Latest Updates
-
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು?
Budh Uday 2023: ಜನವರಿ 13ಕ್ಕೆ ಧನು ರಾಶಿಯಲ್ಲಿ ಬುಧ ಗ್ರಹದ ಉದಯ: ಈ 8 ರಾಶಿಯವರಿಗೆ ಅದೃಷ್ಟ, 4 ರಾಶಿಯವರಿಗೆ ಮಿಶ್ರಫಲ
ವೈದಿಕ ದೃಷ್ಟಿಯಿಂದ ಬುಧ ಗ್ರಹದ ಸಂಚಾರಕ್ಕೆ ತುಂಬಾನೇ ಮಹತ್ವವಿದೆ. ಈ ಕೆಲವು ದಿನಗಳಲ್ಲಿ ಬುಧ ಗ್ರಹದಲ್ಲಿ ಹಲವಾರು ಸಂಚಾರ ಮಾಡಿದೆ. ಮಕರ ರಾಶಿಗೆ ಪ್ರವೇಶಿಸಿದ ಬುಧ, ನಂತರ ಹಿಮ್ಮುಖವಾಗಿ ಚಲಿಸಲಾರಂಭಿಸಿತು, ನಂತರ ಧನು ರಾಶಿಯಲ್ಲಿ ಅಸ್ತಂಗತವಾಯಿತು, ಇದೀಗ ಧನು ರಾಶಿಯಲ್ಲಿ ಜನವರಿ 13ಕ್ಕೆ ಉದಯವಾಗಲಿದೆ.
ಬುಧ ಹಿಮ್ಮುಖ ಚಲನೆಯಲ್ಲಿದ್ದಾಗ ಹಾಗೂ ಬುಧ ಅಸ್ತಂಗತವಾದಾಗ ಕೆಲವು ರಾಶಿಗಳ ಮೇಲೆ ಕೆಟ್ಟ ಪ್ರಭಾವ ಬೀರಿತ್ತು, ಇದರಿಂದ ಆ ರಾಶಿಯವರು ತೊಂದರೆ ಅನುಭವಿಸಿರುತ್ತಾರೆ. ಇದೀಗ ಬುಧ ಧನುರಾಶಿಯಲ್ಲಿ ಉದಯವಾಗುವುದರಿಂದ ಕೆಲವು ರಾಶಿಗಳಲ್ಲಿ ಕಷ್ಟಗಳು ದೂರಾಗಿ ಒಳ್ಳೆಯ ಸಮಯ ಬಂದಿದೆ.
ಧನು ರಾಶಿಯಲ್ಲಿ ಬುಧ ಉದಯ 8 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದಿದೆ, ಇನ್ನುಳಿದ 4 ರಾಶಿಯವರಿಗೆ ಮಿಶ್ರಫಲ ನೀಡಿದೆ ನೋಡಿ:

