Budh Gochar 2023 : ಫೆ.7ಕ್ಕೆ ಬುಧ ರಾಶಿಪರಿವರ್ತನೆ: ಈ ಅವಧಿ 5 ರಾಶಿಗಳಿಗೆ ಅನುಕೂಲಕರ ಈ 7 ರಾಶಿಯವರು ಜಾಗ್ರತೆ

ಪ್ರತಿತಿಂಗಳು ಬುಧ ಸಂಚಾರವಿರುತ್ತದೆ. ಶನಿಯು ಅಧಿಪತಿಯಾಗಿರುವ ಮಕರ ರಾಶಿಯಲ್ಲಿ ಫೆಬ್ರವರಿ 7ರಂದು ಬುಧ ಸಂಕ್ರಮಣ ನಡೆಯಲಿದೆ. ಬುಧ ಮಿಥುನ ಹಾಗೂ ಕನ್ಯಾ ರಾಶಿಯ ಅಧಿಪತಿ, ಇದು ಮೀನ ರಾಶಿಯಲ್ಲಿ ದುರ್ಬಲವಾಗಿರುತ್ತದೆ.

ಬುಧ ನಮ್ಮ ಆಲೋಚನೆ, ಸಂವಹನ, ಬುದ್ಧಿವಂತಿಕೆ, ನಡವಳಿಕೆ ಇವುಗಳ ಮೇಲೆ ಪ್ರಭಾವ ಇದರ ಮೇಲೆ ಪ್ರಭಾವ ಬೀರುವುದು. ಬುಧ ನಮಗೆ ಅನುಕೂಲಕರ ಸ್ಥಾನದಲ್ಲಿದ್ದರೆ ನಾವು ಪ್ರಗತಿ ಹೊಂದುತ್ತೇವಿ, ಅದೇ ಅನುಕೂಲಕರವಲ್ಲದ ಸ್ಥಾನದಲ್ಲಿದ್ದರೆ ನಮಗೆ ತುಂಬಾ ಅಡತಡೆ ಉಂಟಾಗಬಹುದು. ನಮ್ಮ ಮಾತೇ ಶತ್ರುವಾಗುವುದು, ನಮ್ಮ ನಡವಳಿಕೆಯಿಂದಲೇ ನಮಗೆ ತೊಂದರೆಯಾಗುವುದು, ಆದ್ದರಿಂದ ನಮ್ಮ ರಾಶಿಯಲ್ಲಿ ಬುಧನ ಸ್ಥಾನಕ್ಕೆ ಜ್ಯೋತಿಷ್ಯದಲ್ಲಿ ತುಂಬಾನೇ ಮಹತ್ವವಿದೆ.

ಈ ಸಂಚಾರದ ಸಮಯದಲ್ಲಿ ಬುಧ ನಿಮ್ಮ ರಾಶಿಯಲ್ಲಿದೆ ಅನುಕೂಲಕರವಾದ ಸ್ಥಾನದಲ್ಲಿ ಇದೆಯೇ ಅಥವಾ ಈ ಸಂಚಾರದ ಅವಧಿಯಲ್ಲಿ ನೀವು ಎಚ್ಚರಿಕೆವಹಿಸಬೇಕೆ ಎಂದು ನೋಡೋಣ ಬನ್ನಿ:

ಮೇಷ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಮೇಷ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಮೇಷ ರಾಶಿಯವರಲ್ಲಿ ಹತ್ತನೇ ಮನೆಯಲ್ಲಿ ಸಾಗಲಿದೆ, ಬುಧನ ಈ ಸಂಚಾರ ನಿಮಗೆ ಅನುಕೂಲಕರವಾಗಿರುತ್ತದೆ. ಬುಧನ ಈ ಸಂಚಾರದ ಪ್ರಭಾವದಿಂದಾಗಿ ನಿಮಗೆ ಉತ್ತಮ ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ನೀವು ಪ್ರಯೋಜನಗಳನ್ನು ಪಡೆಯುತ್ತೀರಿ. ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ಸಮಯದಲ್ಲಿ ನೀವು ಒಳ್ಳೆಯ ಉದ್ಯೋಗವನ್ನು ಪಡೆಯಬಹುದು. ಉದ್ಯೋಗಿಗಳಿಗೆ ಇದು ತುಂಬಾ ಅನುಕೂಲಕರ ಸಮಯವಾಗಿರುತ್ತದೆ. ನೀವು ಯಾವುದೇ ವ್ಯವಹಾರವನ್ನು ಮಾಡಿದರೆ, ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಈ ಸಮಯದಲ್ಲಿ ನೀವು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ತೃಪ್ತಿ ಇರುತ್ತದೆ, ನೀವು ಆಸ್ತಿಯನ್ನು ಖರೀದಿಸುವುದಾದರೆ ಅದರಲ್ಲಿ ಯಶಸ್ವಿಯಾಗುವಿರಿ.

