Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಇಂಥ ಕಡೆ ಕೆಲಸ ಮಾಡುವವರು ತುಂಬಾ ಖುಷಿಯಾಗಿರುತ್ತಾರೆ
ಒಮ್ಮೊಮ್ಮೆ, ಅಬ್ಬಾ ಕೆಲಸ ಸಿಕ್ಕಿದರೆ ಸಾಕು ಹೇಗಾದರೂ ಇರಲಿ ಎನಿಸುತ್ತದೆ, ಕೆಲವೊಮ್ಮೆ ತನಗೆ ಸರಿಯಾಗುವಂತಹ, ಖುಷಿ ಕೊಡುವಂತಹ ಕೆಲಸವೇ ಸಿಗಲಿ ಎನಿಸುತ್ತದೆ. ಅದೆನೇ ಇರಲಿ, ನಾವು ಕೆಲಸಮಾಡುವ ಸ್ಥಳ, ಅಲ್ಲಿನ ಜನರು ನಮ್ಮ ಕೆಲಸಗಳಿಗೆ ಸ್ಪಂದಿಸುವ, ಪ್ರೋತ್ಸಾಹಿಸುವ ಗುಣಗಳನ್ನು ಹೊಂದಿದ್ದರೆ ನಾವು ಮಾಡುವ ಕೆಲಸದಲ್ಲಿ ನೆಮ್ಮದಿ ಖುಷಿ ಎಲ್ಲವೂ ಇರುತ್ತದೆ. ಹಾಗೂ ಆ ಕೆಲಸವನ್ನು ಇನ್ನಷ್ಟು ಮುತುವರ್ಜಿಯಿಂದ, ಜವಾಬ್ದಾರಿಯಿಂದ ಮಾಡಲು ಸಾಧ್ಯವಾಗುತ್ತದೆ.

ನಿಮ್ಮ ಕೆಲಸದಲ್ಲಿ ತೃಪ್ತಿಯನ್ನು ಕಂಡುಕೊಂಡಿರುವ ವ್ಯಕ್ತಿಗಳಲ್ಲಿ ನೀವು ಒಬ್ಬರೇ? ಹಾಗಾದರೆ ನಾವು ಇಲ್ಲಿ ಹೇಳ ಹೊರಟಿರುವ ವಿಷಯ ಖಂಡಿತವಾಗಿ ನಿಮಗೆ ಸಂಬಂಧಿಸಿದ್ದು. ಒಳ್ಳೆಯ ಕೆಸವನ್ನು ಹೊಂದಿರಬೇಕಾದರೆ, ನಾವು ಮಾಡುವ ಕೆಲಸದಲ್ಲಿ ನೆಮ್ಮದಿ ಇರಬೇಕಾದರೆ ಏನೆಲ್ಲಾ ಬೇಕು?! ಬನ್ನಿ ನೋಡೋಣ.

ನೀವು ಮೆಚ್ಚುವ ಬಾಸ್
ಯಾವುದೇ ಸಂಘಟನೆಯ ಆಧಾರ ಸ್ಥಂಬ ಆ ಸಂಸ್ಥೆಯ ಮೇಲಾಧಿಕಾರಿಗಳು. ನಿಮ್ಮ ಬಾಸ್ ನಿಮ್ಮನ್ನು ಪ್ರೇರೇಪಿಸುವವರಾಗಿದ್ದರೆ, ನೀವು ಅದೃಷ್ಟವಂತರು ಎಂದೇ ಪರಿಗಣಿಸಬಹುದು. ಮೇಲಾಧಿಕಾರಿಗಳು ತಮ್ಮ ಉದ್ಯೋಗಿಗಳನ್ನು ಗೌರವಿಸಿದಾಗ, ಪಾರದರ್ಶಕ ಮತ್ತು ಪ್ರಾಮಾಣಿಕ ಸಂವಹನ ಶೈಲಿಯನ್ನು ಹೊಂದಿರುವಾಗ ಮತ್ತು ಸಹೋದ್ಯೋಗಿಗಳಿಗೆ ಭದ್ರತೆ ನೀಡುವಂತೆ ವರ್ತಿಸಿದಾಗ ಉದ್ಯೋಗದಲ್ಲಿ ತೃಪ್ತಿ ಹೆಚ್ಚಾಗುತ್ತದೆ. ಇದರಿಂದ ನೀವೇ ಸ್ವಯಂ ಪ್ರೇರಿತರಾಗಿ ನಿಮ್ಮ ಕೆಲಸದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತೀರಿ.