ಮೇಷ ರಾಶಿ
ಮೇಷ ರಾಶಿಯವರಿಗೆ ಬುಧ ಮೂರು ಮತ್ತು ಆರನೇ ಮನೆಯ ಅಧಿಪತಿಯಾಗಿದ್ದು ಜನವರಿ 13ಕ್ಕೆ ನಿಮ್ಮ 9ನೇ ಮನೆಯಲ್ಲಿ ಉದಯವಾಗಲಿದೆ. ಒಂಬತ್ತನೇ ಮನೆಯು ಧರ್ಮ, ತಂದೆ, ರಾಜಕೀಯ, ದೂರದ ಪ್ರಯಾಣ, ಧಾರ್ಮಿಕ ಸ್ಥಳಗಳು ಮತ್ತು ಅದೃಷ್ಟವನ್ನು ಪ್ರನಿಧಿಸುತ್ತದೆ. ಈ ಅವಧಿಯಲ್ಲಿ ತಮ್ಮ ಹೇಳಿಕೆಗಳಿಂದ ವಿವಾದಕ್ಕೆ ಸಿಲುಕಿದ್ದ ರಾಜಕಾರಣಿಗಳು ಸ್ವಲ್ಪ ಸಮಾಧಾನ ಸಿಗಲಿದೆ, ರಾಜಕಾರಣಿಗಳು ಪರಿಸ್ಥಿತಿ ಅನುಕೂಲಕರವಾಗುವ ಸಾಧ್ಯತೆ ಇದೆ. ಮಕ್ಕಳಿಗೆ ಸರಿಯಾಗಿ ಕಲಿಸಲು ಹರಸಾಹಸ ಪಡುತ್ತಿದ್ದ ಶಿಕ್ಷಕರಿಗೂ ಈ ಹೊತ್ತಿನಲ್ಲಿ ಹೊಸ ಶಕ್ತಿ ಬರಲಿದೆ. ನೀವು ನಿಮ್ಮ ತಂದೆಯೊಂದಿಗೆ ಯಾವುದೇ ರೀತಿಯ ವಿವಾದದಲ್ಲಿ ತೊಡಗಿದ್ದರೆ, ಅದು ಕೂಡ ಈ ಅವಧಿಯಲ್ಲಿ ಕೊನೆಗೊಳ್ಳುತ್ತದೆ ಮತ್ತು ನಿಮ್ಮ ತಂದೆಯ ಆಶೀರ್ವಾದ ಮತ್ತು ಬೆಂಬಲವನ್ನು ನೀವು ಪಡೆಯುತ್ತೀರಿ. ಮೂರನೇ ಮನೆಯ ಮೇಲೆ ಬುಧದ ಅಂಶದೊಂದಿಗೆ, ನೀವು ನಿಮ್ಮ ಕಿರಿಯ ಸಹೋದರರು ಅಥವಾ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಬಹುದು ಮತ್ತು ನೀವು ಅದನ್ನು ತುಂಬಾ ಆನಂದಿಸುವಿರಿ.
ಪರಿಹಾರ- ತುಳಸಿ ಗಿಡಕ್ಕೆ ಪ್ರತಿನಿತ್ಯ ನೀರು ಹಾಕಿ ಅದರ ಒಂದು ಎಲೆಯನ್ನು ತಿನ್ನಿ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಬುಧ ಎರಡನೇ ಮತ್ತು ಐದನೇ ಮನೆಯ ಅಧಿಪತಿ, ಜನವರಿ 13ಕ್ಕೆ ಅದು ನಿಮ್ಮ ಎಂಟನೇ ಮನೆಯಲ್ಲಿ ಉದಯಿಸುತ್ತಿದೆ. ಬುಧನಿಗೆ ಈ ಸ್ಥಾನವು ಅನುಕೂಲಕರವಾಗಿಲ್ಲ. ಆದರೆ ಈ ಅವಧಿಯ ನಂತರ ವೃಷಭ ರಾಶಿಯವರು ಆರೋಗ್ಯ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಪರಿಹಾರ ಸಿಗಲಿದೆ. ಈ ಅವಧಿಯಲ್ಲಿ ಷೇರು ಮಾರುಕಟ್ಟೆಯಂತಹ ಕ್ಷೇತ್ರಗಳಲ್ಲಿ ಹಣವನ್ನು ಹೂಡಿಕೆ ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ಹಣಕಾಸಿನ ನಷ್ಟ ಉಂಟಾಗಬಹುದು. ನಿಮ್ಮ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಿ.
ಪರಿಹಾರ- ಮಂಗಳಮುಖಿಯರನ್ನು ಗೌರವಿಸಿ, ಅವರಿಗೆ, ಹಣ ವಸ್ತುಗಳನ್ನು ದಾನ ಮಾಡಿ

