Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಮಾರ್ಚ್ 24ಕ್ಕೆ ಬುಧ ಮೀನ ರಾಶಿಗೆ ಪ್ರವೇಶ: ಈ 4 ರಾಶಿಯವರಿಗೆ ಆರ್ಥಿಕವಾಗಿ ಒಳ್ಳೆಯದು
ಬುಧ ಕನ್ಯಾ ರಾಶಿಯಲ್ಲಿದ್ದಾಗ ಅದು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ ಏಕೆಂದರೆ ಕನ್ಯಾರಾಶಿಯು ಅದರ ಉತ್ಕೃಷ್ಟ ರಾಶಿಯಾಗಿದೆ. ಅದೇ ಮೀನದಲ್ಲಿದ್ದಾಗ ಅದು ದುರ್ಬಲವಾಗಿರುತ್ತದೆ.

ಬುಧ ಮಾರ್ಚ್ 24ಕ್ಕೆ ಮೀನ ರಾಶಿಗೆ ಸಂಚರಿಸಲಿದೆ. ಇದು ಏಪ್ರಿಲ್ 7ರವರೆಗೆ ಇದೇ ರಾಶಿಯಲ್ಲಿ ಇರಲಿದ್ದು ಏಪ್ರಿಲ್ 8ಕ್ಕೆ ಮೇಷ ರಾಶಿಗೆ ಸಂಚರಿಸುವುದು. ಬುಧನಿಗೆ ಮೀನ ದುರ್ಬಲ ರಾಶಿಯಾಗಿದೆ, ಇದರ ಪ್ರಭಾವ ರಾಶಿಗಳ ಮೇಲೆ ಅಷ್ಟು ಸರಿಯಿರಲ್ಲ.
ಆದರೆ ಈ ಸಂಚಾರದಲ್ಲಿ ಕೆಲವೊಂದು ರಾಶಿಗಳಿಗೆ ಪರ್ವಾಗಿಲ್ಲ, ಅವರಿಗೆ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಬನ್ನಿ ಈ ಅವಧಿಯಲ್ಲಿ ಯಾವೆಲ್ಲಾ ರಾಶಿಗಳಿಗೆ ಒಳ್ಳೆಯದಿದೆ ಎಂದು ನೋಡೋಣ:

ವೃಷಭ ರಾಶಿ
ಮಾರ್ಚ್ 24ಕ್ಕೆ ಬುಧ ಮೀನ ರಾಶಿಗೆ ಸಂಚರಿಸುತ್ತಿದ್ದಾನೆ. ಬುಧನಿಗೆ ಅದು ದುರ್ಬಲ ರಾಶಿಯಾದರೂ ಬುಧ ವೃಷಭ ರಾಶಿಯ 11ನೇ ಮನೆಯಲ್ಲಿ ಇರುವುದರಿಮದ ತೊಂದರೆಯಿಲ್ಲ. ಇದು ನಿಮ್ಮ ಆದಾಯ ಹಾಗೂ ಲಾಭದ ಮನೆಯಲ್ಲಿ ಇರಲಿದೆ.
ಈ ಸಮಯದಲ್ಲಿ ಗಳಿಕೆ ಚೆನ್ನಾಗಿರುತ್ತದೆ, ಆದರೆ ಅಕ್ರಮ-ಾನ್ಯಾಯದ ಮಾರ್ಗದಿಂದ ಸಂಪಾದಿಸಲು ಪ್ರಯತ್ನಿಸಿದರೆ ಅದರ ಫಲ ಅನುಭವಿಸಬೇಕಾಗುವುದು. ಅಲ್ಲದೆ ವೃತ್ತಿ ಕ್ಷೇತ್ರದಲ್ಲಿ ಧನಾತ್ಮಕ ಫಲಿತಾಂಶ ಕಾಣುವಿರಿ.

ಮಕರ ರಾಶಿ
ಮಕರ ರಾಶಿಯವರಿಗೂ ಈ ಅವಧಿ ಚೆನ್ನಾಗಿದೆ. ಬುಧ 3ನೇ ಮನೆಯಲ್ಲಿ ಇರುವುದರಿಂದ ಉದ್ಯೋಗಿಗಳಿಗೆ ಅನುಕೂಲಕರವಾಗಿದೆ, ವ್ಯಾಪಾರಸ್ಥರಿಗೂ ಈ ಸಮಯ ಫಲಪ್ರದವಾಗಿದೆ. ನೀವು ಬಯಸಿದ ಗ್ಯಾಡ್ಜೆಟ್ ಖರೀದಿಸಬಹುದು.

ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಬುಧನು ಎರಡನೇ ಮನೆಯಲ್ಲಿ ಇರಲಿದೆ. ಈ ಸಂಕ್ರಮಣದ ಸಮಯದಲ್ಲಿ ನಿಮಗೆ ಹಠಾತ್ ಲಾಭವಾಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ ಕೊಂಡಿದ್ದರೆ ಒಳ್ಳೆಯ ಲಾಭ ಕಾಣಬಹುದು.

ಮೀನ ರಾಶಿ
ಬುಧನು ಮೀನ ರಾಶಿಯ ಲಗ್ನ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ವ್ಯವಹಾರದಿಂದ ಲಾಭ ಗಳಿಸಬಹುದು, ವ್ಯವಹಾರದ ವಿಸ್ತರಣೆ ಕೂಡ ಮಾಡಬಹುದು. ಈ ಸಮಯದಲ್ಲಿ ನಿಮ್ಮ ಅತಿಯಾದ ವಿಶ್ವಾಸ ಮುಳುವಾಗಲೂಬಹುದು.



Click it and Unblock the Notifications
