ಈ ರಾಶಿಯವರಿಗೆ ಭಾವನೆಗಳನ್ನು ನಿಯಂತ್ರಿಸಲು ಬರುವುದೇ ಇಲ್ಲ

ನಾವು ದೈಹಿಕವಾಗಿ ಹೇಗೆ ಭಾವಿಸುತ್ತೇವೆಯೋ ಅದರಂತೆ ನಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಕೋಪ ಬಂದಾಗ ರಕ್ತದೊತ್ತಡ ಹೆಚ್ಚಾಗಬಹುದು, ನೀವು ಸಂತೋಷದಿಂದ ಇದ್ದರೆ ಮನಸ್ಸು ನಿರಾಳವಾಗಿ ಇರಬಹುದು.

ಆದರೂ ನಾವೆಲ್ಲರೂ ಪ್ರತಿನಿತ್ಯ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇವೆ. ಆದರೂ ಕೆಲವು ಸಂದರ್ಭಗಳಲ್ಲಿ ಭಾವನೆಗಳು ನಮ್ಮ ನಿಯಂತ್ರಣ ಮೀರಿ ವರ್ತಿಸಿಬಿಡುತ್ತದೆ.

ಜ್ಯೋತಿಶಾಸ್ತ್ರದ ಪ್ರಕಾರವೂ ಕೆಲವು ರಾಶಿಗಳು ಭಾವನೆಗಳನ್ನು ನಿಗ್ರಹಿಸುವುದರಲ್ಲಿ ಅಷ್ಟೇನೂ ನಿಪುಣರಲ್ಲ, ಇವರು ಭಾವನೆಗಳ ಹೆಚ್ಚಿನ ತೀವ್ರತೆಯನ್ನು ಅನುಭವಿಸುತ್ತಾರೆ ಅಥವಾ ಮೂಡಿ ಆಗಿರುತ್ತಾರೆ.

ಕರ್ಕ ರಾಶಿ

ಕರ್ಕ ರಾಶಿ

ಕರ್ಕ ರಾಶಿಯವರು ಮೂಡ್‌ ಸ್ವಿಂಗ್ಸ್‌ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಾರೆ, ಕಾರಣ ಇವರು ಎಲ್ಲವನ್ನೂ ಬಹಳ ಆಳವಾಗಿ ಅನುಭವಿಸುತ್ತಾರೆ. ಇವರು ಒಳ್ಳೆಯ ಮನಸ್ಥಿತಿಯಲ್ಲಿದ್ದರೆ ಬಹಳ ಪ್ರೀತಿಯಿಂದ ಕಾಳಜಿವಹಿಸುತ್ತಾರೆ, ಆದರೆ ಕೆಟ್ಟ ಮನಸ್ಥಿತಿಯಲ್ಲಿದ್ದರೆ ತಾವಾಗಿಯೇ ಹೊರಗೆ ಹೋಗಿಬಿಡುತ್ತಾರೆ. ಇವರು ತಮ್ಮ ನಕಾರಾತ್ಮಕತೆಯಿಂದ ಬೇರೆಯವರಿಗೆ ನೋವುಂಟು ಮಾಡುವುದಿಲ್ಲ, ಹಾಗೆಂದು ಭಾವನೆಗಳನ್ನು ಎಲ್ಲರೆದುರು ಬಿಗಿಹಿಡಿಯುವುದು ಇವರಿಗೆ ಕಷ್ಟಸಾಧ್ಯ.

ಈ ರಾಶಿಯವರ ಒಳ್ಳೆಯ ಗುಣವೆಂದರೆ ಅವರ ಮೂಡ್‌ ಗೆ ತಕ್ಕಂತೆ ಇರುತ್ತಾರೆ ಮತ್ತು ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅಲ್ಲದೇ, ಇತರರ ಮೂಡ್‌ ಸ್ವಿಂಗ್ಸ್‌ ಅನ್ನು ಸಹ ಉತ್ತಮವಾಗಿ ನಿಭಾಯಿಸುವಲ್ಲಿ ಇವರು ನಿಸ್ಸೀಮರು.