ಮಿಥುನ ರಾಶಿ
ಮಿಥುನ ರಾಶಿಯವರಿಗೆ, ಬುಧನು ಲಗ್ನ ಮನೆ ಮತ್ತು ನಾಲ್ಕನೇ ಮನೆಯ ಅಧಿಪತಿ. ಜನವರಿ 13ಕ್ಕೆ ನಿಮ್ಮ ಏಳನೇ ಮನೆಯಲ್ಲಿ ಉದಯಿಸುತ್ತಿದೆ. ಏಳನೇ ಮನೆಯು ಜೀವನ ಸಂಗಾತಿ ಮತ್ತು ವ್ಯಾಪಾರ ಪಾಲುದಾರಿಕೆಯನ್ನು ಪ್ರತಿನಿಧಿಸುತ್ತದೆ. ಬುಧ ನಿಮ್ಮ 7ನೇ ಮನೆಯಲ್ಲಿ ಉದಯವಾಗುವುದರಿಂದ ಮಿಥುನ ರಾಶಿಯವರು ವೈವಾಹಿಕ ಜೀವನ ಮತ್ತು ವ್ಯಾಪಾರ ಪಾಲುದಾರಿಕೆ ಎರಡರಲ್ಲೂ ಲಾಭವನ್ನು ಪಡೆಯುತ್ತಾರೆ.
ಬಹಳ ಸಮಯದಿಂದ ಮದುವೆಗಾಗಿ ಸಂಬಂಧ ಹುಡುಕುತ್ತಿದ್ದರೆ ಈ ಅವಧಿಯಲ್ಲಿ ಕೂಡಿ ಬರಲಿದೆ, ತಾಯಿಯ ಸಂಪೂರ್ಣ ಬೆಂಬಲ ಸಿಗಲಿದೆ. ಪ್ರೀತಿಯಲ್ಲಿದ್ದು ಮದುವೆ ಬಗ್ಗೆ ತೀರ್ಮಾನಿಸಿದ್ದರೆ ಮದುವೆ ಮಾತುಕತೆಗೆ ಈ ಅವಧಿ ಅನುಕೂಲಕರವಾಗಿದೆ. ನೀವು ನಿಮ್ಮ ಆರೋಗ್ಯದ ಕಡೆ ಕೂಡ ಗಮನ ಹರಿಸಬೇಕು.
ಪರಿಹಾರ - ನಿಮ್ಮ ಮಲಗುವ ಕೋಣೆಯಲ್ಲಿ ಹಸಿರು ಗಿಡವನ್ನು ಇಡಿ.

ಕರ್ಕ ರಾಶಿ
ಬುಧನು ನಿಮ್ಮ ಜಾತಕದಲ್ಲಿ ಹನ್ನೆರಡು ಮತ್ತು ಮೂರನೇ ಮನೆಯ ಅಧಿಪತಿಯಾಗಿದ್ದು ಈಗ ನಿಮ್ಮ ಆರನೇ ಮನೆಯಲ್ಲಿ ಉದಯಿಸಲಿದ್ದಾನೆ, ಇದು ರೋಗ, ಶತ್ರು, ಸ್ಪರ್ಧೆಯ ಮನೆ ಎಂದು ಪರಿಗಣಿಸಲಾಗಿದೆ. ಧನು ರಾಶಿಯಲ್ಲಿ ಏರುತ್ತಿರುವ ಬುಧವು ಕೆಲವು ಸಂದರ್ಭಗಳಲ್ಲಿ ನಿಮಗೆ ಪರಿಹಾರವನ್ನು ನೀಡುತ್ತದೆ, ಆದರೆ ಸವಾಲುಗಳು ಸಂಪೂರ್ಣವಾಗಿ ಕೊನೆಗೊಳ್ಳುವುದಿಲ್ಲ. ನಿಮ್ಮ ಆರೋಗ್ಯಕ್ಕಾಗಿ ನೀವು ಇದ್ದಕ್ಕಿದ್ದಂತೆ ಹಣವನ್ನು ಖರ್ಚು ಮಾಡಬೇಕಾಗಬಹುದು, ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ಬೇಡ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಥವಾ ವಿದೇಶಿ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ, ಬುಧದ ಈ ಏರಿಕೆಯು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ಪರಿಹಾರ- ಹಸುವಿಗೆ ಪ್ರತಿದಿನ ಹಸಿರು ಮೇವನ್ನು ತಿನ್ನಿಸಿ.

ಸಿಂಹ ರಾಶಿ
ಸಿಂಹ ರಾಶಿವರಿಗೆ ಬುಧ ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ಜನವರಿ 13ಕ್ಕೆ ನಿಮ್ಮ 5ನೇ ಮನೆಯಲ್ಲಿ ಉದಯಿಸಲಿದೆ. ಇದು ನಿಮಗೆ ಅನುಕೂಲಕರವಾಗಿದೆ. ನಿಮ್ಮ ಆರ್ಥಿಕ ಜೀವನದಲ್ಲಿ ಸುಧಾರಣೆಯನ್ನು ತರುತ್ತದೆ. ಈ ಸಮಯದಲ್ಲಿ, ಷೇರು ಮಾರುಕಟ್ಟೆ ಇತ್ಯಾದಿಗಳೊಂದಿಗೆ ಸಂಬಂಧ ಹೊಂದಿರುವವರು ಅಧಿಕ ಪ್ರಯೋಜನಗಳನ್ನು ಪಡೆಯಬಹುದು. ಬುಧದ ಈ ಹಂತವು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ.
ಪರಿಹಾರ- ಶುಕ್ರವಾರದಂದು ಸರಸ್ವತಿ ದೇವಿಯನ್ನು ಆರಾಧಿಸಿ