ಪರಿಹಾರ: ತುಳಸಿ ಗಿಡಕ್ಕೆ ಪ್ರತಿದಿನ ನೀರನ್ನು ಹಾಕಿ ಆರೈಕೆ ಮಾಡಿ ಹಾಗೂ ತುಳಸಿ ಎಲೆಗಳನ್ನು ಸೇವಿಸುವುದನ್ನು ಖಚಿತಪಡಿಸಿಕೊಳ್ಳಿ.

ವೃಷಭ ರಾಶಿ: ಈ ಅವಧಿಯಲ್ಲಿ ಮಧ್ಯಮ ಫಲ

ವೃಷಭ ರಾಶಿ: ಈ ಅವಧಿಯಲ್ಲಿ ಮಧ್ಯಮ ಫಲ

ಈ ಸಂಚಾರದ ಸಮಯದಲ್ಲಿ ಬುಧ ನಿಮ್ಮ 9ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನಿಮ್ಮ ಅದೃಷ್ಟ ಮಧ್ಯಮವಾಗಿರಲಿದೆ. ಕೆಲವೊಂದು ಕೆಲಸಗಳನ್ನು ಪೂರ್ಣಗೊಳಿಸಲು ಕಷ್ಟವಾಗಬಹುದು, ಇದರ ಜೊತೆಗೆ ಹಣ ನಷ್ಟವಾಗುವ ಸಾಧ್ಯತೆ ಇದೆ. ಸಂಬಂಧಗಳಲ್ಲಿಯೂ ಕೆಲವುಂದು ಸಮಸ್ಯೆ ಬರಬಹುದು. ತಂದೆಯೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ನೀವು ಸ್ವಲ್ಪ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದರೆ ಈ ಸಮಯದಲ್ಲಿ, ಹಣದ ಲಾಭದ ಸಾಧ್ಯತೆಗಳು ಖಂಡಿತವಾಗಿಯೂ ಇರುತ್ತವೆ.

ಪರಿಹಾರ: ನೀವು ಬುಧವಾರ ಮಂಗಳಮುಖಿಯರ ಆಶೀರ್ವಾದ ಪಡೆಯಿರಿ, ಅವರಿಗೆ ಹಸಿರು ಬಣ್ಣವನ್ನು ಉಡುಗೊರೆಯನ್ನು ನೀಡಿ.

ಮಿಥುನ ರಾಶಿ: ಉತ್ತಮವಾಗಿದೆ

ಮಿಥುನ ರಾಶಿ: ಉತ್ತಮವಾಗಿದೆ

ಮಿಥುನ ರಾಶಿಯವರಲ್ಲಿ ಬುಧ8ನೇ ಮನೆಯಲ್ಲಿ ಇರಲಿದೆ. ಬುಧದ ಈ ಸಂಕ್ರಮಣ ನಿಮಗೆ ಉತ್ತಮ ಫಲಿತಾಂಶ ನೀಡಲಿದೆ. ನಿಮ್ಮ ಜೀವನದಲ್ಲಿ ಒಳ್ಳೆಯ ಘಟನೆಗಳು ಸಂಭವಿಸುತ್ತದೆ. ಹಠಾತ್ ಹಣದ ಲಾಭ ಗಳಿಸಲು ಸಾಧ್ಯವಾಗುವುದು. ನೀವು ಕೆಲಸದಲ್ಲಿ ಯಶಸ್ಸು ಮತ್ತು ವಿಜಯವನ್ನು ಪಡೆಯಲು ಪ್ರಾರಂಭಿಸುತ್ತೀರಿ. ಈ ಅವಧಿಯಲ್ಲಿ ನೀವು ಸಂತೋಷವಾಗಿ ಇರುತ್ತೀರಿ. ನಿಮ್ಮ ಸಾಮಾಜಿಕ ಸ್ಥಿತಿಯಲ್ಲಿ ಸುಧಾರಣೆ ಇರುತ್ತದೆ. ಆದರೆ ಈ ಸಂಚಾರ ಚಿಕ್ಕ ಆರೋಗ್ಯ ಸಮಸ್ಯೆ ತರಬಹುದು ಜಾಗ್ರತೆವಹಿಸಿ.