ಮೀನ ರಾಶಿ

ಮೀನ ರಾಶಿ

ಮೀನ ರಾಶಿಯವರು ಅತಿ ಸೂಕ್ಷ್ಮ ಸ್ವಭಾವದವರಾಗಿದ್ದು, ಅವರ ಮನಸ್ಥಿತಿಯನ್ನು ಒಂದೇ ಕ್ಷಣದಲ್ಲಿ ಬದಲಾಗುತ್ತದೆ. ಇವರು ಸತ್ಯವನ್ನು ಒಪ್ಪಿಕೊಳ್ಳುವುದರಲ್ಲಿ ಅಥವಾ ಅದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಕುರುಡಾಗಿರುತ್ತಾರೆ, ಸತ್ಯಕ್ಕು ಮಿಗಿಲಾಗಿ ಇವರ ಭಾವನೆಗಳೇ ಇವರನ್ನು ಆವರಿಸಿರುತ್ತದೆ. ಆದ್ದರಿಂದ ಇವರು ಎಲ್ಲವನ್ನೂ ತುಂಬಾ ಆಳವಾಗಿ ಅನುಭವಿಸಲು ಪ್ರಯತ್ನಿಸುತ್ತಾರೆ, ಈ ನಡುವೆ ಸತ್ಯವನ್ನು ಮರೆತುಬಿಡುತ್ತಾರೆ.

ಇವರಿಗೆ ಬಹಳ ಸಣ್ಣ ವಿಷಯಗಳು ಸಹ ಅರೆಕ್ಷಣದಲ್ಲಿ ದುಃಖ ಅಥವಾ ವಿಷಾದವನ್ನುಂಟು ಮಾಡುತ್ತದೆ. ಇವರಿಗೆ ಸಮಸ್ಯೆ ಎಷ್ಟು ದೊಡ್ಡದು ಅಥವಾ ಚಿಕ್ಕದು ಎಂಬುದು ಸಹ ಅಪ್ರಸ್ತುತವಾಗುತ್ತದೆ. ಆದರೂ, ಇವರಿಗೆ ಅಸಹಾಯಕತೆ ಎಂದರೆ ಆಗುವುದಿಲ್ಲ, ಇದನ್ನು ದ್ವೇಷಿಸುತ್ತಾರೆ.

ಅದೃಷ್ಟ ಎಂದರೆ, ಮೀನ ರಾಶಿಯವರು ಸಾಮಾನ್ಯವಾಗಿ ಅವರ ಮನಸ್ಥಿತಿ ಬದಲಾವಣೆಯಾದಾಗ ಸೃಜನಶೀಲ ಪ್ರಯತ್ನಗಳಿಗೆ ಸ್ಫೂರ್ತಿಯಾಗಿ ಬಳಸುತ್ತಾರೆ. ಮೀನ ರಾಶಿಯವರ ಮೂಡ್‌ ಸ್ವಿಂಗ್‌ ಇದೆ ಎಂದರೆ ಇದು ಅವರ ಅಭಿವ್ಯಕ್ತಿಗೆ ಒಂದು ಅವಕಾಶ ಎಂದರ್ಥ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಕೋಪದ ಸ್ವಭಾವದವರು ಎಂಬುದು ಗೊತ್ತಿರುವ ವಿಷಯ, ಅದರೆ ಮೂಡಿಯೇ ಎಂದು ಆಶ್ಚರ್ಯ ಪಡಬಹುದು?. ವೃಶ್ಚಿಕ ರಾಶಿಯವರು ವಿಷಯಗಳನ್ನು ಉತ್ಸಾಹದಿಂದ ಅನುಭವಿಸುತ್ತಾರೆ ಮತ್ತು ಅವರ ಮನಸ್ಥಿತಿಗಳು ಆ ತೀವ್ರತೆಯನ್ನು ಪ್ರತಿಬಿಂಬಿಸುತ್ತವೆ.