ಕನ್ಯಾ ರಾಶಿ
ಬುಧ ರಾಶಿಯವರಿಗೆ ಲಗ್ನ ಮತ್ತು ಹತ್ತನೇ ಮನೆಯ ಅಧಿಪತಿ. ಅಸ್ತಂಗತವಾಗಿರುವ ಬುಧ ನಿಮ್ಮ 4ನೇ ಮನೆಯಲ್ಲಿ ಉದಯವಾಗಲಿದೆ. ಬುಧ ಉದಯಿಸುವ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ಬುಧ ನಿಮಗೆ ಉತ್ತಮ ಆರೋಗ್ಯ ನೀಡಲಿದೆ. ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಇಲ್ಲಿಯವರೆಗೆ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಸಮಯದಲ್ಲಿ ಅದು ಬಗೆಹರಿಯಲಿದೆ. ನೀವು ತುಂಬಾ ಸಮಯದಿಂದ ಕಾರು ಅಥವಾ ಭೂಮಿಯನ್ನು ಖರೀದಿಸುವ ಆಲೋಚನೆ ಮಾಡುತ್ತಿದ್ದರೆ ಈ ಅವಧಿಯಲ್ಲಿ ಮುಂದುವರೆಯಬಹುದು. ವೃತ್ತಿ ಜೀವನದಲ್ಲೂ ಹೊಸ ಅವಕಾಶಗಳು ದೊರೆಯಲಿದೆ.
ಪರಿಹಾರ: ಯಾವಾಗಲೂ ಹಸಿರು ಕರವಸ್ತ್ರವನ್ನು ನಿಮ್ಮೊಂದಿಗೆ ಇರಿಸಿ.

ತುಲಾ ರಾಶಿ
ಬುಧನು ತುಲಾ ರಾಶಿಯವರ ಹನ್ನೆರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿ. ಜನವರಿ 13ಕ್ಕೆ ನಿಮ್ಮ 3ನೇ ಮನೆಯಲ್ಲಿ ಉದಯಿಸಲಿದೆ. ಈ ಅವಧಿ ನಿಮಗೆ ಒಳ್ಳೆಯದಿದೆ. ನಿಮ್ಮ ಒಡಹುಟ್ಟಿದವರೊಂದಿಗೆ ನೀವು ಯಾವುದೇ ವಿವಾದವಿದ್ದರೆ ಈ ಅವಧಿಯಲ್ಲಿ ಬಗೆಹರಿಯಲಿದೆ. ಅಲ್ಲದೆ ಬುಧದ ಪ್ರಭಾವದಿಂದ ಆರ್ಥಿಕವಾಗಿ ಒಳ್ಳೆಯದಿದೆ. ನೀವು ಕೆಲಸದ ಬದಲಾವಣೆಯನ್ನು ಬಯಸುತ್ತಿದ್ದರೆ ನೀವು ಬಯಸಿದಂತೆ ನಡೆಯಲಿದೆ. ಕೆಲವರು ಕೆಲಸದ ನಿಮಿತ್ತ ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆಯಬಹುದು.
ಪರಿಹಾರ- ಬುಧವಾರದಂದು ಮನೆಯಲ್ಲಿ ತುಳಸಿ ಕಟ್ಟೆಗೆ ಪೂಜೆ ಮಾಡಿ.

