For Quick Alerts
ALLOW NOTIFICATIONS  
For Daily Alerts

ವಿಶ್ವದ ಏಳು ಭಯಾನಕ ವಿಮಾನ ನಿಲ್ದಾಣಗಳ ಬಗ್ಗೆ ಗೊತ್ತೆ?

|

ಸಾಮಾನ್ಯವಾಗಿ ವಿಮಾನ ಪ್ರಯಾಣ ಎಂದರೆ ಇಷ್ಟಪಟ್ಟು ಹೋಗುವವರೇ ಹೆಚ್ಚು, ಆದರೆ ವಿಶ್ವದಲ್ಲಿರುವ ಈ ಏರ್ ಪೋರ್ಟ್ ಗಳ ಬಗ್ಗೆ ಕೇಳಿದರೆ ಬಹುಶಃ ನೀವು ವಿಮಾನ ಪ್ರಯಾಣವನ್ನೇ ನಿಲ್ಲಿಸಬಹುದು.

ಇಲ್ಲಿನ ಜನರು ಪ್ರಾಣವನ್ನು ಒತ್ತೆ ಇಟ್ಟು ವಿಮಾನ ಪ್ರಯಾಣ ಮಾಡಬೇಕು, ಅಂತಹ ಕ್ಲಿಷ್ಟಕರ ವಿಮಾನ ಪ್ರಯಾಣ ಇಲ್ಲಿನವರದ್ದು.. ಜೀವದ ಹಂಗು ತೊರೆದೇ ಪ್ರಯಾಣ ಮಾಡುತ್ತಾರೆ. ಬನ್ನಿ ಜೀವ ನಡುಗಿಸುವ ಆ ಏಳು ಭಯಾನಕ ಏರ್ ಪೋರ್ಟ್ ಗಳ ಬಗ್ಗೆ ತಿಳಿಯೋಣ.

1. ತೇನ್ ಸಿಂಗ್-ಹಿಲರಿ ಏರ್ ಪೋರ್ಟ್

1. ತೇನ್ ಸಿಂಗ್-ಹಿಲರಿ ಏರ್ ಪೋರ್ಟ್

ನೇಪಾಳದ ಲೂಕ್ಲಾದಲ್ಲಿರುವ ತೇನ್ ಸಿಂಗ್-ಹಿಲರಿ ಏರ್ ಪೋರ್ಟ್ ಕಡಿದಾದ ಪ್ರದೇಶದಲ್ಲಿದ್ದು, ಇಡೀ ವಿಶ್ವದಲ್ಲೇ ಡೇಂಜರಸ್ ಏರ್ಪೋರ್ಟ್ ಎಂದು ಖ್ಯಾತಿ ಪಡೆದಿದೆ. ಕಾರಣ ಈ ನಿಲ್ದಾಣದ ಕೊನೆಯಲ್ಲಿ ಅಗಾಧವಾದ ಪ್ರಪಾತವಿದ್ದು, ಪೈಲಟ್ ತುಸು ಜಾಗ್ರತೆ ತಪ್ಪಿದರೂ ಪ್ರಯಾಣಿಕರ ಕತೆ ಮುಗಿದಂತೆ. ಟ್ರಕ್ಕಿಂಗ್ ಸಮಯದಲ್ಲಿ ಈ ವಿಮಾನ ನಿಲ್ದಾಣ ಹೆಚ್ಚು ಬ್ಯುಸಿಯಾಗಿರುತ್ತದೆ. ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಹೆಚ್ಚಿನ ಜಮೀನು ಪಡೆಯಲು ಪ್ರಯತ್ನಿಸಿದರೂ, ಭೂಮಿ ಫಲವತ್ತಾಗಿರುವುದರಿಂದ ರೈತರು ಜಮೀನು ನೀಡಲು ಒಪ್ಪಲಿಲ್ಲ ಎನ್ನಲಾಗಿದೆ.

