Latest Updates
-
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು
ಧನು ರಾಶಿಗೆ ಬುಧ ಸಂಚಾರದಿಂದ ಈ 6 ರಾಶಿಗಳಿಗೆ ಅದೃಷ್ಟದ ಸಮಯ
ಡಿಸೆಂಬರ್10ಕ್ಕೆ ಬುಧನು ಧನು ರಾಶಿಗೆ ಪ್ರವೇಶ ಮಾಡಿದ್ದಾನೆ, ಡಿಸೆಂಬರ್ 29ರವರೆಗೆ ಇದೇ ರಾಶಿಯಲ್ಲಿ ಇರಲಿದೆ. ಬುಧನನ್ನು ಬುದ್ಧಿವಂತಿಕೆ, ತರ್ಕ, ಹಾಸ್ಯವನ್ನು ಪ್ರತಿನಿಧಿಸುವ ಗ್ರಹವೆಂದು ಗುರುತಿಸಲಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ, ಬುಧ ಗ್ರಹವನ್ನು ದೇವರ ಸಂದೇಶವಾಹಕ ಎಂದು ಪರಿಗಣಿಸಲಾಗುತ್ತದೆ. ಇದು ಮಿಥುನ ಮತ್ತು ಕನ್ಯಾರಾಶಿಯ ಅಧಿಪತಿಯಾಗಿದೆ,
ಬುಧನು ಒಂದು ರಾಶಿ ಬಿಟ್ಟು ಮತ್ತೊಂದು ರಾಶಿಗೆ ಪ್ರವೇಶಿಸಿದಾಗ ಅದರ ಪ್ರಭಾವ ರಾಶಿಗಳ ಮೇಲೆ ಬೀರುವುದು. ಇದೀಗ ಬುಧನು ಧನು ರಾಶಿಗೆ ಪ್ರವೇಶಿಸಿರುವುದರಿಂದ ಈ 6 ರಾಶಿಗಳಿಗೆ ಬುಧನ ಈ ಧನು ಸಂಚಾರದ ಅವಧಿ ಅದೃಷ್ಟಕರವಾಗಿದೆ:

ಮೇಷ ರಾಶಿ
ಮೇಷ ರಾಶಿಯಲ್ಲಿ ಬುಧನು ಅದೃಷ್ಟದ 9ನೇ ಮನೆಯಲ್ಲಿ ಇರುವುದರಿಂದ ಈ ತಿಂಗಳು ನಿಮಗೆ ಶುಭ ಸಮಯವಾಗಿದೆ. ನೀವು ಮಾಡುತ್ತಿರುವ ಕೆಲಸದಲ್ಲಿ ಯಶಸ್ಸು ಕಾಣುವಿರಿ. ಮನೆಯವರ ಹಾಗೂ ಸ್ನೇಹಿತರ ಸಂಪೂರ್ಣ ಬೆಂಬಲ ಸಿಗುವುದು. ಈ ಸಮಯದಲ್ಲಿ ನೀವು ಉತ್ಸಾಹದಿಂದ ಹಾಗೂ ಚಟುವಟಿಕೆಯಿಂದ ಕೂಡಿರುವಿರಿ.

ಮಿಥುನ ರಾಶಿ
ಬುಧನು 7ನೇ ಮನೆಯಲ್ಲಿರುವುದರಿಂದ ಆರ್ಥಿಕ ದೃಷ್ಟಿಯಿಂದ ತುಂಬಾ ಒಳ್ಳೆಯದು. ವೈವಾಹಿಕ ಜೀವನದಲ್ಲೂ ಖುಷಿ ಇರುತ್ತದೆ, ನಿಮಗೆ ಹಣ ಸಿಗಬೇಕಾಗಿದ್ದರೆ ಈ ಸಮಯದಲ್ಲಿ ಸಿಗುವುದು, ಆದರೆ ಉದ್ಯೋಗ ಬದಲಾವಣೆಗೆ ಸೂಕ್ತ ಸಮಯವಲ್ಲ.