ವೃಶ್ಚಿಕ ರಾಶಿ
ಬುಧವು ವೃಶ್ಚಿಕ ರಾಶಿಯ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ಜನವರಿ 13ಕ್ಕೆ ನಿಮ್ಮ ಎರಡನೇ ಮನೆಯಲ್ಲಿ ಉದಯಿಸುತ್ತಿದೆ. ವೃಶ್ಚಿಕ ರಾಶಿಯವರಿಗೆ ಈ ಅವಧಿ ಅದ್ಭುತವಾಗಿರುತ್ತದೆ. ಈ ಸಮಯದಲ್ಲಿ ನೀವು ಲಾಭ ಮತ್ತು ಉಳಿತಾಯದ ಅವಕಾಶಗಳನ್ನು ಪಡೆಯಲಿದ್ದೀರಿ. ಈ ಸಮಯದಲ್ಲಿ, ನಿಮ್ಮ ಸಂಗಾತಿಯೊಂದಿಗೆ ಸೇರಿ ಆಸ್ತಿಯನ್ನು ಖರೀದಿಸುವುದು ಮಾಡಬಹುದು. ಈ ಸಮಯದಲ್ಲಿ ನಿಮ್ಮ ಸಂವಹನವು ತುಂಬಾ ಪರಿಣಾಮಕಾರಿಯಾಗಿರುತ್ತದೆ.
ಈ ಅವಧಿಯಲ್ಲಿ ಆಹಾರದ ಬಗ್ಗೆ ಹೆಚ್ಚು ಜಾಗ್ರತಿ ವಹಿಸಬೇಕಾಗಿದೆ.
ಪರಿಹಾರ- ಪ್ರತಿದಿನ ಬುಧ ಬೀಜ ಮಂತ್ರ ಪಠಣ.

ಧನು ರಾಶಿ
ಧನುರಾಶಿಯವರಲ್ಲಿ ಬುಧ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ. ಜನವರಿ 13ಕ್ಕೆ ನಿಮ್ಮ ಮೊದಲ ಅಂದರೆ ಲಗ್ನ ಮನೆಯಲ್ಲಿ ಉದಯಿಸುತ್ತಿದೆ. ಬುಧದ ಈ ಸಂಕ್ರಮದಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮಗೆ ಹೆಚ್ಚಿನ ಲಾಭವಾಗಲಿದೆ. ಈ ಸಮಯದಲ್ಲಿ ನಿಮ್ಮ ವೃತ್ತಿಪರ ಜೀವನದಲ್ಲಿ ಅನೇಕ ಅವಕಾಶಗಳನ್ನು ಮತ್ತು ಪ್ರಯೋಜನಗಳನ್ನು ಪಡೆಯುತ್ತೀರಿ. ಬುಧನು ಏಳನೇ ಮನೆಯನ್ನು ನೋಡುತ್ತಿದ್ದಾನೆ, ಈ ಕಾರಣದಿಂದಾಗಿ ನಿಮ್ಮ ವ್ಯಾಪಾರ ಪಾಲುದಾರಿಕೆ ಸುಧಾರಿಸುತ್ತದೆ. ಇದಲ್ಲದೆ, ಈ ಅವಧಿಯಲ್ಲಿ ವಿವಾಹಿತ ವೈವಾಹಿಕ ಜೀವನ ಚೆನ್ನಾಗಿರುತ್ತದೆ.
ಪರಿಹಾರ - ಗಣಪತಿಗೆ ಗರಿಕೆಯನ್ನು ಅರ್ಪಿಸಿ ಪೂಜಿಸಿ.

ಮಕರ ರಾಶಿ
ಬುಧ ಮಕರ ರಾಶಿಯವರ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ. ಜನವರಿ 13ಕ್ಕೆ ನಿಮ್ಮ ಹನ್ನೆರಡನೆಯ ಮನೆಯಲ್ಲಿ ಉದಯವಾಗುತ್ತಿದೆ. ಈ ಮನೆ ವಿದೇಶಿ ಭೂಮಿ, ಆಸ್ಪತ್ರೆ ಮತ್ತು ವಿದೇಶಿ ಕಂಪನಿಗಳನ್ನು ಪ್ರತಿನಿಧಿಸುತ್ತದೆ. ಧನು ರಾಶಿಯಲ್ಲಿ ಉದಯಿಸುತ್ತಿರುವ ಬುಧನು ಮಕರ ರಾಶಿಯವರಿಗೆ ಅದೃಷ್ಟ ತರುತ್ತಾನೆ. ನೀವು ಇಲ್ಲಿಯವರೆಗೆ ಎದುರಿಸುತ್ತಿದ್ದ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಕೊನೆಗೊಳಿಸಲು ಸಾಧ್ಯವಾಗುತ್ತದೆ. ಬುಧವು ಒಂಬತ್ತನೇ ಮನೆಯ ಅಧಿಪತಿಯಾಗಿದ್ದು, ಹನ್ನೆರಡನೇ ಮನೆಯಲ್ಲಿದ್ದಾರೆ, ಈ ಸ್ಥಾನವು ನೀವು ದೂರದ ಪ್ರಯಾಣಕ್ಕೆ ಹೋಗಬಹುದು ಎಂಬುವುದನ್ನು ಸೂಚಿಸುತ್ತದೆ. ಈ ಸಮಯದಲ್ಲಿ ಮಕರ ರಾಶಿಯ ಗರ್ಭಿಣಿಯರು ತಮ್ಮ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು.
ಪರಿಹಾರ- ಬುಧವಾರದಂದು ಹಸುಗಳಿಗೆ ಹಸಿರು ಮೇವನ್ನು ತಿನ್ನಿಸಿ.