2. ಪ್ರಿನ್ಸೆಸ್ ಜೂಲಿಯಾನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

2. ಪ್ರಿನ್ಸೆಸ್ ಜೂಲಿಯಾನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಸೇಂಟ್ ಮಾರ್ಟೀನ್ ನಲ್ಲಿರುವ ಪ್ರಿನ್ಸೆಸ್ ಜೂಲಿಯಾನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಮಾನ ನಿಲ್ದಾಣ ಮತ್ತೊಂದು ಭಯಾನಕ ವಿಮಾನ ನಿಲ್ದಾಣವಾಗಿದೆ. ನಿಲ್ದಾಣದ ಕೊನೆಯಲ್ಲಿ ಮಾಹೋ ಬೀಚ್ ಇದ್ದು, ಇಲ್ಲಿ ಹೆಚ್ಚಾಗಿ ಜನಸಂದಣಿ ಇರುವುದೇ ಈ ವಿಮಾನ ನಿಲ್ದಾಣ ಪ್ರಸಿದ್ದಿಯಾಗಲು ಕಾರಣವಾಗಿದೆ. ನೀಲಿ ಆಕಾಶದಲ್ಲಿ ವಿಮಾನ ಹಾರಲು ಪೈಲಟ್ ಗಳು ಸಾಕಷ್ಟು ಪ್ರಯಾಸ ಪಡಬೇಕಿದೆ, ಪ್ರತಿ ಬಾರಿ ಎತ್ತರವನ್ನು ಗಮನಿಸುತ್ತಿರಬೇಕು. ಉಪಕರಣಗಳ ಮೂಲಕ ಎತ್ತರ ಗಮಸಿಸುವುದು ಪೈಲಟ್ ಗಳಿಗೆ ನಿಜಕ್ಕೂ ಸವಾಲಿನ ಕೆಲಸವೇ ಹೌದು.

3. ಬರ್ರಾ ಏರ್ಪೋರ್ಟ್

3. ಬರ್ರಾ ಏರ್ಪೋರ್ಟ್

ಸ್ಕಾಟ್ ಲ್ಯಾಂಡ್ ನಲ್ಲಿರುವ ಬರ್ರಾ ಏರ್ಪೋರ್ಟ್ ವಿಶೇಷತೆ ಎಂದರೆ ಇಲ್ಲಿ ವಿಮಾನಗಳು ನೀರಿನ ಮೇಲೆ ಟೇಕಾಫ್, ಲ್ಯಾಂಡಿಂಗ್ ಮಾಡಬೇಕು. ಇಡೀ ವಿಶ್ವದಲ್ಲೇ ಬೀಚ್ ನಲ್ಲಿ ವಿಮಾನಗಳು ಹಾರಾಟ ನಡೆಸುತ್ತಿರುವುದು ಇಲ್ಲಿ ಮಾತ್ರ. ಈ ವಿಮಾನ ನಿಲ್ದಾಣಲ್ಲಿ 3 ರನ್ ವೇ ಗಳಿದೆ.

4. ಗೀಬ್ರಾಲ್ಟಾರ್ ಇಂಟರ್ ನ್ಯಾಷನಲ್ ಏರ್ಪೋರ್ಟ್

4. ಗೀಬ್ರಾಲ್ಟಾರ್ ಇಂಟರ್ ನ್ಯಾಷನಲ್ ಏರ್ಪೋರ್ಟ್

ಗೀಬ್ರಾಲ್ಟಾರ್ ನಲ್ಲಿರುವ ಗೀಬ್ರಾಲ್ಟಾರ್ ಇಂಟರ್ ನ್ಯಾಷನಲ್ ಏರ್ಪೋರ್ಟ್ ಬ್ರಿಟಿಷ್ ಸಾಗರೋತ್ತರ ಸಾಮ್ರಾಜ್ಯದ, ಕೇಂದ್ರಾಡಳಿತ ಪ್ರದೇಶದಲ್ಲಿರದೆ. ಇದರ ವಿಸ್ತೀರ್ಣ 68ಕಿ.ಮೀ. ಇನ್ನು ವಿಮಾನ ನಿಲ್ದಾಣ ಹೇಗಿರಬಹುದು ಎಂದು ನೀವೇ ಊಹೆ ಮಾಡಬಹುದು.

