Latest Updates
-
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ! -
ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ 2026: ಬಾರ್ಸಿಲೋನಾದಲ್ಲಿ ಇಂದು ಹೈ-ವೋಲ್ಟೇಜ್ ರೇಸ್, ಮಿಸ್ ಮಾಡ್ಬೇಡಿ!
Mrigashira Nakshatra Prediction 2023: ಮೃಗಶಿರಾ ನಕ್ಷತ್ರದವರಿಗೆ 2023 ಹೇಗಿರಲಿದೆ?
ವ್ಯಕ್ತಿಯು ಜನಿಸಿದ ದಿನಾಂಕ, ಸಮಯದ ಅನುಸಾರ ಅವರ ನಕ್ಷತ್ರ ಬರುತ್ತದೆ.
2023 ಮೃಗಶಿರಾ ನಕ್ಷತ್ರದವರಿಗೆ ಹೇಗೆ ಇರಲಿದೆ ಎಂದು ತಿಳಿಯಲು ಈ ನಕ್ಷತ್ರ ಭವಿಷ್ಯ ಓದಿ...
ಮೃಗಶಿರಾ ನಕ್ಷತ್ರ- ಜ್ಯೋತಿಷ್ಯದ ಪ್ರಕಾರ 27 ನಕ್ಷತ್ರಗಳಲ್ಲಿ 5ನೇ ನಕ್ಷತ್ರ

1. ಮೃಗಶಿರಾ ನಕ್ಷತ್ರದ ಕೆಲವು ಪ್ರಮುಖ ಆಂಶಗಳು
ಮೃಗಶಿರಾ ಒಂದು ದೈವಿಕ ನಕ್ಷತ್ರ
ರಾಶಿಚಕ್ರ: ವೃಷಭ ಮತ್ತು ಮಿಥುನ
ಮೃಗಶೀರ್ಷ ನಕ್ಷತ್ರ ಅಧಿಪತಿ: ಚಂದ್ರ
ಗ್ರಹಗಳ ಆಡಳಿತಗಾರ: ಮಂಗಳ
ದೇವತೆ: ಸೋಮ ಸಂಕೇತ: ಜಿಂಕೆಯ ತಲೆ
ಅಂಶ: ಭೂಮಿ
ಗಣ: ದೇವತಾ
ಗುಣ: ತಾಮಸಿಕ
ದಿಕ್ಕು: ಪೂರ್ವ
ಬಣ್ಣ: ಬೂದು ಮಿಶ್ರಿತ ಬೆಳ್ಳಿ
ದೇಹ: ಹುಬ್ಬುಗಳು
ಪ್ರಾಣಿ: ಹೆಣ್ಣು ಸರ್ಪ
ಪಕ್ಷಿ: ಕೋಳಿ
ಮರ: ಅಕೇಶಿಯ ಮರ
ಸಂಸ್ಕೃತದ ಹೆಸರು: ಮೃಗಶೀರ ಸಂಸ್ಕೃತ ಪದಗಳಾದ ಮೃಗ (ಪ್ರಾಣಿ) ಮತ್ತು ಶಿರ (ತಲೆ) ಯಿಂದ ಬಂದಿದೆ. ಮೃಗಶಿರದ ಅರ್ಥ "ಪ್ರಾಣಿಯ ತಲೆ", ಇದು ಸಾಹಸ, ಉತ್ಸಾಹ ಮತ್ತು ಬಲವಾದ ಅಂತಃಪ್ರಜ್ಞೆಯ ಪ್ರಜ್ಞೆಯನ್ನು ಸೂಚಿಸುತ್ತದೆ.
ನಕ್ಷತ್ರ ಗುಂಪು: ದೈವಿಕ
ಅದೃಷ್ಟ ಅಕ್ಷರಗಳು: ವಿ, ವೊ, ಕಾ, ಕೀ,
ಮೃಗಶಿರಾ ನಕ್ಷತ್ರದವರ ಗುಣಗಳು
ಈ ನಕ್ಷತ್ರದ ಪುರುಷರು ಸ್ವಲ್ಪ ಡೌಟು ಸ್ವಭಾವದವರು. ಯಾವುದೇ ವಿಷಯವಾಗಲಿ ಹಾಗೇ ನಂಬಲ, ಡೌಟು ಪಟ್ಟೇ ನಂಬುತ್ತಾರೆ. ಅವರು ತುಂಬಾ ಪ್ರಾಮಾಣಿಕರು, ಇತರರು ಹಾಗೇ ಇರಬೇಕೆಂದು ಬಯಸುತ್ತಾರೆ. ಅದು ಸಿಗದೇ ಹೋದಾಗ ಸ್ವಲ್ಪ ಸಹಿಸಲು ಸಾಧ್ಯವಾಗಲ್ಲ. ಈ ನಕ್ಷತ್ರದ ಸ್ತ್ರೀಯರು ಸಮಾಜ ಸೇವಕರು, ಅವರು ಬುದ್ಧಿವಂತರು, ಸ್ವಲ್ಪ ಸ್ವಾರ್ಥಿಕಗಳು, ಶ್ರಮಪಟ್ಟು ದುಡಿಯುವವರಾಗಿರುತ್ತಾರೆ.
ಮೃಗಶಿರಾ ನಕ್ಷತ್ರದವರ 2023ರ ನಕ್ಷತ್ರ ಭವಿಷ್ಯ ನೋಡುವುದಾದರೆ ....