ನಿಮ್ಮ ಸಂಸ್ಥೆಯಲ್ಲಿ ಸ್ವ ಉದ್ಯಮಿಯಂತೆ ನೀವು ಭಾವಿಸುತ್ತೀರಿ
ನೀವು ಕಂಪನಿಗೆ ಹೊಸಬರಾಗಿ ಸೇರಿಕೊಂಡಾಗ, ಸಂಸ್ಥೆಯ ಬೆಳವಣಿಗೆಗೆ ನೀವು ಏನು ಕೊಡುಗೆ ನೀಡಬಹುದು ಎಂದು ನಿಮ್ಮ ಬಾಸ್ ಕೇಳುತ್ತಾರೆ ಮತ್ತು ಅವರು ನಿಮ್ಮ ಆಲೋಚನೆಗಳನ್ನು ಕೇಳಿದ ನಂತರ, ಸಂಸ್ಥೆಗಳ ಏಳ್ಗೆಗಾಗಿ ನೀವು ನಿಮ್ಮ ಗುರಿಯನ್ನು ತಲುಪಲು ನಿಮಗೆ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಪ್ರೋತ್ಸಾಹವನ್ನು ನೀಡುತ್ತಾರೆ. ನೀವು ಯಾವಗ ಎಷ್ಟೊತ್ತಿಗೆ ಕೆಲಸ ಮಾಡುತ್ತೀರಿ ಎಂಬುದನ್ನು ಇಲ್ಲಿ ಯಾರೂ ಗಮನಿಸುವುದಿಲ್ಲ. ನೀವು ನಿಮ್ಮ ಕೆಲಸಗಳನ್ನು ಸರಿಯಾದ ಸಮಯಕ್ಕೆ ಪೂರೈಸಿದ್ದೀರಾ ಎಂದಷ್ಟೇ ನೋಡುತ್ತಾರೆ. ಹಾಗಾಗಿ ನಿಮ್ಮ ಸಂಸ್ಥೆಗಾಗಿ ಕೆಲಸ ಮಾಡುವುದು ಎಂದರೆ ನೀವು ನಿಮ್ಮ ಸ್ವಂತ ವ್ಯವಹಾರಕ್ಕಾಗಿ ಕೆಲಸ ಮಾಡುತ್ತಿದ್ದೀರಿ ಎಂದೇ ನಿಮಗೆ ಭಾಸವಾಗುತ್ತದೆ.

ನಮ್ಮ ಕಂಪನಿ ಅದರ ಭರವಸೆಗಳನ್ನು ಪೂರೈಸುತ್ತದೆ
ಒಂದು ಉದ್ಯೋಗಕ್ಕಾಗಿ ನಿಮ್ಮ ಸಂದರ್ಶನ ಮಾಡಿದಾಗ, ಆರು ತಿಂಗಳಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ನೋಡಿ ಅದು ಉತ್ತಮವಾಗಿದ್ದರೆ ಮೇಲಾಧಿಕಾರಿಗಳು ನಿಮಗೆ ಉತ್ತಮ ವಿಮರ್ಶೆಯನ್ನೂ, ಸಂಬಳದಲ್ಲಿ ಹೆಚ್ಚಳವನ್ನೂ ಮಾಡುತ್ತಾರೆ. ಅವರು ತಾವು ನೀಡಿರುವ ಭರವಸೆಗೆ ಬದ್ಧರಾಗಿರುತ್ತಾರೆ ಮತ್ತು ನಿಮ್ಮನ್ನು ನಿರಾಸೆಗೊಳಿಸಲಿಲ್ಲ. ಇದರಿಂದಾಗಿ ನೀವು ಸಂಸ್ಥೆಯ ಬೆಳವಣಿಗೆಗಾಗಿ ಇನ್ನಷ್ಟು ಉತ್ತಮ ರೀತಿಯಲ್ಲಿ ಕೆಲಸಗಳನ್ನು ಮಾಡಲು ಸಹಾಯವಾಗುತ್ತದೆ. ಅವರು ನಿಮ್ಮ ಪರವಾಗಿದ್ದರೆ ನೀವು ಮಾಡುವ ಕೆಲಸದಲ್ಲಿ ತೃಪ್ತಿಯನ್ನು ನೀಡುತ್ತದೆ.