5. ಮ್ಯಾಟ್ ಕೇನ್ ಏರ್ ಸ್ಟ್ರಿಪ್

5. ಮ್ಯಾಟ್ ಕೇನ್ ಏರ್ ಸ್ಟ್ರಿಪ್

ಲೆಸೇತೋ ಪ್ರದೇಶದಲ್ಲಿರುವ ಮ್ಯಾಟ್ ಕೇನ್ ಏರ್ ಸ್ಟ್ರಿಪ್ ಪರ್ವತ ಪ್ರದೇಶದಲ್ಲಿದ್ದು, ಡೇಂಜರಸ್ ನಿಲ್ದಾಣ ಎಂದೇ ಹೆಸರುವಾಸಿಯಾಗಿದೆ. ಪಕ್ಷಿಯೊಂದು ತನ್ನ ಮಗುವನ್ನು ಹಾರಲು ತಳ್ಳುವಂತೆ ಇಲ್ಲಿ ವಿಮಾನಗಳನ್ನು ತಳ್ಳಲಾಗುತ್ತದೆ. ಇಲ್ಲಿನ ರನ್ ವೇ ಅನ್ನು ಸೇವಾ ಸಂಸ್ಥೆಗಳು ಮತ್ತು ವೈದ್ಯರು ಹಳ್ಳಿಗಳನ್ನು ತಲುಪಲು ಬಳಕೆ ಮಾಡಿಕೊಳ್ಳುತ್ತಾರೆ.

6. ಕಾರ್ಚ್ ವೆಲ್ ವಿಮಾನ ನಿಲ್ದಾಣ

6. ಕಾರ್ಚ್ ವೆಲ್ ವಿಮಾನ ನಿಲ್ದಾಣ

ವಿಶ್ವದ ಅತಿ ಚಿಕ್ಕ ರನ್ ವೇ ಹೊಂದಿರುವ ವಿಮಾನ ನಿಲ್ದಾಣ ಫ್ರಾನ್ಸ್‌ ನ ಕಾರ್ಚ್ ವೆಲ್ ವಿಮಾನ ನಿಲ್ದಾಣ. 1788 ಅಡಿ ಉದ್ದವಿದ್ದು, ಪರ್ವತಗಳಿಂದ ಸುತ್ತುವರೆದಿರುವ ಈ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಮಾಡುವುದು ಪೈಲಟ್ ಗಳಿಗೆ ಹರಸಾಹಸವೇ ಸರಿ.

7. ಸೇಂಟ್ ಹೆಲೇನಾ ಏರ್ಪೋರ್ಟ್

7. ಸೇಂಟ್ ಹೆಲೇನಾ ಏರ್ಪೋರ್ಟ್

ಅಟ್ಲಾಂಟಿಕ ಸಮುದ್ರದ ದ್ವೀಪದಲ್ಲಿರುವ ಸೇಂಟ್ ಹೆಲೇನಾ ಏರ್ಪೋರ್ಟ್ ವಿಶ್ವದ ಡೇಂಜರಸ್ ವಿಮಾನ ನಿಲ್ದಾಣಗಳಲ್ಲಿ ಒಂದು. 1999ರಲ್ಲಿ ನಿಲ್ದಾಣ ಕಾಮಗಾರಿ ಆರಂಭವಾಗಿ 2015ರಲ್ಲಿ ಮುಗಿಯಿತು. ಕೆಲವೇ ದಿನಗಳಲ್ಲಿ ಬಳಕೆಗೆ ಯೋಗ್ಯವಲ್ಲ ಎಂದು ಸಹ ಘೋಷಿಸಲಾಯಿತು. 2017ರಲ್ಲಿ ಕಾರ್ಯಾರಂಭ ಮಾಡಿರುವ ಈ ವಿಮಾನ ನಿಲ್ದಾಣದ ಬಳಿ ಕಡಿದಾದ ಬಂಡೆಗಳಿವೆ, ಸಮುದ್ರ ಭಾಗದಲ್ಲಿ ಬೀಸುವ ಭಾರೀ ಗಾಳಿ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಯೋಗ್ಯವಲ್ಲದ ವಿಮಾನ ನಿಲ್ದಾಣ ಎಂದು ಪರಿಗಣಿಸಲಾಗಿದೆ.

Read more about: ಜೀವನ insync
English summary

Most Dangerous Airports in the World

In terms of traveling long distances, flying on an airplane is the fastest and easiest way to get to your destination. The only problem is that flat stretches of the runway aren't always available in certain places. This means that pilots have to be particularly skilled to land on a runway that juts out from a mountain or one that appears in a narrow valley.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more