ಮಕರದಲ್ಲಿ ಬುಧ ಸಂಚಾರ: ಈ 4 ರಾಶಿಗಳಿಗೆ ಲಕ್ಷ್ಮಿ ಯೋಗ

ಬುಧ ಗ್ರಹವನ್ನು ನಮ್ಮ ಬುದ್ಧಿವಂತಿಕೆ ಮೇಲೆ ಪ್ರಭಾವ ಬೀರುವ ಗ್ರಹ ಎಂದು ಪರಿಗಣಿಸಲಾಗಿದೆ. ಡಿಸೆಂಬರ್ 28ಕ್ಕೆ ಬುಧನು ಧನು ರಾಶಿ ಬಿಟ್ಟು ಮಕರ ರಾಶಿ ಪ್ರವೇಶಿಸಲಿದೆ. ಬುಧ ಪ್ರತಿ ತಿಂಗಳು ರಾಶಿ ಬದಲಾಯಿಸುತ್ತಾನೆ. ಬುಧನು ಮಕರ ರಾಶಿಗೆ ಪ್ರವೇಶಿಸಿದಾಗ 12 ರಾಶಿಗಳ ಮೇಲೂ ಪ್ರಭಾವ ಬೀರಲಿದೆ.

Mercury Transit In Capricorn

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧನು ಡಿಸೆಂಬರ್ 28 ರಂದು ಮುಂಜಾನೆ 4.05 ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧ ಮಕರ ರಾಶಿಗೆ ಸಂಚಾರ ಮಾಡಿದಾಗ ಕೆಲವೊಂದು ರಾಶಿಗಳಿಗೆ ತುಂಬಾನೇ ಶುಭ ಅವಧಿಯಾಗಿದೆ.

ಮಕರ ಸಂಕ್ರಾಂತಿಯಲ್ಲಿ ಬುಧ ಸಂಕ್ರಮಣದಿಂದಾಗಿ 4 ರಾಶಿಯವರು ಉತ್ತಮ ಪ್ರಯೋಜನ ಪಡೆಯಲಿದ್ದಾರೆ, ಈ ಅವಧಿಯಲ್ಲಿ ಯಾವ ರಾಶಿಯವರು ಈ ತಿಂಗಳಿನಲ್ಲಿ ಆರ್ಥಿಕ ಲಾಭ ಪಡೆಯಬಹುದು ಎಂದು ನೋಡೋಣ ಬನ್ನಿ:

 ಮೇಷ

ಮೇಷ

ಮೇಷ ರಾಶಿಯವರಿಗೆ ಬುಧ ಮಕರ ರಾಶಿಗೆ ಸಂಚಾರ ಮಾಡಿದಾಗ ಫಲಪ್ರದವಾದ ಫಲಿತಾಂಶ ಪಡೆಯಲಿದ್ದಾರೆ. ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಉತ್ತಮ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಹಾಗೂ ತಮ್ಮ ಕೌಶಲ್ಯದಿಂದಾಗಿ ಉತ್ತಮ ಪ್ರಯೋಜನ ಪಡೆಯಲಿದ್ದಾರೆ. ಹಣಕಾಸು ಸಂಬಂಧಿತ ಕ್ಷೇತ್ರಗಳಿಗೆ ಸಂಬಂಧಿಸಿದವರು ಈ ಅವಧಿಯಲ್ಲಿ ಪ್ರಯೋಜನ ಪಡೆಯಲಿದ್ದಾರೆ, ಈ ಅವಧಿಯಲ್ಲಿ ಆರ್ಥಿಕ ಲಾಭ ಸಿಗಲಿದೆ. ಶೈಕ್ಷಣಿಕ ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡುಬರುತ್ತವೆ. ವಿದ್ಯಾರ್ಥಿಗಳಿಗೂ ಈ ಅವಧಿ ಅನುಕೂಲಕರವಾಗಿದೆ. ವ್ಯಾಪಾರ ಯೋಜನೆಯಲ್ಲಿ ಮಾಡಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಕಠಿಣ ಪರಿಶ್ರಮದಲ್ಲಿ ಯಶಸ್ಸು ಕಾಣುವಿರಿ. ಒಟ್ಟಿನಲ್ಲಿ ಈ ಅವಧಿ ನಿಮಗೆ ಮಂಗಳಕರವಾಗಿದೆ.

ವೃಷಭ ರಾಶಿ

ವೃಷಭ ರಾಶಿ

ಈ ಸಂಚಾರದ ಸಮಯದಲ್ಲಿ ಬುಧನು ನಿಮ್ಮ ರಾಶಿಯ ಒಂಬತ್ತನೇ ಮನೆಯಲ್ಲಿ ಕುಳಿತುಕೊಳ್ಳುತ್ತಾನೆ ಇದರಿಂದಾಗಿ ಬುಧ ಸಂಚಾರದಿಂದ ಧನಾತ್ಮಕ ಫಲಿತಾಂಶಗಳನ್ನು ಪಡೆಯಬಹುದು. ನೀವು ನಿಮ್ಮ ತಂದೆಯ ಸಂಪೂರ್ಣ ಬೆಂಬಲವನ್ನು ಪಡೆಯಬಹುದು. ಈ ಸಮಯದಲ್ಲಿ ಧಾರ್ಮಿಕ ಕಾರ್ಯಗಳತ್ತ ನಿಮ್ಮ ಒಲವು ಹೆಚ್ಚಲಿದೆ.