ಪರಿಹಾರ: ಮನೆಯಲ್ಲಿ ಹಣ್ಣಿನ ಗಿಡ ನೆಡಿ.

ಕರ್ಕ ರಾಶಿ: ಜಾಗ್ರತೆವಹಿಸಿ

ಕರ್ಕ ರಾಶಿ: ಜಾಗ್ರತೆವಹಿಸಿ

ಕರ್ಕ ರಾಶಿಯವರಿಗೆ ಬುಧ ನಿಮ್ಮ ಏಳನೇ ಮನೆಯಲ್ಲಿ ಅಂದರೆ ಮದುವೆ, ಪಾಲುದಾರಿಕೆ, ವ್ಯಾಪಾರದ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನೀವು ಸ್ವಲ್ಪ ಎಚ್ಚರವಹಿಸುವುದು ಒಳ್ಳೆಯದು. ಸ್ತ್ರೀಯರಿಂದ ನಿಮ್ಮ ಇಮೇಜ್‌ಗೆ ಧಕ್ಕೆಯಾಗದಂತೆ ಜಾಗ್ರತೆವಿಸಿ. ವೈವಾಹಿಕ ಜೀವನದಲ್ಲಿ ಹಲವು ಸಮಸ್ಯೆಗಳಿರಬಹುದು. ಆದಷ್ಟೂ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿ. ಈ ಸಮಯದಲ್ಲಿ ದೈಹಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಈ ಅವಧಿಯಲ್ಲಿ ನೀವು ಪ್ರಯಾಣಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಈ ಅವಧಿಯು ವ್ಯಾಪಾರಗಳಿಗೆ ಮಧ್ಯಮವಾಗಿರುತ್ತದೆ.

ಪರಿಹಾರ: ಹಸುವಿಗೆ ಹಸಿರು ಮೇವು ತಿನ್ನಿಸಿ ಅಥವಾ ಮೇವನ್ನು ದಾನ ಮಾಡಿ.

ಸಿಂಹ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಸಿಂಹ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಸಿಂಹ ರಾಶಿಯವರಲ್ಲಿ ಬುಧನು 6ನೇ ಮನೆಯಲ್ಲಿ ಇರಲಿದೆ. ಬುಧನ ಈ ಸಂಚಾರ ಮಕರ ರಾಶಿಯವರಿಗೆ ಅನುಕೂಲಕರವಾಗಿದೆ. ನೀವು ಮಾಡುವ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ನಿಮ್ಮ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವಿರಿ. ನೀವು ಕೆಲಸವನ್ನು ಮಾಡಿದರೆ, ನೀವು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ, ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯವು ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ಖರ್ಚುಗಳಲ್ಲಿ ಖಂಡಿತವಾಗಿಯೂ ಏರಿಕೆಯಾಗಲಿದೆ. ವ್ಯಾಪಾರ ಮಾಡುವ ಜನರು ಬಂಡವಾಳ ಹೂಡಿಕೆಯ ನಂತರ ಉತ್ತಮ ಲಾಭ ಗಳಿಸುವ ಅವಕಾಶವನ್ನು ಪಡೆಯುತ್ತಾರೆ.ನಿಮ್ಮ ಶತ್ರುಗಳು ಮತ್ತು ವಿರೋಧಿಗಳು ಸೋಲಿಸಲ್ಪಡುತ್ತಾರೆ. ನೀವು ಬ್ಯಾಂಕ್‌ನಿಂದ ಯಾವುದೇ ಸಾಲವನ್ನು ತೆಗೆದುಕೊಂಡಿದ್ದರೆ, ಈ ಅವಧಿಯಲ್ಲಿ ನೀವು ಅದನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಲು ಪ್ರಾರಂಭಿಸುತ್ತೀರಿ.