ಸಿಂಹ ರಾಶಿ
ಸಿಂಹ ರಾಶಿಯವರ 5ನೇ ಮನೆಯಲ್ಲಿ ಬುಧನಿದ್ದಾನೆ. ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ಅಭಿವೃದ್ಧಿ ಕಾಣುವಿರಿ, ನಿಮ್ಮ ಶತ್ರುಗಳಿಗೆ, ಸ್ಪರ್ಧಿಗಳಿಗೆ ಈ ಸಮಯದಲ್ಲಿ ನಿಮ್ಮನ್ನು ಸೋಲಿಸಲು ಸಾಧ್ಯವಾಗುವುದಿಲ್ಲ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುವುದು. ಆರ್ಥಿಕ ಲಾಭ ಉಂಟಾಗುವುದು. ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ತುಲಾ ರಾಶಿ
ತುಲಾ ರಾಶಿಯವರಲ್ಲಿ ಬುಧನು 3ನೇ ಮನೆಯಲ್ಲಿದ್ದಾನೆ. ಈ ಅವಧಿಯಲ್ಲಿ ನಿಮ್ಮ ಪ್ರತಿಭೆ, ಬುದ್ಧಿವಂತಿಕೆಯನ್ನು ಗುರುತಿಸಲಾಗುವುದು. ವೃತ್ತಿಪರ ಜೀವನದಲ್ಲಿ ಯಶಸ್ಸು ಕಾಣುವಿರಿ. ವ್ಯಾಪಾರಸ್ಥರೂ ಪ್ರಗತಿ ಕಾಣುವಿರಿ. ಆರ್ಥಿಕವಾಗಿ ಏರಳಿತ ಉಂಟಾಗದಿರಲು ಆಲೋಚಿಸಿ ಹಣವನ್ನು ಖರ್ಚು ಮಾಡಿ. ಕುಟುಂಬದಲ್ಲಿ ಖುಷಿ ಇರುತ್ತದೆ, ಸಕಾರಾತ್ಮಕ ಮನಸ್ಥಿತಿ ಹೆಚ್ಚಿಸಿಕೊಳ್ಳಿ, ಆರೋಗ್ಯ ಉತ್ತಮವಾಗುವುದು.

ಧನು ರಾಶಿ
ಧನು ರಾಶಿಯ ಮೊದಲನೇ ಮನೆಯಲ್ಲಿ ಚಂದ್ರನಿದ್ದಾನೆ. ಈ ಅವಧಿ ನಿಮಗೆ ಅದೃಷ್ಟಕರವಾಗಿದೆ. ಕಟುಂಬ ಜೀವನ ಆನಂದಮಯವಾಗಿರುತ್ತೆ, ರೋಗ ನಿರೋಧಕ ಶಕ್ತಿ ವೃದ್ಧಿಸುವುದು. ಆರ್ಥಿಕ ದೃಷ್ಟಿಯಿಂದಲೂ ಈ ಸಮಯ ಒಳ್ಳೆಯದಿದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯ ವೃದ್ಧಿಸಲು ಪ್ರಯತ್ನಿಸಿದರೆ ಆ ಪ್ರಯತ್ನದಲ್ಲಿ ಯಶಸ್ಸು ಕಾಣಬಹುದು.

ಕುಂಭ ರಾಶಿ
ಕುಂಭ ರಾಶಿಯವರಿಗೂ ಇದು ಉತ್ತಮ ಅವಧಿಯಾಗಿದೆ. ಆರ್ಥಿಕ ಸ್ಥಿತಿ ಬಲಪಡುವುದು. ವೈಯಕ್ತಿಕ ಜೀವನದಲ್ಲಿ ಹಿಂದಿನ ಕೆಲ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಉತ್ತಮ ಆರೋಗ್ಯಕ್ಕಾಗಿ ಆಹಾರಕ್ರಮದತ್ತ ಗಮನ ಹರಿಸಿ. ವಿದ್ಯಾರ್ಥಿಗಳಿಗೂ ಈ ಸಮಯ ಒಳ್ಳೆಯದಿದೆ.



Click it and Unblock the Notifications