ಮಕರ ರಾಶಿಯಲ್ಲಿ ಬುಧ ಪ್ರವೇಶವು ವೃಷಭ ರಾಶಿಯವರಿಗೆ ಒಳ್ಳೆಯ ಲಾಭವನ್ನು ನೀಡುತ್ತದೆ. ಪ್ರೇಮಿಗಳಿಗೆ ಈ ಅವಧಿ ಅನುಕೂಲಕರವಾಗಿದೆ, ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು. ಪ್ರೇಮವಿವಾಹಕ್ಕೆ ಸಂಬಂಧಿಸಿದ ವಿಷಯವನ್ನು ಕುಟುಂಬದಲ್ಲಿ ಹೇಳಲು ಇದು ಮಂಗಳಕರ ಸಮಯ. ಮಗುವಿನ ನಿರೀಕ್ಷಿತ ದಂಪತಿ ಗರ್ಭಧಾರಣೆಯ ಆಹ್ಲಾದಕರ ಸುದ್ದಿಯನ್ನು ಪಡೆಯಬಹುದು. ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ವ್ಯಾಪಾರದಲ್ಲಿ ನೀವು ಮಾಡಿದ ಹೂಡಿಕೆ ಲಾಭದಾಯಕವಾಗಿರುತ್ತದೆ.

 ಕರ್ಕ ರಾಶಿ

ಕರ್ಕ ರಾಶಿ

ಕರ್ಕಾಟಕ ರಾಶಿಯವರಿಗೆ ಬುಧದ ಸಂಕ್ರಮಣವು ತುಂಬಾ ಅದೃಷ್ಟಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಕಚೇರಿಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನೀವು ವ್ಯಾಪಾರದಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಇದು ಮಂಗಳಕರ ಸಮಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಸಿಗಬಹುದು. ಕೆಲಸಕ್ಕೆ ಸಂಬಂಧಿಸಿದ ದೀರ್ಘ ಪ್ರಯಾಣವಿರಬಹುದು.

ಈ ಸಂಚಾರದ ಸಮಯದಲ್ಲಿ, ಬುಧನು ಏಳನೇ ಮನೆಯಲ್ಲಿ ಇರುತ್ತಾನೆ. ವ್ಯಾಪಾರಸ್ಥರು ಉತ್ತಮ ಸಮಯವನ್ನು ಹೊಂದಬಹುದು. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯುವ ಜತೆಗೆ ವ್ಯಾಪಾರವೂ ಮತ್ತಷ್ಟು ಬೆಳೆಯಬಹುದು. ವಿದೇಶಕ್ಕೆ ಹೋಗಿ ಕಲಿಯ ಬಯಸುವ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಪ್ರಯತ್ನಿಸಬಹುದು.

ಕನ್ಯಾ ರಾಶಿ

ಕನ್ಯಾ ರಾಶಿ

ಬುಧದ ರಾಶಿ ಬದಲಾವಣೆಯು ಕನ್ಯಾ ರಾಶಿಯವರಿಗೆ ದೊಡ್ಡ ಕೊಡುಗೆಯನ್ನು ನೀಡಲಿದೆ. ಈ ಸಮಯದಲ್ಲಿ ಈ ರಾಶಿಯ ನಿರುದ್ಯೋಗಿಗಳು ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ. ಪ್ರೇಮ ಸಂಬಂಧಗಳಲ್ಲಿ ಇದ್ದ ಭಿನ್ನಾಭಿಪ್ರಾಯ ದೂರಾಗುವುದರಿಂದ ಸಂಬಂಧದಲ್ಲಿ ಮತ್ತೆ ಪ್ರೀತಿಯ ತಂಗಾಳಿ ಬೀಸುವುದು. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ. ಸಾಂಸಾರಿಕ ಸೌಕರ್ಯಗಳು ಹೆಚ್ಚಳವಾಗಲಿದೆ. ಹಣ ಗಳಿಸುವ ಬಲವಾದ ಅವಕಾಶಗಳಿವೆ.

ಬುಧ ಸಂಕ್ರಮಣದಿಂದ ಈ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದು. ಉದ್ಯೋಗಿಗಳಿಗೂ ಸಮಯ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಹಲವರು ತಮ್ಮ ಕೆಲಸವನ್ನು ಬದಲಾಯಿಸಬಹುದು. ಕೆಲಸದ ಸ್ಥಳದಲ್ಲಿ ಸಮಯವು ಉತ್ತಮವಾಗಿರಬಹುದು. ಸಹೋದ್ಯೋಗಿಗಳು ಮತ್ತು ಅಧಿಕಾರಿಗಳ ಸಂಪೂರ್ಣ ಸಹಕಾರವನ್ನು ನೀವು ಪಡೆಯಬಹುದು.

ಹೆಚ್ಚಿನ ಫಲಕ್ಕಾಗಿ ಈ ಮಂತ್ರ ಪಠಿಸಿ

ಬುಧ್ ಬೀಜ್ ಮಂತ್ರ:

ಓಂ ಬ್ರಾಂ ಬ್ರೀಂ ಬ್ರೌಂ ಸಃ ಬುಧಾಯ ನಮಃ॥

ಬುಧ ನವಗ್ರಹ ಮಂತ್ರ

॥ ಪ್ರಿಯಂ ಗುಕಾಲಿಕಾಶ್ಯಾಮ್ ರೂಪೇನಂ ಪ್ರತಿಮಂ ಬುಧಮ್ ಸೌಮ್ಯಮ ಸೌಮ್ಯಾ ಗುನೋರಪೇಥಮ ಥಮ ಬುಧಮ್ ಪ್ರಣಮಾಮಯಮ್:॥

English summary

Mercury Transit In Capricorn December 28: Lucky For These 4 Zodiac Signs

Mercury Transit In Capricorn: These 4 zodiac signs gain benefits in this period, Read on..
Story first published: Tuesday, December 27, 2022, 23:04 [IST]
X
Desktop Bottom Promotion