್ದರಿಂದ ಎಚ್ಚರವಹಿಸಿ.

ಶ್ರವಣ ನಕ್ಷತ್ರ:

ಶ್ರವಣ ನಕ್ಷತ್ರ:

ಶ್ರವಣ ನಕ್ಷತ್ರದವರ ಅಧಿಪತಿ ಚಂದ್ರ,ರಾಶಿ ಮಕರ. ವರ್ಷದ ಆರಂಭದ ತಿಂಗಳಿನಲ್ಲಿ ವಿದೇಶ ಯೋಗವಿದೆ. ಈ ಪ್ರಯಾಣದಿಂದ ಒಳಿತಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಮತ್ತಷ್ಟು ಉತ್ತಮವಾಗುವುದು. ಜೂನ್ 13 ರ ಬಳಿಕ ವೈವಾಹಿಕ ಜೀವನದಲ್ಲೂ ತೊಂದರೆ ಕಾಣಿಸುವುದು, ಈ ಸಮಯದಲ್ಲಿ ತಾಯಿಯ ಅಭಿಪ್ರಾಯ ಪಡೆಯಿರಿ. ಕಣ್ಣಿನ ಸಮಸ್ಯೆ ಕಾಡಲಿದೆ.

 ಧನಿಷ್ಠ ನಕ್ಷತ್ರ:

ಧನಿಷ್ಠ ನಕ್ಷತ್ರ:

ಧನಿಷ್ಠ ನಕ್ಷತ್ರದವರ ಅಧಿಪತಿ ಮಂಗಳ, ರಾಶಿ ಮಕರ ಮತ್ತು ಕುಂಭ. ಈ ವರ್ಷ ಸರ್ಕಾರಿ ನೌಕರಿಗೆ ಪ್ರಯತ್ನಿಸುತ್ತಿದ್ದರೆ ಅದರ ಫಲ ಪಡೆಯುವಿರಿ. ಏಪ್ರಿಲ್‌ನಿಂದ ಕೆಲಸದಲ್ಲೂ ಅಭಿವೃದ್ಧಿ ಕಾಣುವಿರಿ. ಆರೋಗ್ಯ ದೃಷ್ಟಿಯಿಂದ ಹೇಳುವುದಾದರೆ ಕೈಗೆ ಸಂಬಂಧಿತ ಸಮಸ್ಯೆ ಕಾಡಬಹುದು.

ಶತಾಭಿಷ ನಕ್ಷತ್ರ:

ಶತಾಭಿಷ ನಕ್ಷತ್ರ:

ರಾಹು ಶತಾಭಿಷ ನಕ್ಷತ್ರದವರ ಅಧಿಪತಿ, ರಾಶಿ ಕುಂಭ. ಜುಲೈ ಮಧ್ಯದಲ್ಲಿ ವೈವಾಹಿಕ ಜೀವನದಲ್ಲಿ ತೊಂದರೆ ಎದುರಾಗುವುದು, ಈ ಸಮಯದಲ್ಲಿ ನಿಮ್ಮ ಮಾತುಗಳು ನಿಯಂತ್ರಣದಲ್ಲಿರಲಿ. ಸೆಪ್ಟೆಂಬರ್ ನಂತರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಹೊಟ್ಟೆ ಸಂಬಂಧಿತ ಸಮಸ್ಯೆ ಕಾಣಿಸಬಹುದು.

ಪೂರ್ವ ಬಾದ್ರಪದ ನಕ್ಷತ್ರ:

ಪೂರ್ವ ಬಾದ್ರಪದ ನಕ್ಷತ್ರ:

ಪೂರ್ವ ಬಾದ್ರಪದ ನಕ್ಷತ್ರದವರ ಅಧಿಪತಿ ಗುರು, ರಾಶಿ ಕುಂಭ ಮತ್ತು ಮೀನ. ಕೆಲಸದ ದೃಷ್ಟಿಯಿಂದ ನೀವು ಎಚ್ಚರವಹಿಸುವುದು ಒಳ್ಳೆಯದು, ಮೇ ನಂತರ ವೈವಾಹಿಕ ಜೀವನದಲ್ಲಿ ತೊಂದರೆ ಕಾಣಿಸಬಹುದು. ರಿಯಲ್ ಎಸ್ಟೇಟ್‌ ಮಾಡುತ್ತಿರುವವರಿಗೆ ಪ್ರಯೋಜನವಾಗಲಿದೆ. ಮಧುಮೇಹಿಗಳು ಆರೋಗ್ಯವನ್ನು ಅಧಿಕ ಕಾಳಜಿವಹಿಸುವುದು ಒಳ್ಳೆಯದು.

ಉತ್ತರ ಬಾದ್ರಪದ ನಕ್ಷತ್ರ:

ಉತ್ತರ ಬಾದ್ರಪದ ನಕ್ಷತ್ರ:

ಈ ನಕ್ಷತ್ರದವರ ಅಧಿಪತಿ ಶನಿ, ರಾಶಿ ಮೀನ. ನಕ್ಷತ್ರ ಭವಿಷ್ಯ 2021ರ ಪ್ರಕಾರ ಈ ವರ್ಷದ ಆರಂಭ ನಿಮಗೆ ತುಂಬಾ ಅನುಕೂಲಕರವಾಗಿದೆ. ಈ ಸಮಯದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ. ನೀವು ಕೆಲಸ ಬದಲಾಯಿಸುವ ಸಾಧ್ಯತೆ ಇದೆ. ಏಪ್ರಿಲ್ 18ರ ಬಳಿಕ ವಿದ್ಯಾರ್ಥಿಗಳಿಗೂ ತುಂಬಾ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ ಅಲರ್ಜಿ ಸಮಸ್ಯೆ ಕಾಡಬಹುದು.

ರೇವತಿ ನಕ್ಷತ್ರ:

ರೇವತಿ ನಕ್ಷತ್ರ:

ನಕ್ಷತ್ರದವರ ಅಧಿಪತಿ ಬುಧ, ರಾಶಿ ಮೀನ. ನಕ್ಷತ್ರ ಭವಿಷ್ಯ 2021ರ ಪ್ರಕಾರ ಮಾರ್ಚ್‌ನಿಂದ ಆಗಸ್ಟ್‌ವರೆಗಿನ ಸಮಯ ತುಂಬಾ ಅನುಕೂಲಕರವಾಗಿದೆ. ಸಂಗಾತಿ ಜೊತೆ ವೈಮನಸ್ಸು ಉಂಟಾಗುವುದು, ಮಕ್ಕಳು ಬಯಸುವ ದಂಪತಿ ಸೆಪ್ಟೆಂಬರ್ 22ರ ಬಳಿಕ ಸಿಹಿ ಸುದ್ದಿ ಪಡೆಯುವಿರಿ. ನಿಮ್ಮ ಆರೋಗ್ಯ ಕಡೆ ಕಾಳಜಿ ವಹಿಸಿ. ನಿಮ್ಮ ಪ್ರೀತಿಯ ಬೆಂಬಲ ಪ್ರತಿ ಹಂತದಲ್ಲೂ ಇರುವುದು. ಕೋಪ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ.

English summary

Nakshatra Horoscope 2021 Predictions As Per Nakshatra Astrology in kannada

Nakshatra Astrology 2021 provides you with detailed knowledge of predictions of all twenty seven Nakshatras. Read the Nakshatra Horoscope 2021 predictions in kannada
X
Desktop Bottom Promotion