ಕುಂಭ ರಾಶಿ
ಬುಧನು ಕುಂಭ ರಾಶಿಯವರಿಗೆ ಐದನೇ ಮತ್ತು ಎಂಟನೇ ಮನೆಯ ಅಧಿಪತಿ. ಜನವರಿ 13ಕ್ಕೆ ನಿಮ್ಮ 11ನೇ ಮನೆಯಲ್ಲಿ ಉದಯಿಸಲಿದೆ. ಈ ಸಮಯದಲ್ಲಿ ನೀವು ಆರ್ಥಿಕ ವಲಯದಲ್ಲಿ ಬಹಳಷ್ಟು ಪ್ರಯೋಜನವನ್ನು ಪಡೆಯುವ ಸಾಧ್ಯತೆಯಿದೆ. ಹಣದ ವಿಷಯದಲ್ಲಿ ನೀವು ಇಲ್ಲಿಯವರೆಗೆ ಎದುರಿಸುತ್ತಿದ್ದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ವೃತ್ತಿಪರ ಜೀವನದ ಬಗ್ಗೆ ನೋಡುವುದಾದರೆ ಈ ಅವಧಿ ಅನುಕೂಲಕರವಾಗಿದೆ. ಸಮೂಹ ಸಂವಹನ, ಬರವಣಿಗೆ ಮತ್ತು ಭಾಷೆಗಳನ್ನು ಅಧ್ಯಯನ ಮಾಡುವವರಿಗೆ ಈ ಸಮಯವು ಅತ್ಯುತ್ತಮವಾಗಿರುತ್ತದೆ.
ಪರಿಹಾರ- ಚಿಕ್ಕ ಮಕ್ಕಳಿಗೆ ಹಸಿರು ಉಡುಗೊರೆ ನೀಡಿ.

ಮೀನ ರಾಶಿ
ಬುಧನು ಮೀನ ರಾಶಿಯವರ 4 ಮತ್ತು 7 ನೇ ಮನೆಯ ಅಧಿಪತಿ. ಅಸ್ತಂಗತವಾಗಿರುವ ಬುಧ ನಿಮ್ಮ 10 ನೇ ಮನೆಯಲ್ಲಿ ಉದಯವಾಗಿದೆ. ಈ ಅವಧಿಯು ನಿಮ್ಮ ವೃತ್ತಿಪರ ಜೀವನಕ್ಕೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಉತ್ತಮ ಗೌರವವನ್ನು ಪಡೆಯುತ್ತೀರಿ. ನೀವು ವ್ಯಾಪಾರ ಮಾಡುತ್ತಿದ್ದರೆ ನಿಮ್ಮ ವ್ಯವಹಾರವು ಸಾಕಷ್ಟು ಪ್ರಗತಿಹೊಂದುವುದು. ಕೆಲಸದ ಸ್ಥಳದಲ್ಲಿ ನೀವು ಯಾರನ್ನಾದರೂ ಪ್ರೀತಿಸುವ ಸಾಧ್ಯತೆಗಳಿವೆ. ನೀವು ಕಾರು ಅಥವಾ ಭೂಮಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಅಥವಾ ಮನೆ ಖರೀದಿಸಲು ಅಥವಾ ರಿಪೇರಿಗೆ ಈ ಸಮಯವು ನಿಮಗೆ ಸೂಕ್ತವಾಗಿದೆ. ಒಟ್ಟಾರೆಯಾಗಿ, ಧನು ರಾಶಿಯಲ್ಲಿ ಬುಧ ಉದಯಿಸುವುದು ನಿಮಗೆ ಅನುಕೂಲಕರವಾಗಿದೆ.
ಪರಿಹಾರ- ಬುಧ ಯಂತ್ರವನ್ನು ಇರಿಸಿ ಮತ್ತು ಅದನ್ನು ಪೂಜಿಸಿ.



Click it and Unblock the Notifications