ವೃಶ್ಚಿಕ ರಾಶಿಯವರ ನಿಜವಾದ ವ್ಯಕ್ತಿತ್ವ ಎಂದರೆ, ಇವರು ಕೆಟ್ಟ ಮನಸ್ಥಿತಿಯಲ್ಲಿರುವಾಗ ಅದನ್ನು ಮರೆಮಾಡಲು ಸಾಧ್ಯವಿಲ್ಲ, ಅದು ಅವರ ಮುಖದಲ್ಲಿ ಸುಲಭವಾಗಿ ಗುರುತಿಸಬಹುದಾಗಿದೆ.

ಇವರ ಭಾವನೆಗ ತೀವ್ರತೆಯನ್ನು ಆಳವಾಗಿ ಅನುಭವಿಸಲು ಇಷ್ಟಪಡುತ್ತಾರೆ. ದುಃಖದ ಮನಸ್ಥಿತಿಯಲ್ಲಿರುವಾಗ ದುಃಖದ ಹಾಡುಗಳನ್ನು ಕೇಳುವುದು ಅಥವಾ ಕೋಪಗೊಂಡಾಗ ಬಾಕ್ಸಿಂಗ್ ಮಾಡುವುದು ಹೀಗೆ ಭಾವನೆಯನ್ನು ವ್ಯಕ್ತಪಡಿಸಿ ಬಿಡುತ್ತಾರೆ.

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯವರು ತುಂಬಾ ಮೂಡಿ ಸ್ವಭಾವದವರು, ಅವರ ವರ್ತನೆಯ ಮೇಲೆ ಇದು ಬಹಳ ಪರಿಣಾಮ ಬೀರುತ್ತದೆ. ಇವರು ತಮ್ಮ ಮಾತುಗಳಲ್ಲಿ ನಿರ್ದಯವಾಗಿದ್ದರೂ ಇದು ಇತರರಿಗೆ ನೋವುಂಟು ಮಾಡಬಹುದು ಎಂದು ಎನಿಸಿದ್ದರೂ, ಕ್ಷಮೆಯಾಚಿಸುವುದಕ್ಕೆ ಇವರಿಗೆ ಇಷ್ಟವಿಲ್ಲ. ಮೇಷ ರಾಶಿಯವರ ಮನಸ್ಥಿತಿಗಳು ಏನೇ ಬದಲಾದರೂ ಹೆಚ್ಚು ಕಾಲ ಉಳಿಯುವುದಿಲ್ಲ. ಏನೇ ಆದರೂ ಬೇಗ ಸಾಮಾನ್ಯ ಮನಸ್ಥಿತಿಗೆ ಬರುತ್ತಾರೆ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರು ತಮಗೇ ತಿಳಿಯದೆ ಯಾರನ್ನಾದರೂ ಬೇಸರಗೊಳಿಸಿದರೆ ಎಂದು ಭಯಪಡುತ್ತಾರೆ, ಈ ಭಯವು ಅವರ ಮನಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಆದರೆ ನಿಜವಾಗಲೂ ತುಲಾ ರಾಶಿಯವರು ಮೂಡಿ ಆಗಿರಲಿಲು ಬಯಸುವುದಿಲ್ಲ, ಅವರು ಎಲ್ಲವನ್ನೂ ಅನುಭವಿಸುತ್ತಾರೆ, ಹಾಗೆ ಇರಲು ಇಷ್ಟಪಡುತ್ತಾರೆ. ಆದರೆ ಅವರ ಸ್ವಭಾತಃ ವರ್ತನೆಯೇ ಅವರನ್ನು ಮೂಡಿ ಮಾಡುತ್ತದೆ.

