Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ನ. 2ಕ್ಕೆ ತುಲಾ ರಾಶಿಗೆ ಪ್ರವೇಶಿಸಿದ ಬುಧ: ಈ 6 ರಾಶಿಗಳಿಗೆ ಅದೃಷ್ಟ
ಇಂದು ಅಂದ್ರೆ ನವೆಂಬರ್ 2ಕ್ಕೆ ಬುಧನು ವೃಶ್ಚಿಕ ರಾಶಿಗೆ ಪ್ರವೇಶಿಸಿದ್ದಾನೆ. ಈ ವರ್ಷ ತುಲಾದಲ್ಲಿ ಬುಧ 2ನೇ ಬಾರಿ ಸಂಚರಿಸುತ್ತಿದ್ದಾನೆ. ಸೆಪ್ಟೆಂಬರ್ 22ಕ್ಕೆ ತುಲಾ ರಾಶಿ ಪ್ರವೇಶಿಸಿದ್ದ ಬುಧ ಮತ್ತೆ ಹಿಮ್ಮುಖವಾಗಿ ಚಲಿಸಲಾರಂಭಿಸಿದ. ಅದಾದ ಬಳಿಕ ಇದೀಗ ಮತ್ತೆ ಮಾರ್ಗಿಯಾಗಿ ಸಂಚರಿಸಿದೆ.

ಬುಧ ಹಿಮ್ಮುಖವಾಗಿ ಚಲಿಸಿದಾಗ ತೊಂದರೆ ಅನುಭವಿಸಿದವರಿಗೆ ಇದೀಗ ಒಳ್ಳೆಯ ಸಮಯ, ಏಕೆಂದರೆ ಬುಧ ಮಾರ್ಗಿಯಾಗಿ ಸಂಚರಿಸುತ್ತಿದ್ದಾನೆ. ತುಲಾ ರಾಶಿಯಲ್ಲಿ ಬುಧ ಇರುವುದು ಕೆಲ ರಾಶಿಗಳಿಗೆ ತುಂಬಾನೇ ಅದೃಷ್ಟ.
ಯಾವೆಲ್ಲಾ ರಾಶಿಗಳಿಗೆ ಈ ಸಂಚಾರ ಅದೃಷ್ಟದ ಸಮಯ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯಲ್ಲಿ ಬುಧ 7ನೇ ಮನೆಯಲ್ಲಿ ಇರಲಿದ್ದಾನೆ. ಇದರಿಂದಾಗಿ ಇದು ನಿಮಗೆ ಅದೃಷ್ಟದ ಸಮಯ. ಈ ಸಮಯದಲ್ಲಿ ಮದುವೆ ಮತುಕತೆ ನಡೆದರೆ ಯಶಸ್ವಿಯಾಗಬಹುದು. ಹೊಸ ಕೆಲಸ ಮಾಡಲು ಇದು ಅನುಕೂಲಕರವಾದ ಸಮಯ. ವ್ಯಾಪಾರಸ್ಥರು ಲಾಭವನ್ನು ಪಡೆಯಲಿದ್ದಾರೆ.

ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಬುಧ 5ನೇ ಮನೆ ಇದೆ. ಈ ಸಂಚಾರ ನಿಮಗೆ ಅದೃಷ್ಟ ತರಲಿದೆ. ಮಗು ಅಪೇಕ್ಷಿತ ದಂಪತಿ ಖುಷಿಯ ಸುದ್ದಿ ಪಡೆಯಬಹುದು. ಯಾವುದೇ ಹೊಸ ಕೆಲಸಕ್ಕೆ ಇದು ಅನುಕೂಲಕರವಾದ ಸಮಯ.

ಕರ್ಕ ರಾಶಿ
ಕರ್ಕ ರಾಶಿಯವರ 4ನೇ ಮನೆಯಲ್ಲಿ ಬುಧ ಇದೆ. ಈ ಸಾಗಣೆ ನಿಮ್ಮ ಮೇಲೆ ಉತ್ತಮ ಪ್ರಭಾವ ಬೀರಲಿದೆ. ಇನ್ನು ನೀವು ಮನೆ ಅಥವಾ ವಾಹನ ಖರೀದಿಸಲು ಬಯಸುವುದಾದರೆ ಈ ಸಮಯ ಉತ್ತಮವಾಗಿದೆ. ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯರ್ಥವಾಗುವುದು.

ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಬುಧ 2ನೇ ಮನೆಯಲ್ಲಿ ಇದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲವಾಗುವುದು. ನೀವು ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ಆದರೆ ನಿಮ್ಮ ರಹಸ್ಯ ಅತವಾ ಐಡಿಯಾಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.

ತುಲಾ ರಾಶಿ
ಬುಧನ ರಾಶಿ ಪರಿವರ್ತನೆ ತುಲಾದಲ್ಲಿ ಆಗಿದೆ. ಇದು ನಿಮಗೆ ಅದೃಷ್ಟ ತರಲಿದೆ. ನೀವು ಮಾಡಬೇಕಾದ ಕೆಲಸವನ್ನು ಪೂರ್ಣಗೊಳಿಸುವಿರಿ. ಯಾವುದೇ ವ್ಯವಹಾರ ಅಥವಾ ಒಪ್ಪಂದಕ್ಕೆ ಸಹಿ ಹಾಕಲು ಇದು ಒಳ್ಳೆಯ ಸಮಯ. ನಿಮ್ಮಲ್ಲಿ ಕೆಲವರು ಆಸ್ತಿ ಕೂಡ ಖರೀದಿಸಬಹುದು.

ಕುಂಭ ರಾಶಿ
ಧನು ರಾಶಿಯವರಲ್ಲಿ ಬುಧ 9ನೇ ಮನೆಯಲ್ಲಿ ಇರಲಿದೆ. ಇದು ನಿಮಗೆ ಲಾಭದ ಮನೆಯಾಗಿದೆ. ಆರೋಗ್ಯ ಉತ್ತಮವಾಗಿರುತ್ತದೆ. ಮಗು ಅಪೇಕ್ಷಿತ ದಂಪತಿಗೆ ಮಗುವಿನ ಆಗಮನದ ಸುದ್ದಿ ಸಿಗಬಹುದು. ಆರೋಗ್ಯ ಚೆನ್ನಾಗಿರುತ್ತದೆ, ಆರ್ಥಿಕ ಸ್ಥಿತಿ ಕೂಡ ಚೆನ್ನಾಗಿರುತ್ತದೆ.



Click it and Unblock the Notifications