ಮೃಗಶಿರ ನಕ್ಷತ್ರದವರ ವೃತ್ತಿ ಜೀವನ 2023
2022ರಲ್ಲಿ ನಿಮ್ಮ ಯಾವುದಾದರೂ ಕೆಲಸ ಅಪೂರ್ಣವಾಗಿದ್ದರೆ ಪೂರ್ಣಗೊಳಿಸಲು ಈ ವರ್ಷ ಅವಕಾಶಗಳು ದೊರೆಯಲಿದೆ. ಕೆಲವೊಂದು ಅಡೆತಡೆಗಳು ಇರಬಹುದು ಆದರೆ ಅಧಿಕ ಮಾನಸಿಕ ಒತ್ತಡದಿಂದ ನಿಮ್ಮ ಆಲೋಚನೆಗಳಿಗೆ ಬ್ರೇಕ್ ಹಾಕಬೇಕಾಗಿಲ್ಲ. ಏಪ್ರಿಲ್ ನಂತರ ಕೆಲವು ಧನಾತ್ಮಕ ಬದಲಾವಣೆಗಳು ಆಗಲಿವೆ.ವೃತ್ತಿ ಬದುಕಿನಲ್ಲಿ ನಿರ್ಲಕ್ಷ್ಯ ಮಾಡಿದರೆ ನಷ್ಟ ಸಂಭವಿಸುವುದು, ಈ ವರ್ಷ ಉದ್ಯೋಗ ಬದಲಾಯಿಸಲು ಒಳ್ಳೆಯ ಅವಕಾಶಗಳು ದೊರೆಯಲಿದೆ.

ಮೃಗಶಿರಾ ನಕ್ಷತ್ರದವರ ಸಂಬಂಧ ಭವಿಷ್ಯ
ನಿಮ್ಮ ಸಂಗಾತಿ ಜೊತೆ ಬಿರುಕು ಹೊಂದಿದ್ದರೆ ಈ ವರ್ಷ ಸರಿಯಾಗಲಿದೆ. ಕೆಲವೊಂದು ಅನಾರೋಗ್ಯಕರ ಸಂಬಂಧದಿಂದ ಈ ವರ್ಷ ನೆಮ್ಮದಿ ಹಾಳಾಗಬಹುದು, ಆದ್ದರಿಂದ ಅಂಥ ಸಂಬಂಧದಲ್ಲಿ ಬೀಳದಂತೆ ಎಚ್ಚರವಹಿಸಿ. ವರ್ಷದ ಕೊನೆಯ ತಿಂಗಳು ವಿವಾಹವಾಗಲು ಬಯಸುವವರಿಗೆ ಒಳ್ಳೆಯ ಸಮಯ. ನಿಮ್ಮ ಸಂಗಾತಿ ಮೇಲೆ ಅತಿಯಾದ ಕೋಪ ಪ್ರದರ್ಶನ ಮಾಡದಿದ್ದರೆ ಒಳ್ಳೆಯದು.ಸ್ನೇಹಿತರು ಹಾಗೂ ಕುಟುಂಬದವರ ಮಧ್ಯ ತಪ್ಪು ಕಲ್ಪನೆ ಬರಬಹುದು, ಸಂಗಾತಿಯ ಸಂಪೂರ್ಣ ಬೆಂಬಲ ಸಿಗುವುದು, ಎರಡನೇ ಮದುವೆಗೆ ಸಂಬಂಧ ನೋಡುತ್ತಿರುವವರಿಗೆ ಮದುವೆಗೆ ವಿಳಂಬವಾಗುವುದು.