ಪರಿಹಾರ: ಬುಧವಾರದಂದು ಸರಸ್ವತಿಗೆ ಬಿಳಿ ಬಣ್ಣದ ಹೂವುಗಳನ್ನು ಅರ್ಪಿಸಿ.

ಕನ್ಯಾ ರಾಶಿ: ಮಿಶ್ರಫಲ

ಕನ್ಯಾ ರಾಶಿ: ಮಿಶ್ರಫಲ

ಕನ್ಯಾ ರಾಶಿಯವರಲ್ಲಿ ಬುಧ 5ನೇ ಮನೆಯಲ್ಲಿ ಇರಲಿದೆ. ಐದನೇ ಮನೆಯಲ್ಲಿ ಬುಧದ ಸಂಚಾರವು ನಿಮಗೆ ಮಿಶ್ರ ಫಲಿತಾಂಶಗಳನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಅನಗತ್ಯ ಚಡಪಡಿಕೆ ಹೆಚ್ಚಾಗುತ್ತದೆ. ನೀವು ಮಾನಸಿಕವಾಗಿ ತೊಂದರೆಗೊಳಗಾಗುವಿರಿ. ಯಾವುದೋ ವಿಷಯದ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಅಪರಿಚಿತ ಭಯ ಬರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಮಕ್ಕಳೊಂದಿಗೆ ವಾದ ಮಾಡುವುದನ್ನು ತಪ್ಪಿಸಬೇಕು. ನೀವು ಸ್ವಲ್ಪ ಅಹಂಕಾರಿಗಳಂತೆ ವರ್ತಿಸುತ್ತೀರಿ. ನೀವು ಪ್ರೇಮಿಯಾಗಿದ್ದರೆ ಮನಸ್ತಾಪ ಉಂಟಾಗಬಹುದು. ಈ ಸಮಯದಲ್ಲಿ ನೀವು ಆದಾಯದಲ್ಲಿ ಉತ್ತಮ ಹೆಚ್ಚಳವನ್ನು ಕಾಣುತ್ತೀರಿ, ಆದ್ದರಿಂದ ನಿಮ್ಮ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಿ ಆದರೆ ಅತಿಯಾದ ಆತ್ಮವಿಶ್ವಾಸಕ್ಕೆ ಬಲಿಯಾಗಬೇಡಿ.

ಪರಿಹಾರ: ಬುಧ ಬೀಜ ಮಂತ್ರ ಪಠಿಸಿ.

ತುಲಾ ರಾಶಿ: ಅನುಕೂಲಕರ

ತುಲಾ ರಾಶಿ: ಅನುಕೂಲಕರ

ತುಲಾ ರಾಶಿಯವರಲ್ಲಿ ಬುಧ 4ನೇ ಮನೆಯಲ್ಲಿ ಇರಲಿದೆ. ಮಕರ ರಾಶಿಯಲ್ಲಿ ಬುಧ ಸಂಕ್ರಮಣವು ತುಲಾ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ನೀವು ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತೀರಿ. ಬುಧದ ಆಶೀರ್ವಾದದಿಂದ ನಿಮ್ಮ ತಾಯಿಯ ಆರೋಗ್ಯವು ಸುಧಾರಿಸುತ್ತದೆ. ನೀವು ಹಣಕಾಸಿನ ಲಾಭವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಯಾವುದೇ ರೀತಿಯ ಚರ ಅಥವಾ ಸ್ಥಿರ ಆಸ್ತಿಯನ್ನು ಸಹ ಖರೀದಿಸಬಹುದು. ಅದರಿಂದ ನಿಮಗೂ ಲಾಭವಾಗುತ್ತದೆ. ಅದೃಷ್ಟದ ಬೆಂಬಲದಿಂದ, ಸ್ಥಗಿತಗೊಂಡ ಕೆಲಸಗಳು ವೇಗಗೊಳ್ಳುತ್ತವೆ.ಈ ಸಮಯದಲ್ಲಿ, ಆಸ್ತಿಯನ್ನು ಖರೀದಿಸುವ ಅವಕಾಶವೂ ಇರುತ್ತದೆ. ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಗಮನವನ್ನು ನೀಡುತ್ತೀರಿ. ಆರೋಗ್ಯ ಸಮಸ್ಯೆ ಕಡಿಮೆಯಾಗಲಿದೆ, ಒಟ್ಟಿನಲ್ಲಿ ಈ ಅವಧಿ ಅನುಕೂಲಕರವಾಗಿದೆ.