ಸಂತೋಷವಾಗಿ ಒಟ್ಟಿಗೆ ಕೆಲಸ ಮಾಡಬಹುದಾದ ಸಹೋದ್ಯೋಗಿಗಳು
ನಿಮಗೆ ಸಹಾಯ ಮಾಡುವುದು ಮಾತ್ರವಲ್ಲದೆ ಪ್ರೇರೇಪಿಸುವ ಮತ್ತು ಸ್ಪೂರ್ತಿದಾಯಕವಾದ ಮಾತುಗಳನ್ನಾಡುವ ಜನರಿಂದ ನೀವು ಸುತ್ತುವರಿದಾಗ, ನಿಮ್ಮ ಕೆಲಸದಲ್ಲಿ ನೀವು ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿತ್ತದೆ. ಈ ಸಹೋದ್ಯೋಗಿಗಳು ಉತ್ತಮ ಕಚೇರಿ ಸ್ನೇಹಿತರಾಗಿ ಬದಲಾದರೆ ಒಂದು ದಿನವೂ ಕೆಲಸದಲ್ಲಿ ವಿಳಂಬ, ಆಲಸ್ಯ ಎಂಬುದು ಇರುವುದಿಲ್ಲ. ಇಂಥವರ ಜೊತೆ ಕೆಲಸದಲ್ಲಿ ಮಾತ್ರವಲ್ಲ, ಆಫೀಸ್ ನಂತರದ ಸಮಯದಲ್ಲಿ ಜೊತೆಗೆ ಕೂತು ಪಾನೀಯಗಳನ್ನು ಸೇವಿಸಲೂ ಹರಟೆ ಹೊಡೆಯಲೂ ಖುಷಿ ಎನಿಸುತ್ತದೆ. ಇದು ಎಂದಿಗಿಂತಲೂ ಸುಲಭವಾಗಿ ಕೆಲಸದಲ್ಲಿ ಮತ್ತೊಂದು ದಿನವನ್ನು ಎದುರು ನೋಡುವಂತೆ ಮಾಡುತ್ತದೆ.

ನೀವು ಮೆಚ್ಚುಗೆಯನ್ನು ಅನುಭವಿಸುತ್ತೀರಿ
ಪ್ರತಿಯೊಬ್ಬರೂ ತಮ್ಮ ಸಮಯ ಮತ್ತು ಶ್ರಮವನ್ನು ತಮ್ಮ ಕೆಲಸಕ್ಕೆ ಹಾಕಲು ಇಷ್ಟಪಡುತ್ತಾರೆ ಮತ್ತು ಕೆಲವು ಸಮಯದಲ್ಲಿ, ಈ ಪ್ರಯತ್ನಗಳನ್ನು ಇತರರ ಮೆಚ್ಚುಗೆಯೇ ಮುಂದುವರಿಸಿಕೊಂಡು ಹೋಗುತ್ತದೆ. ನಿಮ್ಮ ಬಾಸ್ ಮತ್ತು ನಿಮ್ಮ ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಗಮನಿಸಲು ಪ್ರಾರಂಭಿಸಿದಾಗ ಮತ್ತು ಅದಕ್ಕಾಗಿ ನಿಮ್ಮನ್ನು ಪ್ರಶಂಸಿಸಲು ಪ್ರಾರಂಭಿಸಿದಾಗ, ನಿಮ್ಮ ಕೆಲಸದಲ್ಲಿ ನೀವು ತೃಪ್ತರಾಗಲು ಜೊತೆಗೆ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು, ಹೆಚ್ಚಿನ ಪ್ರಯತ್ನಪಡಲು ಪ್ರೇರೇಪಿಸುತ್ತವೆ.
ಈ ಎಲ್ಲಾ ಅಂಶಗಳು ನಾವು ಕೆಲಸಮಾಡುವ ಸ್ಥಳದಲ್ಲಿದ್ದರೆ ನಾವು ನಮ್ಮ ಕೆಲಸದಲ್ಲಿ 100% ಪರಿಶ್ರಮ ಪಡುವುದರಲ್ಲಿ ಆಶ್ಚರ್ಯವಿಲ್ಲ.



Click it and Unblock the Notifications