ಮೃಗಶಿರಾ ನಕ್ಷತ್ರದವರ ಆರ್ಥಿಕ ಸ್ಥಿತಿ
ಹಳೆಯ ಸಾಲಗಳ ಬಾಧೆ ಇರಬಹುದು, ಇದರಿಂದ ಹೊರಬರಲು ಒಳ್ಳೆಯ ಆರ್ಥಿಕ ಯೋಜನೆ ಮಾಡಬೇಕು ಹಾಗೂ ಮಿತಿ ಮೀರಿ ಖರ್ಚು ಮಾಡುವುದನ್ನು ಕಡಿಮೆಮಾಡಬೇಕು. ಮೇ ಹಾಗೂ ಜೂನ್ ತಿಂಗಳಿನಲ್ಲಿ ಆದಾಯ ಗಳಿಸಲು ಸಾಧ್ಯವಾಗುವುದು, ಪೂರ್ವಜಿಕರ ಆಸ್ತಿಯಿಂದ ಲಾಭ ದೊರೆಯಲಿದೆ. ವರ್ಷದ ಕೊನೆಯ ತಿಂಗಳು ಹಣದ ಬಗ್ಗೆ ತುಂಬಾ ಜಾಗ್ರತೆವಹಿಸಬೇಕಾಗುತ್ತದೆ ಏಕೆಂದರೆ ಅನಿರೀಕ್ಷಿತ ಖರ್ಚುಗಳು ಬರಬಹುದು.

ಮೃಗಶಿರಾ ನಕ್ಷತ್ರದವರ ಆರೋಗ್ಯ ಭವಿಷ್ಯ 2023
ಈ ವರ್ಷ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ, ಆದರೆ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ನಿಮ್ಮ ಆಹಾರಕ್ರಮದ ಕಡೆಗೆ ತುಂಬಾನೇ ಗಮನ ಹರಿಸಬೇಕು. ಯೋಗ, ಧ್ಯಾನ ಅಭ್ಯಾಸ ಒಳ್ಳೆಯದು, ಸೆಪ್ಟೆಂಬರ್ ಬಳಿಕ ನಿಮ್ಮ ಆರೋಗ್ಯ ಉತ್ತಮವಾಗಲಿದೆ. ಉತ್ತಮ ಆರೋಗ್ಯ ಹಾಗೂ ಫಿಟ್ನೆಸ್ ಕಡೆ ಗಮನ ಹರಿಸುತ್ತೀರಿ.

ಒಟ್ಟಾರೆಯಾಗಿ ನೋಡುವುದಾದರೆ
ಈ ವರ್ಷ ನೀವು ಆರ್ಥಿಕ ಹಾಗೂ ಸಂಬಂಧದ ವಿಷಯದಲ್ಲಿ ಎಚ್ಚರಿಕೆಯಿಂದಿರಬೇಕು, ಆದಷ್ಟು ಸಾಲದಲ್ಲಿ ಬೀಳದಂತೆ ಎಚ್ಚರವಹಿಸಿ. ಆರೋಗ್ಯ ಚೆನ್ನಾಗಿರುತ್ತದೆ.



Click it and Unblock the Notifications