ಪರಿಹಾರ: ಪ್ರತಿದಿನ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸಿ.

ವೃಶ್ಚಿಕ ರಾಶಿ : ಈ ಅವಧಿಯಲ್ಲಿ ಜಾಗ್ರತೆ

ವೃಶ್ಚಿಕ ರಾಶಿ : ಈ ಅವಧಿಯಲ್ಲಿ ಜಾಗ್ರತೆ

ವೃಶ್ಚಿಕ ರಾಶಿಯವರಿ ಬುಧ ನಿಮ್ಮ 3ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ನೀವು ಜಾಗೃತಿಯಿಂದಿರಬೇಕು. ನಿಮ್ಮ ಶತ್ರುಗಳು ನಿಮಗೆ ತೊಂದರೆ ಕೊಡಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ನೀವು ಅನೈತಿಕ ಚಟುವಟಿಕೆಗಳನ್ನು ತಪ್ಪಿಸಬೇಕು ಏಕೆಂದರೆ ಈ ಸಮಯದಲ್ಲಿ ನೀವು ಈ ಚಟುವಟಿಕೆಗಳತ್ತ ಒಲವು ತೋರುವ ಸಾಧ್ಯತೆ ಇದೆ. ಸ್ನೇಹಿತರ ಬೆಂಬಲ ಸಿಗಲಿದೆ. ಒಡಹುಟ್ಟಿದವರೊಂದಿಗಿನ ಸಂಬಂಧಗಳು ಪ್ರತಿಕೂಲ ಪರಿಣಾಮ ಬೀರಬಹುದು. ನಿಮ್ಮ ನಡವಳಿಕೆ ಮತ್ತು ಅವರೊಂದಿಗಿನ ಸಂಬಂಧಗಳು ಹಾಳಾಗಬಹುದು. ಈ ಸಮಯದಲ್ಲಿ ನಿಮ್ಮ ಸಂವಹನ ಕೌಶಲ್ಯ ಹೆಚ್ಚಾಗುವುದು.

ಪರಿಹಾರ: ನೀವು ಪ್ರತಿದಿನ ಶ್ರೀ ರಾಮ ರಕ್ಷಾ ಸ್ತೋತ್ರವನ್ನು ಪಠಿಸಬೇಕು.

ಧನು ರಾಶಿ : ಮಿಶ್ರಫಲ

ಧನು ರಾಶಿ : ಮಿಶ್ರಫಲ

ಧನು ರಾಶಿಯವರಲ್ಲಿ ಬುಧ 3ನೇ ಮನೆಯಲ್ಲಿ ಇರಲಿದೆ. ಈ ಸಮಯ ನಿಮಗೆ ಲಾಭದಾಯಕವೂ ಹೌದು, ಕೆಲವೊಂದು ಸಂದರ್ಭದಲ್ಲಿ ಕೆಲ ಸಮಸ್ಯೆಗಳು ಎದುರಾಗುವ ಸಾಧ್ಯತೆಯೂ ಇದೆ. ನಿಮ್ಮ ಆತ್ಮವಿಶ್ವಾಸ, ಬ್ಯಾಂಕ್‌ ಬ್ಯಾಲೆನ್ಸ್ ಎರಡೂ ಹೆಚ್ಚಾಗಲಿದೆ, ಆದರೆ ಈ ಅವಧಿಯಲ್ಲಿ ನೀವಾಡುವ ಮಾತಿನ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯ ಆರೋಗ್ಯದ ಕಡೆಗೆ ಗಮನ ಹರಿಸಿ, ನಿಮ್ಮಿಂದ ಕುಟುಂಬದ ಕೀರ್ತಿ ಹೆಚ್ಚಾಗಲಿದೆ.

ಪರಿಹಾರ: ಬುಧವಾರ ಗಣಪತಿಗೆ ಗರಿಕೆ ಅರ್ಪಿಸಿ ಪೂಜೆ ಮಾಡಿ.