ಬೇರೆಯವರೆಲ್ಲರ ಭಾವನೆಗಳನ್ನು, ಅವರ ನೋವನ್ನು ತಮ್ಮದೆಂದು, ತಾವು ಅವರ ಸ್ಥಾನದಲ್ಲಿ ನಿಂತು ಯೋಚಿಸುತ್ತಾರೆ, ಇದು ಅವರ ಮೂಡ್‌ ಸ್ವಿಂಗ್ಸ್‌ ಗೆ ಕಾರಣವಾಗುತ್ತದೆ. ನಿಮಗೆ ತಿಳಿದಂತೆ ತುಲಾ ರಾಶಿಯವರು ಹೆಚ್ಚು ಕೋಪಗೊಳ್ಳುವುದಿಲ್ಲ.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯವರು ತಮ್ಮ ಮನಸ್ಥಿತಿಯ ಕಾರಣದಿಂದ ಇತರ ಜನರು ಬೇಸರಗೊಳ್ಳುವುದು ಅಥವಾ ಕೆಳಕ್ಕೆ ಇಳಿಸಲು ಇವರು ಬಯಸುವುದಿಲ್ಲ, ದುರದೃಷ್ಟವೆಂದರೆ ಇವರು ತಮ್ಮ ಭಾವನೆಗಳನ್ನು ಮರೆಮಾಚಲು ಬರುವುದಿಲ್ಲ.

ಮಿಥುನ ರಾಶಿಯವರು ಎಷ್ಟೇ ಕೆಟ್ಟ ಮನಸ್ಥಿತಿಯಲ್ಲಿದ್ದರೂ ಅವರು ಸಾಮಾನ್ಯವಾಗಿ ಇರುವಂತೆ ತೋರ್ಪಡಿಸುತ್ತಾರೆ, ಇದಕ್ಕಾಗಿ ಸಾಕಷ್ಟು ಸಾಕ್ಷಿಯನ್ನು ಸಹ ನೀಡುತ್ತಾರೆ. ಆದರೆ ಇವರ ಈ ಎಲ್ಲ ವರ್ತನೆ ಹಾಗೂ ಸಾಕ್ಷಿಯೇ ನೋಡುವವರಿಗೆ ಇವರೇಕೆ ಇಷ್ಟು ಕೆಟ್ಟ ಮನಸ್ಥಿತಿಯಲ್ಲಿದ್ದಾರೆ ಎಂಬ ಪ್ರಶ್ನೆ ಮೂಡಿಸುತ್ತದೆ.

ಅಲ್ಲದೇ ಇವರ ಭಾವನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸಹ ತೋರ್ಪಡಿಸುತ್ತಾರೆ, ಮತ್ತೆ ಸಹಜ ಸ್ಥಿತಿಗೆ ಮರಳಿದಾಗ ಅಯ್ಯೋ ನಾನೇಕೆ ಹೀಗೆ ನನ್ನ ಭಾವನೆಗಳನ್ನು ಬರೆದುಕೊಂಡಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ, ಅದಕ್ಕಾಗಿ ಮುಜುಗರ ಪಡುತ್ತಾರೆ.

ಕನ್ಯಾರಾಶಿ

ಕನ್ಯಾರಾಶಿ

ಕನ್ಯಾ ರಾಶಿ ಅವರು ತಾವು ಬಯಸಿದ್ದು ತಮಗೆ ಬೇಕಾದ ರೀತಿಯಲ್ಲಿ ಸಿಗದೇ ಇದ್ದಾಗ ಸಾಕಷ್ಟು ಮೂಡಿ ಆಗುತ್ತಾರೆ. ಇವರು ಎಲ್ಲವೂ ತಮ್ಮ ನಿಯಂತ್ರಣದಲ್ಲಿ ಇರಬೇಕು, ಎಲ್ಲದರ ಮೇಲೆ ಹಿಡಿತ ಸಾಧಿಸಲು ಇಷ್ಟಪಡುತ್ತಾರೆ. ತಾವು ಅಂದುಕೊಂಡಂತೆ ಆಗದಿದ್ದರೆ ಇವರು ಅತ್ಯಂತ ಕೆಟ್ಟ ಮನಸ್ಥಿಗೆ ಹೋಗುತ್ತಾರೆ, ಮತ್ತೆ ತಮ್ಮಂತೆ ನಡೆಯುವವರೆಗೂ.

English summary

Moody Zodiac Signs Who Can't Control Emotions

Here we are discussing about Moody Zodiac Signs Who Can't Control Emotions. if you had no idea what it was like to feel unhappy, how would you be able to appreciate happiness when you felt that? Read more.
Story first published: Wednesday, June 2, 2021, 21:30 [IST]
X
Desktop Bottom Promotion