Latest Updates
-
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ!
Moola Nakshatra 2023 Predictions : ಮೂಲ ನಕ್ಷತ್ರದವರಿಗೆ ಅದ್ಭುತವಾಗಿದೆ
ಮೂಲ ನಕ್ಷತ್ರ ಸಿಂಹದ ಬಾಲದ ಆಕಾರದಲ್ಲಿರುತ್ತದೆ. ಕೇತು ಮೂಲ ನಕ್ಷತ್ರದ ಅಧಿಪತಿ. 27 ನಕ್ಷತ್ರಗಳಲ್ಲಿ 19ನೇ ನಕ್ಷತ್ರ. ಈ ನಕ್ಷತ್ರದ ಬಗ್ಗೆ ಕೆಲವು ತಪ್ಪು ಕಲ್ಪನೆಯಿದೆ. ಆದರೆ ಅವೆಲ್ಲಾ ಮೂಢನಂಬಿಕೆಗಳಾಗಿವೆ.

ಈ ನಕ್ಷತ್ರದಲ್ಲಿ ಜನಿಸಿದವರು ತುಂಬಾ ಶಾಂತ ಸ್ವಭಾವದರು ಹಾಗೂ ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುವ ಸ್ವಭಾವದವರು. ಇವರಿಗೆ ಜೀವನದಲ್ಲಿ ಕೆಲವೊಂದು ಮೌಲ್ಯಗಳಿರುತ್ತದೆ, ಅದನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ತುಂಬಾ ಗಟ್ಟಿ ಹೃದಯದವರು, ಎಂಥ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಾರೆ, ಸದಾ ಒಳಿತನ್ನು ಬಯಸುವ ಸ್ವಭಾವದವರು
ಮೂಲ ನಕ್ಷತ್ರದವರ 2023ರ ನಕ್ಷತ್ರ ಭವಿಷ್ಯ ನೋಡುವುದಾದರೆ ಈ ವರ್ಷ ನಿಮಗೆ ಅದ್ಭುತವಾಗಿದೆ
ಯಾವ ತಿಂಗಳು ಒಳ್ಳೆಯದು
ಮೂಲ ನಕ್ಷತ್ರದವರಿಗೆ ಜನವರಿ, ಫೆಬ್ರವರಿ, ಜೂನ್, ಆಗಸ್ಟ್, ಡಿಸೆಂಬರ್ ತಿಂಗಳು ಒಳ್ಳೆಯದು.
ಯಾವ ತಿಂಗಳಿನಲ್ಲಿ ಜಾಗ್ರತೆವಹಿಸಬೇಕು?
ಏಪ್ರಿಲ್, ಮೇ, ಜುಲೈ, ಸೆಪ್ಟೆಂಬರ್, ನವೆಂಬರ್ ತಿಂಗಳಿನಲ್ಲಿ ಸ್ವಲ್ಪ ಜಾಗ್ರತೆವಹಿಸಬೇಕು.
ಮಾರ್ಚ್ -ಅಕ್ಟೋಬರ್ ತಿಂಗಳಿನಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ.
ಮೂಲ ನಕ್ಷತ್ರ ವ್ಯಾಪಾರ ಭವಿಷ್ಯ 2023
ಈ ವರ್ಷ ಉತ್ತಮ ಮಾರ್ಗದರ್ಶನದಿಂದ ವ್ಯಾಪಾರದಲ್ಲಿ ಮುಂದುವರೆಯುತ್ತೀರಿ. ವ್ಯಾಪಾರದಲ್ಲಿ ಹಲವು ಸವಾಲುಗಳು ಎದುರಾಗುವುದು. ಏಪ್ರಿಲ್ 2023 ರಲ್ಲಿ ನಿಮ್ಮ ಕೆಲಸಕ್ಕೆ ಅಡ್ಡಿಗಳು ಉಂಟಾಗುವುದು. ಆದರೆ ನೀವು ಸರಿಯಾಗಿ ಪ್ಲ್ಯಾನ್ ಮಾಡುವ ಮೂಲಕ ಎಲ್ಲಾ ಅಡೆತಡೆಗಳನ್ನು ಸಮರ್ಥವಾಗಿ ಜಯಿಸುವ ಪ್ರಯತ್ನ ಮಾಡುತ್ತೀರಿ. ಮೇ ಮತ್ತು ಜುಲೈ 2023 ರ ನಡುವಿನ ಅವಧಿಯು ನಿಮಗೆ ಪ್ರಮುಖವಾಗಿರುತ್ತದೆ. ವ್ಯಾಪಾರಸ್ಥರಿಗೆ ಅಪೇಕ್ಷಿತ ಲಾಭವನ್ನು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ವ್ಯಾಪಾರದ ಬೆಳವಣಿಗೆಯನ್ನು ಹೆಚ್ಚಿಸಲು ನಿರ್ದಿಷ್ಟ ಯೋಜನೆಯಲ್ಲಿ ಮುಂದುವರೆಯಲು ನಿಮಗೆ ಅವಕಾಶಗಳು ಸಿಗುತ್ತದೆ.
ಮೂಲ ನಕ್ಷತ್ರ ವೃತ್ತಿ ಭವಿಷ್ಯ 2023
ಈ ವರ್ಷ ಗ್ರಹಗಳ ಪ್ರಭಾವವು ನಿಮ್ಮನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುತ್ತದೆ. ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಆನಂದಿಸುವುದರ ಜೊತೆಗೆ ಈ ವರ್ಷ ನಿಮಗೆ ಉತ್ತಮವಾಗಿರುತ್ತದೆ. ಈ ವರ್ಷದಲ್ಲಿ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ, ಇದರ ಭವಿಷ್ಯದ ಪ್ಲ್ಯಾನ್ ಮತ್ತಷ್ಟು ಉತ್ತಮವಾಗಿ ಮಾಡಬಹುದು.