ಮಕರ ರಾಶಿ: ಜಾಗ್ರತೆವಹಿಸಿ

ಮಕರ ರಾಶಿ: ಜಾಗ್ರತೆವಹಿಸಿ

ಬುಧನು ಮಕರ ರಾಶಿಗೆ ಸಂಚಾರ ಮಾಡಲಿದೆ, ನಿಮ್ಮ ರಾಶಿಯಲ್ಲಿ ಲಗ್ನ ಮನೆಯಲ್ಲಿರುವ ಬುಧ ನಿಮ್ಮ ಮಾತಿನ ಮೇಲೆ ಪ್ರಭಾವ ಬೀರಲಿದೆ. ನೀವು ನಿಮ್ಮ ಮಾತಿನ ಬಗ್ಗೆ ಗಮನಹರಿಸಬೇಕು. ಏನನ್ನೂ ಯೋಚಿಸದೆ ಮಾತನಾಡಲು ಹೋಗಬೇಡಿ. ಕುಟುಂಬದಲ್ಲಿ ಸಮಸ್ಯೆಗಳು ಬರಬಹುದು, ನೀವು ಧಾರ್ಮಿಕ ವಿಷಯಗಳತ್ತ ಹೆಚ್ಚಿನ ಗಮನ ನೀಡುವಿರಿ. ನೀವು ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸುವುದು ಒಳ್ಳೆಯದು. ವೈವಾಹಿಕ ಜೀವನದಲ್ಲಿ ಕೆಲ ಸಿಹಿ ಸುದ್ದಿ ಪಡೆಯಬಹುದು.

ಪರಿಹಾರ: ಆಹಾರ ಸೇವಿಸುವ ಮುನ್ನ ನೀವು ಕಾಗೆಗೆ ಆಹಾರ ಹಾಕಿ.

ಕುಂಭ ರಾಶಿ: ಅನುಕೂಲಕರವಲ್ಲ

ಕುಂಭ ರಾಶಿ: ಅನುಕೂಲಕರವಲ್ಲ

ಕುಮಭ ರಾಶಿಯಲ್ಲಿ ಬುಧ 12ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು, ಇದರಿಂದ ಅಧಿಕ ಹಣ ಖರ್ಚಾಗಲಿದೆ. ಇನ್ನು ಈ ಅವಧಿಯಲ್ಲಿ ಮಾನಸಿಕ ಒತ್ತಡ ಉಂಟಾಗಲಿದೆ. ಈ ಅವಧಿಯಲ್ಲಿ ಖರ್ಚು ನಿಯಂತ್ರಿಸುವುದು ಒಳ್ಳೆಯದು.

ಪರಿಹಾರ: ಬುಧ ಬೀಜ ಮಂತ್ರವನ್ನು ಪ್ರತಿದಿನ ಪಠಿಸಿ.

ಮೀನ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಮೀನ ರಾಶಿ: ಈ ಅವಧಿ ಅನುಕೂಲಕರವಾಗಿದೆ

ಮೀನ ರಾಶಿಯವರಲ್ಲಿ 11ನೇ ಮನೆಯಲ್ಲಿ ಬುಧ ಇರಲಿದೆ. ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಆಸೆಗಳು ನೆರವೇರಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಲಾಭ ಗಳಿಸುವಿರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ, ವಿದ್ಯಾರ್ಥಿಗಳಿಗೂ ಈ ಅವಧಿ ಅನುಕೂಲಕರವಾಗಿದೆ:

ಪರಿಹಾರ: ಬುಧವಾರ ನಿಮ್ಮ ಅತ್ತೆ ಅಥವಾ ಚಿಕ್ಕಮ್ಮನಿಗೆ ಹಸಿರು ವಸ್ತುಗಳನ್ನು ಉಡುಗೊರೆಯಾಗಿ ನೀಡಿ.

English summary

Mercury Transit In Capricorn on 07 February 2023 Effects And Remedies On 12 Zodiac Signs In Kannada

Budh Rashi Parivartan 2023 February in Makara Rashi ; Mercury Transit In Capricorn Effects on Zodiac Signs : The Mercury Transit In Capricorn will take place on 07 February 2023. Learn about remedies to perform in Kannada,
X
Desktop Bottom Promotion