ನೀವು ನಿಮ್ಮ ಕೌಶಲ್ಯದಿಂದ ಮತ್ತಷ್ಟು ಬೆಳೆಯಲು ಸಾಧ್ಯವಾಗುವುದು.
ಮೂಲ ನಕ್ಷತ್ರದವರ ಆರ್ಥಿಕ ಭವಿಷ್ಯ 2023
ಈ ವರ್ಷ ಆರ್ಥಿಕ ದೃಷ್ಟಿಯಿಂದ ತುಂಬಾ ಚೆನ್ನಾಗಿದೆ, ನೀವು ತುಂಬಾ ಲಕ್ಷುರಿ ಜೀವನ ನಡೆಸುವಿರಿ. ನೀವು ಹೊಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೀರಿ. ಈ ವರ್ಷ ನಿಮ್ಮ ಆತ್ಮವಿಶ್ವಾಸ ಚೆನ್ನಾಗಿರುತ್ತದೆ, ನೀವು ಮಾಡುವ ಕೆಲಸದಲ್ಲಿ ಲಾಭಗಳಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುವುದು. ಹಳೆಯ ಸಾಲಗಳಿದ್ದರೆ ಅದರಿಂದ ಮುಕ್ತರಾಗುತ್ತೀರಿ.
ಈ ವರ್ಷದ ಅಂತ್ಯದ ವೇಳೆಗೆ, ನೀವು ಉತ್ತಮ ಹಣದ ಲಾಭವನ್ನು ಸಹ ಪಡೆಯಬಹುದು. ನಿಮ್ಮ ಹಿಂದಿನ ಹೂಡಿಕೆಯ ಲಾಭವನ್ನು ಸಹ ನೀವು ಪಡೆಯುವ ಸಾಧ್ಯತೆಯಿದೆ.
ಮೂಲ ನಕ್ಷತ್ರ ಸಂಬಂಧ ಭವಿಷ್ಯ 2023
ಈ ವರ್ಷವು ನಿಮಗೆ ತುಂಬಾ ಅದ್ಭುತವಾಗಿದೆ ಮತ್ತು ನಿಮ್ಮ ಸಂಬಂಧವನ್ನು ನೀವು ಬಲಪಡಿಸುವ ಸಾಧ್ಯತೆಯಿದೆ. ನಿಮ್ಮ ಸಕಾರಾತ್ಮಕ ಮನೋಭಾವವು ನಿಮ್ಮ ಪ್ರೀತಿಪಾತ್ರರೊಂದಿಗಿನ ಸಮನ್ವಯವನ್ನು ಸುಧಾರಿಸಲು ನಿಮಗೆ ಸಹಾಯ ಮಾಡುತ್ತದೆ. ಏಪ್ರಿಲ್ 2023 ರ ಮಧ್ಯದಿಂದ ಗ್ರಹಗಳು ನಿಮಗೆ ಬಹಳಷ್ಟು ಸಹಾಯ ಮಾಡುತ್ತವೆ. ಇದು ನಿಮ್ಮ ಜೀವನದಲ್ಲಿ ಮತ್ತಷ್ಟು ಸಂತೋಷ ತರಲಿದೆ. ವರ್ಷದ ಕೊನೆಯ ತ್ರೈಮಾಸಿಕದಲ್ಲಿ ನಿಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಕೆಲವು ಉತ್ತಮ ಕ್ಷಣಗಳನ್ನು ಕಳೆಯುವ ಸಾಧ್ಯತೆಯಿದೆ.
ಆರೋಗ್ಯ ರಾಶಿಫಲ
ಈ ವರ್ಷದಲ್ಲಿ ನೀವು ಹೆಚ್ಚು ಶಕ್ತಿಯುತವಾಗಿರುತ್ತದೆ, ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ. ಇದು ಈ ವರ್ಷದಲ್ಲಿ ನಿಮ್ಮನ್ನು ಆರೋಗ್ಯವಾಗಿಡಲು ನಿಮಗೆ ಅನುವು ಮಾಡಿಕೊಡುತ್ತದೆ. ಗ್ರಹಗಳ ಸ್ಥಾನಗಳು ದೈಹಿಕ ಚಟುವಟಿಕೆಯ ಮೂಲಕ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ನಿಮ್ಮನ್ನು ಪ್ರೇರೇಪಿಸಬಹುದು. ನೀವು ನಿಮ್ಮ ದೈಹಿಕ ಫಿಟ್ನೆಸ್ ಕಡೆ ತುಂಬಾ ಗಮನ ನೀಡುತ್ತೀರಿ, ಆಹಾರಕ್ರಮದ ಕಡೆ ಕೂಡ ಗಮನ ನೀಡಿದರೆ ಇದು ನಿಮ್ಮ ಆರೋಗ್ಯದ ಮೇಲೂ ಧನಾತ್ಮಕ ಪರಿಣಾಮ ಬೀರುವುದು. ಅದಕ್ಕಾಗಿಯೇ ಈ ವರ್ಷ ಯಾವುದೇ ಪ್ರಮುಖ ಆರೋಗ್ಯ ಸಂಬಂಧಿತ ಸಮಸ್ಯೆಗಳಿಲ್ಲ. ಆದರೆ, ನೀವು ಪ್ರಸ್ತುತ ಯಾವುದೇ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ, ನಿಮ್ಮ ಆರೋಗ್ಯವನ್ನು ನೀವು ಲಘುವಾಗಿ ಪರಿಗಣಿಸಬಾರದು.



Click it and Unblock the